Sermons

[3-6] ನಿಜವಾದ ಆತ್ಮೀಕ ಸುನ್ನತಿ



< ವಿಮೋಚನಕಾಂಡ 12:43-49 >

“ಕರ್ತನು ಮೋಶೆ ಆರೋನರಿಗೆ ಹೇಳಿದ್ದೇನಂದರೆ-ಪಸ್ಕವನ್ನು ಆಚರಿಸವೇಕಾದ ಕ್ರಮ ಹೇಗಂದರೆ – ಅನ್ಯನೊಬ್ಬನೂ ಅದರಲ್ಲಿ ಭೋಜನ ಮಾಡಬಾರದು. ಆದರೂ ನೀವು ಕ್ರಯಕ್ಕೆ ತೆಗೆದುಕೊಂಡ ದಾಸನು ಸುನ್ನತಿ ಮಾಡಿಸಿಕೊಂಡವನಾದರೆ ಮಾಡಬಹುದು. ಪರವಾಸಿಯೂ ಕೂಲಿಯವನೂ ಮಾಡಕೂಡದು. ಒಂದೇ ಮನೆಯಲ್ಲಿ ಅದನ್ನು ಊಟಮಾಡಬೇಕು; ಅದರಲ್ಲಿ ಸ್ವಲ್ಪವನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಕೂಡದು. ಇಸ್ರಾಯೇಲ್ಯ ರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು. ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಕರ್ತನಿಗೆ ಈ ಪಾಸ್ಕಹಬ್ಬವನ್ನು ಆಚರಿಸ ಬೇಕೆಂದು ಆಪೇಕ್ಷಿ ಸಿದರೆ ಅವನೂ ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿ ಮಾಡಿಸಿ ಕೊಳ್ಳಬೇಕು; ತರುವಾಯ ಅವನು ಹತ್ತಿರ ಬಂದು ಈ ಹಬ್ಬವನ್ನು ಆಚರಿಸ ಬಹುದು. ಅಂಥವನು ಸ್ವದೇಶದವನಂತೆಯೇ ಇರುವನು; ಆದರೆ ಸುನ್ನತಿ ಮಾಡಿಸಿಕೊಳ್ಳದವನು ಆಭೋಜನವನ್ನು ಮಾಡಲೇ ಕೂಡದು. ಸ್ವದೇಶದ ವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ವಿಧಿಯಿರ ಬೇಕು ಅಂದನು.” 


  • ಹಳೇ ಒಡಂಬಡಿಕೆಯಲಿ ಇಸ್ರಾಯೇಲ್ಯರು 
  • ಕರ್ತನ ಮಕ್ಕಳಾಗುವದಕ್ಕಾಗಿ ಅತ್ಯವಶ್ಯಕವಾದ 
  • ನಿಯಮ ಏನು?
  • ಅವರು ಸುನ್ನತಿ ಮಾಡಿಸಿಕೊಳ್ಳಬೇಕು.


ಕರ್ತನಲ್ಲಿ ವಿಶ್ವಾಸವಿಟ್ಟಿರುವ ನಮಗೆ ಹಳೇ ಒಡಂಬಡಿಕೆಯಲ್ಲಿ ಮತ್ತು ಹೊಸ ಒಡಂಬಡಿಕೆಯಲ್ಲಿರುವ ಕರ್ತನ ವಾಕ್ಯಗಳು ತುಂಬಾ ಮುಖ್ಯ ಮತ್ತು ಬಹಳ ಬೆಲೆಯವುಳ್ಳದು. ಕರ್ತನ ವಾಕ್ಯಗಳು ಜೀವವಿರುವ ವಾಕ್ಯಗಳಾಗಿರುವದರಿಂದ ಆ ವಾಕ್ಯಗಳ ಒಂದು ವಾಕ್ಯಾಂಗ ಭಾಗವನ್ನು ಕುರಿತೂ ಸಹ ಉದಾಸೀನ ಮಾಡುವುದಕ್ಕೆ ನಮಗೆ ಸಾಧ್ಯದಿಲ್ಲ.

ಯಾರಾದರೂ ಪಾಸ್ಕವನ್ನು ಆಚರಿಸಬೇಕಾದರೆ ಆತನು ಸುನ್ನತಿಮಾಡಿಸಿ ಕೊಂಡವನಾಗಿದ್ದರೆ ಮಾಡಬಹುದು ಎಂದು ಇವತ್ತಿನ ವಾಕ್ಯ ನಮಗೆ ಹೇಳುತ್ತದೆ. ಇದನ್ನು ನಮಗೆ ಕರ್ತನು ಏಕೆ ಹೇಳುತ್ತಾನೇಂಬುದನ್ನು ಕುರಿತು ನಾವು ಯೋಚಿಸ ಬೇಕು. ಒಬ್ಬನು, ಸುನ್ನತಿಮಾಡಿಸಿಕೊಳ್ಳದಿದ್ದರೆ, ಆತ ಪಾಸ್ಕವನ್ನು ಆಚರಿಸಬಾರದು.

ನಾವು ಯೇಸುವಿನಲ್ಲಿ ವಿಶ್ವಾಸವಿಟ್ಟವರಾದರೆ, ಈ ಆಜ್ಞೆಯನ್ನು ನಮಗಾಗಿ ಕೊಟ್ಟಿರುವ ಕರ್ತನ ಅಗತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಸುನ್ನತಿ ಅಂದರೆ ಜನನೇಂದ್ರೀಯದ ಮುಂಭಾಗದ ಚರ್ಮವನ್ನು ಕತ್ತರಿಸುವದು. ಅಬ್ರಹಾಮನ ಮತ್ತು ಆತನ ವಂಶವರನ್ನು ಸುನ್ನತ್ತಿಮಾಡಿಸಿ ಕೊಳ್ಳಬೇಕೆಂದು ಕರ್ತನು ಏಕೆ ಅವರಿಗೆ ಹೇಳುತ್ತಾನೆ? ಏಕೆಂದರೆ, “ಸುನ್ನತಿ”ಮಾಡಿಸಿಕೊಂಡವರು ಆತನ ಮಕ್ಕಳಾ ಗುವದಕ್ಕೆ ಸಾಧ್ಯ ಎಂದು ಆತನು ವಾಗ್ಧಾನ ಮಾಡಿದ ಕಾರಣದಿಂದಲೇ.

ಆದದರಿಂದಲೇ ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರ ಜನರಿಗೆ ಸುನ್ನತಿಮಾಡಿಸಿಕೊಳ್ಳಬೇಕೆಂದು ಆತನು ಹೇಳುತ್ತಾನೆ. ಕರ್ತನ ಜನರಾಗುವದಕ್ಕೆ, ಇಸ್ರಾಯೇಲ್ಯರ ಜನರು ಸುನ್ನತಿಮಾಡಿಸಿ ಕೊಳ್ಳಬೇಕು. ಇದು ಆತನ ಆಜ್ಞೆ, ಮೂಲ ತತ್ವದ ಸಮರ್ಪಣೆ, ಮತ್ತು ಅವರ ಪಾಪಗಳನ್ನು ಕತ್ತರಿಸಿದವರಿಗೆ ಆತನು ಕರ್ತನ್ನಾದನು. ಹೊಸ ಒಡಂಬಡಿಕೆಯಲ್ಲಿಯೂ ಸಹ, ನಂಬಿಕೆಯೋಂದಿಗೆ ಅವರ ಪಾಪಗಳನ್ನು ಕತ್ತರಿಸಿದವರಿಗೆ ಆತನು ಕರ್ತನ್ನಾಗುತ್ತಾನೆ. 



ಪಾಸ್ಕ ಹಬ್ಬ   


  • ಪಾಸ್ಕಹಬ್ಬ
  • ಅಂದರೆ ಏನು?
  • ವಿಮೋಚನೆಗಾಗಿ ಐಗುಪ್ತದೇಶದಿಂದ 
  • ಇಸ್ರಾಯೇಲ್ಯರು ಕರ್ತನನ್ನು ಜ್ಞಾಪಿಸಿಕೊಳ್ಳುವ 
  • ಮತ್ತು ಕರ್ತನಿಗೆ ಕೃತಜ್ಞತೆ ತಿಳಿಸುವ ದಿನ 
  • ಪಾಸ್ಕಹಬ್ಬ.


ಪಾಸ್ಕಹಬ್ಬದ ದಿನವೇ ಇಸ್ರಾಯೇಲ್ಯರ ಜನರಿಗೆ ಅತ್ಯಂತ ಮುಖ್ಯವಾದ ವಿಶ್ರಾಂತಿಯದಿನ. ಇಸ್ರಾಯೇಲ್ಯರ ಜನರು 400 ವರುಷಗಳ ಕಾಲ ದಾಸರಾಗಿದ್ದ ಐಗುಪ್ತ ದೇಶದಿಂದ ವಿಮೋಚನೆಗಾಗಿ ಕರ್ತನನ್ನು ಜ್ಞಾಪಿಸಿಕೊಳ್ಳುವ ಮತ್ತು ಕರ್ತನಿಗೆ ಕೃತಜ್ಞತೆ ಸಲ್ಲಿಸುವ ದಿನ ಪಾಸ್ಕಹಬ್ಬ. ಫರೋಹನ ಕಠಿಣ ಹೃದಯವನು ಮೃದುವಾಗುವುದಕ್ಕೆ ಕರ್ತನು 10 ಮಹಾದೊಡ್ಡ ರೋಗವನ್ನು ತಂದನು. ಹೀಗೆ ಆತನು ಇಸ್ರಾಯೇಲ್ಯರನ್ನು ಐಗುಪ್ತದೇಶದೊಳಗಿಂದ ಕಾನಾನ್ಯಗೆ ಬರಮಾಡಿದನು. 

ಕೊನೆಯ ಉಪದ್ರವವಾದ, ಚೂಚ್ಚಲಾದವುಗಳೆಲ್ಲಾ ಸಾಯುವುದರಿಂದ, ಸುನ್ನತಿಯಿಂದ ಮತ್ತು ಕುರಿಮರಿಯ ಕಾಣಿಕೆಯಿಂದ ಇಸ್ರಾಯೇಲ್ಯರ ಜನರು ರಕ್ಷಣೆಯನ್ನು ಪಡೆದರು. ಆದದರಿಂದ, ಆತನ ಕರುಣೆಯ ಜ್ಞಾಪಕವಾಗಿ ಅವರ ಸಂತಾನ ಪೂರ್ತಿಯು ಪಾಸ್ಕಹಬ್ಬವನ್ನು ಮಾಡಬೇಕು ಎಂದು ಕರ್ತನು ಹೇಳಿದನು. 



ಇಸ್ರಾಯೇಲ್ಯರು ಪಾಸ್ಕಹಬ್ಬವನ್ನು ಮಾಡಬೇಕೆಂದರೆ ಏನು ಮಾಡಬೇಕು? 


  • ಇಸ್ರಾಯೇಲ್ಯರು ಪಾಸ್ಕಹಬ್ಬವನ್ನು
  • ಮಾಡಬೇಕೆಂದರೆ ಏನು ಮಾಡಬೇಕು?
  • ಅವರು ಸುನ್ನತಿಮಾಡಿಸಿ ಕೊಳ್ಳಬೇಕು.


ಆತ್ಮೀಯಕವಾಗಿ ಪಾಸ್ಕಹಬ್ಬವನ್ನು ನಾವು ಮಾಡಬೇಕೆಂದರೆ ನಾವು ನಮ್ಮ ಮನಸ್ಸಿನಲ್ಲಿ ಸುನ್ನತಿಮಾಡಿಸಿ ಕೊಂಡವರಾಗಿರ ಬೇಕೆಂದು ನಾವು ತಿಳಿದುಕೊಳ್ಳ ಬೇಕು. ಇಸ್ರಾಯೇಲ್ಯರ ಜನರೂ ಸಹ ಪಾಸ್ಕಹಬ್ಬವನ್ನು ಮಾಡಬೇಕೆಂದರೆ ಸುನ್ನತಿ ಮಾಡಿಸಿ ಕೊಂಡವರಾಗಿರಬೇಕು. 

ವಿಮೋಚನಕಾಂಡ 12-43-49ರಲ್ಲಿ ಹೀಗೆ ಬರೆದಿದೆ. “ಪಾಸ್ಕವನ್ನು ಆಚರಿಸಬೇಕಾದ ಕ್ರಮ ಹೇಗಂದರೆ-ಅನ್ಯನೊಬ್ಬನೂ ಅದರಲ್ಲಿ ಭೋಜನಮಾಡ ಬಾರದು. ಆದರೂ ನೀವು ಕ್ರಯಕ್ಕೆ ತೆಗೆದುಕೊಂಡ ದಾಸನು ಸುನ್ನತಿಮಾಡಿಸಿ ಕೊಂಡವನಾದರೆ ಮಾಡಬಹುದು. ಪರವಾಸಿಯೂ ಕೂಲಿಯವನೂ ಮಾಡ ಕೂಡದು. ಒಂದೇ ಮನೆಯಲ್ಲಿ ಅದನ್ನು ಊಟಮಾಡಬೇಕು; ಅದರಲ್ಲಿ ಸ್ವಲ್ಪವ ನ್ನಾದರೂ ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಆ ಪಶುವಿನ ಒಂದು ಎಲುಬನ್ನಾದರೂ ಮುರಿಯಕೂಡದು. ಇಸ್ರಾಯೇಲ್ಯರೆಲ್ಲರೂ ಈ ಹಬ್ಬವನ್ನು ಆಚರಿಸಬೇಕು. ನಿಮ್ಮ ಬಳಿಯಲ್ಲಿ ವಾಸವಾಗಿರುವ ಪರದೇಶದವನು ಕರ್ತನಿಗೆ ಈ ಪಾಸ್ಕಹಬ್ಬವನ್ನು ಆಚರಿಸಬೇಕೆಂದು ಆಪೇಕ್ಷಿಸಿದರೆ ಅವನೂ ಅವನಿಗೆ ಸೇರಿರುವ ಗಂಡಸರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕು; ತರುವಾಯ ಅವನು ಹತ್ತಿರ ಬಂದು ಈ ಹಬ್ಬವನ್ನು ಆಚರಿಸ ಬಹುದು. ಅಂಥವನು ಸ್ವದೇಶದವ ನಂತೆಯೇ ಇರುವನು; ಆದರೆ ಸುನ್ನತಿಮಾಡಿಸಿಕೊಳ್ಳದವನು ಆಭೋಜನವನ್ನು ಮಾಡಲೇ ಕೂಡದು. ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶ ದವನಿಗೂ ಒಂದೇ ವಿಧಿಯಿರಬೇಕು ಅಂದನು.” 

ಆತನು ಇಸ್ರಾಯೇಲ್ಯರಿಗೆ, ಸುನ್ನತಿ ಮಾಡಿಸಿಕೊಳ್ಳಬೇಕು ತರುವಾಯ ಅವನು ಹತ್ತಿರ ಬಂದು ಈ ಹಬ್ಬವನ್ನು ಆಚರಿಸ ಬಹುದು ಎಂದು ಹೇಳಿದನು.

ಪಾಸ್ಕಹಬ್ಬದ ಕುರಿಮರಿಯ ಮಾಂಸವನ್ನು ತಿನ್ನಬೇಕು ಮತ್ತು ಯಾರು ಪಾಸ್ಕಹಬ್ಬವನ್ನು ಆಚರಿಸಬೇಕು? ಸುನ್ನತಿಮಾಡಿಸಿ ಕೊಂಡವನು ಮಾತ್ರವೇ ಪಾಸ್ಕಹಬ್ಬವನ್ನು ಆಚರಿಸಬಹುದು.

ನಮಗೇಲ್ಲಾ ತಿಳಿದಿರುವ ಹಾಗೆ, ಪಾಸ್ಕಹಬ್ಬದ ಕುರಿಮರಿ, ಯೇಸು ಕ್ರಿಸ್ತನು ಆತನು ಲೋಕದ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದನು.

ಆಗ, ಹಳೇ ಒಡಂಬಡಿಕೆಯಲ್ಲಿರುವ ಸುನತಿ ಏನು ಮತ್ತು ಹೊಸ ಒಡಂಬಡಿಕೆಯಲ್ಲಿರುವ ಸುನತಿ ಏನು? ಸುನ್ನತಿ ಅಂದರೆ ಜನನಾಂಗದ ಮುಂಭಾಗದ ಚರ್ಮವನ್ನು ಕತ್ತರಿಸುವದು. ಈ ಲೋಕದಲ್ಲಿ ಯೇಸು ಕ್ರಿಸ್ತನು ಹುಟ್ಟಿದ ಏಟನೇ ದಿನ ಆತನೂ ಸಹ ಸುನ್ನತಿಮಾಡಿ ಕೊಂಡನು. ಪಾಸ್ಕಹಬ್ಬದ ಪದ್ಧತಿಯಲ್ಲಿ ಪಾಲುಗೊಳ್ಳ ಬೇಕೆನ್ನುವ ಎಲ್ಲರು ಸುನ್ನತಿಮಾಡಿಸಿ ಕೊಂಡಿರಬೇಕು ಎಂದು ಕರ್ತನು ಆಜ್ಞಾಪಿಸಿ ದರು. ಸುನ್ನತಿಮಾಡಿಸಿ ಕೊಳ್ಳದವನು ಪಾಸ್ಕಹಬ್ಬದಲ್ಲಿ ಪಾಲುಗೊಳ್ಳ ಬಾರದು ಎಂದು ಆತನು ಸ್ವಷ್ಟಮಾಡಿದ್ದಾನೆ. 

ಆದದರಿಂದ ಕರ್ತನು ಆಜ್ಞಾಪಿಸಿದ ಹಾಗಿಯೇ ಪ್ರತಿಯೋಬ್ಬರು ಸುನ್ನತಿ ಮಾಡಿಸಿಕೊಳ್ಳಬೇಕು. ನೀವು ಯೇಸುವಿನಲ್ಲಿ ವಿಶ್ವಾಸವಿಟ್ಟಿದ್ದರೆ, ಹೊಸ ಒಡಂಬಡಿಕೆ ಯಲ್ಲಿರುವ ಸುನ್ನತಿಯ ಅರ್ಥವನ್ನು ನೀವು ತಿಳಿದುಕೊಳ್ಳಬೇಕು. 



ಕರ್ತನು ಅಬ್ರಾಮನಿಗೆ ನೆರವೇರಿಸಬೇಕು ಎಂದು ಆಜ್ಞಾಪಿಸಿದ ಸುನ್ನತಿಯ ಪದ್ಧತಿ ಏನು?


  • ಅಬ್ರಾಮನು ಮತ್ತು ಆತನ ಸಂತಾನ ಕರ್ತನ
  • ಮಕ್ಕಳಾಗುವುದಕ್ಕೆ ಹೇಗೆ ಸಾಧ್ಯ?
  • ಸುನ್ನತಿಮಾಡಿಸಿಕೊಂಡಿರುವುದ್ದರಿಂದ


ಆದಿಕಾಂಡದಲ್ಲಿ ಕರ್ತನು ಅಬ್ರಾಮನಿಗೆ ದರ್ಶನಕೊಟ್ಟು ಆತನ ಮತ್ತು ಆತನ ಸಂತಾನಕ್ಕೆ ತನ್ನ ವಾಗ್ದಾನವನ್ನು ಕೊಟ್ಟನು. 15 ನೇ ಅಧ್ಯಾಯದಲ್ಲಿ, ಆಕಾಶದಲ್ಲಿ ನಕ್ಷತ್ರಗಳ ಹಾಗೆ ನಿನ್ನ ಸಂತಾನವು ಹೆಚ್ಚಾಗುವದು ಮತ್ತು ಆ ಸಂತತಿಗೆ ಕಾನಾನ್ ದೇಶವನ್ನೂ ಎಂದು ಕರ್ತನು ವಾಗ್ದಾನ ಮಾಡಿದನು

17ನೇ ಅಧ್ಯಾಯದಲ್ಲಿ, ಅಬ್ರಾಹಾಮನು ಮತ್ತು ಆತನ ಸಂತಾನವು ಒಡಂ ಬಡಿಕೆಯನ್ನು ಕೈಕೊಂಡು ನಡೆಯಬೇಕು ಮತ್ತು ಅವರಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು ಆಗ ಆತನು ಅವರ ಕರ್ತನ್ನಾಗುತ್ತಾನೆ ಎಂದು ಆತನು ಅಬ್ರಾಹಾಮನಿಗೆ ಹೇಳಿದನು. ಆತನ ಒಡಂಬಡಿಕೆಯಲ್ಲಿ ಅವರು ವಿಶ್ವಾಸವಿಟ್ಟು ಸುನ್ನತಿಮಾಡಿಸಿಕೊಳ್ಳುವಾಗ, ಅವರು ನನ್ನ ಮಕ್ಕಳಾಗಿದ್ದಾರೆ ಮತ್ತು ಆತನು ಅವರ ದೇವರಾಗಿದ್ದಾನೆ ಎಂದು, ಇದರ ಅರ್ಥ ಎಂದು ಕರ್ತನು ಆಜ್ಞಾಪಿಸಿದನು.

ಆದಿಕಾಂಡ 17:7-8ರಲ್ಲಿ ಹೇಳುತ್ತದೆ, “ನಿನಗೂ ನಿನ್ನ ಸಂತತಿಗೂ ದೇವರಾ ಗಿರುವೆನೆಂದು ನಾನು ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲಾಂತರ ಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು. ನೀನು ಪ್ರವಾಸವಾಗಿರುವ ಕಾನಾನ್‍ ದೇಶವನ್ನೇಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತಸ್ವಾಸ್ತ್ಯನ್ನಾಗಿ ಕೊಟ್ಟು ಅವರಿಗೆ ದೇವರಾಗಿರುವೆನು ಅಂದನು.” 

ಸುನ್ನತಿಮಾಡಿಸಿಕೊಳ್ಳುವದು ಅಬ್ರಹಾಮನಗೂ ಆತನ ಸಂತತಿಗೂ ಮತ್ತು ದೇವರಿಗೂ ಉಂಟಾದ ಒಡಂಬಡಿಕೆಗೆ ಗುರುತು. 



ಆಧ್ಯಾತ್ಮಿಕ ಸುನ್ನತಿ ಅಂದರೆ ಏನು?


  • ಆಧ್ಯಾತ್ಮಿಕ ಸುನ್ನತಿ ಅಂದರೆ ಏನು?
  • ಅಂದರೆ ಯೇಸುವಿನ ದೀಕ್ಷಾಸ್ನಾನದಲ್ಲಿ 
  • ವಿಶ್ವಾಸವಿಡುವುದರಿಂದ ನಮ್ಮ ಮನಸ್ಸಿನಲ್ಲಿರುವ
  •  ಎಲ್ಲಾ ಪಾಪಗಳನ್ನು ಕತ್ತರಿಸುವುದೇ.


ಅಬ್ರಹಾಮನು ದೇವರ ವಾಕ್ಯನ್ನು ನಂಬಿದ್ದರಿಂದ, ದೇವರು ಆತನನ್ನು ನೀತಿವಂತವನ್ನಾಗಿ ಮತ್ತು ತನ್ನ ಮಗುವನ್ನಾಗಿ ಮಾಡಿದನು. ಸುನ್ನತಿ ಮಾಡಿಸಿ ಕೊಳ್ಳುವದು ಅಬ್ರಹಾಮನಗೂ ಮತ್ತು ದೇವರಿಗೂ ಉಂಟಾದ ಒಡಂಬಡಿಕೆಗೆ ಗುರುತು. 

“ನೀನೂ ನಿನ್ನ ಹಿಂದೆ ಬರುವ ಸಂತತಿಯವರೂ ಕೈಕೊಳ್ಳಬೇಕಾದ ನನ್ನ ನಿಬಂಧನೆ ಯು ಯಾವದಂದರೆ - ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗ ಬೇಕೆಂಬದೇ”(ಆದಿಕಾಂಡ 17:10). 

ಸುನ್ನತಿ ಅಂದರೆ ಜನನಾಂಗದ ಮುಂಭಾಗದ ಚರ್ಮ ಕತ್ತರಿಸುವದು. ನಮ್ಮ ಎಲ್ಲಾ ಪಾಪಗಳು ಯೇಸುವಿನ ದೀಕ್ಷಾಸ್ನಾನದಲ್ಲಿರುವ ನಮ್ಮ ನಂಬಿಕೆದಿಂದ ಯೇಸುವಿನ ಮೇಲೆ ಹೋಗುವುದು ಎಂದೂ ಸಹ ಇದು ವ್ಯಕ್ತಪಡಿಸುತ್ತದೆ. ಯೇಸು ವಿನ ದೀಕ್ಷಾಸ್ನಾನದ ರಕ್ಷಣೆಯನ್ನು ನಾವು ಒಪ್ಪಿಕೊಳ್ಳುವದರಿಂದ ನಾವು ನಮ್ಮ ಎಲ್ಲಾ ಪಾಪಗಳನ್ನು ಕತ್ತರಿಸಿದಾಗ ನಾವು ಆಧ್ಯಾತ್ಮಿಕವಾಗಿ ಸುನ್ನತಿ ಮಾಡಿಸಿಕೊಳ್ಳು ವರಾಗಿದ್ದೇವೆ. ಹೊಸ ಒಡಂಬಡಿಕೆಯಲ್ಲಿ ಸುನ್ನತಿ ಅಂದರೆ ಯೇಸುವಿನ ದೀಕ್ಷಾ ಸ್ನಾನದಿಂದ ನಮ್ಮ ಎಲ್ಲಾ ಪಾಪಗಳನ್ನು ಕತ್ತರಿಸುವುದು. 

ಆದದರಿಂದ ಹಳೇ ಒಡಂಬಡಿಕೆಯಲ್ಲಿ ಸುನ್ನತಿ ಅಂದರೆ ಹೊಸ ಒಡಂ ಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನನ, ಮತ್ತು ಆತನ ಜನರನ್ನಾಗಿ ಮಾಡುವ ಈ ಎರಡೂ ಕೂಡ, ಕರ್ತನ ಒಡಂಬಡಿಕೆಯಾಗಿದೆ. ಆದದರಿಂದ ಹಳೇ ಒಡಂಬಡಿಕೆ ಯಲ್ಲಿ ಸುನ್ನತಿ ಅಂದರೆ ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನನವು ಒಂದೇ.

ಅಬ್ರಹಾಮ ಮತ್ತು ಆತನ ಸಂತಾನವು ಜನನಾಂಗದ ಮುಂಭಾಗದ ಚರ್ಮ ಕತ್ತರಿಸಿದ್ದಾಗ ಹೇಗೆ ಅವರು ದೇವರ ಜನರಾದರೊ ಹಾಗಿಯೇ, ನಾವು ನಮ್ಮ ಮನಸ್ಸಿನಿಂದ ಎಲ್ಲಾ ಪಾಪಗಳನ್ನು ಕತ್ತರಿಸುವಾಗ ನಾವು ಆತನ ಮಕ್ಕಳಾಗುತ್ತೇವೆ. ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನನ ಮಾಡಿಸಿಕೊಂಡಾಗ ಯೇಸು ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದರಿಂದ ಲೋಕದಲ್ಲಿ ಪಾಪವಿಲ್ಲ ಎಂದು ವಿಶ್ವಾಸವಿಡುವುದರಿಂದ ನಾವು ಇದನ್ನು ಮಾಡುತ್ತೇವೆ. 

ಪಾಪಿಗಳು ಅವರ ಪಾಪಗಳನ್ನು ಕತ್ತರಿಸುವದರಿಂದ ಯೇಸುವಿನ ದೀಕ್ಷಾ ಸ್ನಾನವು ಎಲ್ಲಾ ಪಾಪಿಗಳನ್ನು ನೀತಿವಂತವರನ್ನಾಗಿ ಮಾಡಿತು. ಸುನ್ನತಿಮಾಡು ವಾಗ ತುಂಡು ಚರ್ಮವನ್ನು ಕತ್ತಿರಿಸದ ಹಾಗಿಯೇ, ಯೊರ್ದಾನ್ ಹೊಳೆಯಲ್ಲಿ ಸ್ನಾನಿಕ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಮನುಷ್ಯನ ಪಾಪಗಳು ಆತನ ಮನಸ್ಸಿನಿಂದ ಕತ್ತರಿಸಿತು. ಇದನ್ನು ನಂಬುವವರು ಆಧ್ಯಾತ್ಮಿಕ ಸುನ್ನತಿಯಾಗುವುದಕ್ಕೆ ಸಾಧ್ಯ ಮತ್ತು ಅವರು ಕರ್ತನ ಜನರಾಗುತ್ತಾರೆ, ನೀತಿವಂತ ರಾಗುತ್ತಾರೆ.



ಮನುಷ್ಯನ ತಪ್ಪು ವಿಶ್ವಾಸ ಆತನನ್ನೇ ಕರ್ತನಿಂದ ಕತ್ತರಿಸುತ್ತದೆ 


  • ಇಸ್ರಾಯೇಲ್ಯರು ಅವರನ್ನೇ ಕರ್ತನಿಂದ
  • ಕತ್ತರಿಸಿದ್ದು ಯಾವುದು?
  • ಸುನ್ನತಿಮಾಡಿಸಿ ಕೊಳ್ಳದವರಾಗಿದ್ದರಿಂದ


ಸುನ್ನತಿ ಮಾಡಿಸಿಕೊಳ್ಳದವನನ್ನು ಆತನ ಜನರಿಂದ ಕತ್ತರಿಸಬೇಕು ಎಂದು ದೇವರು ಅಬ್ರಹಾಮನಿಗೆ ಹೇಳಿದನು. ಆಗ, ಸುನ್ನತಿ ಅಂದರೇನು? ಮತ್ತು ಆಧ್ಯಾತ್ಮಿಕ ಸುನ್ನತಿ ಅಂದರೇನು? ಸುನ್ನತಿ ಅಂದರೆ ಶರೀರದ ಭಾಗದ ಚರ್ಮದಲ್ಲಿ ಸ್ವಲ್ಪವನ್ನು ಕತ್ತರಿಸುವದು, ಆಗ ಆಧ್ಯಾತ್ಮಿಕ ಸುನ್ನತಿ ಅಂದರೆ ನಮ್ಮ ಮನಸ್ಸಿನಲ್ಲಿ ಎಲ್ಲಾ ಪಾಪ ಗಳನ್ನು ಕತ್ತರಿಸಿ ಯೇಸುವಿನ ದೀಕ್ಷಾಸ್ನಾನದಿಂದ ಅವುಗಳನ್ನು ಆತನ ಮೇಲೆ ಹೊರಿಸುವುದು. 

ಯೇಸುವಿನ ದೀಕ್ಷಾಸ್ನಾನದಿಂದ ಲೋಕದ ಪಾಪಗಳು ನಮ್ಮಿಂದ ಕತ್ತರಿಸಿ ಅವುಗಳು ಯೇಸುವಿನ ಮೇಲೆ ಹೊರಿಸಿದ್ದರಿಂದ, ಯೇಸುವಿನ ದೀಕ್ಷಾಸ್ನಾನವು ಮನುಷ್ಯರ ಆಧ್ಯಾತ್ಮಕ ಸುನ್ನತಿ. ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾ ಸ್ನಾನ ಮಾಡಿಸಿಕೊಂಡ ಕಾರಣ ಆಧ್ಯಾತ್ಮಕ ಸುನ್ನತಿಯ ಮೂಲಕ ಮನುಷ್ಯರೇ ಲ್ಲರನ್ನು ರಕ್ಷಿಸ ಬೇಕೆಂದು ಅದು ಎಲ್ಲಾ ಪಾಪಗಳನ್ನು ನಿವಾರಣೆಮಾಡಿತು.

ಮನುಷ್ಯನ ಎಲ್ಲಾ ಪಾಪಗಳು ಯೇಸುವಿಗೆ ಹೋದವು. ಕರ್ತನು ಆಬ್ರಹಾಮನ ಕರ್ತನಾಗಿ, ಇಸಾಕನಿಗೆ ಕರ್ತನಾಗಿ, ಯಾಕೋಬನ ಕರ್ತನಾಗಿ, ಮತ್ತು ಅವರ ಸಂತತಿಗೆ ಕರ್ತನಾಗಿ, ಅಬ್ರಹಾಮನ ಮತ್ತು ಆತನ ಸಂತತಿಗೆ ಸುನ್ನತಿ ಮಾಡಿ ಕೊಳ್ಳಬೇಕು ಎಂದು ಆಜ್ಞಾಪಿಸಿದನು. ಆದದರಿಂದ ಆತನು ಕರ್ತನಾದನು, ಸುನ್ನತಿ ಮಾಡಿಕೊಂಡಿರುವವರಿಗೇ ಆತನು ರಕ್ಷಕನಾದನು.

ಪಾಪವನ್ನು ಕತ್ತರಿಸುವ ಸುನ್ನತಿ ಅಂದರೆ ಏನು? ಅದು ಅಬ್ರಹಾಮನನಿಗೆ ಮತ್ತು ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಶಿಲುಬೆಯಲ್ಲಿ ಆತನ ಮರಣವನ್ನು ಅವರ ರಕ್ಷಣನ್ನಾಗಿ ನಂಬುವುದರಿಂದ ಹೊಸದಾಗಿ ಹುಟ್ಟಿರುವವರಿಗೆ ಆತನ ಒಡಂ ಬಡಿಕೆ. ಈ ರೀತಿಯಾಗಿ, ನಾವು ಆತನ ಜನರಾಗುವದಕ್ಕೆ ಆತನು ನಮ್ಮನ್ನು ಯೋಗ್ಯ ರನ್ನಾಗಿ ಮಾಡಿದ್ದಾನೆ. ಆದದರಿಂದ ಆತನು ಸುನ್ನತಿ ಮಾಡಿಕೊಂಡಿರುವವರಿಗೆ ಕರ್ತನಾದನು. 

ಕರ್ತನು ಅಬ್ರಹಾಮನಿಗೆ ಹೀಗೆ ಹೇಳಿದನು. “ಎಲ್ಲಾ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಬ್ಬ ಗಂಡಸೂ, ಮನೆಯಲ್ಲಿ ಹುಟ್ಟಿದವನಾದರೂ ನಿನ್ನ ಸಂತತಿಯಲ್ಲಿ ಹುಟ್ಟದೆ ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾದರೂ ಎಂಟುದಿನ ಗಳ ವಯಸ್ಸುಳ್ಳವನಾದಾಗ ಅವನಿಗೆ ಸುನ್ನತಿಮಾಡಿಸಬೇಕು. ನಿನ್ನ ಮನೆಯಲ್ಲಿ ಹುಟ್ಟಿದವರಿಗೂ ನೀನು ಕ್ರಯಕ್ಕೆ ತೆಗೆದುಕೊಂಡವರಿಗೂ ತಪ್ಪದೆ ಸುನ್ನತಿಯಾಗ ಬೇಕು. ಹೀಗೆ ನಾನು ಮಾಡುವ ನಿಬಂಧನೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುತ್ತದೆ” (ಆದಿಕಾಂಡ 17:12-14).

ಆಧ್ಯಾತ್ಮಿಕ ಸುನ್ನತಿ ಮಾಡಿಕೊಳ್ಳದೇ ಯೇಸುವಿನ ಬಳಿಗೆ ಬರುವುದಕ್ಕೆ ಪ್ರಯತ್ನಿಸುವವರನ್ನು ಕುಲದಿಂದ ತೆಗೆದುಹಾಕಲ್ಪಡ ಬೇಕು. ಹೊಸ ಒಡಂಬಡಿಕೆ ಯಲ್ಲಿ ಆಧ್ಯಾತ್ಮಿಕ ಸುನ್ನತಿ ಅಂದರೆ ಯೇಸುವಿನ ದೀಕ್ಷಾಸ್ನಾನ, ಇದರಿಂದ ಮನುಷ್ಯ ನ ಎಲ್ಲಾ ಪಾಪಗಳು ಆತನ ಮೇಲೆ ಹೋದವು.

ಯೇಸುವಿನಲ್ಲಿ ನಂಬುವ ಪ್ರತಿಯೊಬ್ಬನು ಹಳೇ ಒಡಂಬಡಿಕೆಯಲ್ಲಿರುವ ಸುನ್ನತಿ ಮತ್ತು ಹೊಸ ಒಡಂಬಡಿಕೆಯಲ್ಲಿರುವ ಸುನ್ನತಿ ಅಂದರೆ ಯೇಸುವಿನ ದೀಕ್ಷಾಸ್ನಾನವನ್ನೂ ಸಹ ನಂಬುದರಿಂದ, ಆತನು ಆತ್ಮನನ್ನು ಪಡೆದು, ಆತನ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆದು, ಕರ್ತನ ಮಗುವಾಗುತ್ತಾನೆ. ಯೇಸು ವಿನಲ್ಲಿ ವಿಶ್ವಾಸವಿಟ್ಟಿರುವ ನಮಗೆ, ಹಳೇ ಒಡಂಬಡಿಕೆಯಲ್ಲಿ ಸುನ್ನತಿ ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾನ ಈ ಎರಡೂ ಒಂದೇ.

ಸುನ್ನತಿಯ ನಿಜವಾದ ಅರ್ಥವನ್ನು ನಾವು ಅರ್ಥಮಾಡಿಕೊಳ್ಳುವದಕ್ಕೆ ಆಗದಿರುವಾಗ ಅಥವಾ ನಮ್ಮ ಹೃದಯದಲ್ಲಿ ಆಧ್ಯಾತ್ಮಿಕ ಸುನ್ನತಿಯನ್ನು ಒಪ್ಪಿ ಕೊಳ್ಳುವುದಕ್ಕೆ ಆಗದಿರುವಾಗ, ನಮ್ಮ ವಿಶ್ವಾಸವೂ ಯಾವ ಪ್ರಯೋಜನವಿಲ್ಲದ ಹಾಗೆ ಆಗುತ್ತದೆ. ನಾವು ಕರ್ತನ ಮಾತಿಗೆ ತಪ್ಪದ ಗಾಹೆ ಇದ್ದೇವೆ ಎಂದು ನಾವು ಯೋಚಿಸ ಬಹುದು, ಆದರೆ ಇದು ನಾವು ನಂಬಿಕೆಯ ಮನೆಯನ್ನು ಉಸುಗಿನ ಮೇಲೆ ಕಟ್ಟಿದ ಹಾಗೆ ಇರುತ್ತದೆ.

ಯೇಸುವಿನ ದೀಕ್ಷಾಸ್ನಾನ, ಆಧ್ಯಾತ್ಮಿಕ ಸುನ್ನತಿಯಿಂದ ಬಿಡುಗಡೆಯನ್ನು ನಂಬುವುದಕ್ಕಾಗಿ, ಆತನಲ್ಲಿ ನಂಬುವವರಿಗೆ ಸುನ್ನತಿ ಮಾಡಿಸಿಕೊಳ್ಳಬೇಕು ಎಂದು ಕರ್ತನು ಹೇಳುತ್ತಾನೆ. ಸುನ್ನತಿ ಮಾಡಿಸಿಕೊಳ್ಳದೆ, ನಾವು ಆತನ ಮಕ್ಕಳಾಗುವದಕ್ಕೆ ಸಾಧ್ಯವಿಲ್ಲ. ಸುನ್ನತಿ ಮಾಡಿಸಿಕೊಳ್ಳದಿದ್ದರೆ, ನಾವು ಆತನ ಕುಲದಿಂದ ತೆಗೆದುಹಾಕ ಲ್ಪಡುತ್ತೇವೆ. ಆದದರಿಂದ ಪಾಸ್ಕಹಬ್ಬವನ್ನು ಆಚರಿಸಬೇಕಂದರೆ ಮನೆಯಲ್ಲಿ ಹುಟ್ಟಿದವನ್ನಾದರೂ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾದರೂ ತಪ್ಪದೆ ಸುನ್ನತಿಯಾಗಬೇಕು. 

ಇಸ್ರಾಯೇಲ್ಯದಲ್ಲಿ ಹುಟ್ಟಿದ ಇಸ್ರಾಯೇಲ್ಯರನ್ನೂ ಸಹ ಅವರು ಸುನ್ನತಿ ಮಾಡಿಸಿಕೊಳ್ಳದಿದ್ದರೆ ಅವರನ್ನು ಕುಲದಿಂದ ತೆಗೆದುಹಾಕಲ್ಪಡಬೇಕು. ಇಸ್ರಾಯೇಲ್ಯ ಜನರಿಗೆ ಕರ್ತನ ಒಡಂಬಡಿಕೆಯು ಯೇಸುವಿನಲ್ಲಿ ನಂಬುವವ ರೆಲ್ಲಾರಿಗೂ ಸಹ ಅನ್ವಯಿಸುತ್ತದೆ. 

ವಿಮೋಚನಕಾಂಡ 12ನೇ ಅಧ್ಯಾಯದಲ್ಲಿ, ಪಾಸ್ಕಹಬ್ಬದ ಮಾಂಸವನ್ನು ಮತ್ತು ಕಹಿಯಾದ ಪಲ್ಯಗಳ ಸಂಗಡ ಊಟಮಾಡುವುದಕ್ಕೆ ಮುನ್ನವೇ ಇಸ್ರಾಯೇಲ್ಯ ಜನರು ಸುನ್ನತಿಮಾಡಿಸಿ ಕೊಂಡಿರಬೇಕು. ಸುನ್ನತಿಮಾಡಿಸಿ ಕೊಂಡಿರುವವರಿಗೆ ಮಾತ್ರವೇ ಪಾಸ್ಕಹಬ್ಬದ ಮಾಂಸವನ್ನು ತಿನ್ನುವುದಕ್ಕೆ ಅಧಿಕಾರಯಿತ್ತು. 

ಇಸ್ರಾಯೇಲ್ಯರ ಜನರು ಪಾಸ್ಕಹಬ್ಬದ ಮಾಂಸವನ್ನು ತಿನ್ನುವಾಗ ಮತ್ತು ಅವರು ಅವುಗಳ ರಕ್ತವನ್ನು ಸ್ವಲ್ಪ ತೆಗೆದು ತಾವು ಆ ಬೋಜನವನ್ನು ಮಾಡುವ ಮನೇಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚುವ ಮುನ್ನವೇ, ಅವರು ಸುನ್ನತಿಮಾಡಿಸಿಕೊಂಡಿದ್ದಾರೆ ಎಂದು ನಾವು ತಿಳಿದುಕೊಳ್ಳು ವುದು ಬಹಳ ಮುಖ್ಯವಾಗಿದೆ.

ಸುನ್ನತಿಮಾಡಿಸಿಕೊಳ್ಳದ ವ್ಯಕ್ತಿ, ಕರ್ತನ ಒಡಂಬಡಿಕೆಯನ್ನು ಮೀರಿದವ ನಾದ ಕಾರಣ ಅವನು ಕುಲದಿಂದ ತೆಗೆದುಹಾಕಲ್ಪಡಬೇಕು ಮತ್ತು ಆತನು ಕರ್ತನ ಮಗುವಾಗುವ ಅಧಿಕಾರವನ್ನು ಕಳೆದುಕೊಂಡಿದ್ದಾನೆ. ಅಂದರೆ ನಂಬಿಕೆಯಿಲ್ಲದ ಪಾಪ ಆಧ್ಯಾತ್ಮಿಕ ಸುನ್ನತಿಯಲ್ಲಿ ಒಬ್ಬ ವ್ಯಕ್ತಿಯ ನಾಶನಕ್ಕೆ ದಾರಿ ತೋರಿಸುತ್ತದೆ ಎಂಬುದು ಇದರ ಅರ್ಥ. ಯೇಸುವಿನ ದೀಕ್ಷಾಸ್ನಾನದಿಂದ ಆಧ್ಯಾತ್ಮಿಕ ಸುನ್ನತಿ ಮಾಡಿಸಿ ಕೊಂಡಿರುವವರಿಗೆ ಮಾತ್ರವೇ ರಕ್ಷಣೆಯನ್ನು ಪಡೆಯುವುದಕ್ಕೆ ಸಾಧ್ಯ.

“ಆ ನೀರಿಗೆ ಅನೂರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರು ತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ”(1 ಪೇತ್ರನು 3:21). ಯೊರ್ದಾನ್ ಹೊಳೆಯಲ್ಲಿನ ಯೇಸುವಿನ ದೀಕ್ಷಾಸ್ನಾನದಿಂದ ನಿಮ್ಮ ಎಲ್ಲಾ ಪಾಪಗಳು ನಿಜ ವಾಗಿಯೂ ಆತನ ಮೇಲೆ ಹೋದೆವು ಎಂದು ನೀವು ನಂಬುತ್ತೀರೊ? ಸತ್ಯದಲ್ಲಿ ನೀವು ನಿಜವಾಗಿಯೂ ವಿಶ್ವಾಸವಿಟ್ಟು ಅರ್ಥಮಾಡಿಕೊಂಡರೆ, ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಬಗ್ಗೆ ನೀವು ನಿಜವಾಗಿಯೂ ಅರ್ಥಮಾಡಿಕೊಂಡಿದ್ದರೆ, ನೀವು ಆಧ್ಯಾತ್ಮಿಕವಾಗಿ ಸುನ್ನತಿ ಮಾಡಿಸಿಕೊಂಡಿದ್ದೀರಿ ಮತ್ತು ನೀತಿವಂತವರಾಗಿದ್ದೀರಿ ಎಂದು ನೀವು ಸ್ವಷ್ಟವಾಗಿ ಗ್ರಹಿಸುಕೊಳ್ಳುತ್ತೀರಿ ಮತ್ತು ಶಿಲುಬೆಯ ಮೇಲೆ ಯೇಸು ವಿನ ರಕ್ತವು ಆತನ ದೀಕ್ಷಾಸ್ನಾನವಿಲ್ಲದಿದ್ದರೆ ಅರ್ಥವಿಲ್ಲ ಎನ್ನುವ ಆಧ್ಯಾತ್ಮಿಕ ನಿಜ ದಲ್ಲಿಯೂ ಸಹ ನಿಮಗೆ ವಿಶ್ವಾಸವಿರುತ್ತದೆ. 

ನೀವು ಯೇಸುವಿನ ದೀಕ್ಷಾಸ್ನನದಲ್ಲಿ ನಂಬಿಕೆಯಿಂದ ಆಧ್ಯಾತ್ಮಿಕ ಸುನ್ನತಿ ಮಾಡಿಸಿಕೊಳ್ಳದಿದ್ದರೆ, ಕರ್ತನ ಕೃಪೆಯಿಂದ ತೆಗೆದುಹಾಕಲ್ಪಡುತ್ತೀರಿ. ನಿಮ್ಮ ಮನಸ್ಸಿ ನಲ್ಲಿ ಇನ್ನೂ ಪಾಪವಿದೆ ಎಂದು ನೀವು ಕಂಡುಕೊಳ್ಳುತ್ತೀರ. 

ಕರ್ತನಾದ ಯೇಸು ಕ್ರಿಸ್ತನ ದೀಕ್ಷಾಸ್ನಾನದಿಂದ ಮತ್ತು ಶಿಲುಬೆಯಲ್ಲಿನ ಆತನ ರಕ್ತದಿಂದ ಯಶಸ್ವಿಯಾಗಿದ್ದರಿಂದ ಪ್ರಾರಂಭವಾದ ಸತ್ಯದಲ್ಲಿ ನಾವು ವಿಶ್ವಾಸ ವಿಡಬೇಕು. ಅದನ್ನು ಮಾಡುವುದಕ್ಕಾಗಿ, ಸತ್ಯ ವಾಕ್ಯಗಳನ್ನು, ಯೇಸುವಿನ ದೀಕ್ಷಾ ಸ್ನಾನ ಮತ್ತು ಆತನ ರಕ್ತವನ್ನು, ನಮ್ಮ ರಕ್ಷಣೆಯಾಗಿ ನಾವು ನಮ್ಮ ಮನಸ್ಸಿಗೆ ತೆಗೆದು ಕೊಳ್ಳಬೇಕು.

ಈ ನಂಬಿಕೆಯಿಂದ, ನಾವು ಕತ್ತಲೆನಿಂದ ಬಿಡುಗಡೆಯಾಗಿ ಬೆಳಕಿನ ಮಕ್ಕಳಾಗಿ ಬಿಡುಗಡೆಯಾಗುವುದಕ್ಕೆ ಸಾಧ್ಯ. ಈ ನಂಬಿಕೆಯು ಸಮಾನ್ಯ ಭಕ್ತರ ವರ್ಗ ದಿಂದ ನಿಜವಾಗಿಯೂ ಹೊಸದಾಗಿ ಹುಟ್ಟಿರುವವರನ್ನು ಆಧ್ಯಾತ್ಮಿಕವಾಗಿ ಬೇರೆ ಮಾಡುತ್ತದೆ. 

ನಮ್ಮ ದೇವರಾದ, ಯೇಸು ಆತನಲ್ಲಿ ನಿರೀಕ್ಷಿಸಬೇಕು ಎಂದು ಹೇಳುತ್ತಾರೆ. ಆತನ ದೀಕ್ಷಾಸ್ನಾನ ಮತ್ತು ಆತನ ರಕ್ತದಿಂದ ಲೋಕದ ಪಾಪಗಳನ್ನು ಈಗಾಗಲೇ ಆತನು ನಿವಾರಣೆಮಾಡಿದ್ದಾನೆ. ಆದದರಿಂದ, ಕರ್ತನ ಮಕ್ಕಳು ನಾವು ಎಂದು ಗುರುತನ್ನು ಇಟ್ಟುಕೊಳ್ಳುವುದತಗೋಸ್ಕರ, ನಾವು ಯೇಸುವಿನ ದೀಕ್ಷಾಸ್ನಾನದಲ್ಲಿ ನಂಬಬೇಕು. ಹೀಗೆ ನಾವು ಮಾಡಿಲ್ಲ ಅಂದರೆ ನಮ್ಮನ್ನು ಆತನಿಂದ ತೆಗೆದುಹಾಕ ಲ್ಪಡುತ್ತೇವೆ. 

ಹಳೇ ಒಡಂಬಡಿಕೆಯಲ್ಲಿ ಸುನ್ನತಿ ಸಂಸ್ಕಾರ ಮತ್ತು ಹೊಸ ಒಡಂಬಡಿಕೆ ಯಲ್ಲಿ ಯೇಸುವಿನ ದೀಕ್ಷಾಸ್ನಾನವನ್ನು ಬಿಟ್ಟು ಬೇರೆ ಯಾವ ರಕ್ಷಣೆವೂ ಇಲ್ಲ. (ಆಧ್ಯಾತ್ಮಕ ಸುನ್ನತಿ) ಯೇಸುವಿನ ದೀಕ್ಷಾಸ್ನಾನ ಮತ್ತು (ಪಾಸ್ಕಹಬ್ಬದ ಕುರಿಮರಿಯ ಹಬ್ಬ) ಶಿಲುಬೆಯ ಮೇಲೆ ಆತನ ರಕ್ತವು ಈ ಎರಡರಲ್ಲಿ ನಮಗೆ ವಿಶ್ವಾಸವಿರುವಾಗ ಮಾತ್ರವೇ ರಕ್ಷಣೆಯು ಪೂರ್ತಿಯಾಗುತ್ತದೆ. 

ಹಳೇ ಒಡಂಬಡಿಕೆಯಲ್ಲಿ ಮಾಂಸದ ಸುನ್ನತಿಯು ಹೊಸ ಒಡಂಬಡಿಕೆ ಯಲ್ಲಿ ಯೇಸುಕ್ರಿಸ್ತನ ದೀಕ್ಷಾಸ್ನಾನಕ್ಕೆ ಸಂಬಂಧಿಸುತ್ತದೆ. ಯೆಶಾಯ 34:16ರಲ್ಲಿ ಸತ್ಯವೇದದಲ್ಲಿರುವ ಎಲ್ಲಾ ವಾಕ್ಯಗಳಿಗೆ ಅವುಗಳ ಜೊತೆಗೂಡುತ್ತದೆ ಎಂದು ನಮಗೆ ಹೇಳುತ್ತದೆ. “ಕರ್ತನ ಶಾಸ್ತ್ರದಲ್ಲಿ ಹುಡುಕಿ ಓದಿರಿ, ಇವುಗಳಲ್ಲಿ ಯಾವದೂ ಇಲ್ಲ ದಿರದು. ಎಲ್ಲವೂ ಜೊತೆ ಜೊತೆಯಾಗಿರುವವು; ಆತನ ಬಾಯಿಂದ ಅಪ್ಪಣೆಯಾ ಯಿತಲ್ಲವೆ, ಆತನ ಆತ್ಮವು ಇವುಗಳನ್ನು ಒಟ್ಟಿಗೆ ಬರಮಾಡಿತಷ್ಟೆ.”

ಹಳೇ ಒಡಂಬಡಿಕೆಯ ಪ್ರತಿಯೊಂದು ವಾಕ್ಯವು ಹೊಸ ಒಡಂಬಡಿಕೆಯ ವಾಕ್ಯಕ್ಕೆ ಜೊತೆಗೂಡಿಸುತ್ತದೆ. ಕರ್ತನ ಒಂದು ವಾಕ್ಯವೂ ಕೂಡ ಪ್ರತಿರೂಪಿಸುವು ದಿಲ್ಲ.



ತಪ್ಪಾಗಿ ನಂಬುವ ಮೂರ್ಖರ ಗತಿ ಏನು? 


  • ಲೋಕದಲ್ಲಿರುವ ಎಲ್ಲಾ ಭಕ್ತರಲ್ಲಿ 
  • ಯಾರು ನರಕಕ್ಕೆ ಹೋಗುತ್ತಾರೆ?
  • ಆಧ್ಯಾತ್ಮಕ ಸುನ್ನತಿಯಲ್ಲಿ 
  • ವಿಶ್ವಾಸವಿಡದಿರುವವರು


ಪಾಸ್ಕಹಬ್ಬದ ಕುರಿಮರಿಯ ರಕ್ತದಲ್ಲಿ ಮಾತ್ರವೇ ನಂಬುವವರು ಇವತ್ತಿನ ಲ್ಲಿ ಅನೇಕರು ಇದ್ದಾರೆ. ಅವರು ಹೀಗೆ ಕೇಳುತ್ತಾರೆ, “ಸುನ್ನತಿ, ಅಂದರೆ ಏನು? ಅದು ಹಳೇ ಒಡಂಬಡಿಕೆಯಲ್ಲಿ ಯಹೋದ್ಯರು ಮಾತ್ರ ಮಾಡಬೇಕಾದದು. ಹೊಸ ಒಡಂಬಡಿಕೆಯ ಕಾಲದಲ್ಲಿ ನಾವು ಸುನ್ನತಿ ಮಾಡಿಸಿಕೊಳ್ಳುವ ಅವಷ್ಯಕತೆಯಿಲ್ಲ ಎಂದು ಅವರು ಅನ್ನುತ್ತಾರೆ.”

ನಿಜವಗಿಯೂ ಅದು ನಿಜ. ನಾವು ಶರೀರದಲ್ಲಿ ಸುನ್ನತಿ ಮಾಡಿಸಿಕೊಳ್ಳ ಬೇಕು ಎಂದು ನಾನು ಹೇಳುತ್ತಿಲ್ಲ. ಅಪೋಸ್ತಲನಾದ ಪೌಲನು ಆಧ್ಯಾತ್ಮಿಕ ಸುನ್ನತಿ ಯನ್ನು ಬಹು ಸ್ವಷ್ಟವಾಗಿ ವಿವರಿಸಿದ್ದಾನೆ, ಮತ್ತು ಈಗ ನಾನು ಉಲ್ಲೇಖಿಸುವದು ಮನಸ್ಸಿನ ಸುನ್ನತಿಯನ್ನು. 

ಶರೀರದಲ್ಲಿ ಸುನ್ನತಿ ಮಾಡಿಸಿಕೊಳ್ಳಬೇಕು ಎಂದು ನಾನು ಹೇಳುತ್ತಿಲ್ಲ. ಮಾಂಸದ ಸುನ್ನತಿ ನಮಗೆ ಯಾವ ಅರ್ಥಕೊಡುವುದಿಲ್ಲ, ಆದರೆ ನಾವು ನಮ್ಮ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆಯಬೇಕೆಂದರೆ ನಾವು ಯೇಸುವಿನ ಹತ್ತಿರಕ್ಕೆ ಬಂದು ಯೇಸುವಿನ ದೀಕ್ಷಾಸ್ನಾನದಲ್ಲಿ ನಂಬುವುದರಿಂದ ಆಧ್ಯಾತ್ಮಿಕ ಸುನ್ನತಿ ಮಾಡಿಸಿಕೊಳ್ಳಬೇಕು. 

ಒಬ್ಬನು ಹೊಸದಾಗಿ ಹುಟ್ಟಬೇಕೆಂದರೆ, ಆತನು ಆಧ್ಯಾತ್ಮಿಕವಾಗಿ ಸುನ್ನತಿ ಮಾಡಿಸಿಕೊಳ್ಳಬೇಕು, ಯೇಸುವನ್ನು ನಂಬುವವನು ಆಧ್ಯಾತ್ಮಿಕವಾಗಿ ಸುನ್ನತಿ ಮಾಡಿಸಿಕೊಳ್ಳಬೇಕು. ನಮ್ಮ ಎಲ್ಲಾ ಪಾಪಗಳನ್ನು ಕತ್ತರಿಸುವುದಕ್ಕೆ, ನೀತಿವಂತ ನಾಗುವುದಕ್ಕೆ ಅದು ಒಂದೇ ದಾರಿ. ಆಧ್ಯಾತ್ಮಕ ಸುನ್ನತಿಯಾದ ನಂತರವೇ ನಾವು ಪಾಪವಿಲ್ಲದೇ ಇರುತ್ತೇವೆ. ಆದದರಿಂದ ನಾವು ಯೇಸುವಿನ ದೀಕ್ಷಾಸ್ನಾನವನ್ನು ನಂಬುವುದರಿಂದ ಆಧ್ಯಾತ್ಮಿಕ ಸುನ್ನತಿಯನ್ನು ನಮ್ಮ ಮನಸ್ಸಿನಲ್ಲಿ ನಾವು ಒಪ್ಪಿ ಕೊಳ್ಳಬೇಕು.

ಅಪೋಸ್ತಲನಾದ ಪೌಲನು ಸಹ ಆಧ್ಯಾತ್ಮಿಕ ಸುನ್ನತಿಯ ಮುಖ್ಯತೆಯನ್ನು ನಂಬಿದನು. “ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ “(ರೋಮಾ 2:29), ಎಂದು ಹೇಳುತ್ತಾನೆ. ಪಾಪಗಳಿಂದ ಬಿಡುಗಡೆಯಾಗುವುದಕ್ಕೆ ನಾವೇಲ್ಲಾರು ಆಧ್ಯಾತ್ಮಿಕ ಸುನ್ನತಿ ಮಾಡಿಸಿಕೊಳ್ಳಬೇಕು. 

ಪಾಪಗಳನ್ನು ನಿಮ್ಮಿಂದ ಕತ್ತರಿಸಿದ ನಂತರ ಆ ಪಾಪಗಳು ನಿಜವಾಗಿಯೂ ಯೇಸುವಿನ ಮೇಲೆ ಹೋದವು. ಹೊಸ ಒಡಂಬಡಿಕೆಯಲ್ಲಿಯೂ ಸಹ, ಯೇಸುವಿ ನಲ್ಲಿ ನಂಬುವವರು ಯೇಸುವಿನ ದೀಕ್ಷಾಸ್ನಾದಿಂದ ಅವರ ಹೃದಯದಲ್ಲಿ ಸುನ್ನತಿ ಯಾಗಬೇಕು. 

ಅಪೋಸ್ತಲನಾದ ಪೌಲನು ಆತನ ಪತ್ರಿಕೆಯಲ್ಲಿ ಇದನ್ನು ಕುರಿತು ಸ್ವಷ್ಟ ಪಡಿಸಿದ್ದಾನೆ. ಕರ್ತನು  ಲೋಕದ ಎಲ್ಲಾ ಪಾಪಗಳಿಂದ ನಮ್ಮನ್ನು ರಕ್ಷಿಸಿ, ನಮ್ಮನ್ನು ಆತನ ಮಕ್ಕಳಾಗಿ ಮಾಡಿದ್ದಾನೆ. ಸುನ್ನತಿಮಾಡಿಕೊಂಡಿದರಿಂದ ಇಸ್ರಾಯೇಲ್ಯರು ಕರ್ತನ ಜನರಾದರು ಮತ್ತು ನಾವು ಯೇಸುವಿನ ದೀಕ್ಷಾಸ್ನಾನವನ್ನು ನಂಬುವುದ ರಿಂದ ನಮ್ಮ ಪಾಪಗಳನ್ನು ಆತನ ಮೇಲೆ ನಾವು ಹೊರೆಯುವುದರಿಂದ ಆತನ ಮಕ್ಕಳಾಗುತ್ತೇವೆ.

ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಶಿಲುಬೆಯ ಮೇಲೆ ಆತನ ರಕ್ತದಲ್ಲಿ ನಮಗಿರುವ ವಿಶ್ವಾಸವನ್ನು ಕರ್ತನು ನೋಡುವಾಗ ನಮ್ಮನ್ನು ಆತನ ಮಕ್ಕಳಾಗಿ ಸ್ವೀಕರಿಸುತ್ತಾನೆ. ಈ ವಿಶ್ವಾಸವು ಆಧ್ಯಾತ್ಮಿಕ ಸುನ್ನತಿ ಮಾಡಿಸಿಕೊಂಡವರಾಗಿ ಮಾಡು ತ್ತದೆ ಮತ್ತು ನಮನ್ನು ರಕ್ಷಣೆಯ ದಾರಿಯನ್ನು ತೋರಿಸುತ್ತದೆ.



ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಮೂಲಕ ಪಾಪಿ ಗಳಿಗೆ ರಕ್ಷಣೆ 

 

  • ಯೇಸು ರಕ್ಷಣೆಯನ್ನು
  • ನೆರೆವೇರಿಸಿದ್ದು ಹೇಗೆ?
  • ಆತನ ದೀಕ್ಷಾಸ್ನಾನದಿಂದ ಮತ್ತು
  • ಆತನ ರಕ್ತದಿಂದ


ಆತನ ನೀರಿನ ದೀಕ್ಷಾಸ್ನಾನದ ಮೂಲಕ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ಯೇಸುಕ್ರಿಸ್ತನು ಪೂರ್ತಿಮಾಡಿದ ರಕ್ಷಣೆಯು ಪಾಪಿಗಳಿಗಾಗಿಯೇ. ಕುರಿಮರಿ ರಕ್ತವೇ ತೀರ್ಪು ಮತ್ತು ನಮ್ಮ ಎಲ್ಲಾ ಪಾಪಗಳನ್ನು ಸ್ಥಳಾಂತರಮಾಡಿದ ಯೇಸುವಿನ ದೀಕ್ಷಾಸ್ನಾನ ಆಧ್ಯಾತ್ಮಿಕ ಸುನ್ನತಿಯೇ ತೀರ್ಪು. 

ಈ ಕಾಲದ ಕ್ರೈಸ್ತ ದೇವಾಲಯಗಳು ಆಧ್ಯಾತ್ಮಿಕ ಸುನ್ನತಿಯನ್ನು ನಿರ್ಲಕ್ಷಿಸ ಬಾರದು. ಈ ದಿನದಲ್ಲಿ ಹಳೇ ಒಡಂಬಡಿಕೆಯ ಸುನ್ನತಿಯು ಸ್ವಲ್ಪ ಮುಖ್ಯವಾಗಿ ದ್ದರೂ ಸಹ ಯೇಸುವಿನ ದೀಕ್ಷಾಸ್ನಾನವನ್ನು ನಾವು ನಿರ್ಲಕ್ಷಿಸಲೇ ಬಾರದು.

ಯೇಸುವಿನ ದೀಕ್ಷಾಸ್ನಾನದಿಂದ ನಮ್ಮ ಎಲ್ಲಾ ಪಾಪಗಳು ನಿವಾರಣೆ ಯಾದವು ಎಂದು ನಾನು ಹೇಳಿದೆ, ಮತ್ತು ಯೇಸುವಿನ ದೀಕ್ಷಾಸ್ನಾನವು ನಮ್ಮ ಎಲ್ಲಾ ಪಾಪಗಳಿಂದ ನಮ್ಮನ್ನು ರಕ್ಷಿಸಿತ್ತು ಎಂದು ನಾನು ನಿಮಗೆ ಹೇಳಿದೆ. ಇದರಲ್ಲಿ ನೀವು ನಿಮ್ಮ ವಿಶ್ವಾಸವಿಡುತ್ತೀರೊ? ಯೇಸುವಿನ ದೀಕ್ಷಾಸ್ನಾನವನ್ನು ನೀವು ನಿರ್ಲಕ್ಷಿಸಿ ದರೆ, ಹೊಸದಾಗಿ ಹುಟ್ಟುವ ಎಂಬ ಸುವಾರ್ತೆಯನ್ನು, ಯೇಸುವಿನ ದೀಕ್ಷಾಸ್ನಾನದ ಮೂಲಕ ಸಂಪೂರ್ಣವಾದ ರಕ್ಷಣೆಯ ಸುವಾರ್ತೆಯನ್ನು ನೀವು ಎಂದಿಗೂ ತಿಳಿದು ಕೊಳ್ಳುವುದಕ್ಕೆ ಆಗುವುದೇ ಇಲ್ಲ.

ಕರ್ತನು ನಮಗೆ ಹೇಳಿದ ಆಧ್ಯಾತ್ಮಿಕ ಸುನ್ನತಿಯಾದ, ಯೇಸುವಿನ ದೀಕ್ಷಾ ಸ್ನಾನವನ್ನು ನಾವು ನಿರ್ಲಕ್ಷಿಸುವುದಕ್ಕೆ ಹೇಗೆ ಸಾಧ್ಯ? ನಾವು ಸತ್ಯವೇದವನ್ನು ಓದು ವಾಗ, ಪಾಸ್ಕಹಬ್ಬದ ಸುನ್ನತಿಸಂಸ್ಕಾರ ಮತ್ತು ಕುರಿಮರಿಯ ರಕ್ತವು ಹತ್ತಿರವಾಗಿ ಸಂಬಂಧಿಸುತ್ತದೆ ಎಂದು ನಾವು ನೋಡಬಹುದು. ಇದೇ ಯೇಸುವಿನ ದೀಕ್ಷಾಸ್ನಾನ, ಆಧ್ಯಾತ್ಮಿಕ ಸುನ್ನತಿಯ ರಹಸ್ಯ.

ಅಪೋಸ್ತಲನಾದ ಯೋಹಾನನು ಬೋಧಿಸಿದ ಸುವಾರ್ತೆ ಯೇಸುವಿನ ದೀಕ್ಷಾಸ್ನನ ಮತ್ತು ಆತನ ಶಿಲುಬೆಯ ರಕ್ತವನ್ನು ಕುರಿತು ಬೋಧಿಸಿದನು. “ಈತನು, ಅಂದರೆ ಯೇಸು ಕ್ರಿಸ್ತನು, ನೀರಿನಿಂದ ಮಾತ್ರವಲ್ಲ, ನೀರಿನಿಂದಲೂ ರಕ್ತದಿಂದಲೂ ಸಾಕ್ಷಿ ಕೊಡುವವನಾಗಿದ್ದಾನೆ,” ಎಂದು 1 ಯೋಹಾನ 5:6 ರಲ್ಲಿ ಆತನು ಹೇಳುತ್ತಾನೆ.

ಯೇಸು ನೀರು, ರಕ್ತ, ಮತ್ತು ಆತ್ಮನ ಮೂಲಕ ಬಂದಿದ್ದಾನೆ ಎಂದು ಆತನು ಹೇಳಿದನು. ನೀರಿನಿಂದ ಮಾತ್ರವಲ್ಲ, ರಕ್ತದಿಂದ ಮಾತ್ರವಲ್ಲ, ಆದರೆ ನೀರಿನಿಂದಲು, ರಕ್ತದಿಂದಲೂ ಮತ್ತು ಆತ್ಮನಿಂದಲೂ ಸಾಕ್ಷಿ ಹೊಂದಿದವನ್ನಾಗಿದ್ದಾನೆ. ಯೇಸುವಿನ ದೀಕ್ಷಾಸ್ನಾನ, ಶಿಲುಬೆಯ ಮೇಲೆ ಯೇಸುವಿನ ರಕ್ತ ಮತ್ತು ಮರಣದಿಂದ ಆತನ ಪುನರುತ್ಥಾನ, ಈ ಮೂರು, ಒಂದೇ. ಇವು ನಮ್ಮ ರಕ್ಷಣೆಯ ಗುರುತು.



ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ಕುರಿತು ಸತ್ಯವೇದವು ಏಕೆ ಮಾತನ್ನಾಡುತ್ತದೆ? 


  • ಎಲ್ಲಿ ಇಸ್ರಾಯೇಲ್ಯರು ರಕ್ಷಣೆಯನ್ನು ಪಡೆದರು
  • ಪಾಸ್ಕಹಬ್ಬದ ಕುರಿಮರಿಯ ರಕ್ತದಿಂದ ಮಾತ್ರವೇ?
  • ಇಲ್ಲ. ಅವರು ಪಾಸ್ಕಹಬ್ಬದ ಮುನ್ನವೇ ಅವರು
  • ಸುನ್ನತಿಮಾಡಿಸಿಕೊಂಡಿದ್ದರು.

ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ ನಮ್ಮನ್ನು ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟುವುದಕ್ಕೆ ಅನುಮತಿಸುತ್ತದೆ. ವಿಮೋಚನಕಾಂಡ 12ನೆಯ ಅಧ್ಯಾಯದಲ್ಲಿ, “ಸಂಖ್ಯಾನುಸಾರ ಮರಿಗಳನ್ನು ತೆಗೆದುಕೊಳ್ಳರಿ, ಅದರ ರಕ್ತವನ್ನು ಸ್ವಲ್ಪ ತೆಗೆದು ತಾವು ಆ ಭೋಜನವನ್ನು ಮಾಡುವ ಮನೇಬಾಗಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ನಾನು ಆ ರಕ್ತವನ್ನು ಕಂಡು, ನಾನು ಮುಂದಕ್ಕೆ ದಾಟಿ ಹೋಗುವೆನು” ಎಂದು ಹೇಳುತ್ತದೆ. 

ಇದನ್ನು ತಿಳಿದುಕೊಂಡು, ಪಾಸ್ಕಹಬ್ಬದ ಕುರಿಮರಿಯ ರಕ್ತ ಮಾತ್ರದಲ್ಲಿ ನಾವು ನಂಬುವುದರಿಂದ ನಮ್ಮ ಎಲ್ಲಾ ಪಾಪಗಳು ನಿವಾರಣೆಯಾಗುವುದಕ್ಕೆ ಸಾಧ್ಯವೊ? ಆಗ ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾವನ್ನು ಕುರಿತು ಆಷ್ಟೋಂದು ಮಾತನ್ನಾಡುವುದು ಏಕೆ? ಅಪೋಸ್ತಲರು ಹೀಗೆ ಹೇಳುತ್ತಾರೆ, “ದೀಕ್ಷಾ ಸ್ನಾನದಲ್ಲಿ ಹೊಣಲ್ಪಟ್ಟದ್ದರಿಂದಲೇ” (ಕೊಲೊಸ್ಸೆಯವರಿಗೆ 2:12). “ಹೇಗೆಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸ್ನಾನಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ”(ಗಲಾತ್ಯದವರಿಗೆ 3:27). “ಆ ನೀರಿಗೆ ಅನುರೂಪವಾದ ದೀಕ್ಷಾ ಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ”       (1 ಪೇತ್ರನು 3:21).

ಅಪೋಸ್ತಲನಾದ ಪೇತ್ರ ಮತ್ತು ಪೌಲ ಮತ್ತು ಯೇಸು ಕ್ರಿಸ್ತನ ಎಲ್ಲಾ ಶಿಷ್ಯರು ಯೇಸುವಿನ ದೀಕ್ಷಾಸ್ನಾನವನ್ನು ಕುರಿತು ಮಾತನ್ನಾಡಿದರು. ಅವರು ಉಲ್ಲೇಖಿಸುತ್ತಿರುವುದು ಯೊರ್ದನ್ ಹೊಳೆಯಲ್ಲಿ ಯೇಸುವಿನ ದೀಕ್ಷಾಸ್ನಾನದ ಬಗ್ಗೆ, ಮತ್ತುಯೇಸುವಿನ ದೀಕ್ಷಾಸ್ನಾನದನ ನಂಬಿಕೆ ಮತ್ತು ಶಿಲುಬೆಯ ಮೇಲೆ ಆತನ ರಕ್ತ ಇದಲ್ಲಿರುವ ನಂಬಿಕೆ ಅದೇ ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟುವ ಸತ್ಯ. 

ನಿಮಗೆ ನಿಜವಾಗಿ ಹೇಳಬೇಕಂದರೆ, 10ವರುಷದ ಕಾಲವರೆಗೆ, ಯೇಸುವಿನ ದೀಕ್ಷಾಸ್ನಾನವನ್ನೂ ಸಹ ಅಂಗೀಕರಿಸದೇ, ನಾನು ಯೇಸುವಿನಲ್ಲಿ ನಂಬಿದೆ, ಆದರೆ ಆತನ ರಕ್ತವನ್ನು ಮಾತ್ರವೆ ನಂಬಿದ್ದೆ. ಆದರೆ ನನ್ನ ತಿಳುವಳಿಕೆ ನನ್ನ ಹೃದಯದಿಂದ ಪಾಪಗಳನ್ನು ನಿವಾರಣೆಮಾಡಲಿಲ್ಲ. ನನ್ನ ಪೂರ್ಣಹೃದಯದಿಂದ ನಾನು ಯೇಸು ವನ್ನು ನಂಬಿದೆ, ಆದರೆ ಇನ್ನೂ ನನ್ನ ಹೃದಯ ಪಾಪದಲ್ಲಿ ತುಂಬಿತ್ತು. 

ಹತ್ತು ವರುಷವಾದ ನಂತರ, ಆಧ್ಯಾತ್ಮಿಕ ಸುನ್ನತಿ (ಯೇಸುವಿನ ದೀಕ್ಷಾ ಸ್ನಾನ) ಅಂದರೆ ಏನು ಎಂಬ ಅರ್ಥವನ್ನು ನಾನು ಕಂಡುಹಿಡಿದೆ ನಂತರ ನಾನು ಹೊಸದಾಗಿ ಹುಟ್ಟಿದೆ. ಆಗ ಮಾತ್ರವೇ ನಾನು ಸತ್ಯವನ್ನು ಸ್ವಷ್ಟವಾಗಿ ಗ್ರಹಿಸಿದೆ: ಹಳೇ ಒಡಂಬಡಿಕೆ ಸುನ್ನತಿಯು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾನ ವನ್ನು ಸೂಚಿಸುತ್ತದೆ. ನಾನು ಇದರಲ್ಲಿ ನಂಬಿದೆ ಮತ್ತು ಇನ್ನೂ ನಾನು ನಂಬಿದ್ದೇನೆ. 

“ಹೊಸ ಒಡಂಬಡಿಕೆಯಲ್ಲಿ, ಯೇಸುವಿನ ರಕ್ತ ಮತ್ತು ಆತನ ದೀಕ್ಷಾಸ್ನಾನ ವನ್ನು ನಂಬುವುದು ಸರಿಯಾದ ನಂಬಿಕೆಯೇ? ಸತ್ಯವೇದದ ಪ್ರಕಾರ ನನ್ನ ನಂಬಿಕೆ ಯು ಸರಿಯೇ?” ನಾನು ಹೊಸದಾಗಿ ಹುಟ್ಟಿದ ನಂತರ, ಇವುಗಳನ್ನು ಕುರಿತು ನಾನು ತಿಳಿಯಲು ಆತುರವುಳ್ಳವನ್ನಾಗಿದ್ದೆ. 

ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಸಂದೇಶವನ್ನು ನಾನು ನಂಬಿದರೂ ಸಹ, ಇನ್ನೂ ನನ್ನಲ್ಲಿ ಪ್ರಶ್ನೆಗಳು ಇತ್ತು. “ಯೇಸು ದೀಕ್ಷಾಸ್ನಾನ ಮಾಡಿಸಿ ಕೊಂಡಾಗ ನನ್ನ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋದವು ಎನ್ನುವ ಸತ್ಯ ವನ್ನು ನಂಬುವುದು ಸರಿಯೇ ಅಥವ ಶಿಲುಬೆಯ ಮೇಲೆ ಯೇಸುವಿನ ಮರಣದ ಮೂಲಕ ನಮ್ಮನ್ನು ಯೇಸು ರಕ್ಷಿಸಿದನು ಎಂದು ನಂಬುವುದು ಸರಿಯೇ. ಯೇಸು ನನ್ನ ಕರ್ತನು ಮತ್ತು ನನ್ನ ರಕ್ಷಕನು ಎಂದು ನಂಬಿದರೆ ಸಾಕಲ್ಲವೇ?” ವಿಮೋಚನ ಕಾಂಡ 12ನೆಯ ಅಧ್ಯಾಯವನ್ನು ನಾನು ಓದುವಾಗ ನಾನು ಇದನ್ನು ಮನಸ್ಸಿನಲ್ಲಿ ನಾನು ಯೋಚಿಸಿದೆ. 

ಅನೇಕರು ವಿಮೋಚನಕಾಂಡ 12ನೇ ಅಧ್ಯಾಯವನ್ನು ಓದುತ್ತಾರೆ ಅದು ಅವರ ರಕ್ಷಕನ್ನಾಗಿ ಶಿಲುಬೆಯ ಮೇಲೆ ಯೇಸು ಕ್ರಿಸ್ತನ ಮರಣವನ್ನು ಹೇಳುವುದನ್ನು ಕುರಿತು ಎರಡು ಸಾರಿ ಅವರು ಯೋಚಿಸುವುದಿಲ್ಲ. ಕ್ರಿಸ್ತನ ರಕ್ತವನ್ನು ನಂಬುವುದು ಸರಿ ಎಂದು ಅವರು ಯೋಚಿಸುತ್ತಾರೆ ಮತ್ತು ಅವರು ಅವರ ದೃಡನಿಶ್ಚಯದ ಸತ್ಯಕ್ಕೆ ಅವರು ಸಾಕ್ಷಿಹೇಳುತ್ತಾರೆ. ಅವರು ಹಿಂಜರಿಯದೆ ವಿಶ್ವಾಸವಿಡ ಬಹುದು ಮತ್ತು ದೇವರು ಕ್ರೈಸ್ತನು ಮತ್ತು ಕರ್ತನ ಕುಮಾರನು ಎಂದು ಹೇಳುತ್ತಾರೆ ಆದರೆ ಅವರು ಇನ್ನೂ ಪಾಪಿಗಳೇ. ಯೇಸು ಕ್ರಿಸ್ತನು ರಕ್ಷಕ ಎಂದು ಅವರು ನಂಬಿದರೆ, ಅವರ ಹೃದಯದಲ್ಲಿ ಇನ್ನೂ ಪಾಪವಿದ್ದರೂ ಸಹ ಅವರು ರಕ್ಷಣೆಯನ್ನು ಪಡೆಯುತ್ತಾರೆ ಎಂದು ಅವರು ಯೋಚಿಸುತ್ತಾರೆ. 

ಇಂತಹ ವಿಶ್ವಾಸ ನಿಜವಾದ ವಿಶ್ವಾಸವಲ್ಲ. ಈ ವಿಶ್ವಾಸ ಹೊಸದಾಗಿ ಹುಟ್ಟುವ ಹಾಗೆ ಮಾಡುವುದಿಲ್ಲ; ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ ಮಾತ್ರವೇ ನಮ್ಮನ್ನು ನೀತಿವಂತವರನ್ನಾಗಿ ಮಾಡುತ್ತದೆ. 

ಆಗ, ವಿಮೋಚನಕಾಂದ 12 ನೇ ಅಧ್ಯಾಯದ ಅರ್ಥ ಏನು? ನಾನು ಸತ್ಯವೇದವನ್ನು ಓದುವಾಗ, ಹೀಗೆ ಯೋಚಿಸಿದೆ, “ಯೇಸುವಿನ ದಿಕ್ಷಾಸ್ನಾನವನ್ನು ನಿರ್ಲಕ್ಷಿಸಿ ಆತನ ರಕ್ತವನ್ನು ಮಾತ್ರವೇ ನಂಬುವದರಲ್ಲಿ ಏನಾದರು ಸಮಸ್ಯೆ ಇದೆಯೇ?” ವಿಮೋಚನಕಾಂಡವನ್ನು ಓದಿ ಮುಗಿಸುವದಕ್ಕೆ ಮುನ್ನವೇ, ಕ್ರೈಸ್ತನ ರಕ್ತದಲ್ಲಿ ಮಾತ್ರವೇ ರಕ್ಶಣೆಯಿಲ್ಲ, ಆದರೆ ದೀಕ್ಷಾಸ್ನಾನದಲ್ಲಿಯೂ ಸಹ ಎಂಬ ಸತ್ಯವನ್ನು ನಾನು ಕಂಡುಹಿಡಿದೆ. ಸತ್ಯವೇದದ ಮೂಲಕ, ನಮ್ಮ ಹೃದಯದಲ್ಲಿ ಯೇಸುವಿನ ದೀಕ್ಷಾಸ್ನಾದಿಂದ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ನಾವು ಸುನ್ನತಿಯಗಿದ್ದೇವೆ ಎಂದು ನಾನು  ನಿಶ್ಚಯವಾಗಿದೆ.


  • ಅನೇಕ ಕ್ರೈಸ್ತರು ಇನ್ನೂ
  • ಪಾಪಿಯಾಗಿರುವ ಕಾರಣವೇನು?
  • ಕಾರಣ ಅವರು ಯೇಸುವಿನ ದೀಕ್ಷಾಸ್ನಾನದಲ್ಲಿ
  • ವಿಶ್ವಾಸವಿಡದಿರುವದರಿಂದಲೇ.


ವಿಮೋಚನಕಾಂಡ 12:47-49 ರಲ್ಲಿ ಸುನ್ನತಿ ಮಾಡಿಸಿಕೊಂಡ ತರುವಾಯ, ಒಬ್ಬನು ಈ ಹಬ್ಬವನ್ನು ಆಚರಿಸಬೇಕು ಎನುವುದನ್ನು ನಾನು ಸ್ವಷ್ಟವಾಗಿ ಗ್ರಹಿಸಿದೆ. ಆದದರಿಂದಲೇ 49ನೇ ವಚನದಲ್ಲಿ ಕರ್ತನು ಹೀಗೆ ಹೇಳುತ್ತಾನೆ, “ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ವಿಧಿಯಿರಬೇಕು.” 

ಆದದರಿಂದ ಯಾರಾದರೂ ಸುನ್ನತಿ ಮಾಡಿಸಿಕೊಳ್ಳದಿದ್ದರೆ ಆತನು ಪಾಸ್ಕ ಹಬ್ಬವನ್ನು ಆಚರಿಸಬಾರದು. ಈ ಸತ್ಯವನ್ನೇ ನಾನು ಕಂಡೆ. ಹೀಗಿಯೇ, ಯೇಸು ನಮ್ಮ ರಕ್ಷಕ ಎಂದು ನಾವು ನಂಬುವಾಗ, ನಾವು ಮೊದಲಿಗೆ ಯೊರ್ದನ್ ಹೊಳೆ ಯಲ್ಲಿ ಯೇಸುವಿನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋದೆವು ಎನ್ನುವ ವಿಷಯವನ್ನು ನಾವು ಒಪ್ಪಿಕೊಳ್ಳಬೇಕು ತರುವಾಯ ಈ ಪಾಪಗಳಿಗಾಗಿ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣಹೊಂದಿದನು ಎಂಬ ವಿಷಯವನ್ನು ನಾವು ಒಪ್ಪಿಕೊಳ್ಳಬೇಕು. 

ನಮ್ಮ ಪಾಪಗಳ ತೀರ್ಪುಗಾಗಿ ಯೇಸು ಶಿಲುಬೆಯ ಮೇಲೆ ಮರಣಹೊಂದಿ ದನು ಎಂದು ನಾನು ಸ್ವಷ್ಟವಾಗಿ ಗ್ರಹಿಸಿದಾಗ, ನಮ್ಮ ಎಲ್ಲಾ ಪಾಪಗಳಿಂದ ಮತ್ತು ಲೋಕದ ಪಾಗಳಿಂದ ನಮ್ಮನ್ನು ರಕ್ಷಿಸಿದ ಆಧ್ಯಾತ್ಮಿಕ ಸುನ್ನತಿಯನ್ನೂ ಸಹ ನಾನು ಸ್ವಷ್ಟವಾಗಿ ಗ್ರಹಿಸಿಕೊಂಡೆ.

ಆ ಕ್ಷಣದಲ್ಲಿ, ನಾನು ನನ್ನ ಎಲ್ಲಾ ಪಾಪಗಳು ಹೋದೆವು ಎಂದು ನಾನು ಸ್ವಷ್ಟವಾಗಿ ಗ್ರಹಿಸಿದೆ ನನ್ನ ಹೃದಯವು ಹಿಮದಂತೆ ಬಿಳಿಯಾಗಿ ಆಯಿತು ಮತ್ತು ಕೊನೆಗೆ ನಾನು ನೀರು, ರಕ್ತ ಮತ್ತು ಆತ್ಮದ ಸುವಾರ್ತೆಯನ್ನು ನನ್ನ ಹೃದಯಕ್ಕೆ ಸ್ವೀಕರಿಸಿದೆ.

ಹಳೇ ಒಡಂಬಡಿಕೆಯಲ್ಲಿ ಸುನ್ನತಿ ಮತ್ತು ಕುರಿಮರಿಯ ರಕ್ತ ಹಾಗೂ ಯೇಸುವಿನ ದೀಕ್ಷಾಸ್ನಾನದ ಮೂಲಕ ಎಲ್ಲಾ ಪಾಪ ಆತನ ಮೇಲೆ ಹೊರೆಯುವುದು ಮತ್ತು ಹೊಸ ಒಡಂಬಡಿಕೆಯಲ್ಲಿ ಶಿಲುಬೆಯ ಮೇಲೆ ಆತನ ರಕ್ತ ಈ ಎರಡು ನಮ್ಮನ್ನು ರಕ್ಷಿಸಿತುಎಂದು ನಾನು ಸ್ವಷ್ಟವಾಗಿ ಗ್ರಹಿಸಿಕೊಂಡೆ. ಹಳೇ ಒಡಂಬಡಿಕೆ ಯಲ್ಲಿ ಸುನ್ನತಿ ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾನ ಈ ಎರಡೂ ಒಂದೇಯಾಗಿದೆ.

ಯೇಸು ಕ್ರಿಸ್ತನು ಪಾಪಮಾಡಿದ್ದಗೋಸ್ಕರ ತೀರ್ಪಿಗೆ ಗುರಿಯಾಗಲಿಲ್ಲ, ಆದರೆ ಆತನ ದೀಕ್ಷಾಸ್ನಾನದಿಂದ ಲೋಕದ ಎಲ್ಲಾ ಪಾಪಗಳನ್ನು ಆತನು ತಕ್ಕೊಂಡಿದ್ದರಿಂದಲೇ. ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿ ಲೋಕದ ಎಲ್ಲಾ ಪಾಪ ಗಳನ್ನು ಯೇಸುವಿನ ಮೇಲೆ ಹೋಗುವ ಹಾಗೆ ಮಾಡಿದ ಸ್ನಾನಿಕ ಯೋಹಾನನು, ಮನುಷ್ಯನ ಪ್ರತಿನಿಧಿ ಎಂದು ನಂಬುವವರು, ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಶಿಲುಬೆಯಲ್ಲಿ ಆತನ ರಕ್ತದಲ್ಲಿಯೂ ಸಹ ನಂಬುತ್ತಾರೆ. 

ಪದೇ ಪದೇ ಸತ್ಯವೇದದಲ್ಲಿ ವಿವರಿಸಿದರೂ ಸಹ ಅನೇಕ ಜನರು ಯಾಕೆ ಆತನ ದೀಕ್ಷಾಸ್ನಾನವನ್ನು ನಿರಾಕರಿಸುತ್ತಾರೆ? ಇದನ್ನು ಮಾಡುವುದರಿಂದ ಅವರು ಯೇಸುವಿನಲ್ಲಿ ನಂಬಿದರೂ ಸಹ ಅವರು ಇನ್ನೂ ಪಾಪಿಗಳೇ. ಅವರು ಯೇಸುವಿ ನಲ್ಲಿ ನಂಬಿರ ಬಹುದು. ಆದರೂ ಸಹ ಕರ್ತನಿಂದ ಅವರನ್ನು ತೆಗೆದುಹಾಕಲ್ಪಡು ತ್ತಾರೆ. ಯೇಸುವಿನಲ್ಲಿ ನಂಬಿದರೂ ಸಹ ಅವರು ನರಕಕ್ಕೆ ಹೋಗುವ ಕನಿಕರವುಳ್ಳ ಪಾಪಿಗಳು. 

ಯೇಸುವಿನಲ್ಲಿ ಅವರು ನಂಬಿದರೂ ಸಹ ಇನ್ನೂ ಅವರು ಹೇಗೆ ಪಾಪಿಗಳಾಗುವುದಕ್ಕೆ ಸಾಧ್ಯ? ಅವರು ಏಕೆ ನರಕಕ್ಕೆ ಹೋಗುತ್ತಾರೆ? ಇದು ಅದೇಷ್ಟು ಕನಿಕರವುಳ್ಳದು. ಯೇಸು ಕ್ರಿಸ್ತನ ಆಧ್ಯಾತ್ಮಿಕ ದೀಕ್ಷಾಸ್ನಾನದ ಮೂಲಕ ಎಲ್ಲಾ ಜನರಿಗೆ ನಿತ್ಯರಕ್ಷಣೆಯನ್ನು ತಂದ, ಆತನ ಮೇಲೆ ಲೋಕದ ಎಲ್ಲಾ ಪಾಪಗಳು ಹೋದೆವು ಎನ್ನುವ ವಿಷಯವನ್ನು ನಂಬದಿರುವದರಿಂದ ಅವರು ಪಾಪಿಗಳಾಗಿಯೇ ಉಳಿಯುವುದಕ್ಕೆ ಮುಂದುವರಿಸುತ್ತಾರೆ. 

ಯೇಸುವಿನ ರಕ್ತದಿಂದ ಅವರು ಬಿಡುಗಡೆಯಾಗಿದ್ದಾರೆ ಎಂದು ಜನರು ಯೋಚಿಸುತ್ತಾರೆ, ಆದರೆ ಅಂತಹ ನಂಬಿಕೆಯು ಅವರನ್ನು ಸಂಪೂರ್ಣವಾಗಿ ಮಾಡು ವುದಿಲ್ಲ. ಯಾಕೆ? ಕಾರಣ ಅವರ ಪಾಪಗಳನ್ನು ಯೇಸುವಿನ ಮೇಲೆ ಹೊರಿಸದಿರು ವದಿಂದಲೇ! 

(ಕ್ರೈಸ್ತನ ದೀಕ್ಷಾಸ್ನಾನ) ನೀರಿನಲ್ಲಿ ಮತ್ತು ಕರ್ತನು ವಿಧಿಸಿದ ಮಾರ್ಗದಲ್ಲಿ ಆತನ ರಕ್ತ: ಆಧ್ಯಾತ್ಮಿಕ ಸುನ್ನತಿಯಲ್ಲಿ ನಂಬುವುದರಿಂದ ಮಾತ್ರವೇ ರಕ್ಷಣೆಯನ್ನು ಪಡೆಯುವುದಕ್ಕೆ ನಮಗೆ ಸಾಧ್ಯ. ಆಗ, ಆಗ ಮಾತ್ರವೇ, ಕರ್ತನ ಮಕ್ಕಳಾಗುವುದಕ್ಕೆ ನಮಗೆ ಸಾಧ್ಯ. 

ನಾವು ನಮ್ಮನ್ನೇ ಹೀಗೆ ಕೇಳಬೇಕು. “ಯೇಸುವಿನ ರಕ್ತವನ್ನು ಆಧ್ಯಾತ್ಮಿಕ ಸುನ್ನತಿಯಾಗಿ ನಂಬಿದರೆ, ನಮ್ಮ ಪಾಪಗಳು ಪೂರ್ತಿಯಾಗಿ ತೊಳೆದು ಹೋಗು ವೆವೊ?” ಉತ್ತರವನ್ನು ಕಂಡುಹಿಡಿಯುವುದಕ್ಕೆ ನಾವು ನಮ್ಮ ಹೃದಯಗಳಲ್ಲಿ ಆಳ ವಾಗಿ ನೋಡಬೇಕು.

ಯೇಸುವಿನ ದೀಕ್ಶಾಸ್ನಾದಿಂದ ಮತ್ತು ಶಿಲುಬೆಯ ಮೇಲೆ ಆತನ ರಕ್ತದಿಂದ ನಾವು ಜಯಿಸಿದ ರಕ್ಷಣೆ ಹಾಗಿಯೇ ಹಳೇ ಒಡಂಬಡಿಕೆಯಲ್ಲಿ, ಸುನ್ನತಿಯ ಮೂಲಕ ಮತ್ತು ಕುರಿಮರಿಯ ರಕ್ತದಿಂದ ಜನರು ರಕ್ಷಣೆಯನ್ನು ಪಡೆದರು. ಈ ರೀತಿಯಾಗಿ ನಾವು ಕರ್ತನ ತೀರ್ಪುನಿಂದ ಮತ್ತು ಪಾಪವುಳ್ಳ ಲೋಕದದಿಂದ ಪಾರಾದೆವು. ಇದ ರಲ್ಲಿ ನಂಬುವವರೇಲ್ಲಾರು ಕರ್ತನ ಮಕ್ಕಳಾಗುತ್ತಾರೆ ಮತ್ತು ಕರ್ತನು ಅವರ ತಂದೆ ಯಾಗುತ್ತಾನೆ. 

ಈ ಎರಡನ್ನು ನಂಬುವುದರಿಂದ: ಸುನ್ನತಿ ಮತ್ತು ಪಾಸ್ಕಹಬ್ಬದ ಕುರಿ ಮರಿಯ ರಕ್ತವನ್ನು, ಅಂದರೆ., ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತ ವನ್ನು ನಂಬುವುದರಿಂದ ಒಬ್ಬನು ರಕ್ಷಣೆಯನ್ನು ಹೊಂದಿ ಕರ್ತನ ಸ್ವಂತವಾಗು ತ್ತಾನೆ. ಯೆಸುವಿನ ಪ್ರಕಾರ ಇದೇ ಸತ್ಯ. ಇದು ನೀರಿನಿಂದಲೂ, ರಕ್ತದಿಂದಲೂ ಮತ್ತು ಆತ್ಮನಿಂದಲೂ ಹೊಸದಾಗಿ ಹುಟ್ಟುವದು.



ಸತ್ಯವೇದದಲ್ಲಿ ನೀರು ಹಾಗೂ ಆತ್ಮನ ಬಿಡುಗಡೆ ಅಂದರೆ ಏನು? 


  • ಒಬ್ಬ ಪಾಪಿ ಯೇಸುವಿನ ರಕ್ತವನ್ನು ಮಾತ್ರವೇ 
  • ನಂಬುವುದರಿಂದ ನೀತಿವಂತವನ್ನಾಗುವುದಕ್ಕೆ 
  • ಸಾಧ್ಯವೇ?
  • ಎಂದೂ ಇಲ್ಲ.


ಯೇಸು ಪರಲೋಕದಲ್ಲಿ ಆತನ ಸಿಂಹಾಸನವನ್ನು ಖಾಲಿಯಾಗಿ ಮಾಡಿ ಲೋಕಕ್ಕೆ ಇಳಿದು ಬಂದನು. 30ನೇ ವರುಷದವನಾದಾಗ ಆತನು ಸ್ನಾನಿಕನ್ನಾದ ಯೋಹಾನನಿಂದ ದೀಕ್ಶಾಸ್ನಾನವನ್ನು ಮಾಡಿಸಿಕೊಂಡನು. 

ಲೋಕದ ಎಲ್ಲಾ ಪಾಪಗಳಿಗಾಗಿ ಶಿಲುಬೆಯ ಮೇಲೆ ಯೇಸುವಿನ ರಕ್ತವೇ ಆತನ ದಂಡನೆ. ಯೇಸುಕ್ರಿಸ್ತನು ಈ ಲೋಕಕ್ಕೆ ರಕ್ಷಕನ್ನಾಗಿ ಬಂದನು ಮತ್ತು ನೀರು ಹಾಗೂ ರಕ್ತದ ಮೂಲಕ ಎಲ್ಲಾ ಪಾಪಿಗಳನ್ನು ಅವರ ಪಾಪಗಳಿಂದ ರಕ್ಷಿಸಿದನು.

ನಾವು ರಕ್ತದಿಂದ ಮಾತ್ರವೇ ಹೊಸದಾಗಿ ಹುಟ್ಟಿದ್ದೀವೊ? ಇಲ್ಲ. ಯೇಸು ವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಮೂಲಕ ನಾವು ನಮ್ಮ ಪಾಪದಿಂದ ರಕ್ಷಣೆ ಯನ್ನು ಪಡೆದ್ದಿದ್ದೇವೆ. ಯೇಸುವಿನ ರಕ್ತವನ್ನು ಮಾತ್ರವೇ ನಂಬುವವರಿಗೆ ನಾನು ಒಂದು ಪ್ರಶ್ನೆಯನ್ನು ಕೇಳುವುದಕ್ಕೆ ಆಶಿಸುತ್ತೇನೆ. “ಕ್ರೈಸ್ತನ ರಕ್ತದಲ್ಲಿ ಮಾತ್ರವೇ ನಂಬುವದರಿಂದ ಒಬ್ಬನು ನೀತಿವಂತನ್ನಾಗುವುದಕ್ಕೆ ಸಾಧ್ಯವೊ, ಅಥವಾ ಯೇಸು ವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತ ಈ ಎರಡನ್ನೂ ನಂಬು ವುದರಿಂದ ಒಬ್ಬನು ನೀತಿವಂತನ್ನಾಗುವುದಕ್ಕೆ ಸಾಧ್ಯವೊ? ಯೇಸುವಿನ ದೀಕ್ಷಾ ಸ್ನಾನದ ಮೂಲಕ ಅಥವಾ ಆತನ ರಕ್ತದ ಮೂಲಕ ಮಾತ್ರವೇ ನಮ್ಮ ಎಲ್ಲಾ ಪಾಪ ಗಳು ಯೇಸುವಿನ ಮೇಲೆ ಹೋದವು ಎಂದು ನಂಬುವುದರಿಂದಲೋ? ಯಾವುದು ನಿಜ ಎಂದು, ನಾನು ನಿಮ್ಮನ್ನು ಕೇಳುತ್ತೇನೆ?”

ನೀರಿನಿಂದಲೂ ಆತ್ಮನಿಂದಲೂ ನಿಜವಾಗಿಯೂ ನಾವು ಹೊಸದಾಗಿ ಹುಟ್ಟಬೇಕು ಅಂದರೆ, ಯೇಸು ಶರೀರದಲ್ಲಿ ಈ ಲೋಕಕ್ಕೆ ಬಂದನು, ಲೋಕದ ಎಲ್ಲಾ ಪಾಪಗಳನ್ನು ಯೊರ್ದನ್ ಹೊಳೆಯಲ್ಲಿ ಆತನ ದೀಕ್ಷಾಸ್ನಾನದಿಂದ ಆತನ ಮೇಲೆ ಹೊತ್ತುಕೊಂಡನು ಮತ್ತು ನಮ್ಮ ಪಾಪಗಳಿಗೆ ಬೆಲೆಯನ್ನು ಕಟ್ಟಿದನು ಎಂದು ನಾವು ನಂಬಬೇಕು. ಈ ರೀತಿಯಲ್ಲಿ, ನಾವು ಯೇಸು ಕ್ರಿಸ್ತನಲ್ಲಿ, ನಮ್ಮ ರಕ್ಷಕನಲ್ಲಿ ನಂಬು ವುದರಿಂದ, ನಿಜವಾಗಿಯೂ ನಾವು ಹೊಸದಾಗಿ ಹುಟ್ಟುವುದಕ್ಕೆ ನಮಗೆ ಸಾಧ್ಯ. 

ಪುನಃ ನಾನು ನಿಮ್ಮನ್ನು ಕೇಳುತ್ತೇನೆ. ಸತ್ಯವೇದದಲ್ಲಿ ವಿವರಿಸಿದ ನಂಬಿಕೆ ಏನು? ಯೇಸುವಿನ ರಕ್ತವೊ, ಅಥವ ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತದಲ್ಲಿ ಈ ಎರಡಲ್ಲಿಯೊ?

ಯೇಸುವಿನ ರಕ್ತದಲ್ಲಿರುವ ವಿಶ್ವಾಸ ಹೀಗಿದೆ. ಲೋಕದ ಎಲ್ಲಾ ಪಾಪ ಗಳಿಂದ ಯೇಸು ಶಿಕ್ಷಕ್ಕೆ ಗುರಿಯಾಗಿ ಮತ್ತು ಅವುಗಳಿಗಾಗಿ ಆತನು ತೀರ್ಪನ್ನು ಪಡ ಕೊಂಡನು. ನಮ್ಮ ಪಾಪಗಳಿಗಾಗಿ ಆತನನ್ನು ಹೊಡೆದರು ಮತ್ತು ಗಾಯವಾದರಿಂದ, ನಾವು ಭಯಂಕಾರ ತೀರ್ಪಿನಿಂದ ಪಾರಾದೆವು. ಆದರೆ ಅದು ಸಂಪೂರ್ಣವಾದ ವಿಶ್ವಾಸವಲ್ಲ. ಈ ತತ್ವವನ್ನು ನಾವು ಒಪ್ಪಿಕೊಳ್ಳುವದಕ್ಕೆ ಮೊದಲು, ನಾವು ಒಂದು ವಿಷಯವನ್ನು ಸ್ವಷ್ಟಪಡಿಸಬೇಕು. ಶಿಲುಬೆಯ ಮೇಲೆ ಯೇಸುವನ್ನು ಶಿಲುಬೆಗೇರಿ ಸಿದ್ದು ಏತಕೆ? 

ಪಾಪದ ಸಂಬಳ ಮರಣ ಎಂದು ಸತ್ಯವೇದವು ಸ್ವಷ್ಟವಾಗಿ ಹೇಳುತ್ತದೆ. ಈ ಲೋಕದಲ್ಲಿ ಯೇಸು ಯಾವ ಪಾಪವನ್ನು ಮಾಡಲಿಲ್ಲ. ಮರಿಯಳ ಶರೀರದಿಂದ ಮನುಷ್ಯನ ಶರೀರದಲ್ಲಿ ಆತನು ಬಂದನು, ಆದರೆ ಆತನು ಆತನ ಜನರ ಸ್ವಷ್ಟ ಪ್ರತಿಬಿಂಬದಲ್ಲಿ ಕರ್ತನ ಪವಿತ್ರವಾದ ಮಗನ್ನಾಗಿ ಮತ್ತು ಪಾಪಿಯರ ರಕ್ಷಕನ್ನಾಗಿ ಬಂದನು. ಆದ್ದರಿಂದಲೇ ಶಿಲುಬೆಯಲ್ಲಿ ಆತನು ಮರಣಹೊಂದುವುದಕ್ಕೆ ಮೊದಲು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನವನು ಮಾಡಿಕೊಳ್ಳಬೇಕಾಯಿತು. ಆತನು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ಆತನು ನಮ್ಮ ಎಲ್ಲಾ ಪಾಪಗಳನ್ನು ಆತನ ಮೇಲಕ್ಕೆ ಹೊತ್ತುಕೊಂಡನು. ಆದದರಿಂದ, ದೀಕ್ಷಾಸ್ನಾನವಿಲ್ಲದೆ, ಶಿಲುಬೆಯ ಮೇಲೆ ರಕ್ತವನ್ನು ಸುರಿಸುವ ದಂಡನೆಯನ್ನು ಹೊತ್ತುಕೊಳ್ಳುವುದಕ್ಕೆ ಆತನಿಗೆ ಸಾಧ್ಯವಾಗುತಿರಲಿಲ್ಲ.



ಹಳೇ ಒಡಂಬಡಿಕೆಯಲ್ಲಿ ಯಜ್ಞಸಮರ್ಪಣೆಯ ಕ್ರಮ 


  • ಯಜ್ಞಸಮರ್ಪಿಸುವುದಕ್ಕೆ ಅಗತ್ಯವಾದ
  • ನಿಯಮಗಳು ಯವವು?
  • 1) ಜೀವಂತವಾಗಿರುವ ಪಶು ಪೂರ್ಣಾಂಗವಾಗಿಯೇ ಇರಬೇಕು
  • 2) ಆ ಪಶುವಿನ ತಲೆಯ ಮೇಲೆ ಕೈಯಿಡಬೇಕು
  • 3) ಅದರ ರಕ್ತ


ಪವಿತ್ರವಾದ ಗುಡಾರದ ಯಜ್ಞಸಮರ್ಪಣೆಯ ಕ್ರಮದ ಮೂಲಕ ಈ ಸತ್ಯ ವನ್ನು ನಾವು ನೋಡೋಣ. ಹಳೇ ಒಡಂಬಡಿಕೆಯಲ್ಲಿ, ಪಾಪಿಯಾಗಲಿ ಅಥವಾ ಮಹಾ ಪ್ರವಾದಿಯಾಗಿರಲಿ ಆತನು ಸಮರ್ಪಿಸುವ ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಅದರ ತಲೆಯ ಮೇಲೆ ಆತನ ಕೈಯಿಟ್ಟು ಆತನ ಸ್ವಂತ ಪಾಪ ಅಥವಾ ಇಸ್ರಾಯೇಲ್ಯರ ಪಾಪಗಳನ್ನು ಅದರ ತಲೆಗೆ ಹೊರಿಸುವನು. ತರುವಾಯ ಆ ಹೋರಿ ಯನ್ನು ವಧಿಸಬೇಕು ಮತ್ತು ಅದನ್ನು ಯಜ್ಞವೇದಿಯ ಉತ್ತರಕಡೆ ವಧಿಸಬೇಕು. ಹಳೇ ಒದಂಬಡಿಕೆಯು ಹೊಸ ಒದಂಬಡಿಕೆಯ ಛಾಯೆ, ಮತ್ತು ಯೇಸು ಕ್ರಿಸ್ತನೇ ಕರ್ತನು ಕಳುಹಿಸುಕೊಡುವುದಕ್ಕೆ ವಗ್ದಾನಮಾಡಿದ ಯಜ್ಞಸಮರ್ಪಣೆಯ ಕುರಿ ಮರಿ. 

ನಿಮ್ಮ ಎಲ್ಲಾ ಪಾಪಗಳನ್ನು ಯೇಸುವಿಗೆ ಹೊರಿಸುವುದು ಯಾವಾಗ? ಈ ಪ್ರಶ್ನೆಯ ಬಗ್ಗೆ ನೀವು ಯೋಚಿಸಿ ಉತ್ತರಿಸಬೇಕೆಂದು ನಾನು ಆಶಿಸುತ್ತೇನೆ. ಹಳೇ ಒಡಂಬಡಿಕೆಯಲ್ಲಿ, ಕೈಗಳನ್ನು ಮೇಲಿಡದೆ ಯಜ್ಞಸಮರ್ಪಣೆಯ ಪಶುಗಳನ್ನು ಇಸ್ರಾಯೇಲ್ಯರು ವಧಿಸಬಾರದು (ಕೈಗಳನ್ನು ಮೇಲಿಡುವುದು ಅಂದರೆ ದೋಷ ಪರಿಹಾರದ ಮೇಲೆ ಪಾಪವನ್ನು ಹೊರೆಯುವುದು). ಯಜ್ಞವೇದಿಕೆಯ ಸನ್ನಿಧಿಯಲ್ಲಿ ದೋಷಪರಿಹಾರವನ್ನು ತರುವದಕ್ಕೆ ಮುನ್ನ, ದೋಷಪರಿಹಾರದ ಪಶುವಿನ ಮೇಲೆ ಪಾಪಗಳನ್ನು ಹೊರೆಯುವದಕ್ಕಾಗಿ ಕೈಯಿಡುವುದು ಆಗಬೇಕು. 

“ಅವನು ಆ ಪಶುವಿನ ತಲೆಯ ಮೇಲೆ ಕೈಯಿಡಬೇಕು”(ಯಾಜಕಕಾಂಡ 1:4). ಎಲ್ಲ ಯಜ್ಞಬಲಿಯ ಸಮರ್ಪಣೆಗಳಲ್ಲಿ ಕೈಯಿಡುವುದು ಅಗತ್ಯ ಎಂಬುದಾಗಿ ಯಾಜಕಕಾಂಡದಲ್ಲಿ ಬರೆದಿದೆ. ಯಜ್ಞಸಮರ್ಪಣೆಯ ತಲೆಯ ಮೇಲೆ ಕೈಯಿಡು ವುದರಿಂದ, ಇಸ್ರಾಯೇಲ್ಯರ ಜನರಿಗೆ ಅವರ ಪಾಪಗಳನ್ನು ಅದರ ತಲೆಯ ಮೇಲೆ ಹೊರೆಯುವುದಕ್ಕೆ ಸಧ್ಯಾವಾಯಿತು, ಮತ್ತು ಅದರ ರಕ್ತವನ್ನು ಮತ್ತು ದೇಹವನ್ನು ಸಮರ್ಪಿಸುವುದರಿಂದ, ಅವರು ಅವರ ಪಾಪಗಳಿಂದ ಪರಾಗುವುದಕ್ಕೆ ಸಾಧ್ಯ ವಾಯಿತು. ಹಳೇ ಒಡಂಬಡಿಕೆ ಕಾಲದಲ್ಲಿ ಇಸ್ರಾಯೇಲ್ಯರೂ ಸಹ ರಕ್ಷಣೆಯನ್ನು ಪಡೆದರು. 

ಕರ್ತನ ಸನ್ನಿಧಿಯಲ್ಲಿ ಸರ್ವಾಂಗಹೋಮದ ತರುವಾಗ, ಪಾಪಿಯ ಪಾಪ ಗಳು ಅದರ ಮೇಲೆ ಹೋಗುವುದಕ್ಕಾಗಿ ಆ ಪಾಪಿ ಅದರ ತಲೆಯ ಮೇಲೆ ಕೈಯಿಡ ಬೇಕು. ಆ ಪಾಪಿಗಾಗಿ ಆ ಪಶುವನ್ನು ವಧಿಸಬೇಕು. ಅದರ ರಕ್ತವನ್ನು ವೇದಿಯ ಕೊಂಬುಗಳಿಗೆ ಚಿಮಿಕಿಸಬೇಕು ಮತ್ತು ಮಿಕ್ಕಿದ ರಕ್ತವನ್ನೆಲ್ಲಾ ಯಜ್ಞವೇದಿಯ ಬುಡದಲ್ಲಿ ಸುರಿದುಬಿಡಬೇಕು. ಹೀಗೆ ಪಾಪಿಗಳು ಅವರ ಪಾಪಗಳಿಂದ ಬಿಡುಗಡೆ ಯಾದರು.

ಹೊಸ ಒಡಂಬಡಿಕೆಯಲ್ಲಿ ಯೇಸುವಿನ ರಕ್ತ ಮತ್ತು ನೀರಿನಲ್ಲಿ ವಿಶ್ವಾಸದ ಮೂಲಕ ಪಾಪಿಗಳು ಅವರ ಪಾಪಗಳಿಂದ ಬಿಡುಗಡೆಯಾದರು. 1 ಯೋಹಾನನು 5:10ರಲ್ಲಿ ಒಬ್ಬ ಪಾಪಿಯು ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಕುರಿಮರಿಯ (ಶಿಲುಬೆ)ಯಲ್ಲಿ ನಂಬುವುವಾಗ ಆತನು ಆತನ ಪಾಪಗಳಿಂದ ಬಿಡುಗಡೆಯಾದನು ಎಂದು ಹೇಳುತ್ತದೆ. 

ಆದದರಿಂದ ಯೇಸುವಿನ ದೀಕ್ಷಾಸ್ನಾನದಲ್ಲಿ ಹಾಗೂ ಶಿಲುಬೆಯ ಮೇಲೆ ಆತನ ರಕ್ತದಲ್ಲಿ ಈ ಎರಡಲ್ಲಿ ನಂಬಿದರೆ ಪಾಪಿ ಯಾರೆಯಾಗಿರಲ್ಲಿ ಆತನಿಗೆ ಬಿಡುಗಡೆ ಯಾಗುವುದಕ್ಕೆ ಸಾಧ್ಯ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ, ಒಟ್ಟಿಗೆ ಪವಿತ್ರಾತ್ಮನ ಜೊತೆ, ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟುವುದು ಅಗತ್ಯ. 

ಪ್ರೀತಿಯ ಪ್ರಿಯರೇ, ಯೇಸು ಕ್ರಿಸ್ತನ ರಕ್ತವನ್ನು ಮಾತ್ರವೇ ನಂಬುವುದ ರಿಂದ ನೀವು ಬಿಡುಗಡೆಯಾಗುವುದಕ್ಕೆ ಸಾಧ್ಯವೊ? ಯೇಸು ಕ್ರಿಸ್ತನ ರಕ್ತದಲ್ಲಿ ಮಾತ್ರವೇ ನಂಬುವುದರಿಂದ ಹೊಸದಾಗಿ ಹುಟ್ಟುವುದಕ್ಕೆ ನಿಮಗೆ ಸಾಧ್ಯ ಎಂದು ನೀವು ಯೋಚಿಸಿದರೆ ಆಗ ಇನ್ನೂ ನಿಮ್ಮ ಮನಸ್ಸಿನಲ್ಲಿ ಪಾಪವಿದೆ. ಆದರೆ ಹೊಸ ಒಡಂಬಡಿಕೆಯ ಆಧ್ಯಾತ್ಮಿಕ ಸುನ್ನತಿಯನ್ನು ಯೇಸುವಿನ ದೀಕ್ಷಾಸ್ನಾನ ಹಾಗೆ ನಾವು ನಂಬುವುದರಿಂದ ನಾವು ನಮ್ಮ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆಯುತ್ತೇವೆ, ಇದು ಹಳೇ ಒಡಂಡಿಕೆಯಲ್ಲಿ ಸುನ್ನತಿಯನ್ನು ವಿವರಿಸಿದ ಸುನ್ನತಿಯು ಇದು ಸರಿ ಸಮಾನವಾಗಿದೆ.

ಎಲ್ಲಾ ವರ್ಗಕ್ಕೆ ಅದರ ಸ್ವಂತ ಮತವಿರುತ್ತದೆ. ಅವರು ಅವರ ತಪ್ಪು ನಂಬಿಕೆಯನ್ನು ಅವರು ಎಸೆಯುವವರೆಗೂ ಅವರು ನರಕಕ್ಕೆ ಗುರಿಯಾಗಿದ್ದಾರೆ ಎಂದು ನಮಗೆ ತಿಳಿದಿದೆ. ದೇವಾಲಯದ ಹಿರಿಯ ಪಾದ್ರಿ ದೈವದ ಮತದ ಮೇಲೆ ಪ್ರಾಮುಖ್ಯತೆಯನ್ನು ಕೊಡುತ್ತಾರೆ; ಮೆಥೊಡಿಸ್ಟ್ ದೇವಾಲಯವು ಸಂಸ್ಕೃತ ಶಿಕ್ಷಣ, ಅಂದರೆ., ಮನುಷ್ಯ ಸ್ವಭಾವಕ್ಕೆ ಒತ್ತಡ ಕೊಡುತ್ತದೆ; ಬ್ಯಾಪ್ಟಿಸ್ಟ್ ದೇವಾಲಯವು, ದೀಕ್ಷಾಸ್ನಾನಕ್ಕೆ; ಮತ್ತು ಹೋಲೀನೆಸ್ ದೇವಾಲಯವು, ಪವಿತ್ರಾವಾದ ಜೀವನಕ್ಕೆ; ಇವೇಲ್ಲಾವು ಸತ್ಯದ ವಾಕ್ಯಯಿಂದ ದಾರಿ ತಪ್ಪಿವೆ.

ಆದರೆ ಹೊಸದಾಗಿ ಹುಟ್ಟುವುದನ್ನು ಕುರಿತು ಸತ್ಯದ ವಾಕ್ಯವು ಸತ್ಯವೇದ ದಲ್ಲಿ ಏನನ್ನು ಹೇಳುತ್ತದೆ? ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತದಲ್ಲಿ ಸತ್ಯವನ್ನು ಕಂಡಿಹಿಡಿಯ ಬಹುದು ಎಂದು ಸತ್ಯವೇದವು ಹೇಳುತ್ತದೆ. ಕರ್ತನ ವಾಕ್ಯ ವನ್ನು ಅನುಸರಿಸಿ ಮತ್ತು ನಂಬುವ ಭಕ್ತರಿಗೆ ಮತ್ತು ನೀರಿನಿಂದಲೂ ಮತ್ತು ಆತ್ಮ ನಿಂದಲೂ ಹೊಸದಾಗಿ ಹುಟ್ಟುವದರಲ್ಲಿ ನಂಬಿಕೆಯಿರುವವರು ಬಿಡುಗಡೆಯ ದಾರಿ ಯನ್ನು ಕಂಡುಹಿಡುತ್ತಾರೆ.



ಯೇಸುವಿನ ದೀಕ್ಷಾಸ್ನಾನದ ರಹಸ್ಯವೇನು? 


  • ಹೊಸ ಒಡಂಬಡಿಕೆಯಲ್ಲಿ ಆಧ್ಯಾತ್ಮಿಕ
  • ಸುನ್ನತಿ ಅಂದರೇನು?
  • ಯೇಸುವಿನ ದೀಕ್ಷಾಸ್ನಾನ

ಯೇಸುವಿನ ದೀಕ್ಷಾಸ್ನಾನವೇ ಆಧ್ಯಾತ್ಮಿಕ ಸುನ್ನತಿ. ಹಳೇ ಒಡಂಬಡಿಕೆ ಯಲ್ಲಿ, ಸುನ್ನತಿ ಮಾಡಿಸಿಕೊಳ್ಳದವನು ಕುಲದಿಂದ ತೆಗೆದುಹಾಕಲ್ಪಡುವನು ಎಂದು ಕರ್ತನು ಹೇಳಿದನು.

ಹೊಸ ಒಡಂಬಡಿಕೆಯಲ್ಲಿ ಆಧ್ಯಾತ್ಮಿಕ ಸುನ್ನತಿ ಅಂದರೆ ಯೇಸುವಿನ ದೀಕ್ಷಾಸ್ನಾನ ಎಂದು ನಾವು ತಿಳಿದುಕೊಳ್ಳಬೇಕು. ಆತನ ಸಾರ್ವಜನಿಕ ಸೇವೆಯ ಆದಿ ಯಲ್ಲಿ ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದ ರಿಂದ ಆತನ ದೀಕ್ಷಾಸ್ನಾನದಲ್ಲಿ ನಾವು ವಿಶ್ವಾಸವಿಟ್ಟು ಆಧ್ಯಾತ್ಮಿಕ ಸುನ್ನತಿಯಾಗುವು ದಕ್ಕೆ ನಮಗೆ ಸಾಧ್ಯ. ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿ ಕೊಂಡಿರುವ ಕಾರಣವನ್ನು ನಾವು ಶ್ರದ್ಧೆಯಿಂದ ನಾವು ಮನಸ್ಸಿನಲ್ಲಿ ಯೋಚಿಸ ಬೇಕು.

“ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನ ಮಾಡಿಸಿಕೊಳ್ಳ ಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳೆಗೆ ಬಂದನು. ಆಗ ಯೋಹಾನನು- ನಾನು ನಿನ್ನಿಂದ ಸ್ನಾನಮಾಡಿಸಿ ಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. ಆದರೆ ಯೇಸು ಅವನಿಗೆ-ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕ ದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು” (ಮತ್ತಾಯ 3:13-15). 

ಯೊರ್ದನ್ ಹೊಳೆಯಲ್ಲಿ ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡನು, “ಮರಣದ ಹೊಳೆ.” ಸ್ನಾನಿಕನಾದ ಯೋಹಾನನು ಯೇಸುವಿನ ತಲೆಯ ಮೇಲೆ ಕೈಯಿಟ್ಟು ಆತನನ್ನು ಪೂರ್ತಿಯಾಗಿ ಮುಳುಗಿಸಿದನು. ಇದೇ ಸರಿಯಾದ ದೀಕ್ಷಾಸ್ನಾನ (ದೀಕ್ಷಾಸ್ನಾನ: ನೀರಿನಲ್ಲಿ ಮುಳುಗುವದು). ಲೋಕದ ಎಲ್ಲಾ ಪಾಪಗಳನ್ನು ಯೇಸು ನಿವಾರಣೆ ಮಾಡಬೇಕಾದರೆ, ಹಳೇ ಒದಂಬಡಿಕೆಯಲ್ಲಿ ಕೈಯಿಡುವುದನು ಉಲ್ಲೇಖಿಸುವ ಹಾಗಿಯೇ, ಆತನೂ ಸಹ ದೀಕ್ಷಾಸ್ನಾನವನ್ನು ಮಾಡಿಸಿಕೊಳ್ಳಬೇಕು.

ಯೇಸುವಿನಲ್ಲಿ ವಿಶ್ವಾವಿಟ್ಟವರಿಗೆ ಯೇಸುವಿನ ದೀಕ್ಷಾಸ್ನಾನವು ಆಧ್ಯಾತ್ಮಿಕ ಸುನ್ನತಿ. “ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ ಎಂದು ಹೇಳಿ ದಾಗ ಅವನು ಒಪ್ಪಿಕೊಂಡನು”(ಮತ್ತಾಯ 3:15). ಯೇಸು ಲೋಕದ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿ ಅತನು ನಮ್ಮ ರಕ್ಷಕ ಹಾಗೂ ನಮ್ಮ ಕರ್ತನ್ನಾಗಿರುವದಕ್ಕೆ ಇದು ಸಜ್ಜುಗೊಳಿಸಿತು. ಆದದರಿಂದ, ಆತನ ತಲೆಯ ಮೇಲೆ ನಮ್ಮ ಎಲ್ಲಾ ಪಾಪ ಗಳನ್ನು ಹೊತ್ತುಕೊಂಡು ಶಿಲುಬೆಯ ಮೇಲೆ ಆತನು ಮರಣಹೊಂದಿದನು, ಎಂದು ಬರೆದಿರುವ ಹಾಗಿಯೇ, ಇದು ಸಜ್ಜುಗೊಳಿಸಿತು. 

ಎಲ್ಲಾ ಪಾಪಿಗಳನ್ನು ಹೊಸದಾಗಿ ಹುಟ್ಟುವ ಹಾಗೆ ಮಾಡುವುದಕ್ಕೆ ಯೇಸು ವಿನ ದೀಕ್ಷಾಸ್ನಾನಕ್ಕೆ ಶಕ್ತಿ ಇದೆ. ನೀರು ಹಾಗೂ ಆತ್ಮನ ಸುವಾರ್ತೆಯ ರಹಸ್ಯ ಇದೆ.

ಪಾಪಿಗಳನ್ನು ಅವರ ಪಾಪಗಳಿಂದ ರಕ್ಷಿಸಲು ಸಾರ್ವಜನಿಕ ಸೇವೆಯಲ್ಲಿ ಯೇಸು ಮಾಡಿದ ಮೊದಲು ಕೆಲಸ ಅಂದರೆ ಆತನು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದು. ದೀಕ್ಷಾಸ್ನಾನ ಅಂದರೆ “ಶುದ್ಧಮಾಡಿಸಿಕೊಳ್ಳು ವದು, ಮಣ್ಣು ಮಾಡುವದು, ಹೊರೆಯುವದು.” 

ಕರ್ತನ ಪ್ರಕಾರ ದೀಕ್ಷಾಸ್ನಾನ ಮಾಡಿಸಿಕೊಂಡಿದರಿಂದ, ಯೇಸು ಆತನ ಮೇಲೆ ಲೋಕದ ಎಲ್ಲಾ ಪಾಪಗಳನ್ನು ತೆಗೆದುಕೊಂಡನು, “ಆಗೋ [ಯಾಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆಮಾಡುವವನು!” (ಯೋಹಾನ 1:29). ಯೇಸುವಿನ ದೀಕ್ಷಾಸ್ನಾನ ಅಂದರೆ ಲೋಕದಲ್ಲಿರುವ ಎಲ್ಲಾ ಜನರಲ್ಲಿ ಆತನನ್ನು ನಂಬುವವರು ಆಧ್ಯಾತ್ಮಿಕ ಸುನ್ನತಿ ಮಾಡಿಸಿಕೊಂಡವರಾಗಿ ದ್ದಾರೆ ಎಂಬುದು ಇದರ ಅರ್ಥ. 

ತರುವಾಯ, ದೇವರು ನೆಮಿಸಿದ ಕುರಿಯಾಗಿ ಆತನು ಶಿಲುಬೆಗೇರಿ ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿ ಮತ್ತು ಎಲ್ಲಾ ಪಾಪಿಯರಿಗಾಗಿ ಆತನು ತೀರ್ಪನ್ನು ಒಪ್ಪಿಕೊಂಡನು. ಹೀಗೆ ಆತನು ಮನುಷ್ಯರನ್ನು ಅವರ ಪಾಪಗಳಿಂದ ರಕ್ಷಿಸಿದನು. 

ಅದದರಿಂದ ಯೇಸು ಕ್ರಿಸ್ತನ ದೀಕ್ಷಾಸ್ನಾನದಲ್ಲಿ ವಿಶ್ವಾಸವಿಟಿರುವ ಎಲ್ಲಾರು, ಹಳೇ ಒಡಂಬಡಿಕೆಯಲ್ಲಿರುವ ಸುನ್ನತಿಯನ್ನು ನಂಬುವವರು, ಅವರ ರಕ್ಷಣೆಯಾಗಿ ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬುವವರು ಅವರ ಎಲ್ಲಾ ಪಾಪಗಳಿಂದ ಅವರು ರಕ್ಷಣೆಯನ್ನು ಪಡೆದಿದ್ದಾರೆ. ಯೇಸು ಕ್ರಿಸ್ತನು ಆತನ ರಕ್ತದಿಂದ ಮತ್ತು ಆತನ ದೀಕ್ಷಾಸ್ನಾನದಿಂದ ಎಲ್ಲಾ ಪಾಪಿಗಳನ್ನು ಅವ್ರ ಪಾಪಗಳಿಂದ ರಕ್ಷಿಸಿ ದರು. ಇದು ಆಧ್ಯಾತ್ಮಿಕ ಸುನ್ನತಿಯ ಸತ್ಯ. 



ರಕ್ತದಿಂದ ಮಾತ್ರವೇ ರಕ್ಷಣೆಯೇ ? ಇಲ್ಲ, ಹಾಗೆ ಇಲ್ಲ


  • ಯಾವುದರ ಮೂಲಕ ಯೇಸು
  • ಈ ಲೋಕಕ್ಕೆ ಬಂದನು?
  • ನೀರು ಹಾಗೂ ರಕ್ತದ ಮೂಲಕ


1 ಯೋಹಾನನು 5:4-8ರಲ್ಲಿ ಹೇಳುತ್ತದೆ, “ಯಾಕಂದರೆ ದೇವರಿಂದ ಹುಟ್ಟಿ ರುವಂತದೆಲ್ಲವು ಲೋಕವನ್ನು ಜಯಿಸುತ್ತದೆ. ಲೋಕವನ್ನು ಜಯಿಸಿದಂಥದು ನಮ್ಮ ನಂಬಿಕೆಯೇ. ಯೇಸುವು ದೇವರ ಮಗನೆಂದು ನಂಬಿದವರೇ ಅಲ್ಲದೆ ಲೋಕ ವನ್ನು ಜಯಿಸುವವರು ಇನ್ನಾರಿದ್ದಾರೆ? ಈತನು, ಅಂದರೆ ಯೇಸು ಕ್ರಿಸ್ತನು, ನೀರಿ ನಿಂದಲೂ ರಕ್ತದಿಂದಲೂ ಸಾಕ್ಷಿಹೊಂದಿದವನು. ನೀರಿನಿಂದ ಮಾತ್ರವಲ್ಲ, ನೀರಿ ನಿಂದ, ರಕ್ತದಿಂದ ಸಾಕ್ಷಿಹೊಂದಿದವನಾಗಿದ್ದಾನೆ. ಇದಲ್ಲದೆ ಆತ್ಮನು ಸಾಕ್ಷಿಕೊಡುವ ವನಾಗಿದ್ದಾನೆ; ಆತ್ಮನು ಸತ್ಯಸ್ವರೂಪನೇ. ಆತ್ಮ ನೀರು ರಕ್ತ ಎಂಬ ಮೂರು ಸಾಕ್ಷಿ ಗಳುಂಟು; ಈ ಮೂರು ಒಂದೇ ಅಭಿಪ್ರಾಯವಾಗಿ ಸಾಕ್ಷಿಹೇಳುತ್ತವೆ.” 

ಪ್ರೀತಿಯ ಕ್ರೈಸ್ತರೇ, ಆತನು ನಿಮ್ಮ ರಕ್ಷಕನ್ನಾಗಿ ನೀವು ಕೊಡುವ ಸಾಕ್ಷಿ ಏನು? ನೀರಿನಿಂದಲೂ ರಕ್ತದಿಂದಲೂ ಬಂದ ಕರ್ತನ ಕುಮಾರನಲ್ಲಿ ನಂಬಿಕೆಯನ್ನು ಬಿಟ್ಟು ಬೇರೆ ಏನೂ ಇಲ್ಲ.

ಲೋಕವನ್ನು ಜಯಿಸುವ ಗೆಲುವು ಯಾವುದು? ನೀರಿನಲ್ಲಿ ಹಾಗೂ ರಕ್ತ ದಲ್ಲಿರುವ ನಂಬಿಕೆಯ ಶಕ್ತಿಯನ್ನು ಬಿಟ್ಟು ಬೇರೆ ಏನೂ ಇಲ್ಲ. ಯೇಸು ಕ್ರಿಸ್ತನು ನೀರು ಮತ್ತು ರಕ್ತದ ಮೂಲಕ ಬಂದವನು. ಆತ್ಮನು ಸಾಕ್ಷಿಕೊಡುವವನಾಗಿದ್ದಾನೆ, ಆತ್ಮನು ಸತ್ಯಸ್ವರೂಪನೇ.

ಆತ್ಮ, ನೀರು, ರಕ್ತ: ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವಾಗಿ ಸಾಕ್ಷಿಹೇಳುತ್ತವೆ. ಶರೀರದಲ್ಲಿ ಯೇಸು ಈ ಲೋಕಕ್ಕೆ ಬಂದು, ದೀಕ್ಷಾಸ್ನಾನ ಮಾಡಿಸಿಕೊಂಡು ಮತ್ತು ನರಕದಿಂದ ನಮ್ಮನ್ನು ರಕ್ಷಿಸುವುದಕ್ಕೆ ಆತನು ಶಿಲುಬೆಯ ಮೇಲೆ ಮರಣಹೊಂದಿದನು. ನಮ್ಮ ಕರ್ತನು, ಸೃಷ್ಟಿಕರ್ತನು, ಪಾಪಿಗಳೇಲ್ಲಾರಿಗೆ ರಕ್ಷಕನಾಗಿರುವ ಸಾಕ್ಷಿ ನಮ್ಮೇಲ್ಲಾರನ್ನು ರಕ್ಷಿಸಿದ ನೀರು ಹಾಗೂ ಆತ್ಮನ ಸುವಾರ್ತೆಯಲ್ಲಿ ಇದೆ.

ಶರೀರದಲ್ಲಿ ಆತ್ಮವನ್ನು ಇಟ್ಟುಕೊಂಡು ಈ ಲೋಕಕ್ಕೆ ಬಂದ ಯೇಸು, ನಮ್ಮ ಎಲ್ಲಾ ಪಾಪಗಳನ್ನು ಆತನ ಮೇಲೆ ತಕ್ಕೊಳ್ಳುವುದಕ್ಕಾಗಿ ಯೊರ್ದನ್ ಹೊಳೆ ದಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡನು, ಮತ್ತು ನಮ್ಮ ಪಾಪಗಳಿಗಾಗಿ ಶಿಲುಬೆ ಮೇಲೆ ಆತನು ರಕ್ತವನ್ನು ಸುರಿಸಿ ತೀರ್ಪನ್ನು ಒಪ್ಪಿಕೊಂಡಿದ್ದು, ಇವು ಎಲ್ಲಾವು ನಮಗೆ ಸಾಕ್ಷಿಗಳೇ.



ಕರ್ತನ ವಿಮೋಚನಕ್ಕೆ ಸಾಕ್ಷಿಹೊಂದಿರುವ ನೀರು ಹಾಗೂ ರಕ್ತ ಅಂದರೇನು?


  • ಹಳೇ ಒಡಂಬಡಿಕೆಯಲ್ಲಿ ಸುನ್ನತಿಯ
  • ಬಗ್ಗೆ ವಿವರಿಸಿದ ಇದರ ಪ್ರತಿರೂಪ ಏನು?
  • ಯೇಸುವಿನ ದೀಕ್ಷಾಸ್ನಾನ

ನೀರು ಯೇಸುವಿನ ದೀಕ್ಷಾಸ್ನಾನಕ್ಕೆ ಉಲ್ಲೇಖಿಸುತ್ತದೆ. ಹಳೇ ಒಡಂಬಡಿಕೆ ಯಲ್ಲಿ, ಯೇಸುವಿನ ದೀಕ್ಷಾಸ್ನಾನ ಅಂದರೆ ಸುನ್ನತಿ. ಹಳೇ ಒಡಂಬಡಿಕೆಯಲ್ಲಿ ಸುನ್ನತಿಯ ಪ್ರತಿರೂಪ ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾನ. ಲೋಕದ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋದವು ಎನ್ನುವದಕ್ಕೆ ಸಾಕ್ಷಿ ಯೇಸುವಿನ ದೀಕ್ಷಾಸ್ನಾನವೇ.

ಈ ಸತ್ಯದಲ್ಲಿ ನಂಬುವವರಿಗೆ ಕರ್ತನ ಸನ್ನಿಧಾನದಲ್ಲಿ ನಿಲ್ಲುವುದಕ್ಕೆ ಸಾಧ್ಯ ಮತ್ತು ಒಳ್ಳೆಯ ಮನಸ್ಸಾಕ್ಷಿ ಹೀಗೆ ಹೇಳುವುದಕ್ಕೆ ಸಾಧ್ಯ, “ನೀವು ನನ್ನ ರಕ್ಷಕನು, ನನ್ನ ದೇವರು ಕಾರಣ ನಾನು ನಿಮ್ಮ ದೀಕ್ಷಾಸ್ನಾನದಲ್ಲಿ ಮತ್ತು ನಿಮ್ಮ ರಕ್ತದಲ್ಲಿ, ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಾನು ನಂಬಿದರಿಂದಲೇ. ಆದದರಿಂದ, ನನ್ನಲ್ಲಿ ಪಾಪವಿಲ್ಲ. ನಾನು ಕರ್ತನ ಮಗನ್ನಾಗಿದ್ದೇನೆ ಮತ್ತು ನೀವು ನನ್ನ ರಕ್ಷಕನು.” ನಾವು ಇದನ್ನು ನಿಜವಾದ ನಂಬಿಕೆಯಿಂದ ಒಪ್ಪಿಕೊಳ್ಳುವುದಕ್ಕೆ ನಮಗೆ ಸಾಧ್ಯ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದಲ್ಲಿರುವ ನಬಿಕೆಯ ಕಾರಣದಿಂದಲೇ ನಾವು ಇದನ್ನು ಹೇಳುವುದಕ್ಕೆ ನಮಗೆ ಸಾಧ್ಯ. 

ಹೊಸದಾಗಿ ಹುಟ್ಟುವುದಕ್ಕೆ ನಮ್ಮನ್ನು ಅನುಮತಿಸುವ ವಾಕ್ಯ ಯಾವುದು? ಯಾವುದಂದರೆ, ನಮ್ಮ ಮನಸ್ಸಿನಲ್ಲಿರುವ ರಕ್ಷಣೆಯ ಸಾಕ್ಷಿಯಾದ ಯೇಸುವಿನ ದೀಕ್ಶಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತ. ಇದೇ ನೀರಿನಿಂದಲೂ ಆತ್ಮ ನಿಂದಲೂ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆ. 

ಪ್ರೀತಿಯ ಕ್ರೈಸ್ತರೇ. ನಾನು ಪುನಃ ಕೇಳುತ್ತೇನೆ, “ಕ್ರೈಸ್ತನ ರಕ್ತದಲ್ಲಿರುವ ನಂಬಿಕೆಯ ಮೂಲಕ ಒಬ್ಬ ಪಾಪಿಗೆ ಕೆಳಅಡಿಯಿಂದ ರಕ್ಷಣೆಯನ್ನು ಪಡೆಯುವು ದಕ್ಕೆ ಸಾಧ್ಯವೊ?” ಇಲ್ಲ. ರಕ್ಷಣಗೆ ಅಗತ್ಯವಾಗಿರುವದು ಶಿಲುಬೆಯ ಮೇಲೆ ಆತನ ಮರಣದಲ್ಲಿನ ನಂಬಿಕೆ ಮಾತ್ರವಲ್ಲ. ನೀರು ಹಾಗೂ ರಕ್ತ- ಪಾಪಿಗಳಿಗೆ ಹೊಸದಾಗಿ ಹುಟ್ಟುವುದಕ್ಕೆ ನೀರು ಹಾಗೂ ಆತ್ಮದ ಸುವಾರ್ತೆ ಈ ಎರಡರ ನಂಬಿಕೆಯ ಮೂಲಕ ಸಾಧ್ಯ. ಈಗ ನಾನು ನಿಮಗೆ ನೀರಿನ ಬಗ್ಗೆ ಅಥವಾ ಬೇರೆ ರೀತಿಯಲ್ಲಿ ಯೇಸುವಿನ ದೀಕ್ಷಾಸ್ನಾನದ ಬಗ್ಗೆ ಹೇಳುವ, ಸತ್ಯವೇದವನ್ನು ತೋರಿಸುತ್ತೇನೆ. 

1 ಪೇತ್ರನು 3:21-22ರಲ್ಲಿ ಹೇಳುತ್ತದೆ, “ಆ ನೀರಿಗೆ ಅನುರೂಪವಾದ ದೀಕ್ಷಾ ಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸಾಕ್ಷಿಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ. ಆತನು ಪರಲೋಕಕ್ಕೆ ಹೋಗಿ ದೇವರ ಬಲ ಗಡೆಯಲ್ಲಿದ್ದಾನೆ; ದೇವದೂತರೂ ಅಧಿಕಾರಿಗಳೂ ಮಹತ್ವಗಳೂ ಆತನ ಸ್ವಾಧೀನ ವಾಗಿವೆ.”

ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರು ತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ ಎಂದು ಅಪೋಸ್ತಲನಾದ ಪೇತ್ರನು ಸಾಕ್ಷಿಹೇಳಿದನು. ಯೇಸುವಿನ ದೀಕ್ಷಾಸ್ನಾನವು ಹಳೇ ಒಡಂಬಡಿಕೆಯ ಸುನ್ನತಿಗೆ ಸಮಾನುಗುಣವಾಗಿದೆ. ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರ ಜನರು ಕರ್ತನ ವಾಕ್ಯವನ್ನು ನಂಬಿ ಕರ್ತನ ಜನರಾಗುವುದಕ್ಕೆ ಸುನ್ನತಿ ಮಾಡಿಸಿಕೊಳ್ಳದಿರುವವ ರನ್ನು ಕುಲದಿಂದ ತೆಗೆದುಹಕಲ್ಪಡುವ ಹಾಗಿಯೇ, ಹೊಸ ಒಡಂಬಡಿಕೆಯ ಕಾಲ ದಲ್ಲಿ ನಮ್ಮ ಪಾಪಗಳನ್ನು ಯೇಸುವಿನ ದಿಕ್ಷಾಸ್ನಾನವು ರಕ್ಷಿಸುತ್ತದೆ.

ಆದದರಿಂದ ಹಳೇ ಒಡಂಬಡಿಕೆಯಲ್ಲಿ ಸುನ್ನತಿ ಮತ್ತು ಹೊಸ ಒದಬಡಿಕೆ ಯಲ್ಲಿ ಯೇಸುವಿನ ದೀಕ್ಷಾಸ್ನಾನ ಒಂದೇಯಾಗಿದೆ. ಈಗ ನೀವು ಸುನ್ನತಿ ಹಾಗೂ ಯೇಸು ವಿನ ದೀಕ್ಷಾಸ್ನಾನ ಒಂದೇ ಎಂದು ನೀವು ನಂಬುತ್ತೀರೊ? 1 ಪೇತ್ರನು 3:21 ರಲ್ಲಿ ಬರೆದಿರುವಹಾಗೆ, ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಬರೆದಿರುವ ಕರ್ತನ ವಾಕ್ಯ ಗಳೋಡನೆ ವಾದಮಾಡುವುದಕ್ಕೆ ನಿಮಗೆ ಸಾಧ್ಯವೇ? 

ಲೋಕದಲ್ಲಿರುವ ನಾವು, ಪಾಪದಿಂದ ಬಿಡುಗಡೆಯಾಗುವುದೂ, ಹೇಗೆ? ಎಲ್ಲಾ ಧರ್ಮವನ್ನು ನೆರವೇರಿಸುವದಕ್ಕಾಗಿ ಯೇಸು ಕ್ರಿಸ್ತನು ದೀಕ್ಷಾಸ್ನಾನ ಮಾಡಿಸಿ ಕೊಂಡಿದ್ದರಿಂದ ಮಾತ್ರವೇ ಪಾಪದಿಂದ ನಮಗೆ ಮುಕ್ತಿ ಸಿಕ್ಕಿದೆ. ಮತ್ತಾಯ 3:15ರಲ್ಲಿ ಹೇಳುತ್ತದೆ, “ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ.”

ಲೋಕದ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋದ್ದರಿಂದ ಆತನನ್ನು ನಂಬುವ ಎಲ್ಲರು ಪಾಪವಿಲ್ಲದವರಾಗಿದ್ದಾರೆ. ನಮ್ಮ ಎಲ್ಲಾ ಪಾಪಗಳು ಯೇಸುವಿನ ಮೇಲೆ ಆತನ ದೀಕ್ಷಾಸ್ನಾನದ ಮೂಲಕ ಹೋಗಿವೆ ಎಂದು ಒಪ್ಪಿಕೊಳ್ಳುವುದರಿಂದ ನಾವೆಲ್ಲಾರು ನೀತಿವಂತವರಾಗುವುದಕ್ಕೆ ಸಾಧ್ಯ. ಯೇಸು ಕ್ರಿಸ್ತನು ನಮ್ಮ ಎಲ್ಲಾ ಪಾಪ ಗಳನ್ನು ಆತನ ಮೇಲೆ ಹೊತ್ತುಕೊಂಡು ನಮ್ಮನ್ನು ತೀರ್ಪುನಿಂದ ರಕ್ಷಿಸುವದಕ್ಕಾಗಿ ಶಿಲುಬೆಯ ಮೇಲೆ ಮರಣಹೊಂದಿದನು. 

ಪ್ರೀತಿಯ ಸ್ನೇಹಿತರೇ, ಪಾಪಿಗಳನ್ನು ಅವರ ಪಾಪಗಳಿಂದ ರಕ್ಷಿಸುವದು ಈ ಎರಡು ನೀರು ಹಾಗೂ ರಕ್ತ. ಲೋಕದಲ್ಲಿ ಮೂರು ವರುಷದ ಆತನ ಸಾರ್ವಜನಿಕ ಸೇವೆಯಲ್ಲಿ ಯೇಸು ಕ್ರಿಸ್ತನು ಮಾಡಿದ ಎರಡು ಕಾರ್ಯಗಳು ಒಂದು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದು ಮತ್ತು ಇನ್ನೋಂದು ಶಿಲುಬೆಯ ಮೇಲೆ ಆತನ ಮರಣ.

ಯೋಹಾನ 1:29 ರಲ್ಲಿ ಹೇಳುತ್ತದೆ, “ಅಗೋ [ಯಾಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು!” ಲೋಕದ ಎಲ್ಲಾ ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಯೇಸು ಕ್ರಿಸ್ತನು ದೀಕ್ಷಾಸ್ನಾನ ಮಾಡಿಸಿಕೊಂಡು ಮತ್ತು ನಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆತನು ಶಿಲುಬೆಯ ಮೇಲೆ ಮರಣಹೊಂದಿದನು. ಯೇಸು ಕರ್ತನ ಕುಮಾರನು ಮತ್ತು ಆತನು ಸೃಷ್ಟಿ ಕರ್ತನು ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದರ ಮೂಲಕ ಹಳೇ ಒಡಂಬಡಿಕೆಯಲ್ಲಿ ಕರ್ತನು ಮಾಡಿದ ಸುನ್ನತಿಯ ಒಡಂಬಡಿಕೆಯನ್ನು ಆತನು ನೆರವೇರಿಸಿದನು. 

ಯೇಸುವಿನ ದೀಕ್ಷಾಸ್ನಾನವನ್ನು, ನೀರು ಹಾಗೂ ರಕ್ತವನ್ನು ಹೃದಯದಲ್ಲಿ ನಂಬುವವನು ನೀರಿನಿಂದಲೂ ಆತ್ಮದಿಂದಲೂ ಹೊಸದಾಗಿ ಹುಟ್ಟಿದ್ದಾನೆ. ಮತ್ತು ನಂಬುವವರಿಗೆಲ್ಲಾ ದೇವರು ರಕ್ಷಕನ್ನಾಗಿದ್ದಾನೆ. ದೇವರಿಗೆ ಸ್ತೋತ್ರ, ಹಲ್ಲೇಲೂಯ! ಕರ್ತನು ವಾಗ್ಧಾನ ಮಾಡಿದ ಹಾಗಿಯೇ ನಮ್ಮ ವಿಮೋಚನೆಯನ್ನು ಯೇಸು ನೆರವೇರಿಸಿದನು, ಮತ್ತು ನಮ್ಮನ್ನು ಲೋಕದ ಎಲ್ಲಾ ಪಾಪಗಳಿಂದ ರಕ್ಷಿಸಿದ್ದಾನೆ.



ಮೈಕೊಳೆಯನ್ನು ಹೋಗಲಾಡಿಸುವಂಥದ್ದಲ್ಲ


  • ಸಮಯದೊಂದಿಗೆ ಶರೀರವು
  • ಪವಿತ್ರವಾಗುತ್ತದೆಯೊ?
  • ಇಲ್ಲ. ನಾವು ಸಾಯುವ ತನಕ ಶರೀರವು
  • ಪಾಪಮಾಡುತ್ತಾನೆ ಇರುತ್ತದೆ.


1 ಪೇತ್ರನು 3:21ರಲ್ಲಿ ಹೇಳುತ್ತದೆ, “ಆ ನೀರಿಗೆ ಅನುರೂಪವಾದ ದೀಕ್ಷಾ ಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ; ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ, ಒಳ್ಳೇ ಮನಸಾಕ್ಷಿಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದೇ.”

ಒಬ್ಬನು ಆತನ ರಕ್ಷಕನ್ನಾಗಿ ಯೇಸು ಕ್ರಿಸ್ತನನ್ನು ನಂಬಿದ ಮಾತ್ರಕ್ಕೆ, ಆತನು ಶರೀರದ ಪಾಪಗಳನ್ನು ಮಾಡುವುದಿಲ್ಲ ಎಂದಲ್ಲ. ಆತನು ಪಾಪ ಮಾಡಬಹುದು, ಆದರೆ ಯೇಸುವಿನ ದೀಕ್ಷಾಸ್ನನವನ್ನು ನಂಬುವುದರಿಂದ, ನಾವು ನಮ್ಮ ಲೋಕದ ಎಲ್ಲಾ ಪಾಪಗಳನ್ನು, ಅವುಗಳಗಾಗಿ ಆತನು ಶಿಲುಬೆಯ ಮೇಲೆ ಆತನ ರಕ್ತದೊಂದಿಗೆ ಬೆಲೆಕಟ್ಟಿದ ಯೇಸುವಿನ ಮೇಲೆ ನಮ್ಮ ಪಾಪಗಳನ್ನು ಹೊರಿಸಬಹುದು. ಈ ಎರಡ ನ್ನು ನಮ್ಮ ಮುಕ್ತಿಯ ಅಗತ್ಯವಾದ ಮೂಲವಸ್ತುಗಳೆಂದು ನಾವು ನಂಬುವುದರಿಂದ ನಾವು ನಮ್ಮ ಪಾಪಗಳಿಂದ ರಕ್ಷಣೆಯನ್ನು ಹೊಂದವರಾಗಿದ್ದೇವೆ. 

ಹೊಸದಾಗಿ ಹುಟ್ಟುವದು ಅಂದರೆ ಯೇಸುವನ್ನು ನಮ್ಮ ಮನಸ್ಸಿಗೆ ಮನುಷ್ಯರ ರಕ್ಷಕನ್ನಾಗಿ ಸ್ವೀಕರಿಸುವದು. ಪಾಪ ಕ್ಷಮಾಪಣೆಯು ಸಹ ನಮ್ಮ ಮನಸ್ಸಿ ನಲ್ಲಿ ಪಡೆದಿದ್ದೇವೆ. ಯೇಸುವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತ ವನ್ನು ನಾವು ನಂಬುವಾಗ, ನಮ್ಮ ಮನಸ್ಸುಗಳು ಹೊಸದಾಗಿ ಹುಟ್ಟಿವೆ, ಆದರೆ ನಾವು ಪಾಪಮಾಡುವುದನ್ನು ಮತ್ತು ಮೈಕೊಳೆಯನ್ನು ಮುಂದುವರಿಸುತ್ತೇವೆ. ಆದರೆ, ನಮ್ಮ ಎಲ್ಲಾ ಮೈಕೊಳೆಯನ್ನು ಈಗಾಗಲೇ ಕ್ಷಮಿಸುಬಿಟ್ಟಿವೆ. 

ರಕ್ಷಣೆಯನ್ನು ಹೊಂದಿರುವವರಿಗೆ ಯೇಸುವಿನ ದೀಕ್ಷಾಸ್ನಾನ ಸಾಕ್ಷಿ ಯಾಗಿದೆ. ಕ್ರೈಸ್ತನ ದೀಕ್ಷಾಸ್ನಾನದ ಮೂಲಕ ನಾವು ಪಾಪ ಕ್ಷಮಾಪಣೆಯನ್ನು ನಂಬು ವಾಗ ನಮ್ಮಲ್ಲಿ ಪಾಪವಿರುವುದಿಲ್ಲ. ಯೇಸುವಿನ ದೀಕ್ಷಾಸ್ನಾನದ ಮೂಲಕ ರಕ್ಷಣೆಯ ಸತ್ಯವನ್ನು ನಮ್ಮ ಹೃದಯಕ್ಕೆ ತೆಗೆದುಕೊಳ್ಳುವಾಗ ನಾವು ಹೊಸದಾಗಿ ಹುಟ್ಟುವವ ರಾಗುತ್ತೇವೆ ಮತ್ತು ನೀರು ಹಾಗೂ ಆತ್ಮನ ಸುವಾರ್ತೆಯ ಮೂಲಕ ನಾವು ನೀತಿವಂತ ವರಾಗುತ್ತೇವೆ. 

ನೀತಿವಂತವರಾಗುವ ನಂಬಿಕೆಯನ್ನು ಕುರಿತು ಅಪೋಸ್ತಲನಾದ ಪೌಲನು ಮಾತನ್ನಾಡಿದನು ಮತ್ತು ರಕ್ಷಣೆಯ ಪ್ರತಿಬಿಂಬ ಎಂದು ಅಪೋಸ್ತಲನಾದ ಪೇತ್ರನು ಸಾಕ್ಷಿಹೇಳಿದನು, ಇದೇ ಹಳೇ ಒಡಂಬಡಿಕೆಯಲ್ಲಿ ಅಬ್ರಹಾಮನ ನಂಬಿಕೆ.

ಕರ್ತನ ವಾಕ್ಯವನ್ನು ಅಬ್ರಹಾಮನು ಕೇಳಿ ಹಾಗೂ ನಂಬಿ ನೀತಿವಂತನಾದ ಹಾಗೆಯೇ ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಶಿಲುಬೆಯ ಮೇಲೆ ಆತನ ಮರಣ ವನ್ನು ನಂಬುವಾಗ ನಾವು ರಕ್ಷಣೆಯನ್ನು ಪಡೆದಿದ್ದೇವೆ.

ಯೋಹಾನ 1:12ರಲ್ಲಿ, “ಯಾರಾರು ಆತನನ್ನು ಅಂಗೀಕರಿಸಿಸರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು.” ನಮ್ಮ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನ ಹಾಗೂ ರಕ್ತ ದ ಮೂಲಕ ರಕ್ಷಿಸಿದ, ಯೇಸು ಕ್ರಿಸ್ತನನ್ನು, ನಿಮ್ಮ ರಕ್ಷಕನ್ನಾಗಿ ಅಂಗೀಕರಿಸುತ್ತೀರೊ? ಕರ್ತನ ಕುಮಾರನ ರಕ್ತ ಹಾಗೂ ನೀರಿನ ಮೂಲಕ ನಮಗೆ ಕೊಟ್ಟಿರುವ ರಕ್ಷಣೆಯನ್ನು ನಾವು ಪಡೆಯಬೇಕು. 

ರಕ್ಷಣೆಯು ಯೇಸು ಕ್ರಿಸ್ತನ ರಕ್ತದಲ್ಲಿ ಮಾತ್ರವೇ ದೊರುಕುತ್ತದೆಯೋ? ಇಲ್ಲ. ರಕ್ಷಣೆಯು ನೀರಿನಿಂದ ಮತ್ತು ಯೇಸುವಿನ ರಕ್ತದಿಂದ ದೊರಿಕುತ್ತದೆ. ರಕ್ಷಣೆಯು ಯೆಸುವಿನ ರಕ್ತದಲ್ಲಿ ಮಾತ್ರವಲ್ಲ. ಆದರೆ ಅದು ಯೇಸುವಿನ ರಕ್ತದಿಂದ ಹಾಗೂ ಆತನ ದೀಕ್ಷಾಸ್ನಾನದಿಂದ ಎಂದು ಸತ್ಯವೆದದಲ್ಲಿ ಸ್ವಷ್ಟವಾಗಿ ಬರೆದಿದೆ.

ಹೊಸ ಒಡಬಡಿಕೆಯಲ್ಲಿ ಆಧ್ಯಾತ್ಮಿಕ ಸುನ್ನತಿ ಅಂದರೆ ಯೇಸುವಿನ ದೀಕ್ಷಾ ಸ್ನಾನ. ಅದೇ ನಮ್ಮ ಪಾಪಗಳನ್ನು ತೆಗೆದುಹಾಕುವ ನಿಜವಾದ ರಕ್ಷಣೆ, ಲೋಕದ ಪಾಪಗಳಿಗಾಗಿ ಆತನು ತೀರ್ಪನ್ನು ಹೊತ್ತುಕೊಂಡನು ಅಂದರೆ ಆತನು ನಮಗಾಗಿ, ನನಗಾಗಿ ಹಾಗು ನಿಮಗಾಗಿ ತೀರ್ಪನ್ನು ಹೊತ್ತುಕೊಂಡನು ಎಂಬುದು ಈ ವಿಷಯದ ಅರ್ಥ. 

ಪಾಪಗಳ ಕ್ಷಮಾಪಣೆಯಾದ, ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತದ ಸುವಾರ್ತೆಯನ್ನು ಸ್ವೀಕರಿಸುವುದರಿಂದ, ನಾವು ನಮ್ಮ ಎಲ್ಲಾ ಪಾಪಗಳ ತೀರ್ಪುನಿಂದ ಬಿಡುಗಡೆಯಾಗಿದ್ದೇವೆ. ನಾವು ನಮ್ಮ ವಿಶ್ವಾಸದಿಂದ ಈ ಲೋಕದಲ್ಲಿ ಮಾಡುವ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆದಿದ್ದೇವೆ. ಯೇಸುವಿನ ದೀಕ್ಷಾ ಸ್ನಾನ ಹಾಗೂ ಆತನ ರಕ್ತವನ್ನು ನಮ್ಮ ರಕ್ಷಣೆಯಾಗಿ ನಾವು ಸ್ವೀಕರಿಸಿಕೊಂಡಾಗ, ನಮ್ಮ ಮನಸ್ಸಿನಲ್ಲಿರುವ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ. ನೀವು ಇದನ್ನು ನಂಬುತ್ತೀರೊ? ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಿವೇಲ್ಲಾರು ನಂಬುತ್ತೀ ರೆಂದು ನಾನು ಯಥಾರ್ಥತೆಯಾಗಿ ನಂಬುತ್ತೇನೆ. ವಿಶ್ವಾಸವಿಟ್ಟು ನಿತ್ಯಜೀವನವನ್ನು ಸಂಪಾದಿಸಿರಿ. 

ಅಪೋಸ್ತಲನಾದ ಪೌಲನು ಹೀಗೆ ಹೇಳುತ್ತಾನೆ, “ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ” (ರೋಮಾ 2:29). ಹೃದಯದಲ್ಲಿ ನಾವು ಹೇಗೆ ಸುನ್ನತಿಯಾಗಿ ದ್ದೀವಿ? ಶರೀರದಲ್ಲಿ ಯೇಸು ಈ ಲೋಕಕ್ಕೆ ಬಂದಿದ್ದು, ಲೋಕದ ಎಲ್ಲಾ ಪಾಪ ಗಳನ್ನು ಆತನ ದೀಕ್ಷಾಸ್ನಾನದಲ್ಲಿ ಆತನು ನಿವಾರಣೆಮಾಡಿದ್ದಾನೆ ಎಂದು, ನಮ್ಮ ಪಾಪಗಳಗಾಗಿ ಶಿಲುಬೆಯ ಮೇಲೆ ಆತನ ಮರಣ, ಮತ್ತು ಆತನ ಮರಣದಿಂದ ಪುನರುತ್ಥಾನದಲ್ಲಿ ನಾವು ವಿಶ್ವಾಸವಿಟ್ಟಾಗ ನಾವು ಆಧ್ಯಾತ್ಮಿಕ ಸುನ್ನತಿಯಾಗುವ ದಕ್ಕೆ ನಮಗೆ ಸಾಧ್ಯ.

ಅಪೋಸ್ತಲನಾದ ಪೌಲನು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ ಎಂದು ಹೇಳುತ್ತಾನೆ. ಹೃದಯದಲ್ಲಿ ಆಗುವ ಸುನ್ನತಿ ಅಂದರೆ ಯೇಸುವಿನ ದೀಕ್ಷಾಸ್ನಾನದಲ್ಲಿ ಹಾಗೂ ಆತನ ರಕ್ತದಲ್ಲಿ ವಿಶ್ವಾಸವಿಡುವದು ಎಂಬುದು ಇದರ ಅರ್ಥ. ನೀವು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿಯಾಗಬೇಕೆಂದರೆ, ಯೇಸು ವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಿಮ್ಮ ಹೃದಯಕ್ಕೆ ಸ್ವೀಕರಿಸಿಕ್ಕೊಳ್ಳ ಬೇಕು. ಆಗ, ಆಗ ಮಾತ್ರವೇ, ನೀವು ನಿಜವಾಗಿಯೂ ಕರ್ತನ ಮಕ್ಕಳಾಗುವುದಕ್ಕೆ ಸಾಧ್ಯ.



ಸ್ನಾನಿಕನಾದ ಯೋಹಾನನು ಕರ್ತನಿಂದ ಕಳುಹಿಸಿ ಕೊಟ್ಟ ವನೇ? 


  • ಸ್ನಾನಿಕನಾದ ಯೋಹಾನನು ಯಾರು?
  • ಆತನು ಮನುಷ್ಯನ ಮಾದರಿ ಮತ್ತು ಆರೋನನ
  • ವಂಶಪರಂಪರೆಯ ಪ್ರಕಾರ ಆತನು ಕೊನೆಯ
  • ಮಹಾ ಪ್ರವಾದಿ.


ಇಲ್ಲಿ, ಸ್ನಾನಿಕನಾದ ಯೋಹಾನನು ಯಾರು ಮತ್ತು ಯೇಸು ಕ್ರಿಸ್ತನಿಗೆ ಯಾರು ದೀಕ್ಷಾಸ್ನಾನ ಕೊಟ್ಟರು ಎಂಬ ಪ್ರಶ್ನೆಯನ್ನು ನಾವು ಕೇಳುವುದು ಅಗತ್ಯ. ಮತ್ತಾಯ 11:11-14ರಲ್ಲಿ, “ಸ್ತ್ರೀಯರಲ್ಲಿ ಹುಟ್ಟಿದವರೊಳೆಗೆ ಸ್ನಾನಿಕಯೋಹಾನನಿ ಗಿಂತ ದೊಡ್ಡವನು ಎದ್ದಿಲ್ಲ. ಆದರೂ ಪರಲೋಕರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಇದಲ್ಲದೆ ಸ್ನಾನಿಕ ನಾದ ಯೋಹಾನನ ಕಾಲದಿಂದ ಈ ವರೆಗೂ ಪರಲೋಕರಾಜ್ಯವು ಬಲತ್ಕಾರಕ್ಕೆ ಗುರಿಯಾಗಿರುತ್ತದೆ. ಬಲಾತ್ಕಾರಿಗಳು ನುಗ್ಗಿ ಅದನ್ನು ಸ್ವಾಧೀನಮಾಡಿಕೊಳ್ಳುತ್ತಾರೆ. ಪ್ರವಾದಿಗಳೆಲ್ಲರೂ ಧರ್ಮಶಾಸ್ತ್ರವೂ ಪ್ರವಾದಿಸುವದು ಯೋಹಾನನ ತನಕ ಇತ್ತು. ನಿಮಗೆ ಗ್ರಹಿಸುವದಕ್ಕೆ ಮನಸ್ಸಿದ್ದರೆ ಬರತಕ್ಕ ಎಲೀಯನು ಇವನೇ ಎಂದು ತಿಳು ಕೊಳ್ಳಿರಿ.” 

ಪ್ರೀತಿಯ ಕ್ರೈಸ್ತರೇ, ಸ್ತ್ರೀಯರಲ್ಲಿ ಹುಟ್ಟಿದವರೊಳೆಗೆ ಸ್ನಾನಿಕ ಯೋಹಾನನಿ ಗಿಂತ ದೊಡ್ಡವನು ಎದ್ದಿಲ್ಲ ಎಂದು ಯೇಸು ಹೇಳುತ್ತಾನೆ. ಸ್ನಾನಿಕಯೋಹಾನನ ಜನನದಿಂದ, ಕರ್ತನ ಮೊದಲನೆಯ ಒಡಂಬಡಿಕೆಯ ಕಾಲ, ಹಳೇ ಒಡಂಬಡಿಕೆಯ ಕಾಲ ಮುಗಿಯಿತು. ಕರ್ತನ ಒಡಂಬಡಿಕೆಯನ್ನು ಪೂರೈಸುವದಕ್ಕಾಗಿ ಯೇಸು ಕ್ರಿಸ್ತನು ಕೊನೆಗೆ ಬಂದಿದರಿಂದ ಅದು ಮುಕ್ತಾಯವಾಯಿತು.

ಆಗ, ಕರ್ತನ ಒಡಂಡಿಕೆಯನ್ನು ಪೂರೈಸಬೇಕಾಗಿರುವವರು ಯಾರು? ಯೇಸು ಕ್ರಿಸ್ತನು ಹಾಗೂ ಸ್ನಾನಿಕನಾದ ಯೋಹಾನನು. ಸ್ನಾನಿಕನಾದ ಯೋಹಾನನು ಲೋಕದ ಎಲ್ಲಾ ಪಾಪಗಳನ್ನು ಯೆಸುವಿನ ಮೇಲೆ ಹೊರಿಸಿದನು. ಒಡಂಬಡಿಕೆ ಯಲ್ಲಿ ಕೊನೆಯ ಪ್ರವಾದಿ ಯಾರು? ಆರೋನನ ವಂಶಪರಂಪರೆ ಯಾರು? ಸ್ನಾನಿಕ ಯೋಹಾನನ್ನು ಬಿಟ್ಟು ಬೇರೆ ಯಾರೂ ಇಲ್ಲ ಎಂದು ಯೇಸು ಕ್ರಿಸ್ತನೇ ಸಾಕ್ಷಿ ಹೇಳಿ ದ್ದಾನೆ. ಸ್ತ್ರೀಯರಲ್ಲಿ ಹುಟ್ಟಿದವರೊಳೆಗೆ, ಸ್ನಾನಿಕನಾದ ಯೋಹಾನನು ಮನುಷ್ಯನ ಮಾದರಿ. 

ಈ ವಿಷಯಗಳನ್ನು ಕುರಿತು ನಾವು ನಮ್ಮ ಮನಸ್ಸಿನಲ್ಲಿ ಯೋಚಿಸೋಣ. ಮೋಶೆ, ಅಬ್ರಹಾಮನು, ಇಸಾಕನು, ಮತ್ತು ಯಾಕೋಬನು ಸ್ತ್ರೀಯರಲ್ಲಿ ಹುಟ್ಟಿ ದವರೆ. ಆದರೆ ಹಳೇ ಒಡಂಬಡಿಕೆಯಲ್ಲಿ ಮತ್ತು ಹೊಸ ಒಡಂಬಡಿಕೆಯಲ್ಲಿರುವ ಜನರಲ್ಲಿ, ಸ್ತ್ರೀಯರಲ್ಲಿ ಹುಟ್ಟಿದವರೊಳೆಗೆ ಯಾರು ದೊಡ್ಡವರು? ಸ್ನಾನಿಕನಾದ ಯೋಹಾನನೇ.

ಸ್ನಾನಿಕನಾದ ಯೊಹಾನನು, ಹಳೇ ಒಡಂಬಡಿಕೆಯಲ್ಲಿ ಕೊನೆಯ ಪ್ರವಾದಿ ಯಾಗಿ ಮತ್ತು ಆರೋನನ ವಂಶಪರಂಪರೆಯಾಗಿ, ಹಳೇ ಒಡಂಬಡಿಕೆಯಲ್ಲಿ ಹೇಗೆ ಆರೋನನು ಪ್ರಾಯಶ್ಚಿತ್ತದ ದಿನ ಸಮರ್ಪಿಸುವ ಯಜ್ಙಗಳ ತಲೆಯ ಮೇಲೆ ಕೈಯಿ ಟ್ಟನೊ ಹಾಗಿಯೇ ಸ್ನಾನಿಕನಾದ ಯೋಹಾನನು ಕರ್ತನು ಕಳುಹಿಸಿದ ಕುರಿಗೆ ದೀಕ್ಷಾ ಸ್ನಾನ ಮಾಡಿಸಿದನು. ಆತನು ಯೇಸು ಕ್ರಿಸ್ತನಿಗೆ ದೀಕ್ಷಾಸ್ನಾನ ಮಾಡಿಸಿ ಲೋಕದ ಎಲ್ಲಾ ಪಾಪಗಳನ್ನು ಆತನ ಮೇಲೆ ಹೊರಿಸಿದನು. ಆತನು ಕರ್ತನ ದಾಸನು, ಆತನು ಯೇಸು ಕ್ರಿಸ್ತನಿಗೆ ದೀಕ್ಷಾಸ್ನಾನ ಮಾಡಿಸಿದ್ದರಿಂದ ಎಲ್ಲಾ ಮನುಷ್ಯರ ಹೃದಯದಲ್ಲಿ ಆಧ್ಯಾತ್ಮಿಕ ಸುನ್ನತಿ ಆಗುವ ಹಾಗೆ ಮಾಡಿ ಪೂರೈಸಿದನು. 

ಯೇಸುವಿನ ದೀಕ್ಷಾಸ್ನಾನವನ್ನು ಒಟ್ಟಿಗೆ ನಾವು ನಮ್ಮ ರಕ್ಷಣೆಗೆ ಆತನ ರಕ್ತವನ್ನು ಸಾಕ್ಷಿಯಾಗಿ ನಂಬಬೇಕು. ಯೇಸು ಕ್ರಿಸ್ತನು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದಾನೆ ಮತ್ತು ಆತನು ಆ ಪಾಪಗಳಿಗಾಗಿ ತೀರ್ಪನ್ನು ಪಡೆದಿದ್ದಾನೆ. ನಾವು ಮಾಡಬೇಕಾಗಿರುವದೇಲ್ಲಾ ಇಷ್ಟೇ ಅದನ್ನು ನಂಬುವುದು. ಯೇಸು ಮಾಡಿದ್ದನ್ನು ನಾವು ನಂಬಬೇಕು ಎನ್ನುವದು ಕರ್ತನ ಚಿತ್ತ. 

ನೀರಿನಿಂದಲೂ ಆತ್ಮದಿಂದಲೂ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆಯನ್ನು ನೀವು ಒಂದು ಬಾರಿ ನಿಮ್ಮ ಹೃದಯಕ್ಕೆ ಸ್ವೀಕರಿಸಿಕೊಂಡರೆ ಸಾಕು, ನೀವು ಅಬ್ರಹಾಮನ ವಂಶಪರಂಪರೆಯಾಗಿ ಹಾಗೂ ಕರ್ತನ ಮಕ್ಕಳಾಗುತ್ತೀರಿ. ಬರೀ ಕೆಲವರೇ ಕ್ರೈಸ್ತನಲ್ಲಿದ್ದಾರೆ ಆದರೆ ಅನೇಕರು ಅವರ ಹೃದಯಗಳಲ್ಲಿ ಆತನನ್ನು ಇನ್ನೂ ಒಪ್ಪಿಕೊಂಡೇ ಇಲ್ಲ.

ಹಗಲು ಮುಕ್ತಾಯವಾಗುತ್ತಿದೆ ಮತ್ತು ಕತ್ತಲು ಬರುತಿದೆ. ಯೇಸುವಿನ ದೀಕ್ಷಾಸ್ನಾನದಲ್ಲಿ ವಿಶ್ವಾಸವಿಟ್ಟು ಆತನನ್ನು ನಿಮ್ಮ ಹೃದಯದಲ್ಲಿ ಸ್ವೀಕರಿಸಿರಿ. ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತದಲ್ಲಿರುವ ನಿಮ್ಮ ವಿಶ್ವಾಸವು ನಿಮಗೆ ಆಧ್ಯಾತ್ಮಿಕ ರಕ್ಷಣೆಯನ್ನು ಆಶೀರ್ವಾದಿಸುತ್ತದೆ.

ರಕ್ಷಣೆಯ ಸುವಾರ್ತೆ, ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಸುವಾರ್ತೆಯನ್ನು ನೀವು ನಂಬುವಾಗ ಆಧ್ಯಾತ್ಮಕ ಅಭಿಷೇಕ ಬರುತ್ತದೆ ಎಂದು ನಾವು ಎಂದಿಗೂ ಗಮನದಲ್ಲಿ ಇಟ್ಟಿಕೊಳ್ಳಬೇಕು. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಸುವಾರ್ತೆಯನ್ನು ನೀವು ನಂಬುವುದರಿಂದ ನಿಮಗೆ ಆಧ್ಯಾತ್ಮಿಕವಾದ ದೀಪ (ದೇವಾಲಯ) ಮತ್ತು ಎಣ್ಣೆ (ಆತ್ಮ). ಹಾಗಿಯೇ ಕನ್ಯೆರನ್ನು (ಮತ್ತಾಯ 25:4) ತಯಾರಿಸಿ ಬಹುದು ಎಂದು ನೀವು ತಿಳಿಯಬೇಕೆಂದು ನಾನು ಆಶಿಸುತ್ತೇನೆ. ಯೇಸುವಿ ನಲ್ಲಿ ವಿಶ್ವಾಸವಿರುವವರು ಅವರ ಹೃದಯದಲ್ಲಿ ಆತ್ಮನ ಜೊತೆ ದೇವಾಲಯಕ್ಕೆ ಹೋಗುತ್ತಾರೆ.



ಯೇಸು ಯಾರಿಗಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು ? 


  • ಯೇಸು ದೀಕ್ಷಾಸ್ನಾನ
  • ಮಾಡಿಸಿಕೊಂಡಿರುವ ಕಾರಣ?
  • ಮನುಷ್ಯನ ಎಲ್ಲಾ ಪಾಪಗಳನ್ನು
  • ನಿವಾರಣೆಮಾಡುವದಕ್ಕಾಗಿ


“ಆಗ ಯೋಹಾನನು- ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವ ನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆ ಯುತ್ತಾ ಇದ್ದನು. ಆದರೆ ಯೇಸು ಅವನಿಗೆ-ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿ ಕೊಂಡನು”(ಮತ್ತಾಯ 3:14-15).

ಮನುಷ್ಯ ಪಾಪಗಳನ್ನು ನಿವಾರಣೆಮಾಡುವದರಗೋಸ್ಕರವೇ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡರು. ಆತನು ನಮ್ಮನ್ನು ಉಂಟುಮಾಡಿದ ಸೃಷಿ ಕರ್ತನು. ನಮ್ಮನ್ನು ಆತನ ಜನರಾಗುವದಕ್ಕಾಗಿ ತಂದೆಯಾದ ಕರ್ತನ ಚಿತ್ತದಿಂದ ಯೇಸು ಕ್ರಿಸ್ತನು ಬಂದನು. 

ಹಳೇ ಒಡಂಬಡಿಕೆಯಲ್ಲಿ ಎಲ್ಲಾ ಪ್ರವಾದಿಗಳು ಯಾರನ್ನು ಕುರಿತು ಮಾತ ನ್ನಾಡುತ್ತಾರೆ? ಅವರು ಯೇಸು ಕ್ರಿಸ್ತನನ್ನು ಕುರಿತು ಮಾತನ್ನಾಡಿದರು. ಎಲ್ಲಾ ಪಾಪ ಗಳನ್ನು ನಿವಾರಣೆಮಾಡುವದಕ್ಕಾಗಿ ಮತ್ತು ನಮ್ಮನ್ನು ಪಾಪದಿಂದ ಎಂದೆಂದಿಗೂ ಬಿಡುಗಡೆ ಮಾಡುವದಕ್ಕಾಗಿ ಈ ಲೋಕಕ್ಕೆ ಬರತಕ್ಕವನು ಯೇಸು ಎಂದು ಹಳೇ ಒಡಂಬಡಿಕೆಯ ಎಲ್ಲಾ ಪ್ರವಾದಿಗಳೂ ಮಾತನ್ನಾಡಿದ್ದರು.

ಹಳೇ ಒಡಂಬಡಿಕೆಯಲ್ಲಿ ಹೇಳೀದ ಹಾಗಿಯೇ ಯೇಸು ಈ ಲೋಕಕ್ಕೆ ಇಳಿದು ಬಂದು ಆದಾಮ ಮತ್ತು ಹವ್ವರಿಂದ ಲೋಕದಲ್ಲಿ ಕೊನೆಯ ಮನುಷ್ಯನ ವರೆಗೂ ಮನುಷ್ಯರ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾರೆ.

ಈಗ, ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತದ ಮೂಲಕ ನಿಮ್ಮ ಹೃದಯಕ್ಕೆ ರಕ್ಷಣೆಯನ್ನು ತೆಗೆದುಕೊಳ್ಳಿರಿ. ಇದು ಸತ್ಯವೆಂದು ನಿಮಗೆ ಅನುಸು ತ್ತದೆಯೊ? ಇನ್ನೂ ನಿಮ್ಮ ಮನಸ್ಸಿನಲ್ಲಿ ಪಾಪವಿದಿಯೋ? “ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ.” ಧರ್ಮವನ್ನು ನೆರೆವೇರಿಸುವಕ್ಕೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಸಿಕೊಂಡರು.

“ದೀಕ್ಷಾಸ್ನಾನ” ಎನ್ನುವ ವಾಕ್ಯದ ಅರ್ಥವೇ “ಶುದ್ಧಮಾಡುವದು” ಎಂದು. ಹಳೇ ಒಡಂಬಡಿಕೆಯಲ್ಲಿ ಕೈಯಿಡುವುದರ ರೀತಿಯಲ್ಲಿ ಯೇಸು ಸ್ನಾನಿಕ ನಾದ ಯೋಹಾನನಿಂದ ದೀಕ್ಷಾಸ್ನಾನವನ್ನು ಮಾಡಿಸಿಕೊಂಡನು.

ಆತನ ಮೇಲೆ ಮನುಷ್ಯನ ಎಲ್ಲಾ ಪಾಪಗಳನ್ನು ಹೊತ್ತುಕ್ಕೊಂಡ ಮೇಲೆ, ಯೊರ್ದನ್ ಹೊಳೆಯಲ್ಲಿ ಆತನು ಮುಳುಗಿದನು. ಪಾಪಿಗಳಿಗೆ ಮರಣ ಹಾಗೂ ತೀರ್ಪನ್ನು ಆ ಹೊಳೆ ಸೂಚಿಸುತ್ತದೆ. ಕ್ರೈಸ್ತನ ಮುಳುಗುವಿಕೆಯು ಶಿಲುಬೆಯ ಮೇಲೆ ಆತನ ಮರಣವನ್ನು ಸೂಚಿಸುತ್ತದೆ. ಆತನು ನೀರಿನಿಂದ ಮೇಲಕ್ಕೆ ಬರುವ ನೋಟವು ಆತನ ಪುನರುತ್ಥಾನವನ್ನು ಸೂಚಿಸುತ್ತದೆ. ಯೇಸು ಶಿಲುಬೆಯ ಮೇಲೆ ಮರಣ ಹೊಂದಿ ಮೂರುದಿನಗಳಾದ ಮೇಲೆ ಪುನರುತ್ಥಾನವಾದನು.

ಯೇಸು ನಮ್ಮ ಕರ್ತನು ಹಾಗೂ ನಮ್ಮ ರಕ್ಷಕನು. ಯೇಸು ಈ ಲೋಕಕ್ಕೆ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡು, ಶಿಲುಬೆಯ ಮೇಲೆ ಮರಣಿಸಿ, ಮೂರನೆಯ ದಿನ ಪುನರುತ್ಥಾನವಾದರು, ಮತ್ತು ಆತನು ಈಗ ಕರ್ತನ ಬಲಕೈಯಲ್ಲಿ ಕೂತಿರುವುದೆ ಮನುಷ್ಯರೇಲ್ಲಾರನ್ನು ಮರಣದಿಂದ ರಕ್ಷಿಸಿದ್ದು ಎನ್ನುವುದಕ್ಕೆ ಸ್ವಷ್ಟವಾದ ರುಜು ವಾತು. ನೀವು ಇದರಲ್ಲಿ ನಂಬುತ್ತೀರೊ? 

ಹೊಸ ಒಡಂಬಡಿಕೆಯಲ್ಲಿ ಅಧ್ಯಾತ್ಮಿಕ ಸುನ್ನತಿ ಅಂದರೆ ಯೇಸುವಿನ ದೀಕ್ಷಾಸ್ನಾನ. “ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ” ನಮ್ಮ ಎಲ್ಲಾ ಪಾಪ ಗಳನ್ನು ಯೇಸುವಿನ ಮೇಲೆ ಹೊರಿಸುವುದು ಎಂಬ ಸತ್ಯಾಂಶ ಅಂದರೆ, ಯೇಸುವಿನ ದೀಕ್ಷಾಸ್ನಾನವನ್ನು ನಾವು ನಂಬುವಾಗ ಹೃದಯದಲ್ಲಿ ಆಗುವ ಸುನ್ನತಿ ಪೂರ್ತಿ ಯಾಗುತ್ತದೆ. ಹೃದಯದ ಸುನ್ನತಿಯು ನಾವು ಯೇಸುವಿನ ಮೇಲೆ ನಮ್ಮ ಎಲ್ಲಾ ಪಾಪಗಳನ್ನು ಹೊರಿಸುವ ಯೇಸುವಿನ ದೀಕ್ಷಾಸ್ನಾನದ ಒಪ್ಪಿಗೆಯಾಗಿದೆ.

ನಿಮ್ಮ ಹೃದಯದಲ್ಲಿ ನೀವು ಸುನ್ನತಿಯಾಗಿದ್ದೀರೋ? ನೀವು ಹೃದಯದ ಸುನ್ನತಿಯಲ್ಲಿ ವಿಶ್ವಾಸವಿಟ್ಟಿದರೆ, ನಿಮ್ಮ ಎಲ್ಲಾ ಪಾಪಗಳು ಒಂದೇ ಸಾರಿ ನಿವಾರಣೆ ಯಾಗುತ್ತದೆ. ಈ ಕಾರಣಕ್ಕಾಗಿಯೇ ಯೇಸು ಎಲ್ಲಾ ಧರ್ಮವನ್ನು ನೆರೆವೇರಿಸಿದನು ಮತ್ತು ಆತನು ಎಲ್ಲಾ ಪಾಪಿಗಳಿಗೆ ರಕ್ಷಣೆಯನ್ನು ಕೊಡುವುದಾಗಿ ಆತನು ವಾಗ್ದಾನ ಮಾಡಿದನು.

ಪ್ರೀತಿಯ ಕ್ರೈಸ್ತರೇ, ಈ ರಕ್ಷಣೆಯ ಸಾಕ್ಷಿಯನ್ನು ನಿಮ್ಮ ಹೃದಯಕ್ಕೆ ಹಾಗೂ ನಿಮ್ಮ ಮನಸ್ಸಿಗೆ ತೆಗೆದುಕೊಳ್ಳಿರಿ. ಇದೇ ಸತ್ಯ. ಯೇಸುವಿನ ರಕ್ಷಣೆಯನ್ನು ನೀವು ನಿಮ್ಮ ಹೃದಯಕ್ಕೆ ಒಮ್ಮೆ ತೆಗೆದುಕೊಳ್ಳುವಾಗ, ನೀವು ನಿಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವಿರಿ. “ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟಿರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು”(ಯೋಹಾನ 1:12). 

ಯೇಸು ಈ ಲೋಕಕ್ಕೆ ಏಕೆ ಬರಬೇಕು ಎಂಬ ಕಾರಣ ಈಗ ನಿಮಗೆ ನೋಡು ವುದಕ್ಕೆ ಸಾಧ್ಯವೊ? ಈಗ ನೀವು ಇದನ್ನು ನಂಬುತ್ತೀರೊ? ಮನುಷ್ಯನ ಎಲ್ಲಾ ಪಾಪ ಗಳನ್ನು ನಿವಾರಣೆ ಮಾಡುವದಕ್ಕಾಗಿ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡರು. ಅದು ಸುನ್ನತಿಯ ದೀಕ್ಷಾಸ್ನಾನವಾಗಿದೆ. ಆದದರಿಂದಲೇ ಅಪೋಸ್ತಲನಾದ ಪೌಲನು ನಾವು ಹೃದಯದಲ್ಲಿ ಸುನ್ನತಿಯೋಂದಬೇಕೆಂದು ನಮಗೆ ಹೇಳುತ್ತಾನೆ. ಯೇಸು ಎಷ್ಟು ಸ್ವಷ್ಟವಾಗಿ ನಮ್ಮನ್ನು ಆತನ ದೀಕ್ಷಾಸ್ನಾನದಿಂದ ಮತ್ತು ಆತನ ರಕ್ತದಿಂದ ರಕ್ಷಿಸಿದನು. ಅಂದರೆ ನಾವು ಇದನ್ನು ನಂಬುವುದನ್ನು ಬಿಟ್ಟು ಬೇರೆ ಯಾವುದನ್ನು ಆಯ್ಕೆಮಾಡಿಕೊಳ್ಳುದಕ್ಕೆ ನಮಗೆ ಸಾಧ್ಯವಿಲ್ಲ. ಕರ್ತನ ವಾಕ್ಯಕ್ಕೆ ನಮ್ಮ ಹೃದಯ ದಲ್ಲಿ “ಹೌದು. ಆಮೇನ್” ಎಂದು ನಾವು ಹೇಳಬೇಕು. ಅದು ನಿಜವಲ್ಲವೇ? ನೀವು ಇದರಲ್ಲಿ ನಂಬುತ್ತೀರೊ?



ಈ ಸತ್ಯವನ್ನು ನಿಮ್ಮ ಹೃದಯದಲ್ಲಿ ಒಪ್ಪಿಕೊಳ್ಳುತ್ತೀರೊ? 


  • ಯೇಸುವನ್ನು ನಾವು ಆರಾಧಿಸುವದಕ್ಕೆ 
  • ಮುನ್ನನಾವು ಏನು ಮಾಡಬೇಕು?
  • ನೀರು ಹಾಗೂ ರಕ್ತದ ಸತ್ಯವನ್ನು ನಮ್ಮ ಹೃದಯಕ್ಕೆ
  • ನಾವು ತೆಗೆದುಕೊಳ್ಳಬೇಕು.


ಯೇಸು ಈ ಲೋಕಕ್ಕೆ ಬಂದು ಸುಮಾರು 2000 ವರುಷಗಳಾಗಿದೆ. ಈ ದಿನದ ಮತ್ತು ಕರ್ತನ ಕೃಪಯ ಕಾಲದಲ್ಲಿ, ಯೇಸುವಿನ ನೀರು ಹಾಗೂ ಆತನ ರಕ್ತವನ್ನು, ಸತ್ಯವನ್ನು ನಮ್ಮ ಹೃದಯಕ್ಕೆ ನಾವು ತೆಗೆದುಕೊಳ್ಳಬೇಕು. ನಾವು ಮಾಡುವುದಕ್ಕೆ ಬೇರೆ ಏನೂ ಇಲ್ಲ.

“ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ.” ಹೃದಯದಲ್ಲಿ ನಾವು ವಿಶ್ವಾಸದೊಂದಿಗೆ ಸುನ್ನತಿಯಾಗಬೇಕು. ನಂಬಿಕೆಯ ಮೂಲಕ ಮಾತ್ರವೇ ನಾವು ರಕ್ಷಣೆಯನ್ನು ಪಡೆಯುವುದಕ್ಕೆ ಸಾಧ್ಯ. ಹಳೇ ಒಡಂಬಡಿಕೆಯಲ್ಲಿ, ಪಾಸ್ಕಹಬ್ಬದ ರಕ್ತ ದಲ್ಲಿ ಸ್ವಲ್ಪತೆಗೆದು ತಾವು ಭೋಜನವನ್ನು ಮಾಡುವ ಮನೇ ಬಾಗಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕಿರುವ ಪಾಸ್ಕಹಬ್ಬದ ರಕ್ತದಿಂದ ಹಾಗೂ ಸುನ್ನತಿ ಮೂಲಕ ಇಸ್ರಾಯೇಲ್ಯರು ರಕ್ಷಣೆಯನ್ನು ಪಡೆದುಕೊಂಡರು.

ಯೇಸುವಿನ ದೀಕ್ಷಾಸ್ನಾನವನ್ನು ಹಾಗೂ ಆತನ ರಕ್ತವನ್ನು ರಕ್ಷಣೆಯಾಗಿ ನಂಬುವವರು ಕರ್ತನ ತೀರ್ಪಿಗೆ ಹೆದರುವುದಿಲ್ಲ. ಕಾರಣ ಅವು ಹಾದುಹೋಗುತ್ತದೆ. ಆದರೆ ತಮ್ಮ ಹೃದಯದಲ್ಲಿ ಸತ್ಯವನ್ನು ತೆಗೆದುಕೊಳ್ಳದಿರುವವರ ಮೇಲೆ ಈ ತೀರ್ಪು ಬೀಳುತ್ತದೆ. ಅನೇಕರಿಗೆ ಯೇಸುವಿನಲ್ಲಿ ವಿಶ್ವಾಸವಿಡುವುದಕ್ಕೆ ಆಗದಿರುವದರಿಂದ ಅವರು ಇನ್ನೂ ಅವರ ಪಾಪಗಳಿಗೆ ದಾಸರಾಗಿದ್ದಾರೆ. 

ಅವರು ಈ ಪರಸ್ಥಿತಿಗೆ ಹೇಗೆ ಬಂದರು? ಏಕೆ ಅವರು ಇನ್ನೂ ಪಾಪದಲ್ಲಿ ನೋವು ಅನುಭವಿಸುತ್ತಿದ್ದಾರೆ? ಕಾರಣ ಅವರಿಗೆ ಯೇಸುವಿನ ದೀಕ್ಷಾಸ್ನನ ಮತ್ತು ಆತನ ರಕ್ತವನ್ನು ಕುರಿತು ಅವರಿಗೆ ತಿಳಿಯದಿರುವದರಿಂದಲೇ. ಆತನ ದೀಕ್ಷಾಸ್ನಾನ ವನ್ನು ಬಿಟ್ಟು ಅಥವಾ ನಿರ್ಲಕ್ಷಿಸಿ, ಯೇಸುವಿನ ರಕ್ತದಲ್ಲಿ ಮಾತ್ರವೇ ಅವರು ನಂಬು ತ್ತಾರೆ.

ಕೇವಲ ಯೇಸುವಿನ ರಕ್ತದಲ್ಲಿ ಮಾತ್ರವೇ ನಂಬುವುದರಿಂದ ರಕ್ಷಣೆಯು ದೊರುಕುತ್ತದೆಯೊಯೋ? ಹೀಗೆಂದು ಸತ್ಯವೇದವು ಹೇಳುತ್ತದೆಯೋ? ಇದನ್ನು ಕುರಿತು ಹಳೇ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆ ಏನೇಂದು ಹೇಳುತ್ತದೆ? ಸತ್ಯ ವೇದದ ಪ್ರಕಾರ, ರಕ್ಷಣೆಯನ್ನು ಪಡೆಯುವುದು ಕರ್ತನ ಕುರಿಮರಿಯ ರಕ್ತದಲ್ಲಿ ಮಾತ್ರ ವಲ್ಲ, ಆದರೆ ಯೇಸುವಿನ ದೀಕ್ಷಾಸ್ನಾನದಲ್ಲಿಯೂ ಸಹ (1 ಯೋಹಾನ 5:3-6). 

ಯೇಸುವಿನ ರಕ್ತದಲ್ಲಿ ಮಾತ್ರವೇ ನೀವು ನಂಬುತ್ತೀರೊ? ಹೀಗೆ ನಂಬು ವವರ ಹೃದಯದಲ್ಲಿ ಇನ್ನೂ ಪಾಪವಿದೆ. ಅವರು ಅವರ ತಪ್ಪಾದ ನಂಬಿಕೆಯನ್ನು ಜಯಿಸಿ ಸತ್ಯವಾದ ಸುವಾರ್ತಗೆ ಹಿಂತಿರುಗಬೇಕು.

ಯೇಸು ಯೊರ್ದನ್ ಹೊಳೆಯಲ್ಲಿ ಆತನ ದೀಕ್ಷಾಸ್ನಾನದ ಮೂಲಕ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದಾನೆ ಎಂದು ತಿಳಿಯದಿರುವದರಿಂದ ಈಗ ಅವರು ತಪ್ಪುದಾರಿಗೆ ಎಳೆಯಲ್ಪಟ್ಟಿದ್ದಾರೆ ಎಂದು ಅನ್ಯರು ಒಪ್ಪಿಕೊಳ್ಳಬೇಕು. ಯೇಸುವಿನ ದೀಕ್ಷಾಸ್ನಾನವನ್ನು ಅವರು ಒಪ್ಪಿಕೊಳ್ಳುವುದಕ್ಕೆ ನಿರ್ಲಕ್ಷಿಸುತ್ತಿದ್ದು ತಪ್ಪು ಎಂದು ಅವರು ಒಪ್ಪಿಕೊಳ್ಳಬೇಕು. ಯೇಸು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪಗಳನ್ನು ಆತನು ನಿವಾರಣೆಮಾಡಿದ್ದಾನೆ ಎಂದು ಅವರು ಅವರ ಹೃದಯಕ್ಕೆ ತೆಗೆದುಕೊಳ್ಳಬೇಕು. ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ಶಿಲುಬೆಯನ್ನು ನಾವು ನಂಬುವಾಗ ಮಾತ್ರವೇ ನಮಗೆ ರಕ್ಷಣೆ ದೊರುಕುತ್ತದೆ. ಬೇರೆ ವಾಕ್ಯದಲ್ಲಿ, ನೀರು ಹಾಗೂ ಆತ್ಮನ ಸುವಾರ್ತೆಯ ಮೂಲಕ ಮಾತ್ರವೇ ನಿತ್ಯ ಜೀವವನ್ನು ನಾವು ಸಂಪಾದಿಸುವುದಕ್ಕೆ ನಮಗೆ ಸಾಧ್ಯ. 

ಪ್ರೀತಿಯ ಕ್ರೈಸ್ತರೇ, ಇಂದಿನವರೆಗೂ ಯೇಸುವಿನ ರಕ್ತದಲ್ಲಿ ಮಾತ್ರವೇ ನೀವು ಅವಲಂಬಿಸಿ ಜೀವಿಸುತ್ತಿದ್ದೀರೊ? ಆಗ, ಖಂಡಿತವಾಗಿಯೂ ನಿಮ್ಮ ಹೃದಯ ದಲ್ಲಿ ಇನ್ನೂ ಪಾಪವಿದೆ. ನೀವು ಪಾಪಮಾಡಿದರೆ, ಆಗ ನಿಮ್ಮ ಹೃದಯದಲ್ಲಿ ಪಾಪ ವಿರುತ್ತದೆ. ಕರ್ತನ ನಿಯಮದ ಪ್ರಕಾರ ನೀವು ಜೀವಿಸುವಾಗ ನೀವು ಪಾಪದಿಂದ ಬಿಡುಗಡೆಯಾಗಿರುವ ಹಾಗೆ ನಮಗೆ ಅನಿಸಿದರೆ, ಅದು ಕೇವಲ ಮನೋಭಾವ ಮಾತ್ರವೇ. ಈ ಮನವರಿಕೆ ಕರ್ತನ ವಾಕ್ಯದ ಪ್ರಕಾರ ಇಲ್ಲ.



ಇನ್ನೂ ಸಮಯವಿದೆ


  • ಸತ್ಯವು ಯವುದರಿಂದ ನಮ್ಮನ್ನು
  • ಬಿಡುಗಡೆ ಮಾಡುತ್ತದೆ?
  • ಪಾಪದ ನಿಯಮದಿಂದ ಮತ್ತು 
  • ಮರಣದಿಂದ


ಇನ್ನೂ ಸಮಯವಿದೇ. ನೀವು ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ನಂಬಿರಿ, ಆಗ ನೀವು ನಿಮ್ಮ ಹೃದಯದಲ್ಲಿ ಸುನ್ನತಿಯಾಗುವಿರಿ ಮತ್ತು ನಿಮ್ಮ ಎಲ್ಲಾ ಪಾಪಗಳಿಂದ ನೀವು ಬಿಡುಗಡೆಯಾಗುವಿರಿ. ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವುದು ಅಂದರೆ ಯೇಸುವಿನ ದೀಕ್ಷಾಸ್ನಾನದ ಮತ್ತು ಆತನ ರಕ್ತದ ಸುವಾರ್ತೆಯನ್ನು ನಂಬುವುದರಿಂದ ನೀವು ರಕ್ಷಣೆಯನ್ನು ಪಡೆದಿದ್ದೀರಿ ಎನ್ನುವುದೇ ಇದರ ಅರ್ಥ.

ನಿಮ್ಮ ಪಾಪಗಳ ರಕ್ಷಣೆಯಗಾಗಿ ನೀವು ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ನಂಬುವುದಕ್ಕೆ ನೀವು ಸಮ್ಮತಿಸುತ್ತೀರೊ? ಒಮ್ಮೆ ನೀವು ನಂಬಿದರೆ, ರಕ್ಷಣೆ ಅಂದರೆ ಹೇಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ನೆಮ್ಮದಿಯ ಮನಸ್ಸನ್ನು ನೀವು ಪಡೆದುಕೊಳ್ಳುವಿರಿ. ಆಗ, ಮತ್ತು ಆಗ ಮಾತ್ರವೇ, ನೀವು ನೀತಿ ವಂತವರಾಗುತ್ತೀರಿ. ನಿಮ್ಮ ಕಾರ್ಯಗಳಿಂದಲ್ಲ, ಆದರೆ ಕರ್ತನ ವಾಕ್ಯದಲ್ಲಿರುವ ನಿಮ್ಮ ವಿಶ್ವಾಸದಿಂದಲೇ. ನಿಮ್ಮಲ್ಲಿ ಯಾರಾದರೂ ರಕ್ಷಣೆಯಗಾಗಿ ಇನ್ನೂ ಯೇಸು ವಿನ ರಕ್ತದಲ್ಲಿ ಮಾತ್ರವೇ ಅವಲಂಬಿಸಿ ಹಾಗೂ ನಂಬಿದ್ದರೆ, ಅವರಿಗೆ ನಾನು ಈ ಎರಡರಲ್ಲಿ ಅಂದರೆ ಯೇಸುವಿನ ದೀಕ್ಷಾಸ್ನನ ಹಾಗೂ ಆತನ ರಕ್ತದಲ್ಲಿ ವಿಶ್ವಾಸವಿಡ ಬೇಕೆಂದು ಒತ್ತಾಯಪಡಿಸುತ್ತೇನೆ.

ಪ್ರೀತಿಯ ಕ್ರೈಸ್ತರೇ ಪಾಪದಿಂದ ಮನುಷ್ಯನ ಸಂಪೂರ್ತಿಯಾಗಿರುವ ರಕ್ಷಣೆಯು ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಸುವಾರ್ತೆಯ ಮೂಲಕ ನೆರೆವೇರಿತು. ಆತ್ಮ ಅಂದರೆ ಕರ್ತನು. ಕರ್ತನು ಮನುಷ್ಯನ ಶರೀರದಲ್ಲಿ ಈ ಲೋಕಕ್ಕೆ ಇಳೀದು ಬಂದನು.

ಕರ್ತನು ಆತನ ಪ್ರವಾದಿಗಳ ಮೂಲಕ ಹೀಗೆ ಹೇಳಿದನು, ಆತನನ್ನು ನಾವು ಯೇಸು ಎಂದು ಕರೆಯಬೇಕು, ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪ ಗಳಿಂದ ಬಿಡಿಸಿಕಾಯುವನು ಅಂದನು. ಕರ್ತನು ಹೀಗೆ ಹೇಳಿದನು, “ಇಗೋ, ಒಬ್ಬ ಕನ್ಯಕೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು; ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬುದು, ದೇವರು ನಮ್ಮ ಕೂಡ ಇದ್ದಾನೆಂದು ಈ ಹೇಸರಿನ ಅರ್ಥ” (ಮತ್ತಾಯ 1:23).

ಪಾಪಿಗಳನ್ನು ರಕ್ಷಿಸುವದಕ್ಕಾಗಿಯೇ ಕರ್ತನು ಈ ಲೋಕಕ್ಕೆ ಬಂದನು. ಲೋಕದ ಎಲ್ಲಾ ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಆತನು ದೀಕ್ಷಾಸ್ನಾನ ಮಾಡಿಸಿಕೊಂಡನು. ಹೀಗೆ ಆತನು ಪಾಪಿಗಳನ್ನು ರಕ್ಷಿಸಿದನು. ಇದೇ ಸತ್ಯ ಮತ್ತು ನೀರು ಹಾಗೂ ರಕ್ತದ ರಕ್ಷಣೆಯೂ ಇದೇ. ಇದನ್ನು ನಿಮಗೆ ಹೇಳುವದಕ್ಕಾಗಿಯೇ ನಾನು ಇಲ್ಲಿ ಇದ್ದೇನೆ. ಯೇಸುವಿನ ರಕ್ತದಿಂದ ಮಾತ್ರವೇ ನಾವು ರಕ್ಷಣೆಯನ್ನು ಪಡೆದಿ ದ್ದೇವೊ? ಇಲ್ಲವೇ ಇಲ್ಲ. ಯೇಸುವಿನ ದೀಕ್ಷಾಸ್ನಾನದಿಂದ ಮತ್ತು ಶಿಲುಬೆಯಲ್ಲಿ ಆತನ ರಕ್ತದಿಂದ ನಾವು ರಕ್ಷಣೆಯನ್ನು ಪಡೆದಿದ್ದೀವೆ. 

ಈಗಿನ ಕಾಲದಲ್ಲಿ ಅನೇಕ ಸುಳ್ಳು ಪ್ರವಾದಿಗಳು ಹಾಗೂ ಪಾಷಂಡಮತ ದವರು ಯೇಸುವಿನ ದೀಕ್ಷಾಸ್ನಾನದಲ್ಲಿ ನಂಬುವುದಿಲ್ಲ. ಯೇಸು, “ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು ಎಂದು ಹೇಳಿದನು”(ಯೋಹಾನ 8:32).

ನಾವು ಸತ್ಯವನ್ನು ತಿಳಿದುಕೊಳ್ಳಬೇಕು. ಯೇಸುವಿನ ದೀಕ್ಷಾಸ್ನಾನವನ್ನು ಕುರಿತು ಯಾಕೆ ಯೇಸು ಮಾತನ್ನಾಡಿದನು ಎಂಬುದನ್ನು ನಾವು ತಿಳಿದುಕೊಳ್ಳಬೇಕು ಮತ್ತು ನಾವು ಯಾಕೆ ಅದನ್ನು ನಂಬಬೇಕು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಳೇ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಯಾಕೆ ಸುನ್ನತಿ ಮಾಡಿಸಿಕೊಳ್ಳ ಬೇಕೆಂದು ಕರ್ತನು ಅವರಿಗೆ ಹೇಳಿದನು ಎಂಬುದನ್ನು ಮತ್ತು ಪಾಸ್ಕಹಬ್ಬದ ಕುರಿ ಮರಿಯ ರಕ್ತದ ಬಗ್ಗೆ ಆತನು ಯಾಕೆ ಮಾತನ್ನಾಡಿದನು ಎಂದು ನಾವು ತಿಳಿದುಕೊಳ್ಳ ಬೇಕು.

ಕತೆಯ ಒಂದು ಭಾಗ ಮಾತ್ರವೇ ನಮಗೆ ತಿಳಿದಿದ್ದರೆ, ನಮಗೆ ಸತ್ಯವನ್ನು ಗುರುತಿಸುವುದಕ್ಕೆ ನಮಗೆ ಸಾಧ್ಯವಾಗುವುದಿಲ್ಲ. ಯೇಸು ಹೀಗೆ ಹೇಳಿದನು, “ನಾನು ನಿನಗೆ ನಿಜನಿಜವಾಗಿ ಹೇಳುತ್ತೇನೆ, ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟ ದಿದ್ದರೆ ದೇವರ ರಾಜ್ಯಕ್ಕೆ ಸೇರಲಾರನು”(ಯೋಹಾನ 3:5). 



ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳುವುದಕ್ಕೆ


  • ಕ್ರಿಸ್ತ ಯೇಸುವಿನ ಮರಣದಲ್ಲಿ ನಾವು
  • ಹೇಗೆ ಪಾಲುಗಾರರಾಗಿರುವದಕ್ಕೆ ಸಾಧ್ಯ?
  • ಯೇಸುವಿನ ದೀಕ್ಷಾಸ್ನಾನದ ಮೂಲಕ ಆತನ ಮೇಲೆ 
  • ನಮ್ಮ ಎಲ್ಲಾ ಪಾಪಗಳನ್ನು ಹೊರೆಯು
  • ವುದರಿಂದಲೇ


ಸತ್ಯವೇದ ರಕ್ಷಣೆಯ ರಹಸ್ಯದ ಸಾಕ್ಷಿಹೇಳುತ್ತದೆ. ಅದು ಯೇಸುವಿನ ರಕ್ತ ದಲ್ಲಿ ಮಾತ್ರವೋ? ಇಲ್ಲ. ಅದು ಒಟ್ಟಿಗೆ ಅಂದರೆ ಆತನ ರಕ್ತದಿಂದ ಹಾಗೂ ಆತನ ದೀಕ್ಷಾಸ್ನಾನದಿಂದ. ರೋಮಾಪುರದವರಿಗೆ 6 ನೇ ಅಧಾಯದಲ್ಲಿ ಅಪೋಸ್ತಲನಾದ ಪೌಲನು ಇದನ್ನು ಕುರಿತು ಹಲವು ಬಾರಿ ಮಾತನ್ನಾಡಿದ್ದಾನೆ ಮತ್ತು ಪುನಃ ಹಲವು ಬಾರಿ ಪತ್ರಿಕೆಗಳಲ್ಲಿ ಇದನ್ನು ಕುರಿತು ಬರೆದಿದ್ದಾನೆ. 

ರೋಮಾ 6:3-8 ನ್ನು ನಾವು ಓದೋಣ. “ಕ್ರಿಸ್ತ ಯೇಸುವಿನಲ್ಲಿ ಸೇರುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಪಾಲುಗಾರ ರಾಗುವದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ? ಹೀಗಿರ ಲಾಗಿ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗಿ ಆತನೊಂದಿಗೆ ಹೊಣಲ್ಪಟ್ಟೆವು. ಆದದರಿಂದ ಕ್ರಿಸ್ತನು ಸತ್ತು ತಂದೆಯ ಮಹಿಮೆ ಯಿಂದ ಜೀವಿತನಾಗಿ ಎಬ್ಬಿಸಲ್ಪಟ್ಟಂತೆಯೇ ನಾವು ಕೂಡ ಜೀವದಿಂದೆದ್ದು ಹೊಸಬ ರಾಗಿ ನಡಕೊಳ್ಳಬೇಕು. ಹೇಗಂದರೆ ನಾವು ಆತನಮರಣಕ್ಕೆ ಸದೃಶವಾದ ಮರಣ ವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು. ಪಾಪಾಧೀನಸ್ವಭಾವವು ನಾಶವಾಗಿ ನಾವು ಇನ್ನೂ ಪಾಪದ ವಶದಲ್ಲಿರದಂತೆ ನಮ್ಮ ಪೂರ್ವ ಸ್ವಭಾವವು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟಿತೆಂದು ತಿಳಿದಿದ್ದೇವೆ. ಸತ್ತವನು ಪಾಪದ ವಶ ದಿಂದ ಬಿಡುಗಡೆ ಹೊಂದಿದ್ದಾನೆಷ್ಟೆ. ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ಜೀವಿಸುವೆವೆಂದು ನಂಬುತ್ತೇವೆ.”

5ನೇ ವಚನವನ್ನು ನಾವು ನೋಡೋಣ. ಅದು ಹೀಗೆ ಓದುತ್ತದೆ, “ಹೇಗಂದರೆ ನಾವು ಆತನಮರಣಕ್ಕೆ ಸದೃಶವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.”

ಆತನ ಮರಣ ನಮ್ಮ ಮರಣ. ಯಾಕಂದರೆ ಆತನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳು ಆತನ ಮೇಲೆ ಹೋಗಿವೆ. ಆದ್ದರಿಂದ ಯೇಸುವಿನ ದೀಕ್ಷಾಸ್ನಾನವು ನಮ್ಮೋಂದಿಗೆ ಶಿಲುಬೆಯ ಮೇಲೆ ಆತನ ರಕ್ತವನ್ನು ಸಂಬಂಧಿಸು ತ್ತದೆ.

ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತದಲ್ಲಿ ನಮಗಿರುವ ವಿಶ್ವಾಸ ನಮ್ಮನ್ನು ಯೇಸುವಿನ ಕೋಡ ಐಕ್ಯವಾಗಿರುವದಕ್ಕೆ ಅನುಮತಿಸುತ್ತದೆ. “ಯಾಕಂದರೆ ಪಾಪವು ಕೊಡುವ ಸಂಬಳ ಮರಣ”(ರೋಮಾ 6:23). ಆದ್ದರಿಂದ ಶಿಲುಬೆಯ ಮೇಲೆ ಯೇಸುವಿನ ಮರಣವು ನಮ್ಮ ಮರಣವಾಗಿದೆ. ನಮ್ಮ ಪಾಪ ಗಳನ್ನು ಆತನ ಮೇಲೆ ಹೋಗುವದಕ್ಕಾಗಿಯೇ ಆತನು ದೀಕ್ಷಾಸ್ನಾನ ಮಾಡಿಸಿ ಕೊಂಡನು. ಈ ಸತ್ಯದಲ್ಲಿ ನಾವು ನಂಬಿದರೆ ನಾವು ಯೇಸು ಕ್ರಿಸ್ತನಲ್ಲಿ, ನಮ್ಮ ರಕ್ಷಕ ನಲ್ಲಿ ಐಕ್ಯವಾಗಿದ್ದೇವೆ ಎಂದು ಅರ್ಥ.



ಮತಶ್ರದ್ಧೆಯುಳ್ಳ ಜೀವನದ ಹಾಗೆ ನಾವು ಯೇಸುವಿನಲ್ಲಿ ವಿಶ್ವಾಸವಿಡಬಾರದು 


  • ಆತನು ನಂಬಿಗಸ್ತನೂ ಹಾಗೂ
  • ನೀತಿವಂತನೂ” ಎನ್ನುವ ಅರ್ಥ ಏನು?
  • ಅಂದರೆ ಯೇಸು ನಮ್ಮ ಎಲ್ಲಾ ಪಾಪಗಳನ್ನು ಒಂದೇ ಸಾರಿ
  • ನಿವಾರಣೆಮಾಡಿದಾರೆ ಹಾಗೂ ಸತ್ಯದಲ್ಲಿ ನಂಬುವ
  • ಎಲ್ಲಾರನ್ನು ರಕ್ಷಿಸುವನು ಎನ್ನುವದೇ 
  • ಇದರ ಅರ್ಥ.


ಮತಶ್ರದ್ಧೆಯುಳ್ಳ ಜೀವನದ ಹಾಗೆ ಅನೇಕರು ಯೇಸುವಿನಲ್ಲಿ ವಿಶ್ವಾಸ ವಿಟ್ಟಿದ್ದರಿಂದಲೇ, ಅವರು ದೇವಾಲಯಕ್ಕೆ ಹೋಗುತ್ತಾರೆ ಮತ್ತು ಕಣ್ಣೀರಿನಿಂದ ಪ್ರಾರ್ಥಿಸುತ್ತಾರೆ ಮತ್ತು ಪಶ್ಚಾತ್ತಾಪ ಪಡುತ್ತಾರೆ. ಪ್ರತಿದಿನ ಅವರು ಅವರ ಪಾಪ ಗಳನ್ನು ಒಪ್ಪಿಕೊಂಡು ಅರಿಕೆ ಮಾಡುತ್ತಾರೆ ಹಾಗೂ ಕ್ಷಮಾಪಣೆಯನ್ನು ಕೇಳುತ್ತಾರೆ. “ಯೇಸುವೇ, ನೀವು ನನಗೋಸ್ಕರವಾಗಿ ಶಿಲುಬೆಯ ಮೇಲೆ ಮರಣಹೊಂದಿದ್ದೀಯಾ ಎಂದು ನನಗೆ ತಿಳಿದಿದೆ ಮತ್ತು ನಾನು ಇದರಲ್ಲಿ ನಂಬಿದ್ದೇನೆ,”ಎಂದು ಅವರು ಪ್ರಾರ್ಥಿಸುತ್ತಾರೆ. 

ಸ್ವಷ್ಟವಾಗಿ ಅವರು ಈ ವಾಕ್ಯವನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ. “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿ ವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಶುದ್ಧಮಾಡುವನು”(1 ಯೋಹಾನನು 1:9). ಪ್ರತಿ ದಿನ ಪಾಪ ಒಪ್ಪಿಕೊಂಡು ಅರಿಕೆ ಮಾಡುವದರ ಮೂಲಕ ಅವರ ಪಾಪಗಳು ಕ್ಷಮಿಸಲ್ಪಟ್ತಿವೆ ಎಂದು ಅವರು ಹೇಳುತ್ತಾರೆ. ಆದರೆ ಮೇಲಿರುವ ವಾಕ್ಯದಲ್ಲಿ ಪಾಪವು ಪ್ರತಿದಿನದ ಪಾಪಗಳಿಂದ ಬಹು ಚಿಕ್ಕದು ಎಂದು ಈ ವಾಕ್ಯದ ಅರ್ಥವಲ್ಲ. ನಾವು ಇನ್ನೂ ರಕ್ಷಣೆಯನ್ನು ಹೊಂದಿಲ್ಲ ಎಂದು ಒಪ್ಪಿಕೊಳ್ಳುವಾಗ ನಮ್ಮ ಎಲ್ಲಾ ಪಾಪಗಳು ಒಂದೇ ಸಾರಿ ಕ್ಷಮಿಸಲ್ಪಟ್ಟುತ್ತದೆ ಎನ್ನುವದೇ ಈ ವಾಕ್ಯದ ಅರ್ಥ. 

“ಆದಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ” (ರೋಮಾ 10:17). “ಮತ್ತು ಸತ್ಯವನ್ನು ತಿಳಿದುಕೊಳ್ಳುವಿರಿ, ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು”(ಯೋಹಾನ 8:32). 

ಪ್ರೀತಿಯ ಕ್ರೈಸ್ತರೇ, ಸತ್ಯವು ಸ್ವಷ್ಟವಾಗಿದೆ. ಯೇಸು ಯೊರ್ದನ್ ಹೊಳೆ ಯಲ್ಲಿ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆ ಮಾಡದೆ ಆತನು ಶಿಲುಬೆಯಲ್ಲಿ ಮರಹೊಂದಿಂದನು ಎಂದು ನೀವು ನಂಬಿದರೆ, ಆ ನಿಮ್ಮ ನಂಬಿಕೆ ವ್ಯರ್ಥ. ತಮ್ಮ ಪಾಪಗಳಿಂದ ರಕ್ಷಣೆಯನ್ನು ಪಡೆಯಬೇಕೆನ್ನುವ ಕ್ರೈಸ್ತರು, ಯೊರ್ಧನ್ ಹೊಳೆಯಲ್ಲಿ ಯೇಸುವಿನ ದೀಕ್ಷಾಸ್ನಾದ ಮೂಲಕ ಅವರ ಎಲ್ಲಾ ಪಾಪ ಗಳು ಆತನ ಮೇಲೆ ಒಂದೇ ಸಾರಿ ಹೋದೆವು ಮತ್ತು ನಮ್ಮ ಆ ಪಾಪಗಳಗೋಸ್ಕರ ವಾಗಿ ಆತನು ಶಿಲುಬೆಯ ಮೇಲೆ ನಮ್ಮ ಎಲ್ಲಾ ಪಾಪಗಳ ತೀರ್ಪನ್ನು ಹೊತ್ತು ಕೊಂಡನು ಎಂದು ಅವರು ನಂಬಬೇಕು. ಬೇರೆ ವಾಕ್ಯಗಳಲ್ಲಿ, ನಾವು ಈ ಎರಡರಲ್ಲಿ ಅಂದರೆ ದೀಕ್ಷಾಸ್ನಾನದಲ್ಲಿ ಹಾಗೂ ಆತನ ರಕ್ತದಲ್ಲಿ ವಿಶ್ವಾಸವಿಡಬೇಕು. 

“ಬರಬೇಕಾದ ರಕ್ಷಣೆಯು ಇನ್ನಾರಲ್ಲಿಯೂ ಸಿಕ್ಕುವದಿಲ್ಲ; ಆ ಹೆಸರಿ ನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಗುವದಿಲ್ಲ ಎಂದು ಹೇಳಿದನು.” (ಅಪೋಸ್ತಲರ 4:12). ಯೇಸು ಕ್ರಿಸ್ತನು ನಮ್ಮ ಎಲ್ಲಾ ಪಾಪಗಳನ್ನು ಆತನ ದೀಕ್ಷಾ ಸ್ನಾನದ ಮೂಲಕ ನಿವಾರಣೆಮಾಡಿ ನಮ್ಮ ರಕ್ಷಕನಾದನು. ನಿತ್ಯನರಕದಿಂದ ನಮ್ಮ ನ್ನು ರಕ್ಷಿಸುವದಕ್ಕಾಗಿ ಯೇಸು ನೀರಿನಿಂದಲೂ ರಕ್ತದಿಂದಲೂ ಬಂದನು. “ಹೃದಯ ದಿಂದ ನಂಬುವವರ ಮೂಲಕ ನೀತಿಯು ದೊರುಕುತ್ತದೆ, ಬಾಯಿಂದ ಅರಿಕೆಮಾಡು ವದರ ಮೂಲಕ ರಕ್ಷಣೆಯಾಗುತ್ತದೆ” (ರೋಮಾ 10:10). ನೀನು ಪಾಪಿಯೋ ಅಥವ ನೀತಿವಂತನೋ? 

ಗಲಾತ್ಯದವರಿಗೆ 3:27ರಲ್ಲಿ, “ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾ ಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ.” ಯೇಸು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪಗಳನ್ನು ಆತನ ಮೇಲೆ ಹೊತ್ತು ಕೊಂಡ ನಂತರ ಯೇಸುವನ್ನು ಶಿಲುಬೆಗೇರಿಸಿದರು ಎನ್ನುವ ಸತ್ಯವನ್ನು ಈ ವಾಕ್ಯವು ಹೇಳುತ್ತದೆ. ಮೂರನೆಯ ದಿನ ಆತನು ಪುಸರುತ್ಥಾನವಾದನು ಮತ್ತು ಆತನು ಈಗ ಕರ್ತನ ಬಲಗಡೆಯಲ್ಲಿ ಕೂತಿದ್ದಾನೆ. ಆತನನ್ನು ನಂಬುವವರಿಗೆ ಆತ ರಕ್ಷಣೆಯ ದೇವರಾಗಿದ್ದಾರೆ. 

ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳದಿದ್ದರೆ, ನಮಗಾಗಿ ಶಿಲುಬೆಯ ಮೇಲೆ ಮರಣಹೊಂದದಿದ್ದರೆ, ಆತನು ನಮ್ಮ ರಕ್ಷಕನಾಗುತ್ತಿರಲಿಲ್ಲ. ನಾವು ನೀರು ಹಾಗೂ ಆತ್ಮನ ಸುವಾರ್ತೆಯಲ್ಲಿ ವಿಶ್ವಾಸವಿಡುವಾಗ ಮಾತ್ರವೇ ರಕ್ಷಣೆಯನ್ನು ಪಡೆಯು ತ್ತೇವೆ.



ಮೋಶೆಯ ಮಗನಿಗೂ ಕೂಡ 


  • ಕರ್ತನು ಐಗುಪ್ತದಲ್ಲಿ ಮೋಶೆಯ 
  • ಪ್ರಾಣವನ್ನು ತೆಗೆಯಬೇಕೆಂದ್ದಿದ್ದ ಕಾರಣವೇನು?
  • ಏಕಂದರೆ ಆತನು ತನ್ನ ಗಂಡು ಮಕ್ಕಳನ್ನು
  • ಸುನ್ನತಿಮಾಡದಿರುವ ಕಾರಣದಿಂದಲೇ.


ಪ್ರೀತಿಯ ಪ್ರಿಯರೇ, ಯೇಸುವಿನ ನೀರು ಹಾಗೂ ಆತನ ರಕ್ತದ ಮೂಲಕ ನಮ್ಮ ಎಲ್ಲಾ ಪಾಪಗಳ ಬಿಡುಗಡೆಯ ರಹಸ್ಯವನ್ನು ನೀವು ಕೇಳುತ್ತಿದ್ದೀರಿ. ಕರ್ತನ ಈ ವಾಕ್ಯಗಳನ್ನು ನೀವು ಕೇಳುವದು ಆಶ್ಚರ್ಯಕರವಾದ ಆಶೀರ್ವಾದ. 

ಅದು ಕೇವಲ ಯೇಸು ಕ್ರೀಸ್ತನ ರಕ್ತ ಮತ್ರವೊ? ಹಳೇ ಒಡಂಬಡಿಕೆಯ ಕಾಲದಲ್ಲಿ ಸನ್ನತಿಯಿಂದ ಮತ್ತು ಪಾಸ್ಕಹಬ್ಬದ ಕುರಿಮರಿಯ ಮೂಲಕ ಜನರು ಆಬ್ರಹಾಮನ ಸಂತಾನದವರಾದರು. ಈಗ ನಾವು ಯೆಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬುವದರಿಂದ ನಾವು ಯೇಸುವುವಿನ ಮಕ್ಕಳಾಗಿದ್ದೇವೆ. ಇದರ ಸಾಕ್ಷಿಯನ್ನು ಯೇಸು ಹಳೇ ಒಡಂಬಡಿಕೆಯಲ್ಲಿ ಮೋಶೆಯ ಮೂಲಕ ನಮಗೆ ತೋರಿಸಿದ್ದಾನೆ. 

ಇಸ್ರಾಯೇಲ್ಯರ ಜನರನ್ನು ರಕ್ಷಿಸುವದಕ್ಕಗಿ, ಆತನ ಜನರನ್ನು ಐಗುಪ್ತದೇಶ ದಿಂದ ಹೊರಗೆ ಬರಮಾಡಬೇಕೆಂದು ಕರ್ತನು ಮೋಶೆ ಹತ್ತಿರ ಮಾತನ್ನಾಡಿ ಹೇಳಿದನು. ಅದಕ್ಕೆ ಮೋಶೆ, ಆತನ ಮಾವನಾದ ಇತ್ರೋನನ ಅಪ್ಪಣೆಯಿಂದ, ಮಿದ್ಯಾನ್ ದೇಶವನ್ನು ಬಿಟ್ಟು ಆತನ ಹೆಂಡತಿ ಮತ್ತು ಗಂಡು ಮಕ್ಕಳಕೂಡ ಐಗುಪ್ತಿಗೆ ಹೋದನು. ಆತನು ಛತ್ರದಲ್ಲಿದ್ದಾಗ ಕರ್ತನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು.

ಆದರೆ ಆತನ ತಿಳುವಳಿಕೆಯುಳ್ಳ ಹೆಂಡತಿಯಾದ ಚಿಪೊಪೀರಳಿಗೆ ಕಾರಣ ತಿಳಿದಿತ್ತು. ಆಕೆ ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿಮಾಡಿ ಮೋಶೆಗೆ ಹೀಗೆ ಹೇಳಿದಳು, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನಾದಿ.” ಎಂದು ಹೇಳಿ ಕತ್ತರಿಸಿದ್ದನ್ನು ಅವನ ಪಾದಗಳಿಗೆ ಮುಟ್ಟಿಸಲು ಕರ್ತನು ಅವನನ್ನು ಉಳಿಸಿದನು. 

ಮೋಶೆಯ ಮಗನ್ನಾಗಿದ್ದರೂ ಕೂಡ, ಸುನ್ನತಿಯಾಗದಿದ್ದರೆ ಆತನು ಖಂಡಿತವಾಗಿಯೂ ಅವರ ಪ್ರಾಣವನ್ನು ತೆಗೆಯುತ್ತಾನೆಂದು ಆತನು ಹೀಗೆ ಹೇಳು ತ್ತಾನೆ. ಇಸ್ರಾಯೇಲ್ಯರ ಜನರಿಗೆ ಸುನ್ನತಿಯು ಕರ್ತನ ಒಡಂಬಡಿಕೆಯ ಗುರುತು. ನಾಯಕನ ಮಗನನ್ನೂ ಸಹ, ಆತನು ಹಾಗೂ ಬೇರೆಯಾರದರೂ ಸುನ್ನತಿ ಮಾಡಿಸಿ ಕೊಳ್ಳದಿದ್ದರೆ, ಅವರನ್ನು ಆತನ ಕುಲದಿಂದಲೇ ತೆಗೆದುಹಾಕಲ್ಪಡುವರು ಎಂದು ಅವರಿಗೆ ತಿಳಿದಿತ್ತು. ಆದದರಿಂದ, ಆತನ ಮಗನನ್ನು ಕುಲದಿಂದ ತೆಗೆದುಹಾಕ ಲ್ಪಡಿಸುವದರಿಂದ ತಪ್ಪಿಸುವದಕ್ಕಾಗಿ, ಕರ್ತನು ಮೋಶೆಯನ್ನು ಈ ರೀತಿ ಜಾಗರೂ ಕತೆಯಾಗಿ ಮಾಡಿದನು. 

ಚಿಪೊಪೀರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿಮಾಡಿ ಮೋಶೆಗೆ ಹೀಗೆ ಹೇಳಿದಳು, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗ ನಾದಿ.” ಎಂದು ಹೇಳಿ ಕತ್ತರಿಸಿದ್ದನ್ನು ಅವನ ಪಾದಗಳಿಗೆ ಮುಟ್ಟಿಸಲು ಕಾರಣ ಕರ್ತನ ಒಡಂಬಡಿಕೆಯಾದ ಸುನ್ನತಿಯನ್ನು ಒಪ್ಪಿಕೊಳ್ಳುವದಕ್ಕಾಗಿಯೇ (ವಿಮೋಚನಾ ಕಾಂಡ 4:26).

ಇಸ್ರಾಯೇಲ್ಯರಲ್ಲಿ ಯಾರು ಸುನ್ನತಿ ಮಾಡಿಸಿಕೊಳ್ಳದೆ ಇರುವರು ತಮ್ಮ ಕುಲದಿಂದ ತೆಗೆದುಹಾಕಲ್ಪಡುವರು. ಸುನ್ನತಿಮಾಡಿಕೋಂಡಿರುವವರು ಮಾತ್ರವೇ ಪಾಸ್ಕಹಬ್ಬದ ಕುರಿಮರಿಯ ಮಾಂಸವನ್ನು ತಿನ್ನಬೇಕು ಮತ್ತು ಕರ್ತನ ಜನರಾಗಿ ಸೇವೆಯಲ್ಲಿ ಸೇರಬೇಕು 

ಅಪೋಸ್ತಲನಾದ ಪೌಲನು ಯಹೊದ್ಯನ್ನಾಗಿದ್ದನು. ಆತನು ಹುಟ್ಟಿದ 8ನೇ ದಿನ ನಂತರ ಆತನಿಗೆ ಸುನ್ನತಿಮಾಡಿಸಿದರು, ಆತನು ಯೆಹೊದ್ಯರಲ್ಲಿ, ಧರ್ಮಶಾಸ್ತ್ರ ಮಹಾಪಂಡಿತರ ಬಳಿ ಓದಿದನು ಮತ್ತು ಯೇಸು ಯೊರ್ಧನ್ ಹೊಳೆಯಲ್ಲಿ ಯಾಕೆ ದೀಕ್ಷಾಸ್ನಾನ ಮಾಡಿಸಿಕೊಂಡರು ಎಂಬುವ ಸರಿಯಾದ ಕಾರಣವನ್ನು ಆತನು ತೀಳಿದುಕೊಂಡನು. ಆದ್ದರಿಂದ ಅಪೋಸ್ತಲನಾದ ಪೌಲನು ಆತನ ಎಲ್ಲಾ ಪತ್ರದಲ್ಲಿ ಯೇಸುವಿನ ದೀಕ್ಷಾಸ್ನಾನವನ್ನು ಕುರಿತು ಬೆರೆದನು. 

ಅಪೋಸ್ತಲನಾದ ಪೌಲನು ಹಲವು ಬಾರಿ ಯೇಸುವಿನ ರಕ್ತವನ್ನು ರಕ್ಷಣೆ ಯ ಸಮಾಪ್ತಿಯನ್ನು ಕುರಿತು ಮಾತನ್ನಾಡಿದನು. ಆತನ ಬಿಡುಗಡೆಗೆ ಕೊನೆಯ ಮಟ್ಟ ರಕ್ತ ಮಾತ್ರವಾಗಿತ್ತು ಆದರೆ ನಿಜವಾದ ಸುನ್ನತಿ ಯೇಸುವಿನ ದೀಕ್ಷಾಸ್ನಾನ ವಾಗಿತ್ತು. ಯೇಸುವಿನ ದೀಕ್ಷಾಸ್ನಾನವಿಲ್ಲದೇ ಆತನ ರಕ್ತವನ್ನು ಒತ್ತಾಯಪಡಿಸು ವುದು ಯಾವ ಪ್ರಯೋಜನವಿಲ್ಲ.

ಅಪೋಸ್ತಲನಾದ ಪೌಲನು ಹಲವು ಬಾರಿ ಯೇಸುವಿನ ಶಿಲುಬೆಯನ್ನು ಕುರಿತು ನೇರವಾಗಿ ಮಾತನ್ನಾಡಿದನು. ಯಾಕೆ? ಕಾರಣ ಅದೇ ನಮ್ಮ ರಕ್ಷಣೆಗೆ ನಮಗಿ ರುವ ಕೊನೆಯ ಸಾಕ್ಷಿ. ಲೋಕದ ಎಲ್ಲಾ ಪಾಪಗಳನ್ನು ಯೇಸು ತನ್ನ ಮೇಲೆ ಹೊತ್ತು ಕೊಂಡು ನಮಗಾಗಿ ತೀರ್ಪನ್ನು ಪಡೆಯುವದಕೊಸ್ಕರವಾಗಿ ಶಿಲುಬೆಯಲ್ಲಿ ರಕ್ತ ಸುರಿಸಿದನು. ಅದನ್ನು ನಿರ್ಲಕ್ಷಿಸಿದರೆ, ನಮಗೆ ಸಂಪೂರ್ಣವಾಗಿ ರಕ್ಷಣೆಯಾಗು ತ್ತಿರಲಿಲ್ಲ. ಆದ್ದರಿಂದ ಅಪೋಸ್ತಲನಾದ ಪೌಲನು ಶಿಲುಬೆಯನ್ನು ಕುರಿತು ಹಲವು ಬಾರಿ ಮಾತನ್ನಾಡಿದನು. ನಮ್ಮ ರಕ್ಷಣೆಗೆ ಶಿಲುಬೆಯು ಕೊನೆಯ ಹೆಜ್ಜೆ. 

ಈ ಕಾಲದವರಿಗೆ ರಕ್ಷಣೆಯ ಸತ್ಯವನ್ನು ತಪ್ಪು ಅಭಿಪ್ರಾಯವಿಲ್ಲದೆ ಅವರಿಗೆ ಕೊಟ್ಟಿದರೆ, ಇಷ್ಟರಲ್ಲಿಯೇ ಪಾಪವಿಲ್ಲದವರು ಅನೇಕರಿರುವರು. ಆದರೆ ನಿರ್ಭಾಗ್ಯ ವಾಗಿ, ಸತ್ಯವು ಕಳೆದುಹೋಯಿತು ಮತ್ತು ಅನೇಕರು ಯೇಸುವಿನ ದೀಕ್ಷಾಸ್ನಾನದ ನಿಜವಾದ ಅರ್ಥವನ್ನು ಸ್ವಷ್ಟವಾಗಿ ಗ್ರಹಿಸದೆ ಶಿಲುಬೆಯನ್ನು ಕುರಿತು ಮಾತ್ರವೇ ಅನೇಕರಿಗೆ ತಿಳಿದಿದೆ.

ಕಾರಣ ಅವರಿಗೆ ಬರಿಯಾದ ಚಿಪ್ಪಿನ ಸುವಾರ್ತೆಯಲ್ಲಿ ಅವರಿಗೆ ವಿಶ್ವಾಸಿ ಸುವುರಿಂದ, ಅವರು ಯೇಸುವಿನಲ್ಲಿ ಅದೇಷ್ಟು ಕಾಲ ಉದ್ರಿಕ್ತವಾಗಿ ಅವರು ನಂಬಿ ದರೂ ಸಹ ಅವರು ಪಾಪಿಗಳಾಗಿಯೇ ಉಳಿದಿರುತ್ತಾರೆ. 50 ವರುಷಗಳ ಕಾಲ ಅವರು ಭಕ್ತಪರರಾಗಿದ್ದರೂ ಕೂಡ, ಹತ್ತು ವರುಷವಾದ ಮೇಲೆಯು ಸಹ ಅವರು ಇನ್ನೂ ಪಾಪಿಯರಾಗಿರುತ್ತಾರೆ.



ನನ್ನ ಸಾಕ್ಷಿ

 

  • ಪಾಪಿಗಳನ್ನು ಕರ್ತನು ನೀತಿವಂತವರನ್ನಾಗಿ
  • ನೋಡುತ್ತಾರೊ?
  • ಇಲ್ಲ. ಆತನು ನಂಬಿಗಸ್ತನು. ಆತನ ದೀಕ್ಷಾಸ್ನಾನದ ಮೂಲಕ 
  • ಅವರು ಅವರ ಎಲ್ಲಾ ಪಾಪಗಳನ್ನು ಯೇಸುವಿನ ಮೇಲೆ ಹೊತ್ತು,
  • ಪಾಪದಿಂದ ಬಿಡುಗಡೆಯಗಿರುವವರು ನೀತಿವಂತರು.


ನಾನು 20ವರುಷದವನ್ನಾಗಿರುವಾಗ ನಾನು ಯೇಸುವಿನಲ್ಲಿ ವಿಶ್ವಾಸ ವಿಟ್ಟಿದ್ದೆ. ಅದಕ್ಕೆ ಮುನ್ನ, ನಾನು ನನ್ನ ಜೀವಿತದಲ್ಲಿ ಅದೇಷ್ಟು ಪಾಪಮಾಡಿದ್ದೇನೆ ಎಂಬುದು ನನಗೆ ತಿಳಿಯದು. ಕಾರಣ ಕರ್ತನ ನಿಯಮ ನನಗೆ ತಿಳಿಯದಿರುವದ ರಿಂದಲೇ. ಆ ಸಮಯವರೆಗೂ ಕರ್ತನನ್ನು ತಿಳಿಯದೆ ನನ್ನ ಸ್ವಂತ ಜೀವನ ಜೀವಿಸು ತ್ತಿದ್ದೆ. 

ಆಗ ನಾನು ಕಾಯಿಲೆಯಲ್ಲಿದೆ. ನನಗೆ ಎಷ್ಟು ಕಾಯಿಲೆಯಿತ್ತೇಂದರೆ ನಾನು ಮರಣಹೊಂದುತ್ತೇನೆ ಎಂದು ನಾನು ಯೋಚಿಸಿದ್ದೆ. ಆದದರಿಂದ, ನನ್ನ ಮರಣಕ್ಕೆ ಮುನ್ನ ನಾನು ನನ್ನ ಪಾಪಗಳಿಂದ ಬಿಡುಗಡೆಯಾಗಬೇಕೆಂದು ತೀರ್ಮಾಣಿಸಿದೆ. ನನ್ನ ಹಾಗಿಯೇ ಇರುವ ಪಾಪಿಯರಿಗೋಸ್ಕರ ಯೇಸು ಮರಣಹೊಂದಿದ್ದಾರೇಂದು ನಾನು ಕೇಳಿದ್ದರಿಂದ, ನಾನು ಆತನಲ್ಲಿ ನಂಬುವುದಕ್ಕೆ ತೀರ್ಮಾನಿಸಿದೆ. ಆದಿಯಲ್ಲಿ, ನಾನು ಸಂತೋಷದಿಂದ ಹಾಗೂ ಕೃತಜ್ಞತೆಯಿಂದ ತುಂಬಿದೆ. 

ಆದರೆ ಸ್ವಲ್ಪ ಕಾಲದ ನಂತರ ಅವೇಲ್ಲವೂ ಬಾಡಿಹೋಯಿತು. ಕೆಲವು ವರುಷಗಳ ನಂತರ, ಪ್ರತಿದಿನ ಹೊಸ ಪಾಪಗಳನ್ನು ಮಾಡದೇ ಇರುವದಕ್ಕೆ ನನಗೆ ಆಗುತಿರಲಿಲ್ಲ. ಪುನಃ ಪುನಃ ನಾನು ಪಾಪಿಯಾಗಿದೆ. 10ವರುಷಗಳು ಆದನಂತರ, ನಾನು ಇನ್ನೂ ಪಾಪಿಯನ್ನಾಗಿಯೇ ಇದ್ದೇ, ನಿಜವಾಗಿಯೂ ಹೇಳಬೇಕಂದರೆ ಮೊದಲಿಗಿಂತ ಈಗ ನಾನು ಅತಿ ಕೆಟ್ಟವನಾಗಿದ್ದೆ. 10ವರುಷಗಳ ಕಾಲ ನಾನು ಯೇಸುವನ್ನು ನಂಬಿದೆ, ವಿಷಯ ಏನಂದರೆ ನಾನು ಬದಲಾಗಲೇ ಇಲ್ಲ ನಾನು ಪಾಪಿಯನ್ನಾಗಿಯೇ ಇದ್ದೇ. ನಾನು ಈ ಎರಡು ಪಾಪಿಯನ್ನಾಗಿಯೂ ಹಾಗೂ ಭಕ್ತ ನ್ನಾಗಿಯೂ ಆಗಿದ್ದೆ. 

ನಾನು ಹೀಗೆ ಹಾಡಿದ್ದರೂ ಸಹ, “♪ಅಳುವು ನನ್ನನ್ನು ರಕ್ಷಿಸುವುದಿಲ್ಲ! ನನ್ನ ಮುಖವು ಕಣ್ಣೀರಿನಲ್ಲಿ ತೊಳೆಯಿದರೂ, ಅದು ನನ್ನ ಭಯವನ್ನು ಹಗುರ ಗೊಳಿಸುವುದಿಲ್ಲ, ವರುಷಗಳ ಕಾಲ ಇರುವ ನನ್ನ ಪಾಪಗಳನ್ನು ತೊಳೆಯು ವುದಿಲ್ಲ! ಅಳುವು ನನ್ನನ್ನು ರಕ್ಷಿಸುವುದಿಲ್ಲ! ♪” ಎಂದು ನಾನು ಪಾಪಮಾಡುವ ಪ್ರತೀ ಸಾರಿಯೂ ನಾನು ಅಬ್ಬರಿಸಿದೆ. 

“ಪ್ರೀತಿಯ ದೇವರೇ, ದಯವಿಟ್ಟು ಈ ನನ್ನ ಒಂದು ಪಾಪವನ್ನು ಕ್ಷಮಿಸು. ಈ ಸಾರಿ ಮಾತ್ರ ನನ್ನನ್ನು ಕ್ಷಮಿಸು, ಮತ್ತು ನಾನು ಪುನಃ ಪಾಪವನ್ನು ಮಾಡುವು ದಿಲ್ಲ.” ನಾನು ಪಾಪಮಾಡಿದ ನಂತರ, ನಾನು ಮೂರುದಿನಗಳವರೆಗು ನಾನು ಪ್ರಾರ್ಥಿಸುತ್ತಿದೆ. ಕಾರಣ ನನ್ನ ಮನಸಾಕ್ಷಿಯು ಬಹಳ ದುಃಖದಲ್ಲಿರುವರಿಂದ, ನಾನು ಅಬ್ಬರಿಸಿದೆ ಮತ್ತು ಕರ್ತನಿಂದ ಕ್ಷಮಾಪಣೆಯನ್ನು ಕೇಳಿದೆ. ಮೂರನೆಯ ದಿನ, ಸುಧಾರಿಸುವ ಹಾಗೆ ನನಗೆ ಅನಿಸುತಿತ್ತು ಮತ್ತು ಆತನ ಸನ್ನಿಧಿಯಲ್ಲಿ ನಾನು ಪುನಃ ಸೇರಿದ್ದೇನೆ ಎಮ್ಸು ನಾನು ಯೋಚಿಸಿದೆ. 

“ಪುನಃ, ನಾನು ನನ್ನ ಪಾಪಗಳನ್ನು ಶುದ್ಧಪಡಿಸಿದ್ದೇನೆ. ಹಲ್ಲೆಲೂಯಾ!” ಆದಕಾರಣ ನಾನು ಸ್ವಲ್ಪ ಕಾಲ ನಾನು ಜಾಗರೂಕವಾಗಿ ಜೀವಿಸಿದೆ. ಆದರೆ ಬೇಗನೆ ನಾನು ಪುನಃ ಪಾಪಮಾಡಿದೆ ಮತ್ತು ನನ್ನ ಹತಾಶೆ ಭಾವನೆಯು ಬೆಳೆಯಿತು. ಈ ಅಂಧಕಾರದ ಪ್ರತಿಕ್ರಿಯೆಯನ್ನು ನಾನು ಪುನಃ ಪುನಃಮಾಡಿದೆ. ಆದಿಯಲ್ಲಿ ಯೇಸು ವಿನಲ್ಲಿ ನಂಬುವದು ಅದೇಷ್ಟು ಗಣನೀಯವಾಗಿತ್ತು, ಆದರೆ ನಾನು ಎಷ್ಟು ನಂಬಿದ್ದೆನೊ ಅಷ್ಟು, ಎತ್ತರವಾಗಿ ನನ್ನ ಪಾಪಗಳು ಉಪಯೋಗವಿಲ್ಲದ ಕೋಣೆ ಯಲ್ಲಿ ಧೂಳಿನ ಹಾಗೆ ರಾಶಿಯಾಗಿ ಆದವು.

10ವರುಷಗಳ ನಂತರ, ನಾನು ಮುಂಚೆಗಿಂತಲೂ ಅತಿಕೆಟ್ಟವನ್ನಾಗಿದೆ. “ನನ್ನ ಜೀವಿತದಲ್ಲಿ ಇಷ್ಟು ಬೇಗ ನಾನು ಏಕೆ ಯೇಸುವಿನಲ್ಲಿ ನಂಬಿದೆ? ನಾನು 80 ವರುಷದವರೆಗೂ ನಾನು ಕಾಯ್ದು ನಂತರ ಯೆಸುವಿನಲ್ಲಿ ನಂಬುವದು ಎಷ್ಟೋ ಸರಳವಾಗಿ ಇರುತಿತ್ತು. ಆಗ ನಾನು ಪಾಪದ ಕಡೆ ಜಾಗತ್ಯವಾಗಿರುವನು ಮತ್ತು ಪ್ರತಿದಿನ ಪಶ್ಚಾತ್ತಾಪಪಡುವ ಅಗತ್ಯವಿಲ್ಲ.” ಕರ್ತನ ಚಿತ್ತದ ಪ್ರಕಾರ ನಾನು ಜೀವಿಸ ಬೇಕೆಂದು ನಾನು ಯೋಚಿಸಿದೆ, ಆದರೆ ಅದು ನನಗೆ ಸಾಧ್ಯವಾಗಲಿಲ್ಲ. ನಾನು ನನ್ನ ಯೋಚನೆಗಳಿಂದ ಆಚೆ ಹೋಗುವ ಹಾಗೆ ನನಗೆ ಅನಿಸಿತ್ತು. 

ನಾನು ಕರ್ತನನ್ನು ಹುಡುಕುವುದಕ್ಕೆ ನಾನು ಆರಂಭಿಸಿದೆ. ನಾನು ವೇದಾಂತವನ್ನು ಓದುವರಲ್ಲಿ ಬಹಲ ಕಾಲಕಳೆದೆ. ಆದರೆ ಕೆಲವು ವರುಷಗಳ ನಂತರ ನನ್ನ ಮನಸ್ಸು ಇನ್ನೂ ಬಹಳ ಬಂಜರಾಗಿ ಹೊಯಿತು. ಮತದ ವೇದಾಂತಗಳ ಪುಸ್ತಕಗಳನ್ನು ನಾನು ಓದುವುದಕ್ಕೆ ಆರಂಭಿಸುವುದಕ್ಕೆ ಮುನ್ನ ಬೆಚ್ಚಗಿರುವ ಹಾಸಿಗೆಯ ಮೇಲೆ ಮಲಗದಿರುವ ಮಹಾತ್ಮ ಡ್ಯಾಮೇನ್‍ರವರ ಹಾಗೆ ನಾನು ಜೀವಿಸು ವುದಕ್ಕೆ ನನಗೆ ಆಶೆ ಎಂದು ನಾನು ಹೇಳುತ್ತದೆ. ನಾನು ನನ್ನನ್ನು ತೃಪ್ತಿಪಡಿಸುವುದಿಲ್ಲ, ಆದರೆ ಅವಶ್ಯಕತೆವಿರುವವರಿಗೆ ನನ್ನನ್ನು ನಾನೇ ಸಂಪೂರ್ಣವಾಗಿ ಸಮರ್ಪಿಸುತ್ತೇನೆ ಎಂದು ನಾನು ಹರಕೆ ಮಾಡಿದೆ.

ಈ ಮಹಾತ್ಮನನ್ನು ಕುರಿತು ನಾನು ಓದುವಾಗ, ನಾನು ಆತನ ಹಾಗೆ ಜೀವಿಸಬೇಕೆಂದು ನಾನು ಹರಕೆಮಾಡಿದೆ. ನನಗೆ ನಾನೇ ಸನ್ಯಾಸಿಯ ಜೀವನವನ್ನು ಜೀವಿಸುವುದಕ್ಕೆ ನಾನು ಪ್ರಯತ್ನಿಸಿದೆ. ಸಿಮೆಂಟಿನ ನೆಲೆದ ಮೇಲೆ ನಾನು ಘಂಟೆಗಳ ಕಾಲ ಮೊಣಕಾಲೂರು ಪ್ರಾರ್ಥಿಸಿದೆ. ಆಗ ನನ್ನ ಪ್ರಾರ್ಥನೆಗಳಿಗೆ ಬಹಳ ಅರ್ಥವಿದೆ ಎಂದು ನನಗೆ ಅನಿಸುತಿತ್ತು ಮತ್ತು ಪಾರ್ಥನೆಮಾಡಿದ ನಂತರ ನಾನು ಶ್ರೇಷ್ಠ ವಾಗಿದ್ದೇನೆ ಎಂದು ನಾನಗೆ ಅನ್ನಿಸುತಿತ್ತು. 

ಆದರೆ 10 ವರ್ಷಗಳು ಆದ ನಂತರ, ಹೀಗೆ ಇರುವುದಕ್ಕೆ ನನಗೆ ಆಗಲಿಲ್ಲ. ಆದದರಿಂದ ನಾನು ಕರ್ತನಿಗೆ ಹೀಗೆ ಪ್ರಾರ್ಥಿಸಿದೆ. “ಪರಲೋಕದಲ್ಲಿರುವ ಪ್ರೀತಿಯ ಕರ್ತನೇ, ದಯವಿಟ್ಟು ನನ್ನನ್ನು ರಕ್ಷಿಸು. ನನ್ನ ಹೃದಯಪೂರ್ವವಾಗಿ ನಾನು ನಿಮ್ಮಲ್ಲಿ ನಂಬಿದೇನೆ. ಯಾರಾದರೂ ನನ್ನ ಕಂಠದ ಮೇಲೆ ಕತ್ತಿಯಿಟ್ಟರೂ ಸಹ ನಾನು ನನ್ನ ಭಕ್ತಿಯನ್ನು ಬದಲಾಯಿಸುವುದಿಲ್ಲ ಎಂದು ನನಗೆ ತಿಳಿದಿದೆ. ನನ್ನ ಹೃದಪೂವಕವಾಗಿ ನಾನು ನಿಮ್ಮಲ್ಲಿ ವಿಶ್ವಾಸವಿಟ್ಟಿದರೂ ಸಹ, ನನ್ನಲ್ಲಿ ಇನ್ನೂ ಹೊರೆಯಾಗಿ ನನಗೆ ಅನ್ನಿಸುವ ಕಾರಣವೇನು? ನಾನು ಯಾಕೆ ಇಷ್ಟು ಆಶಾಭಂಗ ವಾಗಿ ಆಗಿದ್ದೇನೆ? ಮುಂಚಿಗಿಂತ ಇನ್ನೂ ಹೆಚ್ಚು ಕೆಟ್ಟವಾದ ಪಾಪಿಯಾಗಿ ನಾನು ಆಗುವ ಕಾರಣವೇನು? ಇದಕ್ಕಿಂತ ಮುನ್ನ ನಾನು ಪಾಪವನ್ನು ಕುರಿತು ಯೋಚಿಸಿದ್ದೇ ಇಲ್ಲ. ನಾನು ನಿಮ್ಮನ್ನು ನಂಬಿದ ನಂತರ ವರುಷಗಳ ಕಾಲ ನಿಮ್ಮಲ್ಲಿ ವಿಶ್ವಾಸ ವಿಟ್ಟಿದ ನಂತರ ಇನ್ನೂ ನಾನು ಹೆಚ್ಚು ಕೆಟ್ಟವಾಗಿ ಅಗುವ ಕಾರಣವೇನು? ನನ್ನಲ್ಲಿ ಏನಾಗುತ್ತಿದೆ?” 

ಆಗ ನನಗೆ ಕಾರಣ ತಿಳಿಯಿತು. ನಾನು ನನ್ನ ಪಾಪಗಳಿಂದ ನಿವಾರಣೆ ಯಾಗದೆ ನಾನು ಕರ್ತನನ್ನು ನಂಬಿದೆ. ಆ ಸಮಯದಲ್ಲಿ ಆ ಸತ್ಯವನ್ನು ನನಗೆ ತಿಳಿಯಲಿಲ್ಲ, ಮತ್ತು ಇದು ನನ್ನ ಹುಚ್ಚನ್ನು ಬಿಡಿಸಿತ್ತು.

ಪಾಪವಿರುವ ನನ್ನ ಮನಸ್ಸಿನಿಂದ, ಕರ್ತನ ಕೃಪೆಯ ಬಿಡುಗಡೆಯನ್ನು ಕುರಿತು ನಾನು ಬೇರೆಯವರಿಗೆ ಹೇಗೆ ಹೇಳುವುದು? ಯೇಸುವಿನಲ್ಲಿ ವಿಶ್ವಾಸವಿಡ ಬೇಕೆಂದು ನಾನು ಬೇರೆಯವರಿಗೆ ಹೇಗೆ ಹೇಳುದು? ನಾನು ಪುನಃ ಪುನಃ ಪ್ರಾರ್ಥಿಸಿದೆ. “ಪ್ರೀತಿಯ ದೇವರೇ, ನಾನು ಬೇಗನೆ ಶಿಕ್ಷಣಾಲಯದಲ್ಲಿ ವಿಶ್ವವಿಧ್ಯಾನಿಲಯದ ಪದವಿ ಯನ್ನು ತಕ್ಕೊಂಡು ಪಾದ್ರಿಯಾಗಿ ಆಗುತ್ತೇನೆ. ಆದರೆ ನಾನು ಪಾಪದಿಂದ ಪಾದ್ರಿ ಯಾದರೆ, ಪಾಪಿಗಳಿಗೆ ಬಿಡುಗಡೆಯನ್ನು ಕುರಿತು ನಾನು ಹೇಗೆ ಹೇಳುವುದಕ್ಕೆ ಸಾಧ್ಯ? ನಾನೇ ಒಬ್ಬ ಪಾಪಿ ಮತ್ತು ನಾನು ಅಪೋಸ್ತಲನಾದ ಪೌಲನ ಪತ್ರಗಳನ್ನು ನಾನು ಓದುವಾಗ, ಯಾರಿಗೆ ಪವಿತ್ರಾತ್ಮನು ಇಲ್ಲವೊ ಅವರು ಕರ್ತನ ಮಕ್ಕಳು ಅಲ್ಲ ಎಂಬುದನ್ನು ನಾನು ಕಂಡೆ. ನಾನು ಎಷ್ಟು ಕುತೂಹಲದಿಂದ ಹುಡಿಕಿದರೂ ಸಹ, ನನ್ನಲ್ಲಿ ಆತ್ಮವಿಲ್ಲ. ಆರಂಭದಲ್ಲಿ ಪವಿತ್ರಾತ್ಮ ನನ್ನಲ್ಲಿದೆ ಎಂದು ಅಂದುಕೊಂಡೆ ಆದರೆ ಅದು ಮಾಯವಾಯಿತು. ಏನಾಯಿತು? ದಯವಿಟ್ಟು ನನಗೆ ಏನೇಂದು ಹೇಳಿ, ದೇವರೆ.” 

ನಿಜಾಂಶ ಏನಂದರೆ, ಯೇಸುವಿನಲ್ಲಿ ಸಮಾನ್ಯವಾದ ನಂಬಿಕೆಯಿಂದ ನಾನು ಬಿಡುಗಡೆಯಾಗಿದೆ ಎಂದು ಯೋಚಿಸಿ ನಾನು ನನನ್ನೇ ಮೋಸಗೊಳಿಸಿದೆ. ಈ ವಿಷವನ್ನು ಕುರಿತು ನಾನು ಬಹಳ ಕಾಲದವರೆಗೆ ಸಂಕಟಪಟ್ಟೆ. 

ಆತನನ್ನು ಕುತೂಹಲದಿಂದ ಹುಡುಕಿದರೆ ಆತನನ್ನು ತೋರಿಸುವನು ಎಂದು ಕರ್ತನು ವಾಗ್ಧಾನಮಾಡಿದನು. ಕೊನೆಗೆ ಆತನ ಸತ್ಯದಲ್ಲಿ ಆತನು ನನ್ನನ್ನು ಬೇಟಿಯಾದನು. ಯೇಸುವಿನಲ್ಲಿ ನಾನು ನಂಬುವುದಕ್ಕೆ ಆರಂಭಿಸಿ 10 ವರುಷಗಳು ಆದರೂ ಕೂಡ ಇನ್ನೂ ನಾನು ಪಾಪಿಯಾಗೆ ಇದ್ದೇ, ಆದರೆ ನಾನು ಯೇಸುವಿನ ದೀಕ್ಷಾಸ್ನಾನದ ಮತ್ತು ಆತನ ರಕ್ತದ ರಹಸ್ಯವನ್ನು ನಾನು ಕೇಳಿದಾಗ, ಹಳೇ ಒಡಂ ಬಡಿಕೆಯಲ್ಲಿ ಸುನ್ನತಿಯ ಅರ್ಥವನ್ನು ಮತ್ತು ಹೊಸ ಒಡಂಬಡಿಕೆಯಲ್ಲಿ ಆಧ್ಯಾತ್ಮಿಕ ಸುನ್ನತಿಯನ್ನು ನಾನು ಕಂಡುಹಿಡಿದಾಗ, ಕ್ರೈಸ್ತನ ದೀಕ್ಷಾಸ್ನಾನದ ಮೂಲಕ ರಕ್ಷಣೆಯ ರಹಸ್ಯದಲ್ಲಿ ನಾನು ಕಂಡಿಹಿಡಿದ್ದಾಗ, ನನ್ನ ಎಲ್ಲಾ ವೇದನೆಯು ಅಂತ್ಯವಾಯಿತು. ನನ್ನ ಆತ್ಮವು ಹಿಮದಂತೆ ಬೆಳ್ಳಗಾಯಿತು. 

ಹೀಗಿಯೇ ನಿಮಗೂ ಆಗುತ್ತದೆ. ಯೇಸುವಿನ ದೀಕ್ಷಾಸ್ನಾನದ ಮತ್ತು ಆತನ ರಕ್ತದ ಸುವಾರ್ತೆಯಲ್ಲಿ ನೀವು ವಿಶ್ವಾಸವಿಟ್ಟಿದರೆ, ನೀವು ಪಾಪವಿಲ್ಲದವರಾಗುತ್ತೀರಿ. ನೀವು ಇನ್ನೂ ಅಪೂರ್ಣವಾಗಿರಬಹುದು, ಆದರೂ ಸಹ ನೀವು ನೀತಿವಂತವರಾಗು ತ್ತಿರಿ. ಈ ಸತ್ಯವನ್ನು ನಿಮ್ಮ ಹೃದಯತಕ್ಕೆ ನೀವು ತೆಗೆದುಕೊಳ್ಳುವಾಗ ಮತ್ತು ಇತರರಿಗೆ ಇದನ್ನು ನೀವು ತಿಳಿಯಪಡಿಸುವಾಗ, ಅವರೂ ಸಹ ರಕ್ಷಣೆಯನ್ನು ಪಡೆದು ಕರ್ತನನ್ನು ಕೊಂಡಾಡುವರು, “ಹಲ್ಲೆಲೂಯ!”ಎಂದು ಗಟ್ಟಿಯಾಗಿ ಕೂಗುವರು.

ಪಾಪದಿಂದ ಬಿಡುಗಡೆಯಾಗಿರುವ ಎಲ್ಲಾ ಸೋದರ ಮತ್ತು ಸೋದರಿ ಯರನ್ನು ನಾನು ಅಭಿನಂದಿಸುವದಕ್ಕೆ ನಾನು ಆಶಿಸುತ್ತೇನೆ. ನಮ್ಮ ಎಲ್ಲಾರನ್ನು ಪಾಪಗಳಿಂದ ರಕ್ಷಿಸುವುದಕ್ಕಾಗಿ ನಾನು ಯೇಸುವನ್ನು ಕೊಂಡಾಡುವೆನು. ಹಲ್ಲೆಲ್ಲೂಯ!

ಅದು ಏಷ್ಟು ಮಹಾ ಆಶೀರ್ವಾದ. ಅಂದರೆ ನಾನು ನಮ್ಮ ಸಂತೋಷ ವನ್ನು ಸಾಮಾನ್ಯ ವಾಕ್ಯಗಳಿಂದ ವ್ಯಕ್ತಿಪಡಿಸುವುದಕ್ಕೆ ನಮಗೆ ಅಸಾಧ್ಯ. ನಾವೇ ಲ್ಲರೂ ಸೇರಿ ಈ ಹಾಡನ್ನು ಹಾಡೋಣ. “♪ನಾವು ಇನ್ನೂ ರಹಸ್ಯವನ್ನು ಪ್ರತಿ ಯೋಂದು ಜೀವಕ್ಕೆ ಹೇಳದಿರುವದರಿಂದ, ಆತನ ಹೆಸರು ರಹಸ್ಯವಾಗಿ ಆಗಿದೆ. ವಾಸ್ತು ಲ್ಪಿಯು ಕಲ್ಲುಗಳನ್ನು ಎಸೆಯುವ ಹಾಗಿಯೇ ಆತನನ್ನು ಎಸೆದರು, ಆದರೆ ಆತನ ಹೆಸರು ನನ್ನ ಮನಸ್ಸಿನಲ್ಲಿ ಅಂತ್ಯಾಂತವಾದ ಬೆಲೆಯುಳ್ಳ ಒಡವೆಗಳಾಗಿ ಆಗಿದೆ♪.” 



ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವು ಎಲ್ಲಾ ಪಾಪಿ ಗಳನ್ನು ಅವರ ಪಾಪಗಳಿಂದ ರಕ್ಷಿಸುವುದಕ್ಕೆ ಸಾಕಾಗಿದೆ


  • ಯಾವುದು ನಮ್ಮ ಮನಸ್ಸಿನಿಂದ ಎಲ್ಲಾ
  • ಪಾಪಗಳನ್ನು ತೆಗೆದುಹಾಕುವದು?
  • ಯೇಸುವಿನ ದೀಕ್ಷಾಸ್ನಾನ


ಯೇಸು ಕ್ರಿಸ್ತನು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿದನು. ಆತನು ನಮ್ಮನ್ನು ಆಧ್ಯಾತ್ಮಿಕ ಸುನ್ನತಿಮಾಡಿಸಿದನು ಮತ್ತು ಆತನು ನಮ್ಮನ್ನು ಆತನ ಮಕ್ಕಳಾಗಿ ಮಾಡಿದನು. ಆತನು ಹೊಸದಾಗಿ ಹುಟ್ಟಿ ದವರಿಗೆ ಕರ್ತನ್ನಾಗಿದ್ದಾನೆ.

ಪಾಪಕ್ಕೆ ಯಾವಾಗಲೂ ತೀರ್ಪಿದೆ. ಆದರೆ ಯೇಸು ನಮ್ಮನ್ನು ರಕ್ಷಿಸುವದ ಕ್ಕಾಗಿ ಆತನು ದೀಕ್ಷಾಸ್ನಾನಮಾಡಿಸಿಕೊಂಡು ಶಿಲುಬೆಯ ಮೇಲೆ ತೀರ್ಪನ್ನು ಹೊತ್ತು ಕೊಂಡನು. ಆತನ ರಕ್ತದೊಂದಿಗೆ ಆತ ನಮ್ಮೇಲ್ಲರನ್ನು ರಕ್ಷಿಸಿದನು ಮತ್ತು ಮೂರನೇ ದಿನ ಆತನು ಪುನರುತ್ಥಾನವಾದನು. ತಂದೆಯಾದ ಕರ್ತನು ಯೇಸುವನ್ನು ಮರಣ ದಿಂದ ಎಬ್ಬಿಸಿದನು. 

ಯೇಸುವಿನ ಜೀವವು ನಮ್ಮ ಜೀವ ಮತ್ತು ನಾವು ಆತನ ಮಕ್ಕಳಾಗುವುದಕ್ಕೆ ಅದು ನಮಗಿರುವ ಗುರುತು. ಆತನ ದೀಕ್ಷಾಸ್ನಾನವು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿತು ಮತ್ತು ಶಿಲುಬೆಯ ಮೇಲೆ ಅಮೂಲ್ಯವಾದ ಯೇಸುವಿನ ರಕ್ತವು ನಮಗೋಸ್ಕರವಾಗಿ ಆತನು ತೀರ್ಪನ್ನು ಹೊಂದಿರುವರುವ ಸಾಕ್ಷಿ.

ಪ್ರೀತಿಯ ಸ್ನೇಹಿತರೇ, ಯೇಸುವಿನ ದೀಕ್ಷಾಸ್ನಾನದ ಗುರುತು ಮತ್ತು ಆತನ ರಕ್ತವು ನಿಮ್ಮ ಮನಸ್ಸಿನಲ್ಲಿ ನಿಮಗಿದೆಯೇ? ನಾನು ನಿಮ್ಮನ್ನು ಮತ್ತೆ ಕೇಳುತ್ತೇನೆ. ಯೇಸುವಿನ ರಕ್ತದಲ್ಲಿ ಮಾತ್ರವೇ ನಮ್ಮ ರಕ್ಷಣೆಯು ಬರುತ್ತದೆಯೇ? ಇಲ್ಲ. ಒಟ್ಟಿಗೆ ಅಂದರೆ ಯೇಸುವಿನ ದೀಕ್ಷಾಸ್ನಾನದ ಮೂಲಕ ಮತ್ತು ಆತನ ರಕ್ತದ ಮೂಲಕ ಬರುತ್ತದೆ. 



ಸುಳ್ಳುಧರ್ಮದವರು ಯಾರು? 


  • ಸುಳ್ಳುಧರ್ಮದವರು ಯಾರು?
  • ಯೇಸುವಿನ ದೀಕ್ಷಾಸ್ನಾನವನ್ನು ನಂಬುವುದಕ್ಕೆ 
  • ನಿರ್ಲಕ್ಷಿಸಿ ಆತನನ್ನೇ ಖಂಡಿಸುವವನು


ಪ್ರೀತಿಯ ಸ್ನೇಹಿತರೇ, ನಿಮ್ಮ ಜೀವಿತದಲ್ಲಿ ಪ್ರತಿದಿನ ಯೇಸುವಿನಲ್ಲಿ ನಿಮ್ಮ ನಂಬಿಕೆಯನ್ನು ಒಪ್ಪಿಕೊಂಡಿದ್ದರೂ ಸಹ ಇನ್ನೂ ನೀವು ಪಾಪಿಯರಾಗಿರುವಿರೋ? ಯೇಸುವಿನಲ್ಲಿ ನಂಬಿದರೂ ಸಹ ನೀವು ಪಾಪಿಯರಾಗಿದ್ದರೆ, ಆಗ ನೀವು ಸುಳ್ಳು ಧರ್ಮದವರು. ನಾಸ್ತಿಕತೆ ಅಂದರೆ ಕರ್ತನ ಸತ್ಯದಲ್ಲಿ ವಿಶ್ವಾಸವಿಲ್ಲದಿರುವದು. ತೀತ ನಿಗೆ 3:10ರಲ್ಲಿ ನಾಸ್ತಿಕತೆಯನ್ನು ಕುರಿತು ಮಾತನ್ನಾಡುತ್ತದೆ, “ಸಭೆಯಲ್ಲಿ ಭೇದ ಹುಟ್ಟಿಸುವ ಮನುಷ್ಯನನ್ನು ಎರಡು ಸಾರಿ ಬುದ್ಧಿಹೇಳಿದ ಮೇಲೆ ಬಿಟ್ಟುಬಿಡು. ಅಂಥ ವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷಾಪಾತ್ರ ನೆಂದು ಅವನ ಮನಸ್ಸೇ ನಿರ್ಣಯಿಸುವದು.”

ತಾನು ಶಿಕ್ಷಾಪಾತ್ರನೆಂದು ಅವನ ಮನಸ್ಸೇ ನಿರ್ಣಯಿಸುವ ವ್ಯಕ್ತಿ ಹೀಗೆ ಹೇಳುತ್ತಾನೆ, “ಪ್ರೀತಿಯ ಕರ್ತನೇ! ನಾನು ಪಾಪಿ. ನಾನು ನಿಮ್ಮನ್ನು ನಂಬಿದ್ದೇನೆ, ಆದರೂ ಇನ್ನೂ ನಾನು ಪಾಪಿಯಾಗೇ ಇದ್ದೇನೆ. ಯಾರು ಏನು ಹೇಳಿದರೂ ಕೂಡ, ನಾನು ಪಾಪಿ ಮತ್ತು ಇದು ಸತ್ಯ ಎಂದು ನನಗೆ ತಿಳಿದಿದೆ.”

ಕರ್ತನು ಆತನಿಗೆ ಹೀಗೆ ಹೇಳುತ್ತಾನೆ, “ನೀನು ಇನ್ನೂ ಪಾಪಿಯಾಗಿದ್ದೀಯೊ ಮತ್ತು ನೀನು ಇನ್ನೂ ನನ್ನ ಮಗನಲ್ಲವೊ? ಆಗ, ನೀನು ಒಬ್ಬ ಸುಳ್ಳುಧರ್ಮದವನು, ನಿನ್ನನ್ನು ಉರಿಯುವ ಬೆಂಕಿಯಲ್ಲಿ ಎಸೆದುಬಿಡುವೆ.” 

ನಿಮ್ಮ ಮನಸ್ಸಿನಲ್ಲಿ ಯೇಸುವಿನ ದೀಕ್ಷಾಸ್ನಾನದ ಸುವಾರ್ತೆಯನ್ನು ನಂಬದೇ ನೀವು ಯೇಸುವಿನಲ್ಲಿ ನಂಬಿದರೇ, ನೀವು ನಿಮ್ಮನ್ನು ನೀವೆ ಪಾಪಿ ಎಂದು ನಿರ್ಣಯಿಸಿ ನಿಮ್ಮ ಆತ್ಮ ಪಾಪದಿಂದ ಇದೆ ಎಂದು ನೀವು ಒಪ್ಪಿಕೊಂಡರೆ, ಆಗ ನೀವು ಕರ್ತನ ಸನ್ನಿಧಿಯಲ್ಲಿ ನೀವು ಒಬ್ಬ ಸುಳ್ಳುಧರ್ಮದವನು. 



ಯಾರು ನಿಜವಾದ ಭಕ್ತರು? 


  • ರಕ್ಷಣೆಯನ್ನು ಕುರಿತು
  • ಕರ್ತನ ಸಾಕ್ಷಿ ಏನು?
  • ನೀರು, ರಕ್ತ, ಮತ್ತು ಆತ್ಮ


ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತದ ಸುವಾರ್ತೆಯಲ್ಲಿ ವಿಶ್ವಾಸ ವಿಟ್ಟಿರುವವರು, ಕರ್ತನ ಮಕ್ಕಳಾಗಿರುವರು, ಮತ್ತು ಅವರ ಪಾಪಗಳನ್ನು ತೊಳೆದು ಕೊಂಡಿರುವರು ಎಲ್ಲಾರು ನೀತಿವಂತರು. ನೀವು ಯೇಸುವಿನಲ್ಲಿ ನಂಬಿದರೆ ಇನ್ನೂ ನೀವು ಹೇಗೆ ಪಾಪಿಯಾಗಿರುವಿರಿ? ಪಾಪಿಗೆ ಕರ್ತನ ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ಆಗುವುದಿಲ್ಲ. 

ಯೇಸುವಿನಲ್ಲಿ ನಂಬುವುದರ ಮೂಲಕ ನೀತಿವಂತರಾಗಿರುವವರಿಗೆ ಕರ್ತನ ಸಾಕ್ಷಿ ಅವರ ಮನಸ್ಸಿನಲ್ಲಿರುತ್ತದೆ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವೇ ಸಾಕ್ಷಿ. ಯೇಸುಕ್ರಿಸ್ತನು ಈ ಲೋಕದಲ್ಲಿ ಈ ರಕ್ಷಣೆಯ ಕೆಲಸವನ್ನೇ ಮಾಡಿ ದನು.

ಆದ್ದರಿಂದ, ಯೇಸು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ ದೀಕ್ಷಾಸ್ನಾನದ ಸುವಾರ್ತೆಯನ್ನು ನಾವು ನಂಬುವುದಕ್ಕೆ ಒಪ್ಪದಿದ್ದರೆ ಅಂತವರು ಕರ್ತನಿಂದ ತೆಗೆದುಹಾಕಲ್ಪಡುವರು. 

ನಂಬಿಕೆಯಲ್ಲಿರುವ ಪ್ರೀತಿಯ ಸೋದರಿ ಹಾಗೂ ಸೋದರೇ, ಪಾಪಿಗಳ ರಕ್ಷಣೆಯ ಸುವಾರ್ತೆಯು ಯೇಸುವಿನ ರಕ್ತದಲ್ಲಿ ಮಾತ್ರವಲ್ಲ, ಆದರೆ ಯೇಸುವಿನ ದೀಕ್ಷಾಸ್ನಾನದಲ್ಲಿಯು ಕೂಡ ಎಂದು ನೀವು ನಿಮ್ಮ ಮನಸ್ಸಕ್ಕೆ ತೆಗೆದುಕೊಳ್ಳು ತ್ತೀರೊ?

ಈ ಲೋಕದಲ್ಲಿ ಯೇಸು ಮಾಡಿದ ಕಾರ್ಯಗಳನ್ನು ನಂಬುವವರು ಮತ್ತು ನೀರು, ರಕ್ತ ಮತ್ತು ಆತ್ಮವನ್ನು ಒಪ್ಪಿಕೊಳ್ಳುವವರು, ಅವರ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುತ್ತಾರೆ. ನೀರು, ರಕ್ತ ಮತ್ತು ಆತ್ಮದ ಸುವಾರ್ತೆಯ ಸತ್ಯ ಮತ್ತು ವಿವೇಕತನ ಇದೇ. 

ಆತನ ಮೂಲಕ ಎಲ್ಲಾ ಮನುಷ್ಯರು ರಕ್ಷಣೆಯಗಬೇಕೆಂದು ಯೇಸು ಆತನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಿದ್ದಾನೆ. ಈಗ ನೀವು ನಿಜವಾಗಿ ಯೇಸುವನ್ನು ನಂಬಿದರೆ, ನೀವು ಪಾಪಿಗಳಾಗಿರು ವುದಕ್ಕೆ ಸಾಧ್ಯವೇ ಇಲ್ಲ.

ಯೇಸು ನಮ್ಮ ಮರಣದಿಂದ ನಮಗೆ ಪುನರ್ಜೀವನ ಉಂಟುಮಾಡಿದ್ದಾನೆ. ಸೈತಾನನ ವಂಚನಕ್ಕೆ ಕೊಡತಕ್ಕವರಾಗಿ ಕರ್ತನಿಂದ ದೂರವಿರುವವರ ಆತ್ಮಗಳನ್ನು ಮತ್ತು ಜಾರಿಹೋಗಿರುವವರ ಆತ್ಮಗಳನ್ನು ಆತನು ರಕ್ಷಿಸಿದ್ದಾನೆ. ಕಳೆದುಹೋಗಿದ್ದ ಆತ್ಮಗಳನ್ನು ಯೇಸು ಕಂಡುಹಿಡಿಯುವುದಕ್ಕೆ ಆಶಿಸುತ್ತಾನೆ. ನೀರು, ರಕ್ತ, ಮತ್ತು ಆತ್ಮದ ಸುವಾರ್ತೆಯೊಂದಿಗೆ ಯೇಸುವಿನ ಮೂಲಕ ಕರ್ತನು ಕೆಲಸ ಮಾಡುತ್ತಾನೆ. ಆತನು ನಮ್ಮನ್ನು ಕರೆದನು ಮತ್ತು ಈಗ ನಾವು ಆತನ ಮೂಲಕ ನಮಗೆ ವಿಮೋಚನೆಯನ್ನು ಪದೆಯುವುದಕ್ಕೆ ಮತ್ತು ರಕ್ಷಣೆಯಾಗುವುದಕ್ಕೆ ಸಾಧ್ಯವಾಗಿದೆ.

ನೀವು ನಂಬುತ್ತೀರೊ? ರಕ್ಷಣೆಯು ರಕ್ತದಲ್ಲಿ ಮಾತ್ರವಲ್ಲ, ಆದರೆ ಎರಡು ಅಂದರೆ ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯಲ್ಲಿ ಆತನ ರಕ್ತದಲ್ಲಿ ಎಂದು ನಾನು ಹೇಳುತ್ತೇನೆ. ರಕ್ತದಲ್ಲಿ ಮಾತ್ರವೇ ರಕ್ಷನೆಯನ್ನು ಹೊಂದಿದ್ದೀವಿ ಎಂದು ಹೇಳು ವವರು ಅವರ ಮನಸ್ಸಿನಲ್ಲಿ ಪಾಪವಿದೆ ಎಂದು ಅವರು ಸ್ವಷ್ಟವಾಗಿ ಗ್ರಹಿಸಿಕೊಳ್ಳ ಬೇಕು.  ನಮ್ಮ ರಕ್ಷಣೆಗೆ ಯೇಸುವಿನ ರಕ್ತದಲ್ಲಿ ನಂಬುವುದು ಸಾಕು ಎಂದು ನಾವು ಎಲ್ಲಾರು ಯೋಚಿಸಿದ್ದೆವು. ಮೊದಲು ಹಾಗೆ ಯೋಚಿಸಿದ್ದೆವು, ಆದರೆ ಈಗ ಇದು ಸಾಕಾಗುವುದಿಲ್ಲ ಎಂದು ನಾವು ಗ್ರಹಿಸಿಕೊಳ್ಳಬೇಕು. ನೀರು, ರಕ್ತ, ಮತ್ತು ಆತ್ಮದಿಂದ ಬಂದ ಯೇಸು ಕ್ರಿಸ್ತನನ್ನು ನಂಬುವುದರ ಮೂಲಕ, ನಾವು ಹೊಸದಾಗಿ ಹುಟ್ಟಿದ್ದೇವೆ ಹಾಗೂ ರಕ್ಷಣೆಯನ್ನು ಪಡೆದಿದ್ದೇವೆ.

ಯೇಸುವಿನ ದೀಕ್ಷಾಸ್ನಾನದಲ್ಲಿ ಮತ್ತು ಆತನ ರಕ್ತದಲ್ಲಿರುವ ನಂಬಿಕೆಯ ಮೂಲಕ ಪ್ರತಿಯೊಬ್ಬ ಪಾಪಿ ಹೊಸದಾಗಿ ಹುಟ್ಟಿದ್ದಾನೆ (1ಯೋಹಾನನು 5:5-10).

ನಾವು ಕರ್ತನನ್ನು ಕೊಂಡಾಡೋಣ. ಹಲ್ಲೆಲ್ಲೂಯ.