Sermons

[3-8] < ಮತ್ತಾಯ 3:13-17 > ಯೇಸುವಿನ ದೀಕ್ಷಾಸ್ನಾನ ಪಾಪನಿವಾರಣೆಗೆ ಪದ್ಧತಿಯಾಗಿದೆ



< ಮತ್ತಾಯ 3:13-17 >

“ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನ ಮಾಡಿಸಿಕೊಳ್ಳ  ಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳಗೆ ಬಂದನು; ಆಗ ಯೋಹಾನ ನು - ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. ಆದರೆ ಯೇಸು ಅವನಿಗೆ-ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು. ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಅಕಾಶವು ತೆರೆಯಿತು; ಮತ್ತು ದೇವರಆತ್ಮಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ-ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.”



ಸ್ನಾನಿಕನಾದ ಯೋಹಾನನ ದೀಕ್ಷಾಸ್ನಾನ


  • ಪಶ್ಚಾತ್ತಾಪ ಅಂದರೇನು?
  • ಪವಿತ್ರವಾಗಬೇಕಾದರೆ ಪಾಪದ ಜೀವಿತಯಿಂದ 
  • ಹಿಂತಿರುಗಿಯೇಸುವಿನಲ್ಲಿ 
  • ವಿಶ್ವಾಸವಿಡುವುದೇ.


ಈ ಲೋಕಕ್ಕೆ ಯೇಸು ಯಾಕೆ ಬಂದರು, ಯಾಕೆ ಸ್ನಾನಿಕನಾದ ಯೋಹಾನ ನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು ಎಂಬುದನ್ನು ಕುರಿತು ಅನೇಕ ಜನರು ತಿಳಿದುಕೊಂಡಿರಲಿಲ್ಲ. ಆದದರಿಂದ ಯೇಸುವಿನ ದೀಕ್ಷಾಸ್ನಾನದ  

ಕಾರಣವೇನು ಎಂಬುದನ್ನು ಕುರಿತು ಹಾಗೂ ಆತನನ್ನು ದೀಕ್ಷಾಸ್ನಾನ ಮಾಡಿಸಿ ಕೊಟ್ಟ ಸ್ನಾನಿಕ ನಾದ ಯೋಹಾನನ್ನು ಕುರಿತು ನಾವು ಮಾತನ್ನಾಡೋಣ

ಮೊದಲಿಗೆ, ಯೊರ್ದನ್ ಹೊಳೆಯಲ್ಲಿ ಸ್ನಾನಿಕನಾದ ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿಕೊಟ್ಟ ಕಾರಣವೇನು ಎಂಬುದನ್ನು ಕುರಿತು ನಾವು ಯೋಚಿಸಬೇಕು. ಮತ್ತಾಯ 3:1-12 ರಲ್ಲಿ ಸ್ನಾನಿಕ ಯೋಹಾನನು ಜನರು ಅವರ ಪಾಪಗಳನ್ನು ಪಶ್ಚಾತ್ತಾಪ ಮಾಡುವದರಿಂದ ಅವರು ಕರ್ತನ ಕಡಗೆ ತಿರುಗಿಕೊಳ್ಳ ಬೇಕೆಂದು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು ಎಂದು ಹೇಳುತ್ತದೆ.

“ನಾನಂತೂ ನಿಮ್ಮ ಮನಸ್ಸು ತಿರಿಗಿಕೊಳ್ಳಬೇಕೆಂಬದಕ್ಕೆ ನಿಮಗೆ ನೀರಿನಲ್ಲಿ ಸ್ನಾನ ಮಾಡಿಸುತ್ತೇನೆ (11ನೆಯ ವಚನ) ಮತ್ತು ಯೂದಾಯದ ಅಡವಿಯಲ್ಲಿ ಸಾರಿ ಹೇಳು ತ್ತಾ ಬಂದನು: ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ” (3ನೆಯ ವಚನ). 

ಸ್ನಾನಿಕನಾದ ಯೋಹಾನನು ಒಂಟೆಯ ಕೂದಲನ್ನು ವಸ್ತ್ರಗಳನ್ನಾಗಿ ಧರಿಸಿಕೊಂಡು ಮಿಡತೆಗಳನ್ನು ಹಿಡಿದುಕೊಂಡು, ಅರಣ್ಯದಲ್ಲಿ, ಪಾಪಗಳ ಕ್ಷಮಾ ಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನವನ್ನು ಬೋಧಿಸುತ್ತಿದ್ದನು.

ಅತನು ಜನರಿಗೆ ಹೇಳಿದನು, “ಪಶ್ಚಾತ್ತಾಪಪಡಿರಿ, ನಮ್ಮ ರಕ್ಷಕನು ಬರುತ್ತಿ ದ್ದಾನೆ; ಆತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನು ನೆಟ್ಟಗೆ ಮಾಡಿರಿ. ಅನ್ಯರ ವಿಗ್ರಹಗಳನ್ನು ಪೂಜಿಸುವುದನ್ನು ನಿಲ್ಲಿಸಿ ನಿಮ್ಮ ಹೃದಯದಲ್ಲಿ ದೇವರನ್ನು ಸ್ವೀಕರಿಸಿ.” 

ಯಾವುದರಿಂದ ಹಿಂದಿರುಗ ಬೇಕು? ವಿಗ್ರಹಗಳನ್ನು ಪೂಜಿಸುವುದರಿಂದ ಹಾಗೂ ಪಾಪಕರವಾದ ಜೀವಿತದ ಇತರ ದುಷ್ಟಕಾರ್ಯಗಳಿಂದ ನಾವು ಹಿಂತಿರುಗ ಬೇಕು. ನಾವು ಏನು ಮಾಡಬೇಕು? ನಾವು ನೀತಿವಂತವರಾಗಬೇಕಂದರೆ ಯೇಸುವಿ ನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು. “ನನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಿ. ನಿಮ್ಮ ಪಾಪಗಳನ್ನು ನಿವಾರಣೆಮಾಡಿಸಿಕೊಳ್ಳಿ. ರಕ್ಷಕನ್ನಾದ, ನಿಮ್ಮ ಮೆಸ್ಸಿಯ, ಈ ಲೋಕಕ್ಕೆ ಬರುತಿದ್ದಾನೆ. ಹಳೆಯ ಒಡಂಬಡಿಕೆಯಲ್ಲಿರುವ ಬಲಿಕಾಣಿಕೆಯ ಹಾಗೆಯೇ ಆತನು ನಿಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡುತ್ತಾನೆ ಹಾಗೂ ನಿಮ್ಮ ಎಲ್ಲಾ ಪಾಪಗಳನ್ನು ಅಳಿಸುಬಿಡುತ್ತಾನೆ.”

ಹಳೆಯ ಒಡಂಬಡಿಕೆಯಲ್ಲಿ, ಕೈಗಳನ್ನು ಮೇಲಿಡುವುದರಿಂದ ದಿನದ ಪಾಪಗಳು ಹೊರಿಯ ತಲೆಯ ಮೇಲೆ ಹೋಯಿತು. ಇಸ್ರಾಯೇಲ್ಯರ ವರ್ಷದ ಪಾಪ ಗಳೂ ಸಹ ದೋಷಪರಿಹಾರ ಮಾಡುವ ದಿನ ಯಾಜಕನಿಂದ ಅವರ ಆ ಪಾಪಗಳನ್ನು ಹೋರಿಯ ಮೇಲೆ ಹೊರಿಸುತ್ತಾರೆ, ಇದು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಇದು ಬರುತ್ತದೆ (ಯಾಜಕಕಾಂಡ 16:29-31). 

ಅದೇ ರೀತಿಯಲ್ಲಿ, ಮನುಷ್ಯರ ಪಾಪಗಳು ಯೇಸುವಿನ ದೀಕ್ಷಾಸ್ನಾನದ ಮೂಲಕ ಆತನ ಮೇಲಕ್ಕೆ ಅವು ಹೋಗಬೇಕಿದ್ದರಿಂದ ಅವು ಆತನಿಂದ ಅಳಿಸಿಬಿಡು ತ್ತದೆ. ಆದದರಿಂದ ಯೋಹಾನನು ದೇವರ ಕಡೆಗೆ ತಿರುಗಿಕೊಂಡು ಆತನಿಂದ ದೀಕ್ಷಾ ಸ್ನಾನ ಮಾಡಿಸಿಕೊಳ್ಳಬೇಕೆಂದು ಆತನು ಜನರಿಗೆ ಹೇಳಿದನು.

ಸ್ನಾನಿಕನಾದ ಯೋಹಾನನು ಪ್ರದರ್ಶಿಸಿದ ದೀಕ್ಷಸ್ನಾನದ ಮೂಲ ಮುಖ್ಯ ವಾದ ವಿಷಯ ಅಂದರೆ ಪಶ್ಚಾತ್ತಾಪ, ನಂತರ ಬರುವ ಯೇಸುವಿನ ಕಡೆಗೆ ಇಸ್ರಾಯೇಲ ಜನರು ತಿರುಗಿಕೊಳ್ಳುವ ಹಾಗೆ ಇದು ಮಾಡಿತು. ಪಶ್ಚಾತ್ತಾಪ ಅಂದರೆ ಪಾಪದ ಜೀವಿತಯಿಂದ ತಿರುಗಿಕೊಳ್ಳುವದು ಮತ್ತು ಎಲ್ಲಾ ಪಾಪಗಳ ಕ್ಷಮಾಪಣೆ ಯಾಗ ಬೇಕಾಗುವದಕ್ಕೆ ಮೆಸ್ಸಿಯನಲ್ಲಿ ವಿಶ್ವಾಸವಿಡುವದೇ. 

ಅವರ ಪಾಪಗಳನ್ನು ನಿವಾರಣೆಮಾಡುವದಕ್ಕಾಗಿ ನಂತರ ಬರುವ ಮೆಸ್ಸಿಯನಿಗಾಗಿನ ನಿರೀಕ್ಷೆಯಿಂದ ಇಸ್ರಾಯೇಲ್ಯರ ಜನರು ಪಾಪನಿವಾರಣೆಯಾಗು ತ್ತಾರೆ. ಹೀಗಿಯೇ, 2000ವರುಷಗಳ ಹಿಂದೆ ಇಳಿದು ಬಂದು ಲೋಕದ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿದ ಯೇಸುವಿನಿಂದ ನಾವು ಪಾಪನಿವಾರನೆಯಾಗಿದ್ದೇವೆ. ಆದರೆ ಹಳೆಯ ಒಡಂಬಡಿಕೆಯಲ್ಲಿರುವ ಇಸ್ರಾಯೇಲ್ಯರು ಧರ್ಮಶಾಸ್ತ್ರವನ್ನು ತಿರಸ್ಕರಿಸಿ, ತಪ್ಪಾದ ಬಲಿಕಾಣಿಕೆಗಳನ್ನು ಅರ್ಪಿಸಿ ಮೆಸ್ಸಿಯನನ್ನು ಮರೆತರು. 

ಸ್ನಾನಿಕನಾದ ಯೋಹಾನನು ಅವರಿಗೆ ನಂತರ ಬರುವ ಕರ್ತನ ಧರ್ಮ ಶಾಸ್ತ್ರವನ್ನು ಹಾಗೂ ಮೆಸ್ಸಿಯನನ್ನು ಜ್ಞಾಪಿಸಿಕೊಡಬೇಕಾಗಿರುವದರಿಂದ, ಆತನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು ಮತ್ತು ಕೊನೆಗೆ ಯೊರ್ದನ್ ಹೊಳೆಯಲ್ಲಿ ಆತನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದನು.

ಅನೇಕ ಜನರು ಅವರು ವಿಗ್ರಹಗಳನ್ನು ಪೂಜಿಸಿದ್ದಕ್ಕಾಗಿ ಹಾಗೂ ಅವರು ಕರ್ತನ ಧರ್ಮಶಾಸ್ತ್ರವನ್ನು ತಿರಸ್ಕರಿಸಿದ್ದಕ್ಕಾಗಿ, ಅವರು ಯೋಹಾನನ ಬಳಿಗೆ ಬಂದು ಅವರ ಪಶ್ಚಾತ್ತಾಪಕ್ಕಾಗಿ ಅವರು ದೀಕ್ಷಾಸ್ನಾನ ಮಾಡಿಸಿಕೊಂಡರು. ಸರಿಯಾದ ಬಲಿ ಕಾಣಿಕೆಯಲ್ಲಿ ಮೂರು ಅಗತ್ಯವಾದ ಮೂಲವಸ್ತುಗಳಿವೆ-ಸಜೀವವಾಗಿರುವ ಪ್ರಾಣಿ, ಕೈಗಳನ್ನು ಮೇಲಿಡುವದು, ಮತ್ತು ಅದರ ರಕ್ತ. ಲೋಕದ ಎಲ್ಲಾ ಜನರು ಯೇಸುವಿ ನಲ್ಲಿ ನಂಬುವದರಿಂದ ರಕ್ಷಣೆಯನ್ನು ಪಡೆಯುತ್ತಾರೆ. 

ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ಸ್ನಾನಮಾಡಿಸಿ ಕೊಳ್ಳುವದಕ್ಕೆ ಬಂದಾಗ, “ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವ ಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. ಅಬ್ರಹಾಮನು ನಮಗೆ ಮೂಲಪುರಷನಲ್ಲವೇ ಎಂಬುವ ಆಲೋಚನೆಯನ್ನು ಬಿಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲ ನೆಂದು ನಿಮಗೆ ಹೇಳುತ್ತೇನೆ”” (ಮತ್ತಾಯ 3:7-9), ಎಂದು ಅವರಿಗೆ ಹೇಳಿದನು. 

ಈ ಫರಿಸಾಯರು ಸದ್ದುಕಾಯರು, ರಾಜಕ್ರಿಯೆ ಚತುರರು ಹಾಗೂ ವಿಗ್ರಹ ಗಳನ್ನು- ಪೂಜಿಸುವ ಗುಂಪು ಇದು, ಇವರು ಕರ್ತನ ವಾಕ್ಯವನ್ನು ನಂಬದಿದ್ದರೂ ಸಹ ಅವರು ಕರ್ತನ ಜನರು ಎಂದು ಅವರು ಯೋಚಿಸಿದರು. ಅವರು ಬೇರೆ ದೇವರನ್ನು ಮತ್ತು ಅವರ ಸ್ವಂತ ಆಲೋಚನೆಗಳನ್ನು ನಂಬಿದರು.

ಸ್ನಾನಿಕನಾದ ಯೋಹಾನನಿಂದ ಅವರು ಸ್ನಾನ ಮಾಡಿಸಿಕೊಳ್ಳುವದಕ್ಕೆ ಬಂದಾಗ, “ನೀವು ತಪ್ಪಾದ ಕಾಣಿಕೆಗಳನ್ನು ಅರ್ಪಿಸಬಾರದು ಆದರೆ ಪಾಪಮಾಡುವ ದನ್ನು ಬಿಟ್ಟು ಕರ್ತನ ಕಡೆಗೆ ತಿರುಗಿರಿ ಮತ್ತು ಮೆಸ್ಸಿಯ ಬರುವನು ಬಂದು ನಿಮ ಎಲ್ಲಾ ಪಾಪಗಳನ್ನು ನಿವಾರಣೆಮಾಡುತ್ತಾನೇಂದು ನಿಜವಾಗಿ ನಂಬಿರಿ ಇದನ್ನು ನೀವು ನಿಮ್ಮ ಮನಸ್ಸಿನಲ್ಲಿ ನಂಬಬೇಕು,” ಎಂದು ಆತನು ಅವರಿಗೆ ಹೇಳಿದನು.

ಪಶ್ಚಾತ್ತಾಪಪಡುವದು ಅಂದರೆ ತಪ್ಪಾದ ಮಾರ್ಗದಿಂದ ಹಿಂತಿರುಗುವದೇ. ನಿಜವಾದ ಪಶ್ಚಾತ್ತಾಪ ಅಂದರೆ ಪಾಪದಿಂದ ಹಾಗೂ ತಪ್ಪಾದ ನಂಬಿಕೆಗಳಿಂದ ಹಿಂತಿರುಗಿ ಯೇಸುವಿನ ಕಡೆಗೆ ಹಿಂತಿರುಗುವುದೇ. ಇದು ಶಿಲುಬೆಯದಲ್ಲಿ ಆತನ ತೀರ್ಪು ಹಾಗೂ ಆತನ ದೀಕ್ಷಾಸ್ನಾನದ ಪಾಪನಿವಾರಣೆಯಲ್ಲಿ ವಿಶ್ವಾಸವಿಡುವುದು.

ಹೀಗೆ, ಸ್ನಾನಿಕನಾದ ಯೋಹಾನನು ಕರ್ತನ ಧರ್ಮಶಾಸ್ತ್ರ ಹಾಗೂ ಬಲಿ ಕಾಣಿಕೆಯ ಪದ್ಧತಿಯನ್ನು ತಿರಸ್ಕರಿದ ಇಸ್ರಾಯೇಲ್ಯರ ಜನರು, ಕರ್ತನ ಕಡೆಗೆ ತಿರುಗಿ ಸಬೇಕೆಂದು, ಯೋಹಾನನು ಅವರಿಗೆ ಹೀಗೆ ಹೇಳಿದನು. ಆತನಲ್ಲಿ ಜನರು ನಂಬು ವದಕ್ಕೆ ಮತ್ತು ಎಲ್ಲಾ ಪಾಪಗಳಿಂದ ಅವರು ರಕ್ಷಣೆಯಾಗುವದಕ್ಕೆ ಅವರನ್ನು ಯೇಸು ವಿನ ಕಡೆಗೆ ಹಿಂತಿರುಗಿಸ ಬೇಕಾಗಿರುವ ಪಾತ್ರ ಸ್ನಾನಿಕನಾದ ಯೋಹಾನನದು.



ಯೇಸುವಿನ ದೀಕ್ಷಾಸ್ನಾನದ ಮೂಲಕ ಪಾಪ ನಿವಾರಣೆಯನ್ನು ನೀವು ನಂಬುತ್ತೀರೋ?


  • ಯೇಸುವಿನ ಸನ್ನಿಧಿಯಲ್ಲಿ ಎಲ್ಲಾರು
  • ಏನು ಮಾಡಬೇಕು?
  • ಅವರು ಅವರ ಪಾಪಗಳಿಂದ ರಕ್ಷಣೆಯನ್ನು ಪಡೆಯ
  • ಬೇಕಾದರೆ ಅವರು ಆತನಲ್ಲಿ ವಿಶ್ವಾಸವಿಡಬೇಕು.


ಯೇಸು ಆತನ ಸರ್ವಜನಿಕ ಸೇವೆಯಲ್ಲಿ ಆತನು ಮೊಟ್ಟಮೊದಲು ಮಾಡಿದ ಸೇವೆ ಅಂದರೆ ಸ್ನಾನಿಕನಾದ ಯೊಹಾನನಿಂದ ದಿಕ್ಷಾಸ್ನಾನ ಮಾಡಿ ಕೊಂಡಿದ್ದು. ಈ ರೀತಿಯಾಗಿ ಲೋಕದ ಎಲ್ಲಾ ಪಾಪಗಳು ಆತನ ಮೇಲೆ ಹೋಯಿತು.

ಹೀಗೆ ಯೇಸುವಿನ ದೀಕ್ಷಾಸ್ನಾನವು ಮನುಷ್ಯರಿಗೆ ಕರ್ತನ ರಕ್ಷಣೆ ಹಾಗೂ ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ ಯೇಸುವಿನ ನೀತಿಯ ಕಾರ್ಯ ವು ಪ್ರಥಮವಾಗಿತ್ತು. ಯೇಸು ಆತನ ದೀಕ್ಷಾಸ್ನಾನದಿಂದ ಲೋಕದ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿದನು ಎನ್ನುವ ಸತ್ಯವನ್ನು ನಂಬುವ ಎಲ್ಲಾರನ್ನು ಕರ್ತನು ಕಾಪಾಡುವನು.

ಯೇಸು ಈ ಲೋಕಕ್ಕೆ ಬಂದು ಸ್ನಾನಿಕನಾದ ಯೋಹಾನನಿಂದ ದೀಕ್ಷಾ ಸ್ನಾನ ಮಾಡಿಸಿಕೊಂಡಾಗ, ಪರಲೋಕ ರಾಜ್ಯದ ಸುವಾರ್ತೆಯು ಆರಂಭವಾಯಿತು. ಮತ್ತಾಯ 3:15ರಲ್ಲಿ ಆತನು ದೀಕ್ಷಾಸ್ನಾನ ಮಾಡಿಸಿಕೊಂಡ ಕೂಡಲೆ ಆತನಿಗೆ ಆಕಾಶ ತೆರೆಯಿತು ಎಂದು ವಿವರಿಸುತ್ತದೆ, ಇದು ಹಳೆಯ ಒಡಂಬಡಿಕೆಯಲ್ಲಿ ಯಾಜಕಾಂಡ 1:1-5, 4:27-31ರಲ್ಲಿ ದೋಷಪರಿಹಾರದ ಬಲಿಕಾಣಿಕೆಯ ಹಾಗಿಯೇ. 

ಹಳೆಯ ಒಡಂಬಡಿಕೆಯಲ್ಲಿರುವ ಎಲ್ಲವು ಹೊಸ ಒಡಂಬಡಿಕೆಯಲ್ಲಿರುವ ಎಲ್ಲವನ್ನು ಜೊತೆಜೊತೆಯಾಗಿರುವವು ಮತ್ತು ಹೊಸ ಒಡಂಬಡಿಕೆಯಲ್ಲಿರುವ ಎಲ್ಲವು ಹಳೆಯ ಒಡಂಬಡಿಕೆಯಲ್ಲಿರುವ ಎಲ್ಲವು ಜೊತೆಜೊತೆಯಾಗಿರುವವು. “ಕರ್ತನ ಶಾಸ್ತ್ರದಲ್ಲಿ ಹುಡುಕಿದಿರಿ, ಇವುಗಳಲ್ಲಿ ಯಾವದೂ ಇಲ್ಲದಿರದು, ಎಲ್ಲವೂ ಜೊತೆ ಜೊತೆಯಾಗಿರುವವು; ಆತನ ಬಾಯಿಂದ ಅಪ್ಪಣೆಯಾಯಿತಲ್ಲವೆ, ಆತನ ಆತ್ಮವು ಇವುಗಳನ್ನು ಒಟ್ಟಿಗೆ ಬರಮಾಡಿತಷ್ಟೆ” (ಯೆಶಾಯ 34:16).



ಎಲ್ಲಾ ಮನುಷ್ಯರ ದೋಷಪರಿಹಾರವನ್ನು ಕುರಿತು ಹಳೆಯ ಒಡಂಬಡಿಕೆ ಹಾಗೂ ಹೊಸ ಒಡಂಬಡಿಕೆ ಎರಡೂ ಮಾತ ನ್ನಾಡು ತ್ತದೆ


  • ಪ್ರತಿದಿನ ನಾವು ನಮ್ಮ ದಿನದ ಪಾಪಗಳಿಗೋಸ್ಕರ
  • ಪಶ್ಚಾತ್ತಾಪ ಪಡಬೇಕೆ?
  • ಇಲ್ಲ. ನಿಜವಾದ ಪಶ್ಚಾತ್ತಾಪ ಅಂದರೆ ಪಾಪಗಳನ್ನು 
  • ಒಪ್ಪಿಕೊಂಡು ಪಾಪನಿವಾರಣೆಯನ್ನು ಪಡೆಯುವುದಕ್ಕೆ 
  • ಯೇಸುವಿನ ದೀಕ್ಷಾಸ್ನಾನದ ಕಡೆಗೆ 
  • ತಿರುಗುವದೇ.


ಹಳೆಯ ಒಡಂಬಡಿಕೆಯಲ್ಲಿ, ದಿನದ ಪಾಪಗಳು ಬಲಿಕಾಣಿಕೆಯ ಮೇಲೆ ಕೈಗಳನ್ನು ಮೇಲಿಡುವದರಿಂದ ಅದರ ಮೇಲೆ ದಿನದ ಪಾಪಗಳು ಹೋಯಿತು. ಆ ಹೊರಿ ಆಗ ರಕ್ತ ಸುರಿಸಿ ಆ ಪಾಪಿಯ ಬದಲು ಅದು ತೀರ್ಪನ್ನು ತೆಗೆದುಕೊಳುತ್ತದೆ. ಅವರು ಸೇರಿಸಿದ ವರುಷದ ಪಾಪಗಳೂ ಸಹ ಆ ಹೊರಿಯ ಮೇಲೆ ಹೋಯಿತು. ಇದ ರಿಂದ ಎಲ್ಲಾ ಜನರು ಅವರ ವರುಷದ ಪಾಪಗಳಿಂದ ಕ್ಷಮಿಸಲ್ಪಡುತ್ತಾರೆ. 

ಹೊಸ ಒಡಂಬಡಿಕೆಯಲ್ಲಿ, ಅದೇ ರೀತಿಯಲ್ಲಿ, ಯೇಸು ಕ್ರಿಸ್ತನು ಬಂದು ಮನುಷ್ಯರ ಎಲ್ಲಾ ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಯೊರ್ದನ್ ಹೊಳೆ ಯಲ್ಲಿ ದೀಕ್ಷಾಸ್ನಾನ ಮಡಿಸಿಕೊಂಡುನು. ಹೀಗೆ ಹಳೆಯ ಒಡಂಬಡಿಕೆಯಲ್ಲಿ ಕರ್ತನ ವಾಕ್ಯವು ಈಗಾಗಲೇ ಹೇಳಿದ ಪ್ರಕಾರ ನೆರವೇರಿತು

ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ, ಸ್ನಾನಿಕನಾದ ಯೊಹಾನನು, ಕರ್ತನ ಒಬ್ಬ ದಾಸನು ಆತನು ಯೇಸುವಿನಿಗಿಂತ ಮುನ್ನವೇ ಅಂದರೆ ಆತನು ಬರುವ ದಕ್ಕೆ 6 ತಿಂಗಳು ಮುಂಚೆಯೇ ಕಳುಹಿಸಲ್ಪಟ್ಟನು. ಲೋಕದ ಎಲ್ಲಾ ಪಾಪಗಳನ್ನು ಯೇಸು ನಿವಾರಣೆ ಮಾಡಿದ್ದಾನೆ ಎಂದು ಆತನು ಸಾಕ್ಷಿ ಹೇಳಿದನು, ಯೋಹಾನ 1:29 ರಲ್ಲಿ ಹೀಗೆ ಹೇಳಿದನು.“ಅಗೋ [ಯಾಜಕ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.” 

ಸ್ನಾನಿಕನಾದ ಯೋಹಾನನು ಯೊರ್ದನ ಹೊಳೆಯಲ್ಲಿ ಯೇಸುವಿಗೆ ದೀಕ್ಷಾಸ್ನಾನವನ್ನು ಮಾಡಿಸಿದ್ದರಿಂದ ಆತನು ಮನುಷ್ಯರ ಎಲ್ಲಾ ಪಾಪಗಳನ್ನು ಯೇಸುವಿನ ಮೇಲೆ ಹೋರಿಸುತ್ತಾನೆ. ಈ ರೀತಿಯಾಗಿ, ಮನುಷ್ಯರೇಲ್ಲಾರಿಗೆ ದೇವರು ಪ್ರಾಯಶ್ಚಿತ್ತ ಮಾಡಿದನು. ನಾವು ಇದನ್ನು ನಂಬುವುದೇ ನಾವು ಈಗ ಮಾಡಬೇಕಾಗಿ ರುವ ಕೆಲಸವಾಗಿದೆ.

ಲೋಕದ ಎಲ್ಲಾ ಪಾಪಗಳು  ಯೇಸುವಿನ ಮೇಲೆ ಹೋದವು. ಅಪೊಸ್ತಲರ ಕೃತ್ಯಗಳು 3:19ರಲ್ಲಿ ಯೇಸುವಿನ ಶಿಷ್ಯರು ಹೀಗೆ ಹೇಲುತ್ತಾರೆ, “ಆದದರಿಂದ ದೇವರು ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ತಿರುಗಿದರೆ ದೇವರ ಸನ್ನಿಧಾನದಿಂದ ವಿಶ್ರಾಂತಿಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿ ಕೊಡುವನು. ”

ಸ್ನಾನಿಕನಾದ ಯೋಹಾನನು ಯೇಸುವಿಗೆ ಯಾಕೆ ದೀಕ್ಷಾಸ್ನಾನ ಮಾಡಿಸಿ ದನು ಎಂಬುದನ್ನು, ಆತನನ್ನು ಹಿಂಬಾಲಿಸ ಬೇಕೆಂದು ಆತನು ಯಾಕೆ ಹೇಳಿದನು ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಅವರು ನಮ್ಮನ್ನು ಒತ್ತಾಯಪಡಿಸುತ್ತಿ ದ್ದರು. ಆತನು ಹೀಗೆ ಹೇಳಿದನು, “ದೇವರು ನಿಮ್ಮ ಪಾಪಗಳನ್ನು ಆಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಯೇಸುವಿನ ದೀಕ್ಷಾಸ್ನಾನದ ಪಾಪ ನಿವಾರಣೆಯಲ್ಲಿ ನಂಬಿರಿ.”

ಮೆಸ್ಸಿಯಾ ಬಂದು ನಮ್ಮ ಎಲ್ಲಾ ಪಾಪಗಳನ್ನು ಒಂದೇ ಸಾರಿ ಆತನ ದೀಕ್ಷಾಸ್ನಾನದ ಮೂಲಕ ಆಳಿಸಿಬಿಟ್ಟಿದ್ದಾನೆ. ಈ ರೀತಿ ಲೋಕದ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋದವು. ಹೀಗೆ ಮತ್ತಾಯ 3:13-17 ರಲ್ಲಿ ಬರೆದಿರುವ ಹಾಗೆ, ಕರ್ತನ ಧರ್ಮ ಯೇಸುವಿನ ದೀಕ್ಷಾಸ್ನಾನದ ಮೂಲಕ ನೆರವೇರಿತು.

“ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್ ಹೊಳಗೆ ಬಂದನು; ಆಗ ಯೋಹಾನನು- ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. ಆದರೆ ಯೇಸು ಅವನಿಗೆ-ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ ಎಂದು ಹೇಳಿ ದಾಗ ಅವನು ಒಪ್ಪಿಕೊಂಡನು. ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಅಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. ಆಗ-ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶ ವಾಣಿ ಆಯಿತು.”

ಕರ್ತನ ಧರ್ಮವನ್ನು ನೆರವೆರುವುದಕ್ಕೆ, ಯೇಸು ಸ್ನಾನಿಕನಾದ ಯೊಹಾನ ನಿಂದ ಸ್ನಾನ ಮಾಡಿಸಿಕೊಲ್ಲಬೇಕೆಂದು ಬಂದನು. ಸ್ನಾನಿಕನಾದ ಯೋಹಾನನು ವಿಶೇಷವಾದ ಕರ್ತನ ದಾಸನಾಗಿದ್ದನು. ಲೂಕ 1ನೇ ಅಧ್ಯಾಯದಲ್ಲಿ ಹೀಗೆ ಹೇಳುತ್ತದೆ ಯೋಹಾನನು ಮೊದಲನೆಯ ಮಹಾ ಯಾಜನಾದ, ಅರೋನನ ವಂಶದವನು. ಅರೋನನ ವಂಶದವನಾದ ಯೋಹಾನನ್ನು ಯೇಸು ಆಯ್ಕೆಮಾಡಿಕೊಂಡನು, ಕಾರಣ ಆತನಿಗೆ ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದ್ದರಿಂದ ಆತನಿಗೆ ಎಲ್ಲಾ ಮನುಷ್ಯರ ಮಾದರಿ ಬೇಕಾಗಿತ್ತು. 

ಆದದರಿಂದ, ಯೇಸು ಬರುವ 6 ತಿಂಗಳ ಮುನ್ನವೇ ಮಹಾ ಯಾಜಕನ ಮನೆಯಲ್ಲಿ ಯೇಸುವನ್ನು ಕರ್ತನು ಹುಟ್ಟುವ ಹಾಗೆ ಮಾಡಿದನು. ಸ್ನಾನಿಕನಾದ ಯೋಹಾನನು ಕರ್ತನ ದಾರಿಯನ್ನು ಸಿದ್ಧಮಾಡಿ ಅಡವಿಯಲ್ಲಿ ಹೀಗೆ ಕೂಗಿದನು, “ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳು ವದಕ್ಕೆ ನಿಮಗೆ ಉಪದೇಶ ಮಾಡಿದವರಾರು? ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. ಆತನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬಿರಿ. ಪಶ್ಚಾತ್ತಾಪಪಟ್ಟು ದೀಕ್ಷಸ್ನಾನ ಮಾದಿಸಿಕೊಳ್ಳಿರಿ, ಆಗ ನೀವು ಪಾಪನಿವಾರಣೆಯನ್ನು ಪಡೆಯುತ್ತೀರಿ” ಎಂದು ಹೇಳಿ ದನು. 

ಅಪೊಸ್ತಲರ ಕೃತ್ಯಗಳು 3:19ರಲ್ಲಿ ಪಾಪನಿವಾರಣೆಯ ಸುವಾರ್ತೆಯ ಬಗ್ಗೆ ಸ್ವಷ್ಟವಾಗಿ ವಿವರಿಸಿದೆ. ಮನುಷ್ಯನ ಪಾಪಗಳನ್ನು ಕುರಿತು ಸ್ನಾನಿಕನಾದ ಯೋಹಾನ ನು ಹೇಳಿದ್ದಾಗ, ಅನೇಕರು ಮಾರ್ಪಟ್ಟರು. 

ಯೋಹಾನನು ಯೇಸುವಿನ ಮೇಲೆ ಲೋಕದ ಎಲ್ಲಾ ಪಾಪಗಳನ್ನು ಹೋರಿಸಿದ್ದರಿಂದ, ಒಂದೇ ಸಾರಿ ಮನುಷ್ಯರ ಎಲ್ಲಾ ಪಾಪಗಳು ಆಳಿಸಿಬಿಟ್ಟವು. ಸ್ನಾನಿಕನಾದ ಯೋಹಾನನು ಯೇಸು ಎಲ್ಲಾರ ಪಾಪಗಳನ್ನು ನಿವಾರಣೆಮಾಡಿದ್ದಾ ನೆಂದು ಸಾಕ್ಷಿಹೇಳಿದ್ದರಿಂದ, ಪಾಪನಿವಾರಣೆಯ ಸುವಾರ್ತೆಯನ್ನು ನಂಬುವದ ರಿಂದ, ನೀರು ಹಾಗೂ ರಕ್ತದ ಸುವಾರ್ತೆಯನ್ನು ನಂಬುವದರಿಂದ ನಮಗೆ ರಕ್ಷನಣೆ ಯಾಗುವದಕ್ಕೆ ಸಾಧ್ಯ ಎಂದು ನಾವು ತಿಳಿದುಕೊಂಡೆವು.



ಸ್ನಾನಿಕನಾದ ಯೊಹಾನ ಯೇಸುವಿನ ಸನ್ನಿಧಿಯಲ್ಲಿ ಬರ ಬೇಕಿರುವ ಕಾರಣ


  • “ಹೀಗೆ” ಎನ್ನುವದಕ್ಕೆ ಅರ್ಥಗಳು 
  • ಯಾವುದು?
  • 1 ಸರಿಯಾಗಿ
  • 2 ನೆರವೇರಿಸುವದು
  • 3 ಅವಶ್ಯವಾಗಿ ಈ ಮಾರ್ಗದಲ್ಲಿ ಮಾತ್ರವೇ
  • (ಬೇರೆ ಮಾರ್ಗವೇ ಇಲ್ಲ)


ರಕ್ಷಕನಾದ, ಯೇಸುವನ್ನು ನಂಬಿದ್ದರಿಂದ ಪಾಪಗಳು ನಿವಾರಣೆಯಾಗಿರು ವವರಿಗೆ, ಯೇಸುವಿನ ದೀಕ್ಷಾಸ್ನಾನದ ಸುವಾರ್ತೆಯನ್ನು ಕುರಿತು ಕೊಟ್ಟ ಮತ್ತಾಯನ ಸಾಕ್ಷಿ ಮುಲಕ ರಕ್ಷಣೆಯನ್ನು ನಿಶ್ಚಿಯಿಸಿಕೊಳ್ಳುವದಕ್ಕೆ ಅವರಿಗೆ ಸಾಧ್ಯ. ಮತ್ತಾಯ 3:15-16 ರಲ್ಲಿ, ಯೇಸು ಯೋಹಾನ ಬಳಿಗೆ ಬಂದು ಹೇಳಿದನು, “ಸ್ನಾನ ಮಾಡಿಸು.” “ಆಗ ಯೋಹಾನನು ಹೀಗೆ ಹೇಳಿದನು, ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವ ನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು? ಎಂದು ಹೇಳಿದನು”

ಆತನು ಯಾರೇಂದು ಗುರುತಿಸಿ, ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ್ದು ಸ್ನಾನಿಕನಾದ ಯೊಹಾನನೇ. ಯೇಸುವಿನ ಮೇಲೆ ಮನುಷ್ಯರ ಎಲ್ಲಾ ಪಾಪಗಳನ್ನು ಹೋರಿಸುವದಕ್ಕೆ ಕರ್ತನ ದಾಸನಾದ ಯೋಹಾನನ್ನು ಕಳುಹಿಸಲ್ಪಟ್ಟನು. ಕಾರಣ ಹಳೆಯ ಒಡಂಬಡಿಕೆಯಲ್ಲಿರುವ ಧರ್ಮವನ್ನು ನೆರವೇರಿಸುವದಕ್ಕೆ ರಕ್ಷಕನಾಗಿ ಯೇಸು ಬಂದದ್ದರಿಂದ, ಲೋಕದ ಎಲ್ಲಾ ಪಾಪಗಳನ್ನು ಆತನ ತಲೆಯ ಮೇಲೆ ತೆಗೆದುಕೊಳ್ಳುವುದಕ್ಕೆ ಬಂದನು ಸ್ನಾನಿಕನಾದ ಯೋಹಾನನಿಗೆ ತಾನು ದೀಕ್ಷಾಸ್ನಾನ ಮಾಡಿಸಬೇಕೆಂದು ಆಜ್ಞೆಪಿಸಿದನು.

ಯಾಕೆ? ಯೇಸು ಸೃಷ್ಟಿಕರ್ತನಾದ, ರಕ್ಷಕನಾದ, ಕರ್ತನ ಮಗನಾಗಿದ್ದ ರಿಂದಲೇ. ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡುವದಕ್ಕೆ ಆತನು ನಮ್ಮ ಬಳಿಗೆ ಬಂದನು. ಆದ್ದರಿಂದ, ನಮ್ಮನ್ನು ಆತನು ರಕ್ಷಿಸಬೇಕಂದರೆ, ಆತನು ದೀಕ್ಷಾ ಸ್ನಾನ ಮಾಡಿಸಿಕೊಳ್ಳಬೇಕಾಯಿತು.

“ಹೀಗೆ”ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿ ಕೊಂಡು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದನು. ನಮ್ಮ ಬದಲು ಆತನು ಶಿಲುಬೆಯ ಮೇಲೆ ತೀರ್ಪನ್ನು ತಕ್ಕೊಂಡನು. ಯೇಸುವಿನ ದೀಕ್ಷಾಸ್ನಾನವು ನಮ್ಮ ರಕ್ಷಣೆಗೆ ಸಾಕ್ಷಿಯಾಗಿದೆ. ಹಳೆಯ ಒಡಂಬಡಿಕೆಯಲ್ಲಿ ಎಲ್ಲಾ ಪಾಪಗಳು ಆ ಬಲಿ ಕಾಣಿಕೆಯಾದ ಕುರಿಮರಿಯ ಮೇಲೆ ಹೋಗುವುದಕ್ಕೆ ಕರ್ತನು ಆಜ್ಞಾಪಿಸದ ಹಾಗಿಯೇ ಕರ್ತನ ಕುಮಾರನು ಕುರಿಮರಿಯಾಗಿ ನಮ್ಮ ಎಲ್ಲಾ ಪಾಪಗಳನ್ನು ಆತನ ಮೇಲೆ ತೆಗೆದುಕೊಂಡನು. 

ಆದದರಿಂದ ಈ ಎರಡೂ ಅಂದರೆ, ಹಳೆಯ ಒಡಂಬಡಿಕೆಯಲ್ಲಿ ಕೈಗಳನ್ನು ಮೇಲಿಡುವದು ಮತ್ತು ಹೊಸ ಒಡಂಬಡಿಕೆಯಲ್ಲಿ ಯೇಸುವಿನ ದೀಕ್ಷಾಸ್ನಾನ ಪಾಪ ಗಳನ್ನು ಕೊಡುವುದಾಗಿದೆ ಮತ್ತು ನೀರು ಹಾಗೂ ಆತ್ಮದ ಸುವಾರ್ತೆಯನ್ನು ನಂಬಿ ರುವವರಿಗೆ ನಿತ್ಯಜೀವನ ಹಾಗೂ ರಕ್ಷಣೆಯು ಕೊಡಲ್ಪಡುತ್ತದೆ. 



ಯೇಸುವಿನ ದೀಕ್ಷಾಸ್ನಾನವು ನಮ್ಮ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿತು


  • ನಾವು ಯೇಸುವಿನ ಮೇಲೆ ಹೇಗೆ ಹಾಕುವದು?
  • ಕ್ರೈಸ್ತನಲ್ಲಿ ಸ್ನಾನ ಮಾಡಿಸಿಕೊಳ್ಳುವದರಿಂದಲೇ

ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದಾಗ, ಸ್ನಾನಿಕಯೊಹಾನನು ಆತನನ್ನು ತಡೆಯುತ್ತಾ ಇದ್ದು, ಹೀಗೆ ಅಂದನು, “ನಾನು ನಿನ್ನಿಂದ ಸ್ನಾನಮಾಡಿಸಿ ಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು?”

ಆದರೆ ಯೇಸು ಆತನಿಗೆ ಹೆಳಿದನು, “ಸಧ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ.” ಸಧ್ಯಕ್ಕೆ ಒಪ್ಪಿಕೋ. ಒಪ್ಪಿಕೋ. ಆತನು ಯೋಹಾನನಿಗೆ ಹೇಳಿದನು, “ನೀನು ಎಲ್ಲಾ ಜನರ ಪಾಪಗಳನ್ನು ನನ್ನ ಮೇಲೆ ಹಾಕ ಬೇಕು ಇದರಿಂದ ಪಾಪನಿವಾರಣೆಯ ನೀರಿನ ಸುವಾರ್ತೆಯನ್ನು ನಂಬಿರುವ ಎಲ್ಲಾರನ್ನು ನನ್ನ ಕಡೆಗೆ ತರುವದಕ್ಕೆ ನನಗೆ ಸಾಧ್ಯ. ನಂತರ ಅವರ ಎಲ್ಲಾ ಪಾಪಗಳ ತೀರ್ಪನ್ನು ನಾನು ತೆಗೆದುಕೊಳ್ಳುವದರಿಂದ ನನ್ನ ದೀಕ್ಷಾಸ್ನಾನ ನಂಬಿರುವ ಎಲ್ಲಾ ರನ್ನು ಅವರ ಪಾಪಗಳಿಂದ ಅವರನ್ನು ಕಾಪಾಡುವನು. ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪಗಳನ್ನು ನನ್ನ ಮೇಲೆ ಹಾಕಿರಿ ಹಾಕುವದರಿಂದ ನಂತರ ಬಂದ ಎಲ್ಲಾರನ್ನು ಅವರ ಪಾಪಗಳಿಂದ ಒಂದೇ ಸರಿ ಕಾಪಾಡುವೆನು. ಆದದರಿಂದ ಸಧ್ಯಕ್ಕೆ ಒಪ್ಪಿಕೋ.” 

ಯೇಸು ಸ್ನಾನಿಕನಾದ ಯೊಹಾನನಿಂದ ದೀಕ್ಷಾಸಾನ ಮಾಡಿಸಿಕೊಂಡನು ಮತ್ತು ಯೇಸುವಿನ ದೀಕ್ಷಾಸ್ನಾನ ಕರ್ತನ ಪಾಪನಿವಾರಣೆಯ ಸರಿಯಾದ ಧರ್ಮ ಶಾಸ್ತ್ರದ ಪ್ರಕಾರವಾಗಿದೆ. ಕಾರಣ ಆತನು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಎಲ್ಲಾ ಪಾಪಗಳು ಆತನ ಮೇಲೆ ಹೋಗಿದ್ದರಿಂದ, ನಾವು ಯೇಸುವಿನಲ್ಲಿ ನಂಬುವಾಗ ಹಾಗೂ ದೀಕ್ಷಾಸ್ನಾನ ಮಾಡಿಸಿಕೊಂಡಾಗ ನಮಗೆ ಒಂದೇ ಸಾರಿ ರಕ್ಷನೆಯಾಗುವುದಕ್ಕೆ ಸಾಧ್ಯ. ಕೈಗಳನ್ನು ಮೇಲಿಡುವದರಿಂದ ಆತನ ಮೇಲೆ ನಮ್ಮ ಎಲ್ಲಾ ಪಾಪಗಳನ್ನು ತೆಗೆದುಕೊಂಡಿದ್ದರಿಂದ, ನಮ್ಮ ಬದಲು ಆತನು ಶಿಲುಬೆಯ ಮೇಲೆ ಮರಣಹೊಂದಿ ದ್ದರಿಂದ ಈಗ ಆತನು ಕರ್ತನ ಬಲಗೈಯಲ್ಲಿ ಕೂತಿದ್ದಾನೆ, ನೀರು ಹಾಗೂ ಆತ್ಮದ ಪಾಪನಿವಾರಣೆಯನ್ನು ನಾವು ನಂಬುವದರಿಂದ ನಾವು ರಕ್ಷಣೆಯನ್ನು ಪಡೆಯು ತ್ತೇವೆ. 

ಲೋಕದ ಪಾಪಗಳಿಂದ ನಮ್ಮನ್ನು ರಕ್ಷಿಸಿದ ರಕ್ಷಕನು, ಯೇಸು. ನಮ್ಮ ಎಲ್ಲಾ ಪಾಪಗಳನ್ನು ಯೇಸು ನಿವಾರಣೆಮಾಡಿ ಶಿಲುಬೆಯ ಮೇಲೆ ನಮ್ಮ ಎಲ್ಲಾ ಪಾಪಗಳ ಸಂಬಳವನ್ನು ಯೇಸು ಕಟ್ಟಿದನು. ಯೇಸುವಿನ ದೀಕ್ಷಾಸ್ನಾನವು ಪಾಪ ನಿವಾರಣೆಯ ಸುವಾರ್ತೆಯ ಆರಂಭವಾಗಿದೆ.

ಪದೇಪದೇ ಸತ್ಯವೇದದಲ್ಲಿ ಪಾಪನಿವಾರಣೆಯ ದೀಕ್ಷಾಸ್ನಾನವನ್ನು ಕುರಿತು ಬರೆದಿದೆ ಹಾಗೂ ಅಪೊಸ್ತಲನಾದ ಪೌಲನೂ ಸಹ ಗಲಾತ್ಯದವರಿಗೆ ಆತನು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದರಿಂದ ಹಾಗೂ ಕ್ರೈಸ್ತನನ್ನು ಧರಿಸಿದ್ದರಿಂದ ಆತನೂ ಸಹ ಕ್ರೈಸ್ತನೋಂದಿಗೆ ಶಿಲುಬೆಗೆ ಹಾಕಲ್ಪಟ್ಟಿದ್ದಾನೇಂದು ಆತನು ಹೇಳುತ್ತಾನೆ, ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ಮರಣದ ಮೂಲಕ ಪಾಪನಿವಾರಣೆಯ ವಿಶ್ವಾಸವನ್ನು ಕುರಿತು ಪೌಲನು ಮಾತನ್ನಾಡುತ್ತಾನೆ.



“ಸಧ್ಯಕ್ಕೆ ಒಪ್ಪಿಕೋ”


  • ಸ್ನಾನಿಕನಾದ ಯೋಹಾನನ ಪಾತ್ರ 
  • ಯಾವುದಾಗಿತ್ತು?
  • ಲೋಕದ ಎಲ್ಲಾ ಪಾಪಗಳನ್ನು ಯೇಸುವಿನ ಮೇಲೆ
  • ಹಾಕುವದು ಆತನ ಪಾತ್ರವಾಗಿತ್ತು.


ಹೀಗೆ ನಾವು ಎಲ್ಲಾ ಧರ್ಮವನ್ನು ನೆರೆವೇರಿಸತಕ್ಕದ್ದಾಗಿದೆ,” ಎಂದು ಯೇಸು ಹೇಳಿದನು. ಎಲ್ಲಾ ಧರ್ಮವನ್ನು ಅಂದರೆ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನದ ಮೂಲಕ ಅಳಿಸಿಬಿಡುವದು ಹಾಗೂ ಎಲ್ಲಾ ಮನುಷ್ಯರನ್ನು ಪಾಪವಿಲ್ಲದವರಾಗಿ ಮಾಡುವದೇ ಇದರ ಅರ್ಥ. “ಆಗ ಆತನು ಒಪ್ಪಿಕೊಂಡನು”. ಯೊರ್ದನ್ ಹೊಳೆಯಲ್ಲಿ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡನು.

ಮಹಾ ಯಾಜಕನು ಕುರಿಯ ಮೇಲೆ ಕೈಗಳನ್ನು ಇಟ್ಟಂತೆ, ಸ್ನಾನಿಕನಾದ ಯೊಹಾನನು ಯೇಸುವಿನ ಮೇಲೆ ಕೈಗಳನ್ನು ಇಟ್ಟು ಲೋಕದ ಎಲ್ಲಾ ಪಾಪಗಳನ್ನು ಆತನ ಮೇಲೆಕ್ಕೆ ಹಾಕಿದನು. ಸ್ನಾನಿಕನಾದ ಯೋಹಾನನು ಮಹಾ ಯಾಜಕನು ಆತನು ಮನುಷ್ಯ ಮಾದರಿಯಾಗಿ ಲೋಕದ ಎಲ್ಲಾ ಪಾಪಗಳನ್ನು ಯೇಸುವಿನ ಮೇಲೆ ಹಾಕುವ ಕೆಲಸ ಆತನಿಗಾಯಿತು. “ಕರ್ತನೇ, ನಾನು ಲೋಕದ ಎಲ್ಲಾ ಪಾಪ ಗಳನ್ನು ಕುರಿಮರಿಯಾದ ಯೇಸುವಿನ ಮೇಲೆ ಹಾಕಿದ್ದೇನೆ.” ಹೀಗೆ ಲೋಕದ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋಯಿತು.

ಸ್ನಾನಿಕನಾದ ಯೋಹಾನನು ಯೇಸುವಿನ ಮೇಲೆ ಕೈಗಳನ್ನು ಇಟ್ಟು, ನೀರಿ ನಲ್ಲಿ ಮುಳುಗಿಸಿ, ಯೇಸು ಮೇಲಕ್ಕೆ ಬರುವಾಗ ಆತನ ಕೈಗಳನ್ನು ಪಕಕ್ಕೆ ತೆಗೆದು ಕೊಂಡನು. ನೀತಿಯ ರಕ್ಷಣೆಯಾಗಿ ಯೇಸುವಿಗೆ ದೀಕ್ಷಾಸ್ನಾನ ಮಾಡಲಾಯಿತು. ಹೀಗೆ ಆತನ ದೀಕ್ಷಾಸಾನವನ್ನು ನಂಬಿರುವ ಎಲ್ಲಾರನ್ನು ಯೇಸು ರಕ್ಷಿಸಿದನು. 



ಆಕಾಶವು ತರೆಯಿತು ಮತ್ತು ಪರಲೋಕದಿಂದ ಆಕಾಶವಾಣಿ ಆಯಿತು


  • ಪರಲೋಕರಾಜ್ಯವು ಯಾವ
  •  ಕಾಲದಿಂದ ತರೆದಿದೆ?
  • ಸ್ನಾನಿಕನಾದ ಯೋಹಾನನ ಕಾಲದಿಂದ
  • (ಮತ್ತಾಯ 11:12)


“ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತರೆಯಿತು; ಮತ್ತು ದೇವರ ಆತ್ಮ ಪರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನು ಕಂಡನು. ಆಗ-ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು” (ಮತ್ತಾಯ  3:16-17).

ಲೋಕದ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನದಿಂದ ನಿವಾರಣೆ ಮಾಡಿದಾಗ, ಆತನಿಗೆ ಆಕಾಶವು ತರೆಯಿತು. ಹೀಗೆ ಅನೆಕ ಸಾವಿರ ವರುಷಗಳ ಕಾಲದಿಂದ ಮಾಡಿದ ಧರ್ಮವನ್ನು ಯೊರ್ದನ್ ಹೊಳೆಯಲ್ಲಿ ಯೇಸುವಿನ ದೀಕ್ಷಾ ಸ್ನಾನದ ಮೂಲಕ ನೆರವೆರಿತು.

ಹೀಗೆ ಯೇಸು, ಕರ್ತನ ಕುರಿಮರಿಯಾಗಿ, ಲೋಕದ ಎಲ್ಲಾ ಜನರ ಪಾಪ ಗಳಿಂದ ಅವರನ್ನು ಯೇಸು ರಕ್ಷಿಸಿದನು. ಲೋಕದ ಎಲ್ಲಾ ಪಾಪಗಳು ಹೋಯಿತು ಮತ್ತು ಆತನು ಕರ್ತನ ಚಿತ್ತವನ್ನು ನೆರವೇರಿಸಿದನು.

ಯೋಹಾನ 1:9 ರಲ್ಲಿ ಹೀಗೆ ಸಾಕ್ಷಿ ಹೇಳುತ್ತದೆ, “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪಗಳನ್ನು ನಿವಾರಣೆ ಮಾಡುವವನು.” ಕರ್ತನ ಕುರಿಮರಿಯಾದ, ಯೇಸುವಿನ ಮೇಲೆ ಎಲ್ಲಾ ಪಾಪಗಳು ಹೋಗಿದ್ದರಿಂದ, ಮೂರು ವರುಷಗಳ ಕಾಲ ಆತನ ಭುಜಗಳ ಮೇಲೆ ಆ ಭಾರವನ್ನು ಎತ್ತಿಕೊಂಡಿದ್ದ ನಂತರ ಆತನು ಗೊಲ್ಗೊಥಾ ಕಡೆಗೆ ಹೋದನು. ಆತನ ದೀಕ್ಷಾಸ್ನಾನದ ಮೂಲಕ ಆತನು ಎಲ್ಲಾ ಪಾಪಗಳನ್ನು ತೆಗೆದುಕೊಂಡ ನಂತರ, ಆತನು ಎಲ್ಲಾ ಕಡೆಗೆ ಹೋದನು, ಹೋಗಿ ನಂಬಿಯಿಂದ ಆತನಲ್ಲಿ ನಂಬುವ ಎಲ್ಲರ ಪಾಪಗಳು ಕ್ಷಮಿಸಲ್ಪಟ್ಟಿದೆ ಎಂದು ಹೇಳಿದನು. 

ಯೋಹಾನ 8:11 ರಲ್ಲಿ, ವ್ಯಭಿಚಾರ ಮಾಡುತ್ತಿರುವಾಗಲೇ ಕೈಗೆ ಸಿಕ್ಕಿದ ಸ್ತ್ರಿಗೆ ಹೀಗೆ ಹೇಳಿದನು, “ನಾನೂ ನಿನಗೆ ಶಿಕ್ಷೆವಿಧಿಸುವುದಿಲ್ಲ.” ಎಲ್ಲಾ ಪಾಪಗಳನ್ನು ಆತನ ಮೇಲೆ ತೆಗೆದುಕೊಂಡ ಯೇಸುವೇ ಆಕೆಗೆ ಶಿಕ್ಷೆಯನ್ನು ವಿಧಿಸಬೇಕಾಗಿದ್ದರಿಂದ, ಆತನು ಆಕೆಗೆ ಶಿಕ್ಷೆ ವಿಧಿಸಲಿಲ್ಲ. ಹೀಗೆ ಆತನು ಪಾಪಿಗಳಿಗೆ ರಕ್ಷಕನು ಎಂದು ಆತನು ಎಲ್ಲಾ ಜನರಿಗೆ ಹೇಳಿದನು. 

ಕರ್ತನ ಕುಮಾರನಾದ, ಆತನ  ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದ ರಿಂದ, ಲೋಕದಲ್ಲಿರುವ ಭಕ್ತರೇಲ್ಲಾರು ಪವಿತ್ರವಾಗುವದಕ್ಕೆ ಸಾಧ್ಯವಾಗಿದೆ. ಆತನು ದೀಕ್ಷಾಸ್ನಾನ ಮಾಡಿಸಿ ಕೊಂಡಾಗ ಆಕಾಶವು ತರೆಯಿತು. ಪರಲೋಕರಾಜ್ಯವು ತರೆ ಯಿತು ಹಾಗೂ ಯೆಸುವಿನ ದೀಕ್ಷಾಸ್ನಾನವನ್ನು ನಂಬುವ ಎಲ್ಲಾರು ಅಡಚಣೆ ಯಿಲ್ಲದೆ ಪರಲೋಕರಾಜ್ಯಕ್ಕೆ ಪ್ರವೇಶಿಸುವುದಕ್ಕೆ ಸಾಧ್ಯವಾಗುತ್ತದೆ. 



ಯೇಸು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ ನಂತರ ಶಿಲುಬೆಯ ಮೆಲೆ ಮರಣಹೊಂದಿದನು


  • ಯೇಸು ಸೈತಾನನ ತಲೆಯನ್ನು ಹೇಗೆ ಜಜ್ಜಿದನು?
  • ನಮ್ಮ ಎಲ್ಲಾ ಪಾಪಗಳಿಗಾಗಿ ಶಿಕ್ಷೆಕೆಯನ್ನು ತೆಗೆದುಕೊಂಡ
  •  ನಂತರ ಮರಣದಿಂದ ಪುನರುತ್ಥಾನವಾಗಿ 
  • ಎದ್ದಿದ್ದರಿಂದಲೇ.


ಆತನ ತಲೆಯ ಮೇಲೆ ಎಲ್ಲಾ ಪಾಪಗಳು ಹೋಗಿದ್ದರಿಂದ, ಶಿಲುಬೆಯ ಮೇಲೆ ಯೇಸು ಶಿಕ್ಷಯನ್ನು ತೆಗೆದುಕೊಳ್ಳಬೇಕಾಯಿತು. ಶಿಲುಬೆಯ ಮೇಲೆ ಕಷ್ಟ ಪಡುವ ನೋವನ್ನು ಕುರಿತು ಆತನು ಯೋಚಿಸುವಾಗ ಆತನು ದುಃಖಪಟ್ಟು ಮನ ಗುಂದಿದವನಾದನು. ಆತನ ಬೆವರು ಮಹಾ ರಕ್ತದ ಹನಿಯಾಗುವವರಿಗೆ ಆತನು ಪ್ರಾರ್ಥಿಸಿದನು. ಆತನು ಆತನ ಶಿಷ್ಯರ ಜೊತೆ ಗೆತ್ಸೇಮನೆ ತೋಟಕ್ಕೆ ಹೋಗಿದ್ದಾಗ, ಆತನು ಹೀಗೆ ದೇವರಿಗೆ ಪ್ರಾರ್ಥಿಸಿದನು, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆ ಯು ನನ್ನನ್ನು ಬಿಟ್ಟುಹೋಗಲಿ” (ಮತ್ತಾಯ 26:39). “ನಾನು ದೀಕ್ಷಾಸ್ನಾನ ಮಾಡಿಸಿ ಕೊಂಡು ಲೋಕದ ಎಲ್ಲಾ ಪಾಪಗಳನ್ನು ನನ್ನ ಮೇಲೆ ತೆಗೆದುಕೊಂಡೆ, ಆದರೆ ಅವು ಗಳಗೋಸ್ಕರ ನಾನು ಸಾಯದಂತೆ ಮಾಡು. ” ಆದರೆ ಕರ್ತನು ಉತ್ತರಿಸಲಿಲ್ಲ. 

ಹಳೆಯ ಒಡಂಬಡಿಕೆಯಲ್ಲಿ ದೋಷಪರಿಹಾರಕವಾದ ದಿನ, ದೋಷ ಪರಿಹಾರಕ ಯಜ್ಞವನ್ನು ವಿಧಿಸಬೇಕು ಅದರ ರಕ್ತವನ್ನು ಕೃಪಾಸನದ ಪೂರ್ವ ಭಾಗದ ಮೇಲೆ ಬೆರಳಿನಿಂದ ಚಿಮುಕಿಸಬೇಕು. ಅದೇ ರೀತಿಯಲ್ಲಿ, ಯೇಸು ಶಿಲುಬೆಯ ಮೇಲೆ ಮರಣ ಹೊಂದಬೇಕು ಮತ್ತು ಇದನ್ನು ಮಾಡುವದಕ್ಕೆ ಆತನಿಗೆ ಸಾಧ್ಯ ಎಂದು ಕರ್ತನು ತೀರ್ಮಾನಿಸಿದನು. 

ಕರ್ತನ ತೀರ್ಪು ಗುಡಾರವಾಗಿದೆ ಹಾಗೂ ದೋಷ ಪರಿಹಾರಕಯಜ್ಞದ ರಕ್ತವು ಜೀವವಾಗಿದೆ. ರಕ್ತವನ್ನು ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸ ಬೇಕಂದರೆ ಎಲ್ಲಾ ಶಿಕ್ಷೆಯು (ಯಾಜಕಾಂಡ 16:1-22)ನ ಮೇಲೆ ಹೋಯಿತು ಎಂದು ಅರ್ಥ.

ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ ಎಂದು ಯೇಸು ಪ್ರಾರ್ಥಿಸಿದರು. ಆದರೆ ಆತನ ತಂದೆ ಇದಕ್ಕೆ ಅನುಮತಿಸಲಿಲ್ಲ ಕೊನೆಗೆ ಯೇಸು ಹೀಗೆ ಹೇಳಿದನು, “ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” (ಮತ್ತಾಯ 26:39). ಅದು ಸರಿಯಾಗುವದನ್ನು ಆತನು ನೋಡಿ ಅದನ್ನು ಮಾಡುವದಕ್ಕೆ ಕರ್ತನಿಗೆ ಪ್ರಾರ್ಥಿಸಿದನು. ಆತನು ಪ್ರಾರ್ಥನೆಯನ್ನು ಮುಗಿಸಿ ಆತನ ತಂದೆಯ ಚಿತ್ತದ ದಾರಿಯಲ್ಲಿ ಹೋದನು. 

ಯೇಸು ಆತನ ಸ್ವಂತ ಚಿತ್ತವನ್ನು ಬಿಟ್ಟು ಆತನ ತಂದೆಯ ಚಿತ್ತವನ್ನು ನೆರವೇರಿಸಿದನು. ಯಾಕೆ? ಕಾರಣ ಲೋಕದ ಎಲ್ಲಾ ಪಾಪಗಳನ್ನು ಆತನ ಮೇಲೆ ತೆಗೆದುಕೊಂಡಿದ ನಂತರ ಆತನು ಶಿಕ್ಷ ತೆಗೆದುಕೋಳ್ಳದಿದ್ದರೆ, ರಕ್ಷಣೆಯು ಪೂರ್ತಿ ಯಾಗುತ್ತಿರಲಿಲ್ಲ. ಆತನು ಆತನ ದೀಕ್ಷಾಸ್ನಾನದ ಮೂಲಕ ಮನುಷ್ಯರ ಎಲ್ಲಾ ಪಾಪ ಗಳನ್ನು ನಿವಾರಣೆ ಮಾಡಿದ್ದರಿಂದಲೇ ಆತನು ಶಿಲುಬೆಯ ಮೇಲೆ ಮರಣಹೊಂದಿ ದನು. “ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚ್ಜಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ” (ರೋಮಾ 6:23).

ಯೇಸುವಿನ ದೀಕ್ಷಾಸ್ನಾನ, ಕೈಗಳನ್ನು ಮೇಲಿಡುವದರ ಮೂಲಕ ಮನುಷ್ಯ ರನ್ನು ರಕ್ಷಿಸುವದಕ್ಕೆ ರಕ್ಷಕನನ್ನು ಕಳುಹಿಸುತ್ತೇನೆ ಎಂದು ಹೇಳುವ ಕರ್ತನ ಒಡಂ ಬಡಿಕೆ ನೆರವೇರಿತು. ಕರ್ತನ ಚಿತ್ತವನ್ನು ನೆರವೇರಿಸಿದನು ಹಾಗೂ ನಮಗಾಗಿ ಆತನು ಶಿಕ್ಷೆಯನ್ನು ಒಪ್ಪಿಕೊಂಡನು.

ಇದು ಆದಿಕಾಂಡ 3:15 ರಲ್ಲಿರುವ ಭವಿಷ್ಯಜ್ಞಾನವನ್ನೂ ಸಹ ನೆರವೇರಿತು, “ನಿನಗೂ ಈ ಸ್ತ್ರಿಗೂ, ನಿನ್ನ ಸಂತಾನಕ್ಕೂ ಈ ಸ್ತಿಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” ಹವ್ವಳ ಸಂತಾನವಾದ ಮೆಸ್ಸಿಯನನ್ನು, ಮತ್ತು ಮನುಷ್ಯನನ್ನು ನರಕಕ್ಕೆ ಹೋಗುವಹಾಗೆ ಮಾಡಿದ ಸೈತಾನನ ಶಕ್ತಿಯನ್ನು ಗೆಲ್ಲುವ ಮೆಸ್ಸಿಯನನ್ನು ಕಳುಹಿಸುವುದಕ್ಕೆ ಕರ್ತನು ವಾಗ್ದಾನ ಮಾಡಿದನು.

ನಾವು ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ಶಿಲುಬೆಯ ಮರಣವನ್ನು ತಿಳಿದಿಕೊಂಡು ಮತ್ತು ಇದರಲ್ಲಿ ವಿಶ್ವಾಸವಿಟ್ಟಲ್ಲಿ, ನಮ್ಮ ಎಲ್ಲಾ ಪಾಪಗಳು ಅಳಿಸಿಬಿಡುತ್ತದೆ ಹಾಗೂ ಶಿಕ್ಷೆಯಿಂದ ನಾವು ರಕ್ಷನೆಯಾಗಿದ್ದೇವೆ.

ಯೇಸುವಿನ ದೀಕ್ಷಾಸ್ನಾನವನ್ನು ಹಾಗೂ ಆತನ ಶಿಲುಬೆಯ ಮೇಲೆ ರಕ್ತ ವನ್ನು ನಾವು ನಂಬುವಾಗ ಗಟ್ಟಿಮುಟ್ಟಾದ ನಂಬಿಕೆ ನಮ್ಮ ಮನಸ್ಸಿನಲ್ಲಿ ನಮಗಿರ ಬೇಕು. ನಿಮ್ಮ ಮನಸ್ಸಿನಲ್ಲಿ ಇದನ್ನು ನಂಬಿರಿ, ನಂತರ ನೀವು ರಕ್ಷಣೆಯನ್ನು ಪಡೆ ಯುತ್ತೀರಿ.



ಯೇಸುವಿನ ದೀಕ್ಷಾಸ್ನಾನ ಪರಲೋಕದ ಸುವಾರ್ತೆಯ ಆರಂಭ ವಾಗುತ್ತದೆ


  • ದೇವರು ಪರಲೋಕಕ್ಕೆ ಹೋಗುವದಕ್ಕು ಮುನ್ನ
  • ಆತನ ಕೊನೆಯ ಒಡಂಬಡಿಕೆ ಏನು?
  • ತಂದೆ ಮತ್ತು ಮಗನ ಮತ್ತು ಪವಿತಾತ್ಮ ಹೆಸರಿನಲ್ಲಿ ದೀಕ್ಷಾಸ್ನಾನ
  • ಮಾಡುವದರಿಂದ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ 
  • ಮಾಡಿರಿ ಎಂದು ಆತನು ಆತನ ಶಿಷ್ಯರಿಗೆ 
  • ಆಜ್ಞಾಪಿಸಿದನು.

ಯೇಸುವಿನ ದೀಕ್ಷಾಸ್ನಾನ ಸುವಾರ್ತೆಯ ಆರಂಭವಾಗಿದೆ, ಮತ್ತು ಆತನು ತನ್ನ ದೀಕ್ಷಾಸ್ನಾನ ಮತ್ತು ರಕ್ತದಿಂದ ಎಲ್ಲಾ ಪಾಪಿಗಳನ್ನು ರಕ್ಷಿಸಿದನು. ಮತ್ತಾಯ 28:19 ರಲ್ಲಿ ಹೀಗೆ ಬರೆದಿದೆ, “ಆದದರಿಂದ ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿ ನಲ್ಲಿ ದೀಕ್ಷಾಸ್ನಾನಮಾಡಿಸಿ” ತಂದೆ, ಮಗ, ಪವಿತ್ರಾತ್ಮನು ಮನುಷ್ಯರೇಲ್ಲಾರನ್ನು ಅವರ ಪಾಪಗಳಿಂದ ರಕ್ಷಿಸಿದ ಮತ್ತು ಆತನ ದೀಕ್ಷಾಸ್ನಾನ ಮತ್ತು ರಕ್ತದಿಂದ ಅವರ ಎಲ್ಲಾ ಪಾಪಗಳು ಆಳಿಸಿಬಿಟ್ಟಿದೆ ಎಂದು ಸಾಕ್ಷಿಹೇಳಬೇಕು ಎಂದು ಯೆಸು ಆತನ ಶಿಷ್ಯರಿಗೆ ಹೇಳಿದನು.

ಎಲ್ಲಾ ದೇಶದ ಜನರಿಗೆ ಯೇಸುವಿನ ದೀಕ್ಷಾಸ್ನಾನ, ಪಾಪನಿವಾರಣೆಯ ದೀಕ್ಷಾಸ್ನಾನ, ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ ದೀಕ್ಷಾಸ್ನಾನದ ಕುರಿತು ಅವರಿಗೆ ಕಳುಹಿಸುಕೊಡುವ ಶಕ್ತಿಯನ್ನು ಅವರನ್ನು ಶಿಷ್ಯರನ್ನಾಗಿ ಮಾಡುವ ಶಕ್ತಿಯನ್ನು ಯೇಸು ಅವರಿಗೆ ಕೊಟ್ಟನು.

2000 ವರುಷಗಳ ಕಾಲದ ಹಿಂದೆ, ಯೇಸು ಶರೀರ ರೂಪದಲ್ಲಿ ಈ ಲೋಕಕ್ಕೆ ಬಂದನು ಮತ್ತು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಟ್ಟನು. ಯೆಸುವಿನ ದೀಕ್ಷಾಸ್ನಾನದಿಂದ, ಲೋಕದ ಎಲ್ಲಾ ಪಾಪಗಳನ್ನು, ನಮ್ಮ ಎಲ್ಲಾ ಪಾಪಗಳೂ ಸಹ, ಆತನ ಮೇಲೆ ಹೋಯಿತು. 

ಎಷ್ಟು ಪಾಪ ಅತನ ಮೇಲೆ ಹೋಯಿತು? ನಾಲೆಯ ಪಾಪ? ನಾಲೆಯ ಪಾಪವೂ ಸಹ ಆತನ ಮೇಲೆ ಹೋಯಿತು ಎಂದು ಆತನು ನಮಗೆ ಹೇಳುತ್ತಾನೆ. ನಮ್ಮ ಮಕ್ಕಳ ಪಾಪಗಳು, ನಮ್ಮ ವಂಶಗಳ ಪಾಪಗಳು, ಹೋದ, ಈಗಿರುವ ಮತ್ತು ನಾಲೆಯ, ಆದಾಮನ ಪಾಪಗಳೂ ಸಹ ಯೇಸುವಿನ ಮೇಲೆ ಹೋಗಿದೆ.

ಅಲ್ಲಿ ಪಾಪಯಿಲ್ಲದೆ ಇರುವದಕ್ಕೆ ಹೇಗೆ ಸಾಧ್ಯ? ನಮ್ಮಲ್ಲಿ ಪಾಪಯಿಲ್ಲದೆ ಇರುವದಕ್ಕೆ ನಮಗೆ ಹೇಗೆ ಸಾಧ್ಯ ಯೇಸು ಆತನ ದೀಕ್ಷಾಸ್ನಾನದಿಂದ ಲೋಕದ ಎಲ್ಲಾ ಪಾಪಗಳು ಹಾಗೂ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದರಿಂದ ಎಲ್ಲಾ ಭಕ್ತರು ಅವರ ಪಾಪದಿಂದ ಬಿಡುಗಡೆಯಾಗಿ ಪರಲೋಕರಾಜ್ಯಕ್ಕೆ ಪ್ರವೇಶದ ಹಕ್ಕು ಪಡೆದುಕೊಂಡಿದ್ದಾರೆ.

“ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿ ಕೊಂಡು ತನ್ನ ಕೃತ್ಯಗಳನ್ನೂ ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರು ತ್ತಾನೆ” (ಯೋಹಾನ 3:21).

ಯೇಸು ಆತನ ದೀಕ್ಷಾಸ್ನಾನ, ಆತನ ಶಿಲುಬೆಯ ರಕ್ತ ಮತ್ತು ಆತನ ಪುನರು ತ್ಥಾನದಿಂದ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾನೆ. ಆದದರಿಂದ ಆತನ ದೀಕ್ಷಾಸ್ನಾನವನ್ನು, ಶಿಲುಬೆಯಲ್ಲಿ ಆತನ ರಕ್ತವನ್ನು ನಂಬುವುದು ನಾವು ನಮ್ಮ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆದಿದ್ದೇವೆ ಎಂಬುದರ ಅರ್ಥ.

ಕ್ರೈಸ್ತನ ದೀಕ್ಷಾಸ್ನಾನವನ್ನು ಹಾಗೂ ಆತನ ರಕ್ತವನ್ನು ನಾವು ನಂಬುವಾಗ, ನಾವು ರಕ್ಷಣೆಯನ್ನು ಪಡೆದಿದ್ದೇವೆ. ನಾವು ಯೇಸುವಿನಲ್ಲಿ ಸರಿಯಾಗಿ ನಂಬಿದರೆ, ನಾವು ನೀತಿವಂತರೋ ಅಥವಾ ಪಾಪಿಯರೋ? ನಾವು ನೀತಿವಂತರು. ನಾವು ಇನ್ನೂ ಪೂರ್ತಿ ಇಲ್ಲದಿದ್ದರೂ ಸಹ ನಾವು ಪಾಪವಿಲ್ಲದವರಾಗಿದ್ದೀವೋ? ಹೌದು, ನಾವು ಪಾಪವಿಲ್ಲದವರಾಗಿದ್ದೇವೆ. ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ಶಿಕ್ಷೆಯನ್ನು ನಂಬುವುದು ಸಂಪೂರ್ಣವಾಗಿ ಸರಿಯಾದ ವಿಶ್ವಾಸ ವಿರುವುದೇ ಇದರ ಅರ್ಥ.



ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಕೊಡುವುದಕ್ಕೂ ಹಾಗು ಮಾಡಿಸಿಕೊಳ್ಳುವದಕ್ಕೂ


  • ಪರಲೋಕ ಸುವಾರ್ತೆಯ ಆರಂಭ ಏನು?
  • ಯೇಸುವಿನ ದೀಕ್ಷಾಸ್ನಾನ

ಮನುಷ್ಯನು ಪೂರ್ತಿಯಾಗಿಲ್ಲದಿದ್ದರಿಂದ, ಯಾಜಕರು ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬಿಕೆ ಇಟ್ಟಿರುವ ಅವರಿಗೆ ಅವರು ತಮ್ಮ ನಂಬಿಕೆಯನ್ನು ಸ್ಥಿರಗೊಳಿಸುವದಕ್ಕೆ ಅವರಿಗೆ ಯಾಜಕರು ದೀಕ್ಷಾಸ್ನಾನ ಮಾಡಿಸಿ ದರು. ವಿಶ್ವಾಸದ ಸಾಕ್ಷಿಯಾಗಿ ಯೇಸುವಿನ ದೀಕ್ಷಾಸ್ನಾನದ ರೀತಿಯಲ್ಲಿಯೇ ಹೊಸ ದಾಗಿ ಹುಟ್ಟಿದವರು ಅವರು ರಕ್ಷಣೆಯನ್ನು ಪಡೆದಿದ್ದಾರೇಂದು ಖಚಿತಮಾಡಿ ಕೊಳ್ಳುವುದಕ್ಕೆ ಅವರಿಗೆ ಯಾಜಕರು ದೀಕ್ಷಾಸ್ನಾನ ಮಾಡಿಸುತ್ತಾರೆ. 

ಯಾಜಕನು ಹೊಸದಾಗಿ ಹುಟ್ಟಿದ ವ್ಯಕ್ತಿಯ ತಲೆಯ ಮೇಲೆ ಆತನ ಕೈ ಗಳನ್ನು ಇಟ್ಟು, ಈ ವ್ಯಕ್ತಿ ಆತನ ಅಂತ್ಯದ ದಿನವರೆಗೂ ಆತನನ್ನು ಪ್ರಾರ್ಥಿಸು ತ್ತಾನೇಂದು ಕರ್ತನ ಆಶಿರ್ವಾದವನ್ನು ಕೇಳುತ್ತಾ ಪ್ರಾರ್ಥಿಸುತ್ತಾನೆ. ನಂತರ ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಆತನಿಗೆ ದೀಕ್ಷಾಸ್ನಾನ ಮಾಡಿಸಿ ಕೊಡುತ್ತಾನೆ.

ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನುರುವ ನಂಬಿಕೆಯ ಆಧಾರದ ಮೇಲೆ ನಾವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ.

ದೀಕ್ಷಾಸ್ನಾನ ಮಾಡಿಸಿಕೊಳ್ಳುವದು ಅಂದರೆ ಒಬ್ಬನು ಯೇಸುವಿನಲ್ಲಿ ಸತ್ತು ಮತ್ತು ಆತನೋಡನೆ ಪುನರುತ್ಥಾನವಾಗುವ ಆತನ ದೀಕ್ಷಾಸ್ನಾನದ ಮೂಲಕ ಆತನ ಮೇಲೆ ತನ್ನ ಪಾಪಗಳನ್ನು ಹಾಕುವುದರಲ್ಲಿರುವ ನಂಬಿಕೆಯನ್ನು ಹೇಳುತ್ತದೆ. ಇದು ತಂದೆ, ಮಗ, ಪವಿತ್ರಾತ್ಮ, ಸೈತಾನ, ಮತ್ತು ಆತನ ಸಹೋದರಿ ಸಹೋದರ ಸನ್ನಧಿಯಲ್ಲಿ ಒಬ್ಬನ ನಂಬಿಕೆಯನ್ನು ಕುರಿತು ಹೇಳುತ್ತದೆ.

ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ರಕ್ತದ ನಿಜ ವಾದ ಅರ್ಥವನ್ನು ತಿಳಿದುಕೊಂಡಿರುವವರು, ಯೇಸುವನ್ನು ನಂಬಿರುವವರು, ಲೋಕದ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಪಡೆದಿದ್ದಾರೆ. ಆದದರಿಂದ ಅವರು ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಅವರು ದೀಕ್ಷಾಸ್ನಾನ ಮಾಡಿಸಿಕೊಂಡಿ ದ್ದಾರೆ.

“ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನ ಸೃಷ್ಟಿ ಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು”(2 ಕೊರಿಂಥ ದವರಿಗೆ 5:17). ನಮ್ಮ ಪೂರ್ವಸ್ಥಿತಿ ಹೋಗಿ ನಂಬಿಕೆಯ ಜನರಾಗಿ ನಾವು ಹೊಸದಾಗಿ ಹುಟ್ಟಿದ್ದೇವೆ. ಇದನ್ನು ನಮ್ಮ ಹೃದಯದಲ್ಲಿ ಖಂಚಿತ ಮಾಡಿಕೊಳ್ಳುವದಕ್ಕೆ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ. ಯೇಸುವಿನ ದೀಕ್ಷಾಸ್ನಾನ ವಿಶ್ವಾಸವಿಟ್ಟಿದ್ದ ರಿಂದ ನಾವು ಯೇಸುವಿನ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ.



ಯೇಸುವಿನ ದೀಕ್ಷಾಸ್ನಾನ ಶಿಲುಬೆಯ ಮೇಲೆ ಆತನ ರಕ್ತದಿಂದ ಹೊಸದಾಗಿ  ಹುಟ್ಟಿದ ನಂತರ ಇರುವ ಜೀವನ


  • ಹೊಸದಾಗಿ ಹುಟ್ಟಿದವರು
  • ಯಾವುದಕ್ಕಾಗಿ ಜೀವಿಸುತ್ತಾರೆ?
  • ಲೋಕದಲ್ಲಿರುವ ಎಲ್ಲಾರಿಗೆ ಸುವಾರ್ತೆಯನ್ನು 
  • ಬೋಧಿಸುತ್ತಾ,  ಕರ್ತನ ರಾಜ್ಯಕ್ಕಾಗಿ, ಆತನ 
  • ನೀತಿಕ್ಕಾಗಿ ಜೀವಿಸುತಿದ್ದಾರೆ.


ಬಿಡುಗಡೆಯಾದ ನಂತರ ಹಾಗೂ ಹೊಸದಾಗಿ ಹುಟ್ಟಿದ ನಂತರ ಕರ್ತನ ವಾಕ್ಯದಲ್ಲಿ ನಂಬಿಕೆಯಿರುವ ಜೀವನವನ್ನು ಜೀವಿಸಬೇಕು. ಪ್ರತಿನಿತ್ಯ ಪ್ರತಿದಿನದ ಪಾಪಗಳಿಗೋಸ್ಕರ ಪಶ್ಚಾತ್ತಾಪಪಡುವ ಭಾವನಾತ್ಮಕವಾದ ಜೀವನ ಇರಬಾರದು. ಬದಲಾಗಿ, ಯೇಸು ಆತನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದಾನೆ ಎಂಬುವದರಲ್ಲಿ ನಮಗೆ ಪ್ರತಿದಿನ ನಂಬಿಕೆ ಕೊಟ್ಟಿದೆ ಇದ ರಲ್ಲಿ ನಂಬಿಗಸ್ತವಾದ ಜೀವನವನ್ನು ಜೀವಿಸಬೇಕು.

ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ ನಮ್ಮ ಎಲ್ಲಾ ಪಾಪಗಳು ಆತನ ಮೇಲೆ ಹೋದವು. ನಂತರ ಆತನು ಈ ಭರದೋಂದಿಗೆ ಮೂರು ವರುಷಗಳ ಕಾಲ ಅಂದರೆ ನಮ್ಮ ಎಲ್ಲಾ ಪಾಪಗಳಿಗೆ ಶಿಲುಬೆಯಲ್ಲಿ ಶಿಕ್ಷೆಯನ್ನು ಒಪ್ಪಿಕೊಳ್ಳುವವರೆಗೆ ಜೀವಿಸಿದ್ದರು.

ಆದದರಿಂದ ಭಕ್ತರಾದ ನಮಗೆ ಕೇವಲ ಭಾವನಾತ್ಮಕವಾದ ಜೀವನವಿಲ್ಲದೆ ಬರೆದಿರುವ ವಾಕ್ಯದಲ್ಲಿ ನಂಬಿಕೆಯಿರಬೇಕು. ಇಲ್ಲದಿದ್ದರೆ, ನಾವು ಬಿಡುಗಡೆಯಾದ ನಂತರ ಹಾಗೂ ಹೊಸದಾಗಿ ಹುಟ್ಟಿದ ನಂತರ ನಾವು ನಮ್ಮ ನಿತ್ಯ ಪಾಪಗಳನ್ನು ಮಾತ್ರ  ಕುರಿತು ನಾವು ಚಿಂತಿಸುತ್ತಾ ಇರುತ್ತೇವೆ.

ಪಾಪದ ಮಾನಸಿಕವಾದ ನೋಟವನ್ನು ಬಿಟ್ಟು ನೀರು ಹಾಗೂ ರಕ್ತದ ಸುವಾರ್ತೆಯಲ್ಲಿ ಮಾತ್ರವೇ ವಿಶ್ವಾಸವಿಡಬೇಕು. ಬಿಡುಗಡೆಯಾದ ವ್ಯಕ್ತಿ ಈ ತರದ ಜಿವನವನ್ನು ಜೀವಿಸಬೇಕು.

ಸ್ನಾನಿಕನಾದ ಯೊಹಾನನು ಯೇಸುವನ್ನು ಕುರಿತು ಏನು ಹೇಳಿದನು? ಆತನು ಈಗೆ ಹೇಳಿದನು, “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು”(ಯೋಹಾನ 1:29). ಈವತ್ತಿನ, ನಾಳಿನ, ನಿನ್ನೆಯ ದಿನದ ಪಾಪಗಳನ್ನು, ಹುಟ್ಟಿನಿಂದ ಬಂದ ಪಾಪವನ್ನೂ ಯೇಸು ನಿವಾರಣೆ ಮಾಡಿದ್ದಾರೇಂದು ಆತನು ಸಾಕ್ಷಿಹೇಳಿದನು.

ಆ ಪಾಪಗಳನೇಲ್ಲಾ ಆತನು ನಿವಾರಣೆ ಮಾಡಲಿಲ್ಲವೋ? ಆ ಪಾಪಗಳು ಎಲ್ಲಾ ಯೇಸುವಿನ ಮೇಲೆ ಹೋಗಲಿಲ್ಲವೋ? ಲೋಕದ ಎಲ್ಲಾ ಪಾಪಗಳಲ್ಲಿ ಹೋದ ಪಾಪಗಳು, ಇರುವ ಪಾಪಗಳು, ಇನ್ನೂ ಮುಂದೆಮಾಡುವ ಪಾಪಗಳೂ ಸೇರಿದೆ. ಯೇಸುವಿನ ದೀಕ್ಷಾಸ್ನಾನದ ಮೂಲಕ ಪಾಪನಿವಾರಣೆಯ ಸುವಾರ್ತೆಯನ್ನು ನಾವು ಬಲಪಡಿಸಬೇಕು.

ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತದ ಸತ್ಯವನ್ನು ನಂಬುವವನು ರಕ್ಷಣೆ ಪಡೆಯುವನು. ಯೇಸುವಿನ ದೀಕ್ಷಾಸ್ನಾನವನ್ನು ನಂಬುವವರ ಹೃದಯದಲ್ಲಿ ಪಾಪ ವಿರುವುದಿಲ್ಲ.

ಹೇಗಿದ್ದರೂ, ಯೇಸುವಿನ ದೀಕ್ಷಾಸ್ನಾನದ ಮೂಲಕ ಈಗಾಗಲೇ ಅವರ ಎಲ್ಲಾ ಪಾಪಗಳು ಆತನ ಮೇಲೆ ಹೋಗಿದೆ ಎಂದು ಅವರಿಗೆ ತಿಳಿಯದಿರುವದರಿಂದ ಇನ್ನೂ ಪಾಪವಿದೆ ಎಂದು ಅನೇಕ ಜನರು ಯೋಚಿಸುತ್ತಿದ್ದಾರೆ. ಅವರು ಸೈತಾನ ನಿಂದ ಮೋಸಹೋಗಿದ್ದಾರೆ. “ನೀನು ಪ್ರತಿದಿನ ಪಾಪ ಮಾಡುತಿದ್ದೀಯ. ನೀನು ಅದೇಗೆ ಪಾಪವಿಲ್ಲದಿರುವಿ?” ಎಂದು ಸೈತಾನನು ಅವರ ಕಾಮುಕವಾದ ಯೋಚನೆ ಗಳೋಡಣೆ ಅವರಿಗೆ ಕಿವಿ ಊದುತ್ತಾನೆ. 

ಅವರಿಗೆ ಪಾಪವಿಲ್ಲದೆ ಇರಬೇಕಂದರೆ ಅವರು ಕರ್ತನಲ್ಲಿ ಮಾತ್ರವೇ ವಿಶ್ವಾಸವಿಡಬೇಕು. ಆದರೆ ಅವರು ಇನ್ನೂ ಪಾಪಮಾಡುವದರಿಂದ ಅವರು ಪಾಪಿ ಗಳೆಂದು ಅವರನ್ನು ಸೈತಾನನು ಮೋಸಮಾಡುತ್ತಾನೆ. ಯೇಸುವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬಿದವರೇಲ್ಲಾರು ಪಾಪವಿಲ್ಲದೇ ಇದ್ದಾರೆ. 

ನಾವು ಈ ಲೋಕದಲ್ಲಿ ಸಾಕಷ್ಟು ಇಲ್ಲದವರಾಗಿ ಮತ್ತು ಬಲಹೀನರಾಗಿ ಜೀವಿಸುವುದರಿಂದ, ನಮ್ಮ ಕಾರ್ಯಗಳಿಂದ ನೀತಿವಂತರಾಗಿದ್ದೇವೆ ಎಂದು ಹೇಳು ವುದಕ್ಕೆ ಸಾಧ್ಯವಿಲ್ಲ. ಆದರೆ ಯೇಸುವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಸತ್ಯದಿಂದ ನಾವು ರಕ್ಷಣೆಯನ್ನು ಪಡೆದಿದ್ದೇವೆ ಎಂದು ಹೇಳುವುದಕ್ಕೆ ನಮಗೆ ಸಾಧ್ಯ. ಒಮ್ಮೆ ನಾವು ಯೇಸುವಿನ ದೀಕ್ಷಾಸ್ನಾನದಿಂದ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಸತ್ಯದಿಂದ, ನಮ್ಮ ಹೃದಯಗಳು ಪವಿತ್ರವಾಗಿದೆ ಎಂದು ಅರ್ಥ ಮಾಡಿಕೊಂಡಾಗ ಖಂಡಿತವಾಗಿಯೂ ನಮ್ಮಲ್ಲಿ ಪಾಪವಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. 

“♬ ನಾನು ಬಿಡುಗಡೆಯಾಗಿದ್ದೇನೆ. ನೀನು ಬಿಡುಗಡೆ ಯಾಗಿದ್ದೀಯ. ನಾವೇಲ್ಲಾರು ಬಿಡುಗಡೆಯಾಗಿದ್ದೇವೆ ♬” ಎಲ್ಲಾರಿಗೆ ಸುವಾರ್ತೆಯನ್ನು ಬೋಧಿಸು ವದಕ್ಕೆ ಮತ್ತು ಆತ್ಮವು ನಮ್ಮನ್ನು ನಡೆಸುತ್ತದೆ ಎಂದು ತಿಳಿದುಕೊಂಡಾಗ ಜೀವಿಸು ವುದಕ್ಕೆ ಅದು ಅದೇಷ್ಟು ಸಂತೋಷಕರವಾದ ಮತ್ತು ಆನಂದಕರವಾದ ಜೀವನ ವಾಗುತ್ತದೆ.

ಹೌದು ಭಕ್ತರಾದ ನಾವು ಪ್ರತಿದಿನ ಪಾಪಮಾಡುತ್ತೇವೆ ಆದರೆ ನಮ್ಮಲ್ಲಿ ಪಾಪವಿಲ್ಲ. ನಮ್ಮ ಮನಸ್ಸಿನಲ್ಲಿ ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ ನಮ್ಮಲ್ಲಿ ಇದೇ. ಒಮ್ಮೆ ನಮ್ಮ ಮನಸ್ಸು ಪಾಪದಿಂದ ತುಂಬಿತ್ತು, ಆದರೆ ಈಗ ನಾವು ಯೇಸುವಿನ ದೀಕ್ಷಾಸ್ನಾನವನ್ನು ನಂಬಿದ್ದರಿಂದ, ಇನ್ನೂ ಪಾಪಿಯರಾಗಿಯೇ ಉಳಿದುಕೊಳ್ಳುವುದಕ್ಕೆ ನಮಗೆ ಹೇಗೆ ಸಾಧ್ಯ.

“ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವದು-ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು. ಅವರ  ಮನಸ್ಸಿನ ಮೆಲೆ ಅವುಗಳನ್ನು ಬರೆಯುವೆನು” (ಇಬ್ರಿಯರಿಗೆ 10:16). 



ಯೇಸುವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬುವ ಎಲ್ಲಾರಿಗೆ ಪುನಃ ಪಾಪಿಗಳಾಗುವದಕ್ಕೆ ಸಾಧ್ಯವಿಲ್ಲ


  • ನಾವು ಪಾಪಮಾಡಿದ್ದಾಗ ನಾವು
  •  ಪುನಃ ಪಾಪಿಗಳಾಗುತ್ತೇವೋ?
  • ಇಲ್ಲ, ನಾನು ಪುನಃ ಪಾಪಿಗಳಾಗಲು
  • ಸಾಧ್ಯವಿಲ್ಲ.


ನಾವು ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬದೇ ಇರುವಾಗ, ನಾವು ಮತ್ತೇ ಮತ್ತೇ ಕ್ಷಮಾಪಣೆಕ್ಕಾಗಿ ಅದೇಷ್ಟು ಪ್ರಾರ್ಥಿಸಿದರೂ ಸಹ ನಮ್ಮಲ್ಲಿ ಪಾಪವಿತ್ತು. ಆದರೆ ನಾವು ಸತ್ಯವಾದ ಸುವಾರ್ತೆ ಯನ್ನು ನಂಬುವಾಗ, ನಮ್ಮ ಎಲ್ಲಾ ಪಾಪಗಳು ಅಳಿಸಿಬಿಡುತ್ತದೆ. 

“ಹೇ, ಇತೀಜಿಗೆ ಹೇಗೆ ನೀನು ಅದೇಷ್ಟು ಕಾಂತಿಯುಳ್ಳವನಾಗಿ ಮತ್ತು ನಗು ಮೊಗದಿಂದ ಕಾಣುವಿ?” 

“ನೋಡು, ಇನ್ನು ಎಂದಿಗೂ ನನ್ನ ಹೃದಯದಲ್ಲಿ ಪಾಪವಿರುವುದಿಲ್ಲ.” 

“ನಿಜವೋ? ಹಾಗಾದರೆ ಈಗ ನಿನಗೆ ಬೆಕಾದಷ್ಟು ಪಾಪವನ್ನು ನೀನು ಮಾಡಬಹುದೋ?” 

“ನಿನಗೆ ಗೊತ್ತೇ, ಮನುಷ್ಯನಿಗೆ ಪಾಪ ಮಾಡದೇ ಇರುವುದಕ್ಕೆ ಸಾಧ್ಯವಿಲ್ಲ. ಮನುಷ್ಯನು ಇರುವದು ಹೀಗಿಯೇ. ಆದರೆ ಯೇಸು ಆತನ ದೀಕ್ಷಾಸ್ನಾನದಿಂದ ಮತ್ತು ಅವುಗಳಗೋಸ್ಕರವಾಗಿ ಶಿಲುಬೆಯ ಮೇಲೆ ಶಿಕ್ಷೆಯನ್ನು ಪಡೆದುಕೊಂಡಿದ್ದರಿಂದ ಯೇಸು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾರೆ. ಈ ಕಾರಣದಿಂದಾಗಿ ಈಗ ನಾನು ದೇವಾಲದಲ್ಲಿ ಸುವಾರ್ತೆಯ ಸೇವೆಮಾಡುವುದಕ್ಕೆ ನನ್ನನ್ನೇ ನಾನು ಸಮರ್ಪಿಸಿಕೊಳ್ಳುತ್ತೇನೆ. ಎಲ್ಲಾರು ಹೀಗೆ ಜೀವಿಸಬೇಕೆಂದು ರೋಮಾ 6ನೆಯ ಅಧ್ಯಾಯದಲ್ಲಿ ಹೇಳುತ್ತದೆ. ನನ್ನಲ್ಲಿ ಎಂದಿಗೂ ಪಾಪವಿಲ್ಲದಿರುವದರಿಂದ, ನಾನು ನೀತಿಯ ಕಾರ್ಯಗಳನ್ನು ಮಾಡುವದಕ್ಕೆ ನಾನು ಆಶಿಸುತ್ತೇನೆ. ಯೇಸುವಿನ ದೀಕ್ಷಾ ಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ರಕ್ತವನ್ನು ನಾವು ನಂಬಬೇಕು ಮತ್ತು ಲೋಕದಲ್ಲಿರುವ ಎಲ್ಲಾರಿಗೂ ಸುವಾರ್ತೆಯನ್ನು ನಾವು ಬೋಧಿಸಬೇಕು. ಪಾಪ ನಿವಾರಣೆಯ ಅದಿಪತಿಯಾದ, ಯೇಸುವನ್ನು ನಂಬುವಾಗ ಪುನಃ ಪಾಪಿಗಳಾಗು ವುದಕ್ಕೆ ನಮಗೆ ಸಾಧ್ಯವಿಲ್ಲ. ನಿತ್ಯರಕ್ಷಣೆಯಾದ ಯೇಸುವಿನ ದಿಕ್ಷಾಸ್ನಾನದಲ್ಲಿ ಹಾಗೂ ಶಿಲುಬೆಯ ಮೇಲೆ ಆತನ ರಕ್ತವನ್ನು ನಾವು ನಂಬಬೇಕು. ನಾನು ಅದೇಷ್ಟು ಕೃತಜ್ಞತೆಯಿಂದ ತುಂಬಿದ್ದೇನೆ.” 



ಯಾರು ಆತ್ಮವನ್ನು ಪಡೆಯುವರು?


  • ಸ್ನಾನಿಕನಾದ ಯೊಹಾನನು 
  • ಯೇಸುವನ್ನು ಕುರಿತು ಏನೇಂದು
  •  ಸಾಕ್ಷಿ ಹೇಳಿದನು?
  • ಯೇಸು ಕರ್ತನ ಕುರಿಮರಿಯಾಗಿ ಲೋಕದ ಎಲ್ಲಾ ಪಾಪಗಳನ್ನು
  • ನಿವಾರಣೆಮಾಡಿದ್ದಾನೆ, ಅಂದರೆ, ಕಳೆದ ಪಾಪಗಳು, ಈಗಿರುವ 
  • ಪಾಪಗಳು, ಮುಂದೆ ಬರುವ ಪಾಪಗಳುಮೊಟ್ಟ ಮೊದಲಿನ
  •  ಪಾಪಗಳನ್ನೂ ಸಹ ಆತನು ನಿವಾರಣೆಮಾಡಿದ್ದಾನೆ 
  • ಎಂದು ಸಾಕ್ಷಿಹೇಳಿದನು.


ಯೇಸುವಿನ ದೀಕ್ಷಾಸ್ನಾನ, ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬಿಕೆ ಯಿರುವ ಎಲ್ಲಾರು ರಕ್ಷಣೆಯನ್ನು ಪಡೆಯುತ್ತಾರೆ. ಆತ್ಮವನ್ನು ನಾವು ಹೇಗೆ ಪಡೆಯು ವುದಕ್ಕೆ ಸಾಧ್ಯ? ಅಪೊಸ್ತಲರ ಕೃತ್ಯಗಳು 2:38-39ರಲ್ಲಿ ನಮಗೆ ಉತ್ತರ ಕೋಡುತ್ತದೆ. “ಪೇತ್ರನು ಅವರಿಗೆ-ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿ ಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾ ಸ್ನಾನ ಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ; ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾಗಿರುವ ಕರ್ತನು ತನ್ನ ಕಡೆಗೆ ಕರೆಯುವವರೆಲರಿಗೆ ಮಾಡೋಣ ವಾಗಿದೆ ಎಂದು ಹೇಳಿದನು.” 

ಯೇಸುಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ಕೊಳ್ಳುವುದು ಅಂದರೆ ಯೇಸುವಿನ ದೀಕ್ಷಾಸ್ನಾನವನ್ನು ನಂಬುವುದು ಮತ್ತು ಬಿಡುಗಡೆಯಾಗುವುದು. ಆಗ ಕರ್ತನ ಪವಿತ್ರಾತ್ಮದಾನವನ್ನು ಹೊಂದುವಿರಿ.

ಯೇಸುಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ಕೊಳ್ಳುವುದು ಅಂದರೆ ಕ್ರೈಸ್ತನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬುವುದರಿಂದ ಪವಿತ್ರವಾಗು ವುದೂ ಸಹ ಇದರ ಅರ್ಥ. ಈ ನಂಬಿಕೆಯನ್ನು ನಾವು ಸ್ವೀಕರಿಸಿದಾಗ, ನಾವು ಬಿಡು ಗಡೆಯಾಗಿ ನೀತಿವಂತವರಾಗಿದ್ದೇವೆ. ಯೇಸುವಿನ ದೀಕ್ಷಾಸ್ನಾನದ ಮೂಲಕ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ಭಕ್ತರು ಹಿಮದಂತೆ ಬೆಳ್ಳಗಾಗುತ್ತಾರೆ. 

“ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.” ಯೇಸುವಿನ ದೀಕ್ಷಾ ಸ್ನಾನದ ಮೂಲಕ ಮತ್ತು ಅವುಗಳಿ ಗೋಸ್ಕರವಾಗಿ ಶಿಲುಬೆಯ ಮೇಲೆ ಆತನ ಮರಣದ ಮೂಲಕ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋಗಿವೆ ಎಂದು ನಾವು ಸ್ಥಿರವಾಗಿ ನಂಬುವಾಗ, ನಮ್ಮ ಹೃದಯಗಳು ಸ್ವಷ್ಟವಾಗಿ ತೊಳೆಯಲ್ಪಡುತ್ತದೆ. ನಾವು ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬುವಾಗ ಮತ್ತು ಪವಿತ್ರಾತ್ಮದಾನವನ್ನು ಹೊಂದುವಾಗ ಮತ್ತು ಕರ್ತನ ಮಕ್ಕಳಾಗುವಾಗ ನಮ್ಮ ಹೊಸ ಜೀವನವು ಆರಂಭವಾಗುತ್ತದೆ.

“ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” (ಯೋಹಾನ 8:32). ಶಿಲುಬೆಯ ಮೇಲೆ ದೇವರ ಶಿಕ್ಷೆಯ ನಿಜವಾದ ಅರ್ಥವನ್ನು ನಾವು ತಿಳಿದುಕೊಳ್ಳ ಬೇಕು. ಯೇಸು ಆತನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ಮರಣದಿಂದ ನಮ್ಮ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟನು ಎಂಬುದೇ ಸತ್ಯವಾಗಿದೆ. ನಾವು ಸತ್ಯವ ನ್ನು ನಂಬುವಾಗ ಪಾಪನಿವಾರಣೆ ನಮಗೆ ಕೊಡಲ್ಪಡುತ್ತದೆ.



ಯೇಸುವಿನ ದೀಕ್ಷಾಸ್ನಾನ ನಮ್ಮನ್ನು ಬಿಡುಗಡೆ ಮಾಡುತ್ತದೆ


  • ಆತ್ಮವನ್ನು ಯಾರು ಹೊಂದುವರು?
  • ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ
  • ರಕ್ತವನ್ನು  ನಂಬುವ ಮೂಲಕ ಎಲ್ಲಾ ಪಪಗಳಿಂದ 
  • ಯಾರು ಬಿಡುಗಡೆಯಾಗಿದ್ದಾರೋ ಅವರು
  •  ಆತ್ಮವನ್ನು  ಹೊಂದುವರು.


ಹಳೆಯ ಒಡಂಬಡಿಕೆಯಲ್ಲಿರುವ ಬಲಿಕಾಣಿಕೆಯ ರೀತಿಯ ಮೂಲಕ ಪಾಪ ಕ್ಕಾಗಿ ಪ್ರಾಯಶ್ಚಿತ್ತವಾಗುವ ಇದು ಹೊಸ ಒಡಂಬಡಿಕೆಯಲ್ಲಿರುವ ಯೇಸುವಿನ ದೀಕ್ಷಾಸ್ನಾನವನ್ನು ತೋರಿಸುತ್ತದೆ. ಹೊಸ ಒಡಂಬಡಿಕೆಯಲ್ಲಿನ ಯೇಸುವಿನ ದೀಕ್ಷಾಸ್ನಾನ ಹಳೆಯ ಒಡಂಬಡಿಕೆಯಲ್ಲಿರುವ ಎಲ್ಲಾ ಭವಿಷ್ಯಗಳಿಗೆ ಮಧ್ಯಭಾಗ ವಾಗಿದೆ. ಹಳೆಯ ಒಡಂಬಡಿಕೆಯಲ್ಲಿ ಕೈಗಳನ್ನು ಮೇಲಿಡುವ ಜೋಡಿಯನ್ನು ಹೊಸ ಒಡಂಬಡಿಕೆಯಲ್ಲಿರುವ ಯೇಸುವಿನ ದಿಕ್ಷಾಸ್ನಾನದಲ್ಲಿ ಕಂಡುಹಿಡಿಯ ಬಹುದು.

ಕೈಗಳನ್ನು ಮೇಲಿಡುವದರಿಂದ ಇಸ್ರಾಯೇಲ್ಯರ ಎಲ್ಲಾ ಪಾಪಗಳು ಬಲಿ ಪಶುವಿನ ಮೇಲೆ ಹೋಗಿರುವ ಹಾಗಿಯೇ ಲೋಕದ ಎಲ್ಲಾ ಪಾಪಗಳು ಯೇಸುವಿನ ದೀಕ್ಷಾಸ್ನಾನದ ಮೂಲಕ ಆತನ ಮೆಲೆ ಹೋದವು.

ನಮ್ಮ ಎಲ್ಲಾ ಪಾಪಗಳ ರಕ್ಷಣೆಯನ್ನು ಹೊಂದಬೇಕಾದರೆ ನಾವು ಯೇಸು ವಿನ ದೀಕ್ಷಾಸ್ನಾನ ವಿಶ್ವಾಸವಿಡಬೇಕೇ? ಹೌದು. ನಾವು ವಿಶ್ವಾಸವಿಡಬೇಕು! ಯೇಸು ಲೋಕದ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನದ ಮೂಲಕ ನಿವಾರಣೆಮಾಡಿದ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕು. ಯೇಸುವಿನ ದೀಕ್ಷಾಸ್ನಾನವನ್ನು ನಂಬದಿದ್ದರೆ, ನಮ್ಮ ಪಾಪಗಳು ಆತನ ಮೇಲೆ ಹೋಗುವುದಿಲ್ಲ. ನಮ್ಮ ರಕ್ಷಣೆಯನ್ನು ನಾವು ಪೂರ್ತಿಮಾಡಬೇಕುವದಕ್ಕಾಗಿ ನಾವು ಆತನನ್ನು ನಂಬ ಬೇಕು. ಇಲ್ಲದಿದ್ದರೆ, ನಮಗೆ ನೀತಿವಂತ ರಾಗುವುದಕ್ಕೆ ಸಾಧ್ಯವಿಲ್ಲ.

ಸರಿಯಾದ ಮಾರ್ಗದಲ್ಲಿ ಆತನ ದೀಕ್ಷಾಸ್ನಾನದಿಂದ ಲೋಕದ ಎಲ್ಲಾ ಪಾಪಿಗಳನ್ನು ಯೇಸು ರಕ್ಷಿಸಿದ್ದಾನೆ. ಇದು ಬೇರೆ ರೀತಿಯಲ್ಲಿ ಆಗುವದಕ್ಕೆ ಸಾಧ್ಯವಿಲ್ಲ. ಯೇಸುವಿನ ದೀಕ್ಷಾಸ್ನಾನ ಆತನ ಮೇಲೆ ಎಲ್ಲಾ ಪಾಪಗಳು ಹೋಗುವ ಪದ್ಧತಿ ಯಾಗಿದ್ದರಿಂದ ಎಂದಿಗೂ ನಮ್ಮ ಹೃದಯಗಳು ಶುದ್ಧವಾಗಿಟ್ಟುಕೊಳ್ಳುವದಕ್ಕಾಗಿ ನಾವು ಇದನ್ನು ನಂಬಬೇಕು. ಯೇಸುವಿನ ರಕ್ತ ನಮ್ಮ ಎಲ್ಲಾ ಪಾಪಗಳ ತೀರ್ಪಾಗಿತ್ತು ಎಂದೂ ಸಹ ನಾವು ನಂಬಬೇಕು. ಹೀಗೆ, ಯೇಸುವಿನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲೆ ಆತನ ರಕ್ತವನ್ನು ನಂಬಿರುವ ಎಲ್ಲಾರು ಅವರ ಪಾಪಗಳಿಂದ ರಕ್ಷಣೆಯನ್ನು ಪಡೆದಿದ್ದಾರೆ.

ನಾವು ಪರಲೋಕರಾಜ್ಯವನ್ನು ಪ್ರವೆಶಿಸಲು ಯೇಸುವಿನ ದೀಕ್ಷಾಸ್ನಾನ ದಲ್ಲಿ ವಿಶ್ವಾಸವಿಡಬೇಕು. ನಮ್ಮ ಎಲ್ಲಾ ಪಾಪಗಳಿಂದ ಬಿಡುಗಡೆಯಾಗುವುದಕ್ಕೆ ಮತ್ತು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಇದೋಂದೇ ಮಾರ್ಗ.

ಹೊಸ ಒಡಂಬಡಿಕೆಯಲ್ಲಿರುವ ಯೇಸುವಿನ ದೀಕ್ಷಾಸ್ನಾನ ಹಾಗೂ ಹಳೆಯ ಒಡಂಬಡಿಕೆಯಲ್ಲಿರುವ ಕೈಗಳನ್ನು ಮೇಲಿಡುವುದು ಇವೇರಡೂ ಜೋಡಿ ಯಾಗಿವೆ. ಅವು ಹಳೆಯ ಹಾಗೂ ಹೊಸ ಒಡಂಬಡಿಕೆಯ ನಡುವೆ ಕೊಕ್ಕೆ ಮತ್ತು ಗಂಟನ್ನು ಜೋಡಿಸುತ್ತದೆ. 

ಹೊಸ ಒಡಂಬಡಿಯಲ್ಲಿ, ಸ್ನಾನಿಕನಾದ ಯೊಹಾನನು ಯೇಸುವಿಗಿಂತ 6 ತಿಂಗಳ ಮುನ್ನವೇ ಬಂದನು. ಯೇಸು ದೀಕ್ಷಾಸಾನವನ್ನು ಮಾಡಿಸಿಕೊಂಡಾಗ, ಅದು “ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯ ಪ್ರಾರಂಭವು” (ಮಾರ್ಕ 1:1). ಯೇಸು ಆತನ ದೀಕ್ಷಾಸ್ನಾನದ ಮೂಲಕ ಲೋಕದ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿದ ಸಮಯದಲ್ಲಿ ಸುವಾರ್ತೆಯು ಪ್ರಾರಂಭವಾಯಿತು.

ಮನುಷ್ಯನ ರಕ್ಷಣೆಯ ಸೇವೆ ಒಂದು ಸರಪಳಿಯ ಘಟನೆಗಳಾಗಿ ನೆರವೇರಿ ಸಿದೆ: ಯೇಸುವಿನ ಹುಟ್ಟು, ಆತನ ದೀಕ್ಷಾಸ್ನಾನ, ಶಿಲುಬೆಯ ಮೇಲೆ ಆತನ ಮರಣ, ಮತ್ತು ಪರಲೋಕಕ್ಕೆ ಏರಿಹೋಗಿದ್ದು. ರಕ್ಷಣೆಯ ವಿಧಾನದಲ್ಲಿ ಈ ಸರಪಳಿಯ ಘಟನೆಗಳನ್ನು ವಿಶ್ವಾಸವಿಟ್ಟು ಹಾಗೂ ತಿಳಿದುಕೊಂಡು ಹಾಗೂ ಅರ್ಥಮಾಡಿ ಕೊಂಡಾಗ, ನಾವು ನಮ್ಮ ಎಲ್ಲಾ ಪಾಪಗಳಿಂದ ರಕ್ಷಣೆಯನ್ನು ಹೊಂದಿದ್ದೇವೆ. ಯೇಸುವಿನ ದೀಕ್ಷಾಸ್ನಾನ ಸುವಾರ್ತೆಯ ಪ್ರಾರಂಭವಾಗಿದೆ. ಅದೇ ವೇಳೆ ಶಿಲುಬೆಯ ಮೇಲೆ ಆತ ಸುರಸಿದ ರಕ್ತ ಇದರ ಸಮಾಪ್ತಿಯಾಗಿದೆ.

“ದೇವಕುಮಾರನಾದ ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯ ಪ್ರಾರಂಭವು” (ಮಾರ್ಕ 1:1). ಒಬ್ಬನ ನೀತಿವಂತವಾದ ಕಾರ್ಯಗಳನ್ನು-ಆತನ ದೀಕ್ಷಾಸ್ನಾನ ಶಿಲುಬೆಯ ಮೇಲೆ ಆತನ ರಕ್ತ, ಆತನ ಪುನರುತ್ಥಾನ, ಮತ್ತು ಆತನ ಎರಡನೇಯ ಸಾರಿ ಬರುವುದನ್ನು - ದೇವಕುಮಾರನ ಸುವಾರ್ತೆಯಿಂದ ಬಿಟ್ಟುಬಿಡು ವುದಕ್ಕೆ ನಮಗೆ ಸಾಧ್ಯವಿಲ್ಲ. 

ಯೇಸು ಈ ಲೋಕಕ್ಕೆ ಶರೀರರೂಪದಲ್ಲಿ ಬಂದು ಮನುಷ್ಯರ ಎಲ್ಲಾ ಪಾಪ ಗಳನ್ನು ನಿವಾರಣೆಮಾಡಿರುವುದೇ, ಪರಲೋಕರಾಜ್ಯದ ಪ್ರಾರಂಭವಾದ ಸುವಾರ್ತೆ. ಇದರಲ್ಲಿ ಒಂದು ತಪ್ಪಿಹೋದರೆ, ಪರಲೋಕರಾಜ್ಯದ ಸುವಾರ್ತೆಯು ಸಂಪೂಣ ವಾಗಿರುತಿರಲಿಲ್ಲ.

ಆದದರಿಂದ ಒಬ್ಬನು ಹೊಸದಾಗಿ ಹುಟ್ಟಬೇಕಾದರೆ, ಆತನು ಕ್ರೈಸ್ತನ ದೀಕ್ಷಾಸ್ನಾನ ಮತ್ತು ಆತನ ರಕ್ತದಲ್ಲಿ ನಂಬಿಕೆಯಿಡಬೇಕು. ಈ ಕಾಲದಲ್ಲಿ, ಅನೇಕ ಜನರು ಯೇಸುವಿನ ದೀಕ್ಷಾಸ್ನಾನದ ಸತ್ಯವನ್ನು ಮತ್ತು ಆತನ ರಕ್ತದ ಸತ್ಯವನ್ನು ನಂಬುವುದಿಲ್ಲ. ಯೇಸುವಿನ ದಿಕ್ಷಾಸ್ನಾನವು ಕೇವಲ ಶಾಸ್ತ್ರೋಕ್ತ ಪದ್ಧತಿ ಎಂದು ಅವರು ಯೋಚಿಸುತ್ತಾರೆ. ಇದು ಮುಖ್ಯವಾದ ತಪ್ಪುತಿಳುವಳಿಕೆ. ಒಬ್ಬನು ಯೇಸು ವಿನ ದೀಕ್ಷಾಸ್ನಾನವನ್ನು ನಂಬುವ ಆತನ ದೀಕ್ಷಾಸ್ನಾನ ಹಾಗೂ ಆತನ ರಕ್ತ ವನ್ನುಯೂ ಸಹ ನಂಬಬೇಕು.

ಕೇವಲ ಕ್ಷಪಾಪಣೆಗಾಗಿ ಪ್ರಾರ್ಥಿಸುವದರಿಂದ ನಮ್ಮ ಪಾಪಗಳು ಹೇಗೆ ನಿವಾರಣೆಯಾಗುತ್ತದೆ? ಸ್ನಾನಿಕನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ ನಮ್ಮ ಎಲ್ಲಾ ಪಾಪಗಳು ಯೇಸುವಿನ ಮೇಲೆ ಹೋಯಿತು. ಮನುಷ್ಯನ ಪಾಪಗಳನ್ನು ಆತನ ಮೇಲೆ ತೆಗೆದುಕೊಳ್ಳುವದಕ್ಕೆ ಆತನಿಗೆ ಬೇರೆದಾರಿ ಯೇ ಇಲ್ಲ.

ಯೋಹಾನ 3:5 ರಲ್ಲಿ ಯೇಸು ನಿಕೊದೇಮನಿಗೆ ಹೇಳಿದ ಪ್ರಕಾರ, ಮನುಷ್ಯ ನು ಪರಲೋಕರಾಜ್ಯಕ್ಕೆ ಸೇರಬೇಕಾದರೆ ಆತನು ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟಬೇಕು. ದೀಕ್ಷಾಸ್ನಾನದ ನೀರಿಲ್ಲದೇ, ಶಿಲುಬೆಯ ಮೇಲೆ ರಕ್ತವಿಲ್ಲದೇ ಮತ್ತು ಆತನ ಆತ್ಮವಿಲ್ಲದೇ ಯಾವ ಪಾಪನಿವಾರಣೆವಿರುವುದಿಲ್ಲ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ನಾವು ನಂಬುವಾಗ ಮಾತ್ರವೇ ನಮಗೆ ರಕ್ಷಣೆ ಬರುತ್ತದೆ.



ಯೇಸುವಿನ ದೀಕ್ಷಾಸ್ನಾನದ ಹೊರತು ನಮಗೆ ರಕ್ಷಣೆಯಾಗು ವುದಕ್ಕೆ ಸಾಧ್ಯವೋ?


  • ಯೇಸು ಹೇಗೆ ನಮ್ಮ ರಕ್ಷಕನಾದನು?
  • ಆತನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು
  • ಆತನ ಮೆಲಕ್ಕೆ ತೆಗೆದುಕೊಂಡಿದ್ದರಿಂದ

ದೇವರ ಸಾರ್ವಜನಿಕ ಸೇವೆ ಅಂದರೆ ಯೇಸು ಈ ಲೋಕಕ್ಕೆ ಬಂದು ಆತನ ದೀಕ್ಷಾಸ್ನಾನದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾರೆ, ಅಥವಾ ಕನ್ಯಕೆಯಾದ ಮರಿಯಾಳಿಗೆ ಹುಟ್ಟಿದ, ಯೇಸುವಿನ ಪಾವಿತ್ರತೆಯನ್ನು ತಿರುಗಿ ನೋಡುವದು, ಅಥವಾ ಯೇಸುವಿನ ಶಿಲುಬೆಯನ್ನು ನಂಬುವುದಕ್ಕೆ ನಾವು ಅಲಕ್ಷ್ಯಮಾಡಿದರೆ, ಕ್ರೈಸ್ತಮತವು ಬೌದ್ದರು ತಮ್ಮ ದೇವಾಲಯದಲ್ಲಿ ಮಾಡುವ ಹಾಗೆ “ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ” ಎನ್ನುವ ಪದಕ್ಕೆ ಭಕ್ತರನ್ನು ನಡೆಸುವ ಕೇವಲ ಮೂಢನಂಬಿಕೆಯ ಮತವಾಗಿದೆ.

ಯೇಸುವಿನ ದೀಕ್ಷಾಸ್ನಾನವನ್ನು ಅಲಕ್ಷ್ಯಮಾಡುವದು ಅಂದರೆ ನಮ್ಮ ಪಾಪಗಳು ಆತನ ಮೇಲೆ ಹೋಗಲಿಲ್ಲ ಎಂದು ಅರ್ಥ. ನಮ್ಮ ನಂಬಿಕೆಯು ಬೆಲೆ ಯಿಲ್ಲದೆ, ಒಬ್ಬ ಸಾಲಗಾರ ತನ್ನ ಸಾಲವನೇಲ್ಲಾ ಕಟ್ಟದೇ ಕಟ್ಟಿದ್ದಾನೇಂದು ಹೇಳುವ ಆತನಿಗೂ, ನಮ್ಮಗೂ ಯಾವ ವ್ಯತ್ಯಾಸವಿಲ್ಲದಂತೆ ಮಾಡುತ್ತದೆ. ಇದು ನಮ್ಮನ್ನೇಲ್ಲಾ ರನ್ನು ಸುಳ್ಳುಗಾರರನ್ನಾಗಿ ಮಾಡುತ್ತದೆ. ಸಾಲಗಾರನು ಎಲ್ಲಾ ಸಾಲವನ್ನು ಕಟ್ಟದೇ ಇರುವಾಗ ಆತನು ಕಟ್ಟಿದ್ದಾನೆ ಎಂದು ಹೇಳುವಾಗ, ಆತನು ಇನ್ನೂ ಸಾಲಗಾರನ ಮನಾಸಾಕ್ಷಿನಲ್ಲಿರುತ್ತಾನೆ. 

ಯೇಸು ಆತನ ನೀರಿನ ದೀಕ್ಷಾಸ್ನಾನದಿಂದ ಭಕ್ತರನ್ನು ಶುದ್ಧಮಾಡಿ ಅವರನ್ನು ಆತನ ಮಕ್ಕಳಾಗಿ ಮಾಡಿದ್ದಾನೆ. ಭಕ್ತರೇಲ್ಲಾರು ಪವಿತ್ರವಾಗುವದಕ್ಕಾಗಿ, ಸ್ನಾನಿಕ ಯೋಹಾನನಿಂದ ಯೇಸು ಲೋಕದ ಎಲ್ಲಾಪಾಪಗಳನ್ನು ನಿವಾರಣೆ ಮಾಡಿ ದ್ದಾನೆ. ನಾವು ಇದನ್ನು ತಿಳಿದುಕೊಂಡಾಗ ಹಾಗೂ ಇದನ್ನು ನಂಬುವಾಗ, ನಮ್ಮ ಮನಸ್ಸುಗಳು ನಿರಂತರವಾಗಿ ಶುದ್ಧವಾಗುತ್ತದೆ. 

ಆತನ ಕೃಪೆಗಾಗಿ ಆತನಿಗೆ ಸ್ತೋತ್ರ. ಲೂಕ 2:14ರಲ್ಲಿ ಹೇಳುತ್ತದೆ, “ಮೇಲಣ ಲೋಕಗಳಲ್ಲಿ ದೇವರಿಗೆಮಹಿಮೆ, ಭುಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವರಿಗೆ ಇಲಿಯುತ್ತಾನೆ!” ಯೇಸುವಿನ ದೀಕ್ಷಾಸ್ನಾನ ಹಾಗೂ ರಕ್ತವನ್ನು ನಂಬಿದಾಗ ಅದು ನಮಗೆ ಸಂಪೂರ್ಣವಾದ ರಕ್ಷಣೆತರುತ್ತದೆ ಮತ್ತು ನಮ್ಮನ್ನು ಕರ್ತನ ಮಕ್ಕಳಾಗಿ ಮಾಡುತ್ತದೆ. ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತ ನಮ್ಮನ್ನು ರಕ್ಷಿಸಿದೆ ಮತ್ತು ಈ ಎರಡರಲ್ಲಿ ಯಾರು ವಿಶ್ವಾಸವಿಡುವರೋ ಅವರು ರಕ್ಷಣೆ ಪಡೆಯುವರು.

ಆತನ ಕಾರ್ಯಗಳಿಂದ ಯಾವುದೂ ಬಿಟ್ಟುಬಿಡುವುದಿಲ್ಲ. ಕೇಲವರು ಅಪೊಸ್ತಲನಾದ ಪೌಲನು ಶಿಲುಬೆಯನ್ನು ಕುರಿತು ಮಾತ್ರವೇ ಹೇಳಿದ್ದಾನೆ ಎಂದು ಹೇಳುತ್ತಾ, ಆತನ ರಕ್ತವನ್ನು ಮಾತ್ರವೇ ನಂಬುತ್ತಾರೆ. ಆದರೆ ಯೇಸುವಿನ ದೀಕ್ಷಾ ಸ್ನಾನ ಆತನ ಶಿಲುಬೆಯಲ್ಲೂ ಸೇರಿದೆ. 

ರೋಮಾ 6ನೇ ಅಧ್ಯಾಯದಲ್ಲಿ ಪೌಲನು ಕ್ರಿಸ್ತನೋಂದಿಗೆ ದೀಕ್ಷಾಸ್ನಾನ ಪಡೆದು ಕ್ರಿಸ್ತನ್ನೋಂದಿಗೆ ಮರಣಹೊಂದಿದ್ದಾನೆ ಎಂಬುದನ್ನು ನಾವು ನೋಡ ಬಹುದು. ಗಲಾತ್ಯದವರಿಗೆ 2:20ರಲ್ಲಿಯೂ ಸಹ ನಾವು ಇದನ್ನು ನೋಡ ಬಹುದು, “ಕ್ರಿಸ್ತನೋಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನೂ ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ; ಈಗ ಶರೀರದಲ್ಲಿರುವ ನಾನು ಜೀವಿಸು ವದು ಹೇಗಂದರೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಆತನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.”

ಹಾಗೂ ಗಲಾತ್ಯದವರಿಗೆ 3:27-29 ರಲ್ಲಿ, “ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸಾನ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ. ನೀವೆ ಲ್ಲರು ಕ್ರಿಸ್ತಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಇಡೆಯ ಎಂದೂ, ಗಂಡು ಹೆಣ್ಣು ಎಂದೂ ಭೇದವಿಲ್ಲ. ನೀವು ಕ್ರಿಸ್ತನ ವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನ ಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.”

ಕ್ರಿಸ್ತನಲ್ಲಿ ದೀಕ್ಷಾಸ್ನಾನಮಾಡಿಸಿಕೊಳ್ಳುವದು ಅಂದರೆ ಆತನು ಲೋಕ ದಲ್ಲಿಮಾಡಿದ ಎಲ್ಲಾವನ್ನು, ಆತನ ದೀಕ್ಷಾಸ್ನಾನ ಮತ್ತು ಶಿಲುಬೆಯ ಮೇಲಿನ ಆತನ ರಕ್ತವನ್ನು ನಾವು ನಂಬುವುದೇ ಇದರ ಅರ್ಥ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ನಂಬುವುದು ಅಂದರೆ 2000ವರುಷಗಳ ಹಿಂದೀಯೇ ನಮ್ಮ ಪಾಪ ಗಳನ್ನು ಈಗಾಗಲೇ ಯೇಸು ಅಳಿಸಿಬಿಟ್ಟಿದ್ದಾನೆ ಎಂದು ನಂಬುವುದು. ನಮಗೆ ರಕ್ಷಣೆ ಯನ್ನು ತರುವುದಕ್ಕೆ ಬೇರೆ ದಾರಿಯೇ ಇಲ್ಲ.



ನಾವು ಯೇಸುವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತ ಸುರಿಸಿದ ರಕ್ತವನ್ನು ನಂಬುವಾಗ ಕರ್ತನಿಂದ ರಕ್ಷಣೆ ಯನ್ನು ಹೊಂದಿದ್ದೀವೆ


  • ಕೇವಲ ಕ್ಷಮಾಪಣೆಗಾಗಿ ನಾವು 
  • ಪ್ರಾರ್ಥಿಸುವದರಿಂದ ನಮ್ಮ ಎಲ್ಲಾ ಪಾಪಗಳು 
  • ನಿವಾರಣೆಯಾಗುತ್ತದೆಯೂ?
  • ಇಲ್ಲ. ಯೇಸು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ 
  • ಮಾಡಿಸಿಕೊಂಡಾಗ ಆತನ ಮೇಲೆ ಎಲ್ಲಾ ಪಾಪಗಳು
  •  ಹೋಯಿತು ಎನ್ನುವುದರಲ್ಲಿರುವ ನಮ್ಮ ನಂಬಿಕೆಯ 
  • ಮೂಲಕ ಪಾಪ ಕ್ಷಮಾಪಣೆಯಾಗುತ್ತದೆ.

“ಹೃದಯದಿಂದ ನಂಬುವದರ ಮೂಲಕ ನೀತಿಯು ದೂರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ ಎಂಬುದೇ” (ರೋಮಾ  10: 10).

“ಹೇಗಂದರೆ ಕ್ರಿಸ್ತನಲ್ಲಿ ಸೇರುವದಕ್ಕೆ ದೀಕ್ಷಾಸಾನ ಮಾಡಿಸಿಕೊಂಡಿರುವ ನೀವೆಲ್ಲರು ಕ್ರಿಸ್ತನನ್ನು ಧರಿಸಿಕೊಂಡಿರಿ” (ಗಲಾತ್ಯದವರಿಗೆ 3:27). ಕ್ರಿಸ್ತನಲ್ಲಿ ದೀಕ್ಷಾ ಸ್ನಾನ ಮಾಡಿಕೊಳ್ಳುವುದಕ್ಕೆ, ಕ್ರಿಸ್ತನನ್ನು ಧರಿಸಿಕೊಳ್ಳುವುದಕ್ಕೆ, ಹಾಗೂ ಕರ್ತನ ಮಕ್ಕಳಾಗುವದಕ್ಕೆ ನಮ್ಮ ನಂಬಿಕೆ ನಮ್ಮನ್ನು ನಡೆಸುತ್ತದೆ. ಯೇಸು ಈ ಲೋಕಕ್ಕೆ ಬಂದು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮ್ಮ ಹಾಗೂ ಲೋಕದ ಎಲ್ಲಾ ಪಾಪ ಗಳು ಆತನ ಮೇಲೆ ಹೋಯಿತು. 

ನಮ್ಮ ನಂಬಿಕೆಯು ಕ್ರಿಸ್ತನೋಂದಿಗೆ ಒಟ್ಟಿಗೆ ಇರುವುದಕ್ಕೆ ನಡೆಸಿದೆ. ಆತ ಮರಣಹೊಂದಿದಾಗ ನಾನು ಮರಣಹೊಂದಿದ್ದೇವೆ. ಆತನು ಪುನರುತ್ಥಾನವಾದಾಗ ನಾವು ಪುನರುತ್ಥಾನವಾಗಿದ್ದೇವೆ. ಈಗ ನಾವು ಯೇಸುವಿನ ದೀಕ್ಷಾಸ್ನಾನ, ರಕ್ತ ಮತ್ತು ಆತನ ಪುನರುತ್ಥಾನದಲ್ಲಿ ಏರಿಹೋಗಿದ್ದು ಮತ್ತು ಆತನ ಆಗಮನವನ್ನು ನಾವು ನಂಬುವದರಿಂದ, ನಿತ್ಯವಾಗಿ ನಮಗೆ ಪರಲೋಕರಾಜ್ಯದಲ್ಲಿ ಪ್ರವೇಶಿಸುವದಕ್ಕೆ ಸಾದ್ಯವಾಗುತ್ತದೆ.

ಯೇಸುವಿನ ರಕ್ತವನ್ನು ಮಾತ್ರವೇ ಜನರು ನಂಬುವಾಗ, ಹೃದಯದಲ್ಲಿ ಉಳಿದಿರುವ ಪಾಪಗಳಿಂದ ಕಷ್ಟಪಡುವದನ್ನು ಬಿಟ್ಟು ಬೆರೇನುಮಾಡುವುದಕ್ಕೂ ಅವರಿಗೆ ಸಾಧ್ಯವಿಲ್ಲ. ಯಾಕೆ? ಕಾರಣ ಅವರಿಗೆ ಇದನ್ನು ಕುರಿತು ತಿಳಿದುಕೊಳ್ಳು ವುದೂ ಇಲ್ಲ ಅಥವಾ ನಿರಂತರವಾಗಿ ಅವರ ಎಲ್ಲಾ ಪಾಪಗಳನ್ನು ಅವರ ಪಾಪದ ಹೃದಯಗಳಿಂದ ಅಳಿಸಿಬಿಟ್ಟು ಹಿಮದಂತೆ ಬಿಳುಪಾಗಿಮಾಡಿದ, ಯೇಸುವಿನ ದೀಕ್ಷಾ ಸ್ನಾನದ ಅರ್ಥವನ್ನು ಕುರಿತು ಒಪ್ಪಿಕೊಳ್ಳುವುದೂ ಇಲ್ಲ. 

ನಿಮ್ಮನ್ನು ನಿಮ್ಮಎಲ್ಲಾ ಪಾಪಗಳನ್ನು ರಕ್ಷಿಸಿದ ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತದಲ್ಲಿ ನೀವು ವಿಶ್ವಾಸವಿಟ್ಟಿದ್ದಿರೋ? ದಯೆವಿಟ್ಟು ಈ ಬದಲಿಸ ಲಾಗದ ಸತ್ಯವನ್ನು ನಂಬಿರಿ. ಯೇಸುವಿನ ದೀಕ್ಷಾಸ್ನಾನ ವಿಶ್ವಾಸವಿಲ್ಲದೆ ನಿಮ್ಮ ನಂಬಿಕೆ ವ್ಯರ್ಥ. ಯೇಸುವಿನ ದೀಕ್ಷಾಸ್ನಾನದಲ್ಲಿ ವಿಶ್ವಾಸವಿಲ್ಲದೆ, ನಿಮಗೆ ನಿಮ್ಮ ಪಾಪಗಳಿಂದ ಪಾಪನಿವಾರಣೆಯನ್ನು ಪಡೆಯುವದಕ್ಕೆ ಸಾಧ್ಯವಿಲ್ಲ; ಪ್ರತಿಯಾಗಿ ಕೊಡಲಾಗದ ಪ್ರೀತಿಯಲ್ಲಿ ನೀವು ನಿಶ್ಚಯಮಾಡಿಕೊಂಡಿದ್ದೀರಿ.

ಶಿಲುಬೆಯಲ್ಲಿ ಮಾತ್ರ ನಂಬಿರುವವರು ಹೀಗೆ ಹೇಳುತ್ತಾರೆ, “ಯೇಸು ನನ ಗಾಗಿ ಶಿಲುಬೆಯಲ್ಲಿ ಮರಣಹೊಂದಿದನು, ಯೇಸು ನನ್ನ ದೇವರು, ನನ್ನರಕ್ಷಕನು. ಪರಲೋಕಕ್ಕೆ ಏರುವದಕ್ಕೆ 40ದಿನಗಳ ಮುನ್ನ ಆತನು ಮರಣದಿಂದ ಎದ್ದು ಆತನ ಪುನರುತ್ಥಾನವನ್ನು ಕುರಿತು ಸಾಕ್ಷಿಹೇಳಿದನು ಈಗ ಆತನು ಕರ್ತನ ಬಲಗಡೆಯಲ್ಲಿ ಕೂತಿದ್ದಾನೆ. ಆತನು ಎರಡನೆಯ ಸಾರಿ ನಮಗೆ ತೀರ್ಪುಕೊಡುವದಕ್ಕೆ ಬರುತ್ತಾ ನೇಂದು ನಾನು ನಂಬುತ್ತೇನೆ ಹಾಗೂ ನಾನು ಆತನನ್ನು ಸಂಧಿಸುವದಕ್ಕೆ ಯೇಸು ನನ್ನನ್ನು ಪೂರ್ತಿಯಾಗಿ ಬದಲಾಯಿಸುತ್ತಾನೇಂದು ನಾನು ಪ್ರಾರ್ಥಿಸುತ್ತೇನೆ. ಓ, ನನ್ನ ಪ್ರೀತಿಯ ಯೇಸುವೇ, ನನ್ನ ದೇವರೇ.” 

ಅವರು ಕ್ಷಮಾಪಣೆಗಾಗಿ ಕೇಳಿಕೊಂಡು ಅವರು ಪಾಪವಿಲ್ಲದವರಾಗಿದ್ದಾರೆ ಎಂದು ಅವರು ನಂಬುತ್ತಾರೆ, ಆದರೆ ಅವರ ಹೃದಯದಲ್ಲಿ ಪಾಪವಿದೆ. “ನಾನು ಯೇಸುವಿನಲ್ಲಿ ನಂಬಿದ್ದೇನೆ ಆದರೆ ನನ್ನ ಹೃದಯದಲ್ಲಿ ಪಾಪವಿದೆ. ನಾನು ಯೇಸು ವನ್ನು ಪ್ರೀತಿಸುತ್ತಾನೆ ಆದರೆ ನನ್ನ ಹೃದಯದಲ್ಲಿ ಪಾಪವಿದೆ. ‘ನನ್ನ ಮದುಮಗನೇ, ನನ್ನ್ನ ಕಡೆಗೆ ದಯವಿಟ್ಟು ಬನ್ನಿ’ ಎಂದು ಹೇಳಲು ನನಗೆ ಸಾಧ್ಯವಿಲ್ಲ, ಕಾರಣ ನನ್ನಲ್ಲಿ ಪಾಪವಿದೆ ಹಾಗೂ ನನಗೆ ನನ್ನ ರಕ್ಷಣೆಯನ್ನು ಕುರಿತು ಖಂಡಿತವಾಗಿ ತಿಳಿಯದು. ಆದದರಿಂದ ನಾನು ಸಿದ್ಧವಾಗಿರುವಾಗ ಯೇಸು ಬರುತ್ತಾನೇಂದು ಹಾಗೂ ನಾನು ಬಹಳವಾಗಿ ಪ್ರಾರ್ಥಿಸುವಾಗ ಮತ್ತು ಪಶ್ಚಾತ್ಥಾಪಪಟ್ಟ ನಂತರ ಮಾತ್ರವೇ ಯೇಸು ಬರುತ್ತಾನೇಂದು ನಾನು ನಂಬುತ್ತೇನೆ. ನಾನು ನನ್ನ ಹೃದಯ ಪೂರ್ವಿಕವಾಗಿ ಯೇಸುವನ್ನು ಪ್ರೀತಿಸುತ್ತೇನೆ ಆದರೆ ನನ್ನ ಹೃದಯದಲ್ಲಿ ಪಾಪವಿರುವದರಿಂದ ಆತನನ್ನು ಸಂಧಿಸುವದಕ್ಕೆ ಭಯವಾಗುತ್ತದೆ.” 

“ನೀನು ಪೂರ್ತಿಯಾಗಿಲ್ಲ ಎಂದು ನೀನು ಯಾಕೆ ಯೋಚಿಸುತ್ತೀಯಾ?” ಯೇಸು ಅಂತವರನ್ನು ಕೇಳಿದರೆ, ಅವರು ಹೀಗೆ ಉತ್ತರಿಸುತ್ತಾರೆ, “ದೇವರೇ, ನಾನು ಪ್ರತಿದಿನ ಪಾಪಮಾಡುವದರಿಂದ ನಾನು ನೀತಿವಂತವನಲ್ಲ ಎಂದು ನನಗೆ ತಿಳಿದಿದೆ. ಆದದರಿಂದ ನೀವು ಪಾಪಿಗಳನ್ನು ಕರೆಯುವಾಗ ನನ್ನನ್ನು ದಯೆವಿಟ್ಟು ಕರೆಯಿರಿ.” 

ಸೃಷ್ಟಿ ಕರ್ತನಾದ, ನ್ಯಾಯಾಧಿಪತಿಯಾದ, ಕರ್ತನು ಪಾಪಿಗಳನ್ನು ಒಪ್ಪಿ ಕೊಳ್ಳುವುದಿಲ್ಲ ಹಾಗೂ ಅವರನ್ನು ತನ್ನ ಮಕ್ಕಳಾಗಿ ಮಾಡುವದಿಲ್ಲ ಎಂದು ಅವರಿಗೆ ತಿಳಿಯದು.

ಮದುಮಗನು ಬಂದು ಮದುಮಗಳಿಗೆ ಎಲ್ಲಾ ಸಮಸ್ಯವನ್ನು ಪರಿಹರಿಸು ತ್ತಾನೆ, ಆದರೆ ಮದುಮಗಳಿಗೆ ಇದನ್ನು ಕುರಿತು ತಿಳಿಯದಿರುವುದರಿಂದ, ಆಕೆ ಯಾತನೆಗೆ ಒಳಗಾಗುತ್ತಾಳೆ. ನಮ್ಮ ಶರೀರದಿಂದ ನಾವು ಪಾಪಮಾಡಿದ್ದರಿಂದ ನಾವು ಪಾಪಿಗಳೆಂದು ನಾವು ಯೋಚಿಸಿದರೆ, ನಮಗೆ ಕರ್ತನಲ್ಲಿ ನಂಬಿಕೆಯಿಲ್ಲ ಎಂದರ್ಥ. ಕರ್ತನ ವಾಕ್ಯದ ಸತ್ಯ ನಮಗೆ ತಿಳಿಯದಿದ್ದರೂ ಅಥವಾ ಅರ್ಥಮಾಡಿಕೊಳ್ಳ ದಿದ್ದರೂ, ನಮ್ಮ ಹೃದಯದಲ್ಲಿರುವ ಪಾಪಗಳು ಹೆಚ್ಚಾಗುತಲೇ ಇರುತ್ತದೆ.


  • ಯಾಕೆ ಕೆಲವರು ಅವರ ಹೃದಯದಲ್ಲಿರುವ
  • ಪಾಪಗಳಿಂದ ಯಾತನೆ ಪಡುತಾರೆ?
  • ಕಾರಣ ನಮ್ಮ ಪಾಪಗಳನೇಲ್ಲಾ ನಿವಾರಣೆಮಾಡಿದ 
  • ಯೇಸುವಿನ ದೀಕ್ಷಾಸ್ನಾನದ ಅರ್ಥವನ್ನು ಅವರ
  •  ಹೃದಯದಲ್ಲಿ ಒಪ್ಪಿಕೊಳ್ಳುವುದೂ ಇಲ್ಲ 
  • ಅಥವಾ ತಿಳಿದುಕೊಳ್ಳುವುದೂ ಇಲ್ಲ.


ಮದುಮಗನು ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾನೆ. ಏಲ್ಲಿ? ಆತನು ಯೊರ್ದನ್ ಹೊಳೆಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಾಗ. ಇದನ್ನು ನಂಬದಿರುವವರು ಇನ್ನೂ ಪಾಪಿಗಳಾಗಿಯೇ ಇರುವರು. ಅವರು ಕಳಂಕಯಿರುವ ಮದುಮಗಳಾಗಿ ಇರುವರು.

ನಮಗೆ ಯೇಸುಪಡೆದ ದೀಕ್ಷಾಸ್ನಾನವಿಲ್ಲದೇ ಬಿಡುಗಡೆ ಯಾಗುವುದಕ್ಕೆ ಸಾಧ್ಯವೋ? ಇಲ್ಲ! ನಾವು ಕರ್ತನ ಸ್ವರೂಪಪದಲ್ಲಿ ಸೃಷ್ಟಿಯಾಗಿದ್ದೀವೆ, ಆದಕಾರಣ ನಾವು ನಮ್ಮ ಹೃದಯದಿಂದ, ಹಾಗೂ ನಮ್ಮ ಮನಸಾಕ್ಷಿಯಿಂದ ನಾವು ನ್ಯಾಯ ವನ್ನು ಹುಡುಕುತ್ತೇವೆ. ಆದರೆ ನಮ್ಮ ಹೃದಯಗಳಲ್ಲಿ ಇನ್ನೂ ಪಾಪವಿಟ್ಟುಕೊಂಡು ನಾವು ಪಾಪಿಗಳಲ್ಲ ಎಂದು ಯೋಚಿಸುವದಕ್ಕೆ ಸಾಧ್ಯವಿಲ್ಲ. ಯೇಸುವಿನ ದೀಕ್ಷಾ ಸ್ನಾನವನ್ನು ಒಪ್ಪಿಕೊಂಡು ಮತ್ತು ಅದನ್ನು ನಂಬಿದಾಗ ಮಾತ್ರವೇ ನಮ್ಮಲ್ಲಿ ಪಾಪ ವಿಲ್ಲ ಹಾಗೂ ನಾವು ನೀತಿವಂತವರು ಎಂದು ನಿಜವಾಗಿಯೂ ಹೇಳುವುದಕ್ಕೆ ನಮಗೆ ಸಾಧ್ಯ. 

ನಮ್ಮ ಹೃದಯದಲ್ಲಿ ಪಾಪವನ್ನು ಇಟ್ಟುಕೊಂಡು ನಮ್ಮಲ್ಲಿ ಪಾಪವಿಲ್ಲ ಎಂದು ನಾವು ಯೋಚಿಸಿದರೇ ನಮ್ಮ ಮನಸಾಕ್ಷಿಯು ಪವಿತ್ರವಾಗುವದೇ ಇಲ್ಲ. ಅಥವಾ ಈ ಸನ್ನಿವೇಶಗಳಿಂದ ಕರ್ತನು ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಕರ್ತನು ಸುಳ್ಳು ಹೇಳುವುದೇ ಇಲ್ಲ.

ಅವರ ಜೀವಗಳಿಗೆ ಬೆಲೆಕಟ್ಟುವದಕ್ಕಾಗಿ ಇಸ್ರಾಯೇಲ್ಯರ ಒಬ್ಬೊಬ್ಬರನ್ನಾಗಿ ಲೆಕ್ಕಿಸಬೇಕೆಂದು ಕರ್ತನು ಮೋಶೆಗೆ ಆಜ್ಞಾಪಿಸಿದನು. ಶ್ರೀಮಂತರು ಅರ್ಧ ಸೇಕಾಲ್ ಮೇಲೆ ಕೊಡಬಾರದು ಹಾಗೂ ಬಡವರು ಇದಕ್ಕಿಂತ ಕಡಿಮೆ ಕೊಡಬಾರದು. ಪ್ರತಿ ಯೊಬ್ಬರು ಬೆಲೆಕಟ್ಟಬೇಕು.

ಆದದರಿಂದ ಆತನ ಜೀವಕ್ಕೆ ಬೆಲೆಕಟ್ಟಿದ ಯೇಸುವನ್ನು ನಂಬದಿದ್ದರೆ ಆ ವ್ಯಕ್ತಿ ಹೇಗೆ ಪವಿತ್ರವಾಗುತ್ತಾನೆ? ಆತನಲ್ಲಿ ಪಾಪವಿದೆ.

ನಾವು ಯೇಸುವಿನ ರಕ್ತವನ್ನು ಮಾತ್ರವೇ ನಂಬಿದರೆ, ನಮ್ಮ ಹೃದಯದಲ್ಲಿ ಪಾಪವಿದೆ ಮತ್ತು ನಾವು ಪಾಪಿಗಳು ಎಂದು ನಾವು ಒಪ್ಪಿಕೊಳ್ಳಬೇಕು. ಆದರೆ ನಾವು ಎರಡರಲ್ಲಿ ಆತನ ದೀಕ್ಷಾಸ್ನಾನ ಮತ್ತು ಶಿಲುಬೆಯನ್ನು ನಂಬುವಾಗ, ನಮ್ಮಲ್ಲಿ ಪಾಪವಿಲ್ಲ ಎಂದು ನಾವು ಸ್ವಷ್ಟವಾಗಿ ಹೇಳಬಹುದು.



ಪವಿತ್ರಾತ್ಮನ ವಿರೋದ್ಧವಾಗಿ ದೇವದೋಷಣೆ


  • ಯಾವ ತರದ ಪಾಪಗಳು ಮನುಷ್ಯನನ್ನು
  • ನರಕಕ್ಕೆ ಗುರಿಮಾಡುತ್ತದೆ?
  • ಪವಿತ್ರಾತ್ಮನ ವಿರೋಧವಾಗಿ ಪಾಪ, ಬೇರೆ ರೀತಿಯಲ್ಲಿ,
  • ಯೇಸುವಿನ ದೀಕ್ಷಾಸ್ನಾನವನ್ನು ನಂಬದಿರುವ
  • ಹಾಗೆ ಮಾಡುವುದು


ರೋಮಾ 1:17 ರಲ್ಲಿ ಹೇಳುತ್ತದೆ, “ಹೇಗಂದರೆ ದೇವರಿಂದ ದೊರುಕುವ ನೀತಿಯು ಅದರಲ್ಲಿ ತೋರಿಬರುತ್ತದೆ.” ದೇವರಿಂದ ದೊರುಕುವ ನೀತಿಯು ಸುವಾರ್ತೆ ಯಲ್ಲಿ ತೋರಿಬರುತ್ತದೆ. ಯೇಸು ಕ್ರಿಸ್ತನು ಈ ಲೋಕಕ್ಕೆ ಬಂದು ಆತನ ದೀಕ್ಷಾ ಸ್ನಾನದ ಮೂಲಕ ಹಾಗೂ ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದಾನೆ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ ಸುವಾರ್ತೆಗೆ ಶಕ್ತಿಯಾಗಿದೆ. ಯೇಸು ನಮ್ಮ ಎಲ್ಲಾ ಪಾಪಗಳನ್ನು ಒಂದೇ ಸಾರಿ ನಿವಾರಣೆಮಾಡಿದ್ದಾನೆ.

ನಂಬಿದರೆ ರಕ್ಷಣೆ ಮತ್ತು ನಂಬದಿದ್ದರೆ ನಿತ್ಯವಾದ ನರಕ. ಪರಲೋಕದಲ್ಲಿ ರುವ ನಮ್ಮ ತಂದೆ ಆತನು ಮೆಚ್ಚಿದ ಒಬ್ಬನೇ ಮಗನಾದ ಯೇಸುವನ್ನು ಈ ಲೋಕಕ್ಕೆ ಕಳುಹಿಸಿಕೊಟ್ಟು ನಮ್ಮ ಎಲ್ಲಾ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆತನಿಗೆ ದೀಕ್ಷಾಸ್ನಾನ ಮಾಡಿಸಿಕೊಟ್ಟನು. ಹೀಗೆ ಆತನಲ್ಲಿ ನಂಬಿರುವ ಎಲ್ಲರು ಅವರ ಪಾಪಗಳಿಂದ ಶುದ್ಧ ವಾಗುವರು.

ಈ ಲೋಕದಲ್ಲಿ ಉಳಿದಿರುವ ಒಂದೇ ಪಾಪ ಅಂದರೆ ಆತನ ದೀಕ್ಷಾಸ್ನಾನ ಮತ್ತು ಆತನ ರಕ್ತವನ್ನು ನಂಬದಿರುವದು. ನಂಬದಿರುವದು ಆತ್ಮದ ವಿರೋದ್ಧವಾಗಿ ದೇವದೋಷಣೆಯಾಗುತ್ತದೆ ಮತ್ತು ಇದು ಪಾಪ. ಇದಕ್ಕೆ ಕರ್ತನು ಅವರನ್ನು ನರಕ ದಲ್ಲಿ ಹಾಕುವ ತೀರ್ಪನ್ನು ಕೊಡುತ್ತಾನೆ. ಇದು ತೀವ್ರವಾದ ಪಾಪವಾಗಿದೆ. ನೀನು ಈಗೆ ಮಾಡಿದರೆ ನೀನು ಪಶ್ಚಾತ್ತಾಪಪಟ್ಟು ಯೇಸುವಿನ ದೀಕ್ಷಾಸ್ನಾನದಿಂದ ಬಿಡುಗಡೆ ಯಾಗಬೇಕು. ಇಲ್ಲದಿದ್ದರೆ, ನೀನು ಎಂದೆಂದಿಗೂ ನಾಶವಾಗುತ್ತೀಯ.

ಆತನ ದೀಕ್ಷಾಸ್ನಾನ ಮತ್ತು ರಕ್ತದ ಮೂಲಕ ಪಾಪನಿವಾರಣೆಯ ಸಾಕ್ಷಿ ಯೋಂದಿಗೆ ನೀನು ರಕ್ಷಣೆ ಹೊಂದಿದ್ದೀಯೋ? ಯೋಹಾನನು 1:29 ರಲ್ಲಿ ಬರೆದಿರುವ ಹಾಗೆ “ಅಗೋ [ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು.” ಎಂದು ಹೇಳುವ ಯೋಹಾನನ ಸಾಕ್ಷಿಯನ್ನು ನೀನು ಹೊಂದಿದ್ದೀಯೋ ಇಬ್ರಿಯರಿಗೆ 10:18 ರಲ್ಲಿ ಬರೆದಿರುವ ಹಾಗೆ, “ಪಾಪಗಳು ಪರಿಹಾರ ವಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಸಮರ್ಪಣೆಮಾಡುವದು ಅವಶ್ಯವಿಲ್ಲ,” ಎಂದು ಬರೆದಿರುವ ಹಾಗೆ ನೀವು ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬುತ್ತೀರೋ ?.

ಅವರ ಹೃದಯಗಳಲ್ಲಿ ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತ ವನ್ನು ನಂಬಿರುವವರನ್ನು ಆತ ದೃಢೀಕರಿಸುತ್ತಾನೆ. ಕರ್ತನು ಅವರನ್ನು ಆತನ ಮಕ್ಕಳಾಗಿ ಮಾಡಿಕೊಳ್ಳುತ್ತಾನೆ. ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಂಬಿರುವವರನ್ನು ಯೇಸುವಿನ ನೀತಿಯ ಪ್ರೀತಿಯಿಂದ ಬಿಡುಗಡೆ ಮಾಡಿದ್ದಾನೆ.

ಕರ್ತನು ಕಳುಹಿಸಿದ ವ್ಯಕ್ತಿಯು ಕರ್ತನ ವಾಕ್ಯಗಳನ್ನು ಮಾತನ್ನಾಡುವನು, ಆದರೆ ಲೋಕಕ್ಕೆ ಸೆರಿದವನು, ಕರ್ತನು ಕಳುಹಿಸದೆ ಇರುವ ವ್ಯಕ್ತಿಯು, ಆತನ ಸ್ವಂತ ಯೋಚನೆಗಳ ಪ್ರಕಾರ ಬೋಧಿಸುವನು. ಕರ್ತನ ವಾಕ್ಯವನ್ನು ಬೋಧಿಸುವವರು ಅನೇಕರಿದ್ದಾರೆ, ಕರ್ತನಿಂದ ಕಳುಹಿಸಿದವರು ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ಕುರಿತು ಮಾತನ್ನಾಡುವರು.

ಆದರೆ ಅವರ ಸ್ವಂತ ವಾಕ್ಯಗಳಲ್ಲಿ ಬೋಧಿಸುವವರು ಅವರ ಸ್ವಂತ ಆಲೋಚನೆಗಳನ್ನು ಮಾತ್ರವೇ ಸ್ವಷ್ಟಪಡಿಸುತ್ತಾರೆ. “ನಮ್ಮ ಅಸಲಾದ ಪಾಪಗಳಿಂದ ನಾವು ಬಿಡುಗಡೆಯಾಗಿದ್ದೇವೆ, ಆದರೆ ಪ್ರತಿಒಬ್ಬರು ಅವರವರ ಪ್ರತಿದಿನದ ಪಾಪ ಗಳಿಗೆ ಪಶ್ಚಾತ್ತಾಪ ಪಡೆಯಬೇಕು,” ಎಂದು ಅವರು ಹೇಳುತ್ತಾರೆ. ಕ್ರಮೀಣವಾಗಿ ನಾವು ಪವಿತ್ರವಾಗಬೇಕೆಂದು ಅವರು ಹೇಳುತ್ತಾರೆ. 

ಆದರೆ ಮನುಷ್ಯನಿಗೆ ಸ್ವಂತವಾಗಿ ಪವಿತ್ರವಾಗುವದಕ್ಕೆ ಆಗುತ್ತದೆಯೋ? ನಮ್ಮ ಸ್ವಂತ ಪ್ರಯತ್ನಗಳಿಂದ ಹಾಗೂ ನಮ್ಮ ಸ್ವಂತ ಶಕ್ತಿಯ ಯೋಗ್ಯತೆಗಳಿಂದ ಪವಿತ್ರವಾಗುವುದಕ್ಕೆ ಸಾಧ್ಯವೋ? ಕರ್ತನು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆ ಮಾಡಿದ್ದರಿಂದ ನಾವು ಪವಿತ್ರವಾಗಿದ್ದೀವೋ ಅಥವಾ ನಮ್ಮ ಸ್ವಂತ ಪ್ರಯತ್ನ ಗಳಿಂದ ಪಾಪನಿವಾರಣೆಯನ್ನು ಪಡೆಯುವದಕ್ಕೆ ನಾವು ಪ್ರಯತ್ನಿಸಿದ್ದರಿಂದ ನಾವು ಪ್ರವಿತ್ರವಾಗಿದ್ದೀವೋ?

ನಿಜವಾದ ವಿಶ್ವಾಸವೇ ನಮ್ಮನ್ನು ಪವಿತ್ರರರನ್ನಾಗಿ ಮಾಡಿದ್ದು. ಸಾವಿರ ಸಾರಿ ಕಲ್ಲಿದ್ದಲ್ಲನ್ನು ತೊಳೆಯುವದರಿಂದ ಅದು ಬಿಳುಪಾಗುತ್ತದೆಯೋ? ಕಪ್ಪಾದ ಶರೀರವನ್ನು ಸೋಡಾಯಿಂದ ಬಿಳಿಪಾಗಿ ಮಾಡಲು ಸಾಧ್ಯವಾಗುತ್ತದೆಯೋ? ಎಷ್ಟು ಸಾಬೂನು ಅಥವಾ ಸೋಡಾ ಉಪಯೊಗಿಸಿದರೂ ಅದು ನಮ್ಮ ಪಾಪಗಳನ್ನು ನಿವಾರಣೆಮಾಡುವದಿಲ್ಲ, ನಮ್ಮ ಸ್ವಂತ ನೀತಿಯು ಹೊಲಸು, ಹರಕು ಮುರುಕಾಗಿದೆ. ಯೆಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಾವು ನಂಬುವುದರಿಂದ ಅಥವಾ ಶಿಲುಬೆಯ ಮೇಲೆ ಆತನ ರಕ್ತವನ್ನು ಮಾತ್ರವೇ ನಂಬುವದರಿಂದ ನಾವು ನೀತಿವಂತ ರಾಗುತ್ತೀವೋ?

ನಿಜವಾದ ವಿಶ್ವಾಸವು ಯೇಸುವಿನ ದೀಕ್ಷಾಸ್ನಾನದ ನೀರಿನಿಂದ ಮತ್ತು ಶಿಲುಬೆಯ ಮೇಲೆ ಆತನ ಸುರಿಸಿದ ರಕ್ತದಿಂದ ಬರುತ್ತದೆ. ನಮ್ಮ ಸ್ವಂತ ಪ್ರಯತ್ನಗಳ ಪರಿಣಾಮವಾಗಿ ರಕ್ಷಣೆ ಬರುವುದಿಲ್ಲ. ಯೇಸುವಿನ ದೀಕ್ಷಾಸ್ನಾನ ಮತ್ತು ಆತನ ರಕ್ತ ವನ್ನು ವಿಶ್ವಾಸಿವುದು ನಮ್ಮನ್ನು ನಮ್ಮ ಪಾಪದಿಂದ ಬಿಡುಗಡೆಮಾಡುತ್ತದೆ ಹಾಗೂ ನಮ್ಮನ್ನು ನೀತಿವಂತವರಾಗಿ ಮಾಡುತ್ತದೆ.

ತಂದೆ ಆತನ ಮಗನ ಕೈಗೆ ಎಲ್ಲಾ ಮನುಷ್ಯರನ್ನು ಕೊಟ್ಟಿದ್ದಾನೆ ಮತ್ತು ಆತನನ್ನು ನಂಬಬುವವರು ನಿತ್ಯಜೀವವನ್ನು ಹೊಂದುವರು. ಮಗನನ್ನು ನಂಬು ವದು ಅಂದರೆ ಆತನ ದೀಕ್ಷಾಸ್ನಾನ ಮತ್ತು ಆತನ ರಕ್ತದ ಮೂಲಕ ಇರುವ ಪಾಪ ನಿವಾರಣೆಯನ್ನು ನಂಬುವುದೇ. ಆತನನ್ನು ನಂಬುವವನು ಕರ್ತನ ಕೂಸಾಗಿ ನಿತ್ಯ ಜೀವವನ್ನು ಹೊಂದುವನು. ರಕ್ಷಣೆಯನ್ನು ಹೊಂದಿರುವವನು ನಿರಂತರವಾಗಿ ಕರ್ತನ ಬಲಗಡೆಯಲ್ಲಿ ಜೀವಿಸುವನು.

ಯೇಸುವಿನ ದೀಕ್ಷಾಸ್ನಾನದಲ್ಲ ನಂಬಿಕೆ ಹಾಗೂ ಕರ್ತನೋಡನೆ ಆತನಿರು ವದೂ ಸಹ ಆತ್ಮದಲ್ಲಿರುವ ವಿಶ್ವಾಸವೇ. ಸತ್ಯದ ವಾಕ್ಯವು ನಮ್ಮನ್ನು ಹೊಸದಾಗಿ ಹುಟ್ಟುವದಕ್ಕೆ ಅನುಮತಿಸುತ್ತದೆ. ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತ ವನ್ನು ನಾವು ನಂಬುವದರಿಂದ ನಾವು ರಕ್ಷಣೆಯಾಗಿದ್ದೀವೆ.

ವಿಶ್ವಾಸವಿಡಿ. ಯೇಸುವಿನ ದೀಕ್ಷಾಸ್ನಾನ ಹಾಗೂ ಆತನ ರಕ್ತವನ್ನು ನಾವು ನಂಬುವದು ಅಂದರೆ ಪಾಪನಿವಾರಣೆಯನ್ನು ಸಂಪಾದಿಸದ ಹಾಗಿಯೇ. ನಿಜ ಸುವಾರ್ತೆಯಲ್ಲಿ ವಿಶ್ವಾಸವಿಟ್ಟು ಪಾಪಕ್ಷಮಾಪಣೆಯನ್ನು ಹೊಂದಿರಿ.