Sermons

[3-9] < ಮತ್ತಾಯ 7:21-23 > ನಾವು ತಂದೆಯ ಚಿತ್ತದಂತೆ ವಿಶ್ವಾಸದಿಂದ ನಡೆಯೋಣ



< ಮತ್ತಾಯ 7:21-23 >

“ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯ ದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕರಾಜ್ಯದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು. ಸ್ವಾಮಿ, ಸ್ವಾಮಿ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ-ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮಿರಿನಡೆಯುವವರೇ, ನನ್ನಿಂದ ತೊಲಗಿ ಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.”



ಅದು ನಾನಿರಬಹುದು . . . 


  • ‘ಸ್ವಾಮಿ, ಸ್ವಾಮಿ’ ಅನ್ನುವವರೆಲ್ಲರು
  • ಪರಲೋಕರಾಜ್ಯದಲ್ಲಿ ಸೇರುವರೋ?
  • ಇಲ್ಲ. ಕರ್ತನ ಚಿತ್ತದಂತೆಯೇ ನಡೆಯುವವನೇ


“ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕರಾಜ್ಯದಲ್ಲಿರುವ ನನ್ನ ತಂದೆಯ ಚಿತ್ತ ದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು,” ಎಂದು ಯೇಸು ಕ್ರಿಸ್ತನು ಹೇಳುತ್ತಾನೆ. ಈ ವಾಕ್ಯಗಳು ಅನೇಕ ಕ್ರೈಸ್ತರನ್ನು ಕರ್ತನ ಚಿತ್ತದಂತೆ ನಡೆಯುವದಕ್ಕೆ 

ಕಷ್ಟಪಟ್ಟು ಕೆಲಸಮಾಡುವ ಹಾಗೆ ಮಾಡಿ, ಅವರ ಮನಸಲ್ಲಿ ಭಯವನ್ನು ಉಂಟು ಮಾಡಿತ್ತು.

ಪರಲೋಕರಾಜ್ಯದಲ್ಲಿ ಸೇರುವದಕ್ಕೆ ಯೇಸುವನ್ನು ಮಾತ್ರ ನಂಬಬೇಕು ಎಂದು ಅನೇಕ ಜನರು ನಂಬುತ್ತಾರೆ. ಆದರೆ ಮತ್ತಾಯ 7:21 ರಲ್ಲಿ ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ ಎಂದು ನಮಗೆ ಹೇಳುತ್ತದೆ.

ಈ ವಾಕ್ಯವನ್ನು ಓದಿದವರು “ನಾನಿರ ಬಹುದು” ಎಂದು ಆಶ್ಚರ್ಯಪಡು ತ್ತಾರೆ. “ಇಲ್ಲ, ಯೇಸು ಅನ್ಯಜನರನ್ನು ಕುರಿತು ಹೇಳಿರ ಬಹುದು,” ಎಂದು ಅವರನ್ನು ಅವರೇ ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಯೋಚನೆಗಳು ಅವರ ಮನಸ್ಸಿನಲ್ಲಿ ಉಳಿದು ಅವರನ್ನು ಪೀಡಿಸುತ್ತದೆ. 

ಆದದರಿಂದ ”ಪರಲೋಕರಾಜ್ಯದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆ ಯುವವನೇ ಪರಲೋಕರಾಜ್ಯಕ್ಕೆ ಸೇರುವನು,” ಎನ್ನುವ ವಾಕ್ಯವನ್ನು ಮಾತ್ರ ಅವರು ಹಿಡುದುಕೊಂಡಿದ್ದಾರೆ. “ನನ್ನ ತಂದೆಯ ಚಿತ್ತದಂತೆ ನಡೆಯುವವನೇ,” ಎನ್ನುವ ವಾಕ್ಯವನ್ನು ಮಾತ್ರ ಅವರು ಹಿಡಿದು ಕೊಂಡಿದ್ದಾರೆ ಅವರು ದಶಮಾಂಶವನ್ನು  ಸರಿಯಾಗಿ ಕಟ್ಟುವದರಿಂದ, ಮುಂಜಾನೆವರೆಗೂ ಪ್ರಾರ್ಥನೆ ಮಾಡುವದರಿಂದ, ಬೋಧಿಸುವುದರಿಂದ, ಒಳ್ಳೆಯ ಕಾರ್ಯಗಳನ್ನು ಮಾಡುವದರಿಂದ, ಪಾಪಮಾಡದಿ ರುವದರಿಂದ ಅದನ್ನು ಅವರಿಗೆ ಮಾಡುವದಕ್ಕೆ ಸಾಧ್ಯ ಎಂದು ಅವರು ಯೋಚಿಸು ತ್ತಾರೆ ಹಾಗೂ ಅವರು ಬಹು ಕಷ್ಟದಿಂದ ಪ್ರಯತ್ನಿಸುತ್ತಾರೆ. ಅವರನ್ನು ನೋಡುವ ದಕ್ಕೆ ನನಗೆ ಅಯ್ಯೋ ಅನಿಸುತ್ತದೆ. 

ಈ ವಾಕ್ಯವನ್ನು ಅವರು ಅರ್ಥಮಾಡಿಕೊಳ್ಳದೇ ಇರುವದರಿಂದ ಅನೇಕ ಜನರು ಇದನ್ನು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಆದದರಿಂದ ನಾವು ಕರ್ತನ ಚಿತ್ತ ವನ್ನು ತಿಳಿದುಕೊಳ್ಳುವದಕ್ಕೆ ಮತ್ತು ಅದರಂತೆ ಜೀವಿಸುವದಕ್ಕೆ ನಾನು ಈ ವಾಕ್ಯ ವನ್ನು ಸ್ವಷ್ಟವಾಗಿ ವಿವವರಿಸುವದಕ್ಕೆ ಆಶಿಸುತ್ತಾನೆ.

ಮೊದಲಿಗೆ ನಾವು ಎಲ್ಲಾ ಜನರ ಪಾಪಗಳನ್ನು ನಿವಾರಣೆ ಮಾಡುವದ ಕ್ಕಾಗಿ ಕರ್ತನ ಚಿತ್ತವು ಆತನ ಮಗನದು ಎಂದು ತಿಳಿದುಕೊಳ್ಳಬೇಕು ಮತ್ತು ಹೀಗೆ ನಾವು ನಮ್ಮ ಪಾಪಗಳಿಂದ ಬಿಡುಗಡೆಯಾಗಿದ್ದೇವೆ ಎಂದು ತಿಳಿದುಕೊಳ್ಳಬೇಕು. 

ಎಫೆಸದವರಿಗೆ 1:5ರಲ್ಲಿ, “ಬರೆದಿದೆ, ಆತನು ತನ್ನ ಕೃಪೆಯನ್ನು ಪ್ರಾಖ್ಯಾತಿಗೆ ತರಬೇಕೆಂದು ನಮ್ಮನ್ನು ಯೇಸು ಕ್ರಿಸ್ತನ ಮೂಲಕ ತನ್ನ ಪುತ್ರರನ್ನಾಗಿ ಸ್ವೀಕರಿಸುವ ದಕ್ಕೆ ದಯಪೂರ್ವಕವಾದ ತನ್ನ ಚಿತ್ತಾನುಸಾರವಾಗಿ ಮೊದಲೇ ಸಂಕಲ್ಪಮಾಡಿ ದ್ದನು.” 

ಬೇರೆ ರೀತಿಯಲ್ಲಿ, ನಮ್ಮ ಪಾಪಗಳನ್ನು ನಿವಾರಣೆಮಾಡಿದ ಯೇಸುಕ್ರಿಸ್ತನ ನಿಜವಾದ ಸುವಾರ್ತೆಯನ್ನು ತಿಳಿದುಕೊಳ್ಳುವದರಿಂದ ನಾವು ಹೊಸದಾಗಿ ಹುಟ್ಟು  

ತ್ತೇವೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಂದು ಆತನ ಯೋಚನೆ ಆಗಿತ್ತು. ಆತನ ಮಗನಾದ ಯೇಸುವಿನ ಮೇಲೆ ನಮ್ಮ ಎಲ್ಲಾ ಪಾಪಗಳನ್ನು ಹಾಕಿ ನೀರಿನಿಂದಲೂ ಹಾಗೂ ಆತ್ಮನಿಂದಲೂ ಹೊಸದಾಗಿ ಹುಟ್ಟಬೇಕೆಂದು ಆತನು ಆಶಿಸುತ್ತಾನೆ. ಇದುವೇ ಕರ್ತನ ಚಿತ್ತವಾಗಿದೆ.



“ಸ್ವಾಮಿ! ಸ್ವಾಮಿ!” ಅನ್ನುವುದು ಮಾತ್ರವೇ


  • ಯೇಸುವಿನ ವಿಶ್ವಾಸವಿಟ್ಟಿದಾಗ ನಾವು
  • ಏನನ್ನು ತಿಳಿದುಕೊಳ್ಳಬೇಕು?
  • ತಂದೆಯ ಚಿತ್ತವನ್ನು

“ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕರಾಜ್ಯದಲ್ಲಿರುವ ನನ್ನ ತಂದೆಯ ಚಿತ್ತ ದಂತೆ ನಡೆಯುವವನೇ ಪರಲೋಕರಾಜ್ಯಕ್ಕೆ ಸೇರುವನು”( ಮತ್ತಾಯ7:21).

ತಂದೆಯ ಚಿತ್ತವನ್ನು ಎರಡು ರೀತಿಯಲ್ಲಿ ನಾವು ಅರ್ಥಮಾಡಿಕೊಳ್ಳಬೇಕು. ಮೊದಲನೆಯದು, ನಮ್ಮ ಪಾಪಗಳಿಗಾಗಿ ಕ್ಷಮಾಪಣೆಯನ್ನು ನಾವು ಪಡೆಯುವುದು ಹಾಗೂ ನೀರಿನಿಂದಲೂ ಹಾಗೂ ಆತ್ಮನಿಂದಲೂ ಹೊಸವಾಗಿ ಹುಟ್ಟುವುದು ಆತನ ಚಿತ್ತವಾಗಿದೆ ಎಂದು ನಾವು ತಿಳಿದುಕೊಳ್ಳಬೇಕು. ಎರಡನೆಯದು, ಆ ನಂಬಿಕೆಯ ಆಧಾರದಲ್ಲಿ ನಾವು ಕೆಲಸಮಾಡಬೇಕು ಎಂಬುದು ಆತನ ಚಿತ್ತವಾಗಿದೆ ಎಂದು ತಿಳಿದುಕೊಳ್ಳಬೇಕು.

ಲೋಕದಲ್ಲಿರುವ ಎಲ್ಲಾ ಜನರ ಪಾಪಗಳನ್ನು ಅಳಿಸಿಬಿಡುವದು ಆತನ ಚಿತ್ತ ವಾಗಿದೆ. ಪೂರ್ವಿಕ ಆದಾಮನಿಂದ ಪಾಪದ ಮೂಲಕ ಸೈತಾನನು ನಾಶನ ವನ್ನು ತಂದನು. ಆದರೆ ಮನುಷ್ಯನ ಎಲ್ಲಾ ಪಾಪಗಳನ್ನು ಅಳಿಸುವದೇ ತಂದೆಯ ಚಿತ್ತವಾಗಿದೆ. ಮುಂಜಾನೆವರೆಗೂ ಪ್ರಾರ್ಥನೆ ಮಾಡುವದು ಹಾಗೂ ಕ್ರಮವಾಗಿ ದಶಮಾಂಶವನ್ನು ಸರಿಯಾಗಿ ಅರ್ಪಿಸುವದು ನಮ್ಮ ತಂದೆಯ ಚಿತ್ತವಲ್ಲ, ಆದರೆ ನಮ್ಮನ್ನು ಪಾಪಗಳಿಂದ ರಕ್ಷಿಸುವದಕ್ಕೆ ಆತನ ಚಿತ್ತವಾಗಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಪಾಪದ ಸಮುದ್ರದಲ್ಲಿ ಮುಳುಗುತ್ತಿರುವ ಮನುಷ್ಯನನ್ನು ರಕ್ಷಿಸುವುದೇ ಆತನ ಚಿತ್ತವಾಗಿದೆ.

ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ ಎಂದು ಸತ್ಯವೇದವು ಹೆಳುತ್ತದೆ. ಅಂದರೆ ನಾವು ಯೇಸುವನ್ನು ವಿಶ್ವಾಸವಿಟ್ಟು , ಆದರೆ ನಮ್ಮ ತಂದೆ ನಮಗೆ ಏನು ಬೇಕೆಂದು ಆಶಿಸು ತ್ತಾನೇಂದು ತಿಳಿದುಕೊಳ್ಳುವದೇ ಇದರ ಅರ್ಥವಾಗಿದೆ. ಆದಾಮನ ಹಾಗೂ ಹವ್ವಳ ಆಸ್ತಿ ಅಂದರೆ ಪಾದಲ್ಲಿ ನಾವು ಜೀವಿಸುವದನ್ನು ಬಿಟ್ಟು ಬೇರೆ ಎನೂ ಮಾಡುವದ ಕ್ಕಾಗುವುದಿಲ್ಲ ಎಂಬ ಅರ್ಥವನ್ನು ತಿಳಿದುಕೊಂಡು, ನಮ್ಮ ಪಾಪದಿಂದ ನಮ್ಮನ್ನು ರಕ್ಷಿಸುವದು ಹಾಗೂ ನರಕದ ತೀರ್ಪಿನಿಂದ ನಮ್ಮನ್ನು ರಕ್ಷಿಸುವದಕ್ಕೆಯೇ ಆತನ ಚಿತ್ತವಾಗಿತ್ತು. 



ಕರ್ತನ ಚಿತ್ತ


  • ಕರ್ತನ ಚಿತ್ತ ಏನು?
  • ನಮ್ಮನ್ನು ಪಾಪದಿಂದ ಬಿಡುಗಡೆ ಮಾಡಿಸಿ 
  • ನಮ್ಮನ್ನು ಆತನ ಮಕ್ಕಳಾಗಿ ಮಾಡುವುದೇ


ಮತ್ತಾಯ 3:15ರಲ್ಲಿ ಹೇಳುತ್ತದೆ, “ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ.” ಯೇಸು ಈ ಲೋಕಕ್ಕೆ ಬಂದು ನಮ್ಮ ಎಲ್ಲಾ ಪಾಪವನ್ನು ನಿವಾರಣೆ ಮಾಡುವದೇ ಪೂರೈಸುವ ಕರ್ತನ ಚಿತ್ತವಾಗಿತ್ತು. ಸ್ನಾನಿಕ ನಾದ ಯೋಹಾನನಿಂದ ಯೇಸು ದೀಕ್ಷಾಸ್ನಾನಮಾಡಿಸಿಕೊಂಡಾಗ ಕರ್ತನ ಚಿತ್ತವು ನೆರವೇರಿತು.

ನಮ್ಮನ್ನು ರಕ್ಷಿಸಿ ಆತನ ಮಕ್ಕಳಾಗಿ ಮಾಡುವದೇ ಆತನ ಚಿತ್ತವಾಗಿತ್ತು. ಇದನ್ನು ಮಾಡುವದಕ್ಕಾಗಿಯೇ, ಆತನ ಮಗನು ನಮ್ಮ ಎಲ್ಲಾ ಪಾಪಗಳನ್ನು ನಿವಾರಣೆಮಾಡಲಾಗಿದೆ. ಆತನ ಮಕ್ಕಳಾಗಿ ನಮ್ಮನ್ನು ಮಾಡುವದೇ ಆತನ ಚಿತ್ತ ವಾಗಿತ್ತು. ಆದದರಿಂದ ಸೈತಾನನ ಬಿಡಿಹಿಡಿತದಲ್ಲಿ ಬಿದ್ದಿರುವ ಎಲ್ಲಾ ಜನರ ಪಾಪ ಗಳನ್ನು ನಿವಾರಣೆಮಾಡುವುದಕ್ಕಾಗಿಯೇ ಆತನು ತನ್ನ ಸ್ವಂತ ಮಗನನ್ನೇ ಕಳುಹಿಸಿ ದನು. ನಾವು ಆತನ ಮಕ್ಕಳಾಗುವದಕ್ಕಾಗಿ ನಮಗಾಗಿ ಆತನ ಸ್ವಂತ ಮಗನ ಪ್ರಾಣ ವನ್ನೇ ಅರ್ಪಿಸುವುದು ಆತನ ಚಿತ್ತವಾಗಿತ್ತು. 

ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ಮತ್ತು ಶಿಲುಬೆಯ ಮೇಲೆ ಮರಣ ಹೊಂದಿದಾಗ, ಕರ್ತನ ಚಿತ್ತವು ನೆರವೇರಿತು. ಯೇಸು ದೀಕ್ಷಾಸ್ನಾನ ಮಾಡಿಸಿ ಕೊಂಡಾಗ ಆತವನ ಮೇಲೆ ನಮ್ಮ ಎಲ್ಲಾ ಪಾಪಗಳು ಆತನ ಹೋಯಿತು ಮತ್ತು ಈ ಎಲ್ಲಾ ಪಾಪಗಳಿಗಾಗಿ ಆತನು ಶಿಲುಬೆಯಲ್ಲಿ ಮರಣಹೊಂದುವ ಶಿಕ್ಷೆಯನು ಒಪ್ಪಿ ಕೊಂಡರು.

“ದೇವರು ಲೋಕದ ಮೇಲೆ ಎಷ್ತೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗ ನನ್ನು ಕೊಟ್ಟನು” (ಯೋಹಾನ 3:16). ಕರ್ತನು ಆತನ ಜನರನ್ನು ಅವರ ಪಾಪ ಗಳಿಂದ ಅವರನ್ನು ರಕ್ಷಿಸಿದನು. ಇದನ್ನು ಮಾಡುವದಕ್ಕೆ, ಯೇಸು ಆತನ ಸಾರ್ವಜನಿಕ ಸೇವೆಯಲ್ಲಿ ಆತನು ಮೊದಲು ಮಾಡಿದ್ದು ಸ್ನಾನಿಕನಾದ ಯೋಹಾನ ನಿಂದ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದು.

“ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸ ತಕ್ಕದ್ದಾಗಿದೆ.” (ಮತ್ತಾಯ 3:15). ಯೇಸು ಈ ಲೋಕಕ್ಕೆ ಬಂದು, ಲೋಕದ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನದ ಮೂಲಕ, ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ನಿವಾರಣೆಮಾಡಿ, ಪುನರುತ್ಥಾನವಾದದು ಇವೇಲ್ಲಾವು ಕರ್ತನ ಚಿತ್ತ ವಾಗಿತ್ತು.

ಇದನ್ನು ಕುರಿತು ನಾವು ಸ್ವಷ್ಟವಾಗಿ ಗ್ರಹಿಸಿಕೊಳ್ಳಬೇಕು. ಮತ್ತಾಯ 7:21 ನ್ನು ಅನೇಕ ಜನರು ಓದಿ ದೇವರನ್ನು ಸೇವೆಮಾಡುವದು ಆತನ ಚಿತ್ತ, ಮರಣದ ಸ್ಥಿತಿ ಯಲ್ಲೀಯೂ ಕೂಡ, ನಮ್ಮ ಎಲ್ಲಾ ಆಸ್ತಿಯನ್ನು ದೇವಾಲಯದ ಕಟ್ಟಡಕ್ಕೆ ಕೊಡು ವುದೇ ಆತನ ಚಿತ್ತವಾಗಿದೆ ಎಂದು ಯೋಚಿಸುತ್ತಾರೆ.

ಪ್ರಿಯ ಕ್ರೈಸ್ತರೇ, ಯೇಸುವನ್ನು ವಿಶ್ವಾಸವಿಟ್ಟಿರುವ ನಾವು ಕರ್ತನ ಚಿತ್ತ ಏನೇಂಬುದನ್ನು ನಾವು ಮೊದಲಿಗೆ ತಿಳಿದುಕೊಂಡು ನಂತರ ಅದನ್ನು ಮಾಡಬೇಕು. ಕರ್ತನ ಚಿತ್ತವನ್ನು ತಿಳಿಯದೆ ನಿಮ್ಮನ್ನು ನೀವೆ ದೇವಾಲಯಕ್ಕೆ ಸಮರ್ಪಿಸಿಕೊಳ್ಳು ವದು ತಪ್ಪು. 

ಅವರ ಸಂಪ್ರದಾಯ ಬದ್ಧವಾದ ದೇವಾಲಯಗಳಲ್ಲಿರುವ ನಂಬಿಕೆಯಲ್ಲಿ ಜೀವಿಸುವದನ್ನು ಬಿಟ್ಟು ನಮಗೆ ಬೇರೇನು ಮಾಡುವದಕ್ಕೆ ಸಾಧ್ಯ ಎಂದು ಜನರು ಅವರೋಂದಿಗೆ ಕೇಳಿಕೊಳ್ಳುತ್ತಾರೆ. ಆದರೆ ನಾನೇ ಕಾಲ್‍ವಾನಿಸಂನ್ನು ಪ್ರೆಸ್‍ಬೈಟರಿ ಯನ್ ದೇವಾಲಯದಲ್ಲಿ ಓದಿದೆ ಮತ್ತು ನನ್ನನ್ನು ಸಾಕಿದ ತಾಯಿ ನನ್ನನ್ನು ಬೆಳಸಿ ದಳು ಆಕೆ ಬೇರೆಯಾವ ಅನುಭವಶಾಲಿಯ ಪಾದ್ರಿಗಿಂತ ಬಹಳ ಮತಶ್ರದ್ಧೆಯುಳ್ಳ ವಳಾಗಿದ್ದಳು. ಸಂಪ್ರದಾಯ ಬದ್ಧವಾದ ದೇವಾಲಯದಲ್ಲಿ ನಾನು ಕಲಿತೆ.

ಬೆನ್ಯಾಮಿನನ ಕುಲದವನು ಆಗಿದ್ದೇನೆ ಮತ್ತು ಗಮಲಿಯೇಲನೆಂಬ, ಒಬ್ಬ ಫರಿಸಾಯನ ಕೆಳಗೆ ಧರ್ಮವನ್ನು ಕಲಿತುಕೊಂಡನೇಂದು ಅಪೊಸ್ತಲ ಪೌಲನು ಅಂದನು. ಪೌಲನು ಹೊಸದಾಗಿ ಹುಟ್ಟುವದಕ್ಕಿಂತ ಮುನ್ನ, ಯೇಸುವನ್ನು ನಂಬಿರುವವರನ್ನು ಕೈದುಮಾಡುವದಕ್ಕೆ ಹೋಗುತ್ತಿದನು. ಆದರೆ ದಮಸ್ಕಪಟ್ಟಣಕ್ಕೆ ಹೋಗುತ್ತಿರುವ ದಾರಿಯಲ್ಲಿ ಆತನು ಯೇಸುವನ್ನು ವಿಶ್ವಾಸವನ್ನು ಕಂಡು ನೀರಿನ ಹಾಗೂ ಆತ್ಮನ ದಾನದ ಮೂಲಕ ಆತನು ನೀತಿವಂತನಾದನು. 



ನಾವು ಏನನ್ನೂ ಮಾಡುವದಕ್ಕೂ ಮುನ್ನ ಕರ್ತನ ಚಿತ್ತವನ್ನು ತಿಳಿದುಕೊಳ್ಳಬೇಕು


  • ನಮಗೆ ಯೇಸುವನ್ನು ವಿಶ್ವಾಸವಿಡುವದಕ್ಕೆ
  • ಮುನ್ನ ಯಾವುದು ಅವಶ್ಯವಾಗಿದೆ?
  • ನಾವು ಮೊದಲಿಗೆ ಆತನ ಚಿತ್ತವನ್ನು
  • ತಿಳಿದುಕೊಳ್ಳಬೇಕು.


ನಾವು ಶುದ್ಧರಾಗಿರಬೇಕೆಂಬದೇ ಕರ್ತನ ಚಿತ್ತವಾಗಿದೆ. “ದೇವರ ಚಿತ್ತವೇ ನಂದರೆ ನೀವು ಶುದ್ಧರಾಗಿರಬೇಕೆಂಬದೇ, ಆದದರಿಂದ ಹಾದರಕ್ಕೆ ದೂರವಾಗಿರ ಬೇಕು” (1 ಧೆಸಲೊನೀಕ   4:3). ನೀರಿನಿಂದಲೂ ಹಾಗೂ ಆತ್ಮನಿಂದಲೂ ನಾವು ಸಂಪೂರ್ಣವಾಗಿ ಶುದ್ಧವಾಗಿರಬೇಕೆಂದು ಮತ್ತು ನಮ್ಮ ಜೀವಿತ ಪೂರ್ತಿ ವಿಶ್ವಾಸ ದಲ್ಲಿ ಜೀವಿಸಬೇಕೆಂಬದು ದೇವರ ಚಿತ್ತವಾಗಿದೆ ಎಂದು ನಮಗೆ ತಿಳಿದಿದೆ.

ಯಾರಾದರೂ ಯೇಸುವನ್ನು ನಂಬಿ ಇನ್ನೂ ಆತನ ಹೃದಯದಲ್ಲಿ ಪಾಪ ವಿರುವಲ್ಲಿ, ಆತನು ದೇವರ ಚಿತ್ತದ ಪ್ರಕಾರ ಜೀವಿಸುವುದಿಲ್ಲ. ನಾವು ಆತನ ಚಿತ್ತ ವನ್ನು ಹಿಂಬಾಲಿಸಬೇಕಾದರೆ ನಾವು ಯೇಸುವನ್ನು ಕಂಡುಬಂದ ರಕ್ಷಣೆಯ ಮೂಲಕ ನಾವು ಶುದ್ಧವಾಗಬೇಕು. ಇದನ್ನು ತಿಳಿದುಕೊಂಡು ಕರ್ತನ ಚಿತ್ತದಂತೆ ನಡಿದುಕೊಳ್ಳುವದು.

“ನೀವು ಯೇಸುವನ್ನು ನಂಬಿದರೂ ಸಹ ಇನ್ನೂ ನಿಮ್ಮ ಹೃದಯದಲ್ಲಿ ಪಾಪವಿದೀಯೋ?” ಎಂದು ನಾನು ನಿಮ್ಮನ್ನು ಕೇಳಿದಾಗ, ನೀವು ಹೌದು ಎಂದು ಉತ್ತರಿಸಿದರೆ, ಆಗ ನೀವು ನಿಜವಾಗಿಯೂ ದೇವರ ಚಿತ್ತವನ್ನು ಇನ್ನೂ ತಿಳಿದು ಕೊಂಡಿಲ್ಲ ಎಂದು ಸ್ವಷ್ಟವಾಗುತ್ತದೆ. ನಾವು ಶುದ್ಧವಾಗ ಬೇಕೆಂಬುದೇ ಮತ್ತು ನೀರು ಹಾಗೂ ಆತ್ಮನ ಮೂಲಕ ನಾವು ನಮ್ಮ ಎಲ್ಲಾ ಪಾಪಗಳಿಂದ ಶುದ್ಧವಾಗ ಬೇಕೆಂಬುದೇ ದೇವರ ಚಿತ್ತವಾಗಿದೆ.

“ಒಂದು ಊರಿನಲ್ಲಿ ಒಬ್ಬ ಮನುಷ್ಯನಿದ್ದನು ಆತನಿಗೆ ವಿಧೇಯರಾದ ಇಬ್ಬರು ಗಂಡುಮಕ್ಕಳಿದ್ದರು. ಒಂದು ದಿನ ಆತನು ವಿಧೇಯನಾದ ಹಿರಿಯವನನ್ನು ಕರೆದನು, ಕರೆದು ಹೀಗೆ ಹೇಳಿದನು, ಮಗನೇ, ಹೊಲದ ಪಕ್ಕದಲ್ಲಿರುವ ಹಳ್ಳಿಗೆ ಹೋಗು ” 

ಆತನು ಹೇಳುವದನ್ನು ಮುಗಿಸುವದಕ್ಕಿಂತ ಮುನ್ನವೇ, ಮಗನು ಹೇಳಿ ದನು, “ಸರಿ, ಅಪ್ಪ” ಎಂದೇಳಿ ಹೊರಟುಹೋದನು. ಆತನು ಏನು ಮಾಡಬೇಕೆಂಬು ದನ್ನು ತಿಳಿದುಕೊಳ್ಳುವದಕ್ಕೆ ಕಾಯಲಿಲ್ಲ. ಆತನು ಹೊರಟುಹೋದನು.

ಆತನ ತಂದೆ ಆತನನ್ನು ಪುನಃ ಕರೆದು ಹೀಗೆ ಹೇಳಿದನು, “ಮಗನೇ, ನೀನು ವಿಧ್ಯೇಯವನಾಗಿರುವದು ಓಳ್ಳೆದು ಆದರೆ ನಾನು ನಿನಗೆ ಏನು ಮಾಡುವದಕ್ಕೆ ಹೇಳುತ್ತಿದ್ದೇನೆ ಎಂಬುದು ನೀನು ತಿಳಿದುಕೊಳ್ಳಬೇಕು.” 

ಆದರೆ ಮಗನು ಹೀಗೆ ಹೇಳಿದನು, “ಪರವಾಗಿಲ್ಲ, ತಂದೆಯೇ. ನಾನು ನಿಮಗೆ ವಿಧ್ಯೇಯನಾಗಿರುತ್ತೇನೆ. ನನಗಿಂತ ಯಾರು ವಿಧ್ಯೇಯರಾಗಿರುವದಕ್ಕೆ ಸಾಧ್ಯ?”

ಹೌದು ಆತನು ಬರೀಕೈಯಲ್ಲಿ ಬಂದನು. ಆತನ ತಂದೆ ಆತನಿಗೆ ಯಾವು ದನ್ನು ಮಾಡುವುದಕ್ಕೆ ಹೇಳಿದನ್ನು ಎಂಬುದನ್ನು ಆತನು ತಿಳಿದುಕೊಳ್ಳದೇ ಆತನಿಗೆ ಆತನ ತಂದೆಯ ಚಿತ್ತವನ್ನು ನೆರವೇರಿಸುವುದಕ್ಕೆ ಆಗುವುದಿಲ್ಲ. ಆತನು ಅವಿವೇಕ ದಿಂದ ವಿಧೇಯವನಾಗಿದ್ದನು.

ನಮಗೆ ಯೇಸುಕ್ರಿಸ್ತನು ತಿಳಿಯದಿದ್ದರೆ ನಾವೂ ಸಹ ಆತನ ಹಾಗಿಯೇ ಇರುತ್ತಿದ್ದೇವೆ. ದೇವರ ಚಿತ್ತವನ್ನು ತಿಳಿದುಕೊಳ್ಳದೇ ಅನೇಕರು ತಮ್ಮನ್ನೇ ಸಮರ್ಪಿಸಿ ಕೊಳ್ಳುತ್ತಾರೆ, ವೇದಾಂತವಾದ ಉಪದೇಶಗಳನ್ನು ಹಿಂಬಾಲಿಸುತ್ತಾರೆ, ನ್ಯಾಯವಾಗಿ ದಶವಂಶವನ್ನು ಅರ್ಪಿಸುತ್ತಾರೆ, ರಾತ್ರಿಪೂರ್ತಿ ಪ್ರಾರ್ಥಿಸುತ್ತಾರೆ, ಎಲ್ಲಾರು ಉಪವಾಸ ದಲ್ಲಿರುತ್ತಾರೆ.

ಅವರ ಹೃದಯಗಳಲ್ಲಿ ಪಾಪವಿಟ್ಟುಕೊಂಡು ಅವರು ಮರಣಹೊಂದಿ ದರೆ, ಅವರು ಪರಲೋಕರಾಜ್ಯಕ್ಕೆ ಸೇರುವುದಿಲ್ಲ. ದೇವರು ಅವರಿಗೆ ಯಾವುದನ್ನು ಮಾಡಬೇಕೆಂದು ಹೇಳಿದ್ದಾನೆ ಎಂಬುದು ಅವರಿಗೆ ತಿಳಿಯದೇ ಅವರು ದೇವರ ಚಿತ್ತದಂತೆ ನಡೆಯುವುದಕ್ಕೆ ಎಷ್ಟೋ ಹೆಚ್ಚು ಕುತೂಹಲದಿಂದ ಇದ್ದರು.


  • ಧರ್ಮಶಾಸ್ರವಿಲ್ಲದನ್ನು ಅಭ್ಯಾಸ
  • ಮಾಡುವದು ಅಂದರೆ ಏನು?
  • ನೀರು ಹಾಗೂ ಆತ್ಮನ ಸುವಾರ್ತೆಯನ್ನು ಕುರಿತು 
  • ತಿಳಿಯದೆ ಯೇಸುವನ್ನು ನಂಬುವದೇ


“ಸ್ವಾಮಿ, ಸ್ವಾಮಿ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ-ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮ ವನ್ನು ಮಿರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:22-23).

ದೇವರು ನಾವು ಕೆಲವು ವಿಷಯಗಳನ್ನು ಮಾಡಬೇಕೆಂದು ಆಶಿಸುತ್ತಾರೆ ಮತ್ತು ನಂಬಿಕೆಯಿಡಬೇಕೆಂದು ಆವರು ಕೇಳಿಕೊಳ್ಳುತ್ತಾರೆ. ನಮ್ಮ ಎಲ್ಲಾ ಪಾಪ ಗಳನ್ನು ಯೇಸು ನಿವಾರಣೆಮಾಡಿದ್ದಾರೆ ಎಂದು ನಂಬಬೇಕು ಎಂದು ಆತನು ಆಶಿಸು ತ್ತಾನೆ. ನೀರು ಹಾಗೂ ಆತ್ಮನ ಸತ್ಯವನ್ನು ತಿಳಿದುಕೊಳ್ಳದೇ ಭವಿಷ್ಯ ಹೇಳುವವರು, ದೆವ್ವಗಳನ್ನು ಓಡಿಸುವವರು, ಆತನ ಹೆಸರಿನಲ್ಲಿ ಆಶ್ಚರ್ಯಗಳನ್ನು ಮಾಡುವವರು ಅನೇಕರಿದ್ದಾರೆ.

ಆಶ್ಚರ್ಯಗಳನ್ನು ಮಾಡುವದು ಅಂದರೆ ಅನೇಕ ದೇವಾಲಯಗಳನ್ನು ಕಟ್ಟುವದು, ಒಬ್ಬನ ಎಲ್ಲಾ ಆಸ್ತಿಗಳನ್ನು ಮಾರಿ ದೇವಾಲಯಕ್ಕೆ ದಾನವಾಗಿ ಕೊಡು ವದು, ದೇವರಿಗೆ ಆತನ ಜೀವವನ್ನೇ ಅರ್ಪಿಸುವದೇ.

ಆತನ ಹೆಸರಿನಲ್ಲಿ ಭವಿಷ್ಯ ಹೇಳುವದು ಅಂದರೆ ಅಧಿಪತಿಯಾಗಿರುವದೇ. ಇಂತವರು ಯೇಸುವನ್ನು ವಿರೋಧಿಸುತ್ತಾ ಅವರು ಧರ್ಮಶಾಸ್ತ್ರದ ಪ್ರಕಾರ ಜಿವಿಸು ತ್ತಿದ್ದಾರೆ ಎಂದು ಜಂಬಪಡುವ ಫರಿಸಾಯರ ಹಾಗೆ. ಇದು ಇನ್ನು ಮುಂದೆ ಆಗುವ ಸಂಪ್ರದಾಯಕವಾದ ಕ್ರೈಸ್ತರಿಗೂ ಅನ್ವಯಿಸುತ್ತದೆ. 

ದೆವ್ವಗಳನ್ನು ಓಡಿಸುವದು ಅಂದರೆ ಶಕ್ತಿಯನ್ನು ಅಭ್ಯಾಸ ಮಾಡುವದು ಎಂದು ಅರ್ಥ. ಅವರು ಅವರ ವಿಶ್ವಾಸದಲ್ಲಿ ಅದೇಷ್ಟು ತೀವ್ರ ಆಸಕ್ತಿಯುಳ್ಳವರಾ ಗಿರುತ್ತಾರೆ, ಆದರೆ ಅಂತ್ಯದಲ್ಲಿ ಕರ್ತನು ಅವರಿಗೆ ನಾನೆಂದೂ ನಿಮ್ಮ ಗುರುತು ಕಾಣೆನು ಎಂದು ಹೇಳುವನು. ನಿಮ್ಮ ಗುರುತು ನಾನು ಕಾಣೆನು ಅಂತದ್ದರಲ್ಲಿ ನನ್ನ ಗುರುತು ನಿಮಗೆ ಹೇಗೆ ಕಾಣುವದು ಎಂದು ಆತನು ಕೇಳುವನು.

ದೇವರು ಹೀಗೆ ಹೇಳುತ್ತಾರೆ, ನಿಮ್ಮ ಗುರುತು ಕಾಣೆನು; ಧರ್ಮವನ್ನು ಮಿರಿ ನಡೆಯುವವರೇ, “ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿ ಬಿಡುವೆನು.” “ದೇವರೇ, ನಾನು ನಂಬುತ್ತೇನೆ. ನೀವು ನನ್ನ ರಕ್ಷಕನೇಂದು ನಂಬು ತ್ತೇನೆ,” ಆ ದಿನದಲ್ಲಿ ಎಷ್ಟೋ ಜನರು ಆತನಿಗೆ ಹೀಗೆ ಹೇಳುವರು. ಅವರು ಆತನನ್ನು ಪ್ರೀತಿಸುತ್ತಾರೆಂದು ಅವರು ಹೇಳುತ್ತಾರೆ ಆದರೆ ಅವರ ಹೃದಯದಲ್ಲಿ ಇನ್ನೂ ಪಾಪ ವಿರುತ್ತದೆ. ಇಂತವರನ್ನು ಧರ್ಮವನ್ನು ಮಿರಿನಡೆಯುವವರೇ ಎಂದು ದೇವರು ಕರೆಯು ತ್ತಾರೆ (ಇನ್ನೂ ಬಿಡುಗಡೆಯಾಗದಿರುವ ಪಾಪಿಗಳು) ನನ್ನಿಂದ ತೊಲಗಿ ಹೋಗಿರಿ ಎಂದು ಅವರಿಗೆ ದೇವರು ಹೇಳುತ್ತಾನೆ. 

ಆ ದಿನದಲ್ಲಿ, ಹೊಸದಾಗಿ ಹುಟ್ಟದೇ ಸತ್ತವರು ಯೇಸುವಿನ ಸನ್ನಧಿಯಲ್ಲಿ ಹೀಗೆ ಹೇಳುವರು. “ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಿದ್ದೇವೆ, ನಿನ್ನ ಹೆಸರಿನ ಮೇಲೆ ದೇವಾಲಯಗಳನ್ನು ಕಟ್ಟಿದ್ದೇವೆ ಮತ್ತು ನಿನ್ನ ಹೆಸರಿನ ಮೇಲೆ 50 ಧರ್ಮಬೋಧಕರನ್ನು ಕಳುಹಿಸಿದ್ದೇವೆ ಎಂದು ಹೇಳುತ್ತಾರೆ.”

ಆಗ ಯೇಸು ಆ ಪಾಪಿಗಳಿಗೆ, “ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮವನ್ನು ಮಿರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ!” ಎಂದು ಹೇಳು ವನು.

“ಹಾಗಂದರೇನು? ನಾನು ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ದೇವಾಲಯದಲ್ಲಿ ಸೇವೆ ಮಾಡಿದ್ದೇನೆ ನಿನ್ನಲ್ಲಿ ವಿಶ್ವಾಸ ಹೇಗೆ ಇಡಬೇಕಂದು ನಾನು ಬೇರೆಯವರಿಗೆ ಕಲಿಸಿದ್ದೆ. ಅದೇಗೆ ನನ್ನ ಗುರುತು ನಿಮಗೆ ಕಾಣೆದಿರುವದು?”

ಆತನು ಹೀಗೆ ಹೇಳುತ್ತಾನೆ, “ನಾನೆಂದು ನಿಮ್ಮ ಗುರುತು ಕಾಣೆನು. ನನ್ನನ್ನು ಗುರುತು ಹಿಡಿದಿದ್ದೀರಿ ಎಂದು ಹೇಳುವ ನಿಮ್ಮ ಹೃದಯದಲ್ಲಿ ಇನ್ನೂ ಪಾಪವಿದೆ, ನನ್ನಿಂದ ತೊಲಗಿಹೋಗಿರಿ ಎಂದು ಹೇಳುವನು!” 

ಒಬ್ಬನ ಹೃದಯದಲ್ಲಿ ಪಾಪವಿಟ್ಟುಕೊಂಡು ಕರ್ತನಲ್ಲಿ ನಂಬುವದು ಅಥವಾ ಆತನ ರಕ್ಷಣೆಯ ಧರ್ಮಶಾಸ್ತ್ರದ ಪ್ರಕಾರ ನಂಬದಿರುವದು ಕರ್ತನ ಸನ್ನಧಿ ಯಲ್ಲಿ ಅದು ಧರ್ಮವನ್ನು ಮಿರಿನಡೆಯುವದಾಗಿದೆ. ಆತನ ಚಿತ್ತವನ್ನು ತಿಳಿಯದಿರು ವದು ಧರ್ಮವನ್ನು ಮಿರಿನಡೆಯುವದಾಗಿದೆ. ಆತನ ಚಿತ್ತವನ್ನು ತಿಳಿಯದೆ ಅದನ್ನು ಮಾಡುವದು ಅಥವಾ ನೀರು ಹಾಗೂ ಆತ್ಮದಿಂದ ಹೊಸದಾಗಿ ಹುಟ್ಟುವ ದಾನ ವನ್ನು ತಿಳಿಯದಿರುವದು ಧರ್ಮವನ್ನು ಮಿರಿನಡೆಯುವದಾಗಿದೆ. ಆತನ ಚಿತ್ತವನ್ನು ಮೀರಿನಡೆಯುತ್ತಾ ಆತನನ್ನು ಹಿಂಬಾಲಿಸುವುದು ಧರ್ಮವನ್ನು ಮಿರಿನಡೆಯುವು ದಾಗಿದೆ. ಧರ್ಮವನ್ನು ಮಿರಿನಡೆಯುವುದು ಪಾಪವಾಗಿದೆ.



ಸತ್ಯವೇದದಲ್ಲಿ ದೇವರ ಚಿತ್ತ


  • ದೇವರ ಮಕ್ಕಳು ಯಾರು?
  • ಪಾಪವಿಲ್ಲದಿರುವ ನೀತಿವಂತರು


ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆಯನ್ನು ನಾವು ನಂಬುವುದೇ ಆತನ ಚಿತ್ತವಾಗಿದೆ. ನಿಜವಾದ ಸುವಾರ್ತೆ ನಾವು ಹೊಸದಾಗಿ ಹುಟ್ಟುವದನ್ನು ಬೆಳಸುತ್ತದೆ. ಆತನ ಮಕ್ಕಳಾಗಿ ಆತನ ಸುವಾರ್ತೆ ಗಾಗಿ ನಾವು ಜೀವಿಸಬೇಕೆಂದೂ ಸಹ ಆತನ ಚಿತ್ತವಾಗಿದೆ. ನಾವು ಆತನ ಚಿತ್ತವನ್ನು ತಿಳಿದುಕೊಳ್ಳಬೇಕು, ಆದರೆ ನೀರು ಹಾಗೂ ಆತ್ಮನಲ್ಲಿ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆಯನ್ನು ಕುರಿತು ಅನೇಕರಿಗೆ ತಿಳುವಳಿಕೆ ಇಲ್ಲ. 

ನೀವು ಯಾಕೆ ಯೇಸುವನ್ನು ನಂಬುತ್ತೀರಿ ಎಂದು ಕೇಳುವಾಗ, ಅವರು ತಮ್ಮ ಪಾಪಗಳಿಂದ ರಕ್ಷಣೆಯನ್ನು ಪಡೆಯುವದಕ್ಕೆ ಯೇಸುವನ್ನು ನಂಬಿದ್ದಾರೆ ಎಂದು ಅನೇಕರು ಹೇಳುತ್ತಾರೆ.

“ಆಗ, ನಿನ್ನ ಹೃದಯದಲ್ಲಿ ಪಾಪವಿದ್ದೀಯೋ?” ಎಂದು ನಾನು ಕೇಳಿವೆ.

“ಹೌದು, ಇದೇ” ಎಂದು, ಅವರು ಹೇಳುತ್ತಾರೆ.

“ಆಗ ನೀನು ರಕ್ಷಣೆಯಾಗಿದ್ದೀಯೋ ಅಥವಾ ಅಲ್ಲವೋ?”

“ಹೌದು ನಾನು ರಕ್ಷಣೆಯಾಗಿದ್ದೇನೆ.”

“ಹೃದಯದಲ್ಲಿ ಪಾಪವಿರುವ ಪಾಪಿಗಳು ಪರಲೋಕ ರಾಜ್ಯವನ್ನು ಸೇರು ವುದಕ್ಕೆ ಸಾಧ್ಯವೋ?”

“ಇಲ್ಲ, ಆತನಿಗೆ ಹೋಗುವದಕ್ಕೆ ಆಗುವುದಿಲ್ಲ.”

“ಆಗ, ನೀನು ಪರಲೋಕರಾಜ್ಯಕ್ಕೆ ಹೋಗುವಿಯೋ ಅಥವಾ ಅಗ್ನಿಸ್ಥಳದ ನರಕಕ್ಕೆ ಹೋಗುವಿಯೋ?”

ಅವರು ಪರಲೋಕರಾಜ್ಯಕ್ಕೆ ಹೋಗುವರು ಎಂದು ಅವರು ಹೇಳುತ್ತಾರೆ, ಆದರೆ ಅವರಿಗೆ ಅಲ್ಲಿಗೆ ಹೋಗುವುದಕ್ಕೆ ಸಾಧ್ಯವೋ? ಅವರು ನರಕ್ಕೆ ಹೋಗುತ್ತಾರೆ.

ಅವರ ಹೃದಯದಲ್ಲಿ ಪಾಪವಿದ್ದರೂ ಸಹ ಅವರು ಯೇಸುವನ್ನು ನಂಬಿ ರುವುದರಿಂದ, ಅವರು ಪರಲೋಕರಾಜ್ಯಕ್ಕೆ ಪ್ರವೇಶಿಸುವದಕ್ಕೆ ಸಾಧ್ಯ ಮತ್ತು ಇದನ್ನು ಮಾಡುವದಕ್ಕೆ ಅವರಿಗೆ ಇದುವೇ ಕರ್ತನ ಚಿತ್ತ ಎಂದು ಕೇಲವರು ಯೋಚಿಸುತ್ತಾರೆ. ಆದರೆ ದೇವರು ಪರಲೋಕರಾಜ್ಯಕ್ಕೆ ಪಾಪಿಯರನ್ನು ಒಪ್ಪಿಕೊಳ್ಳುವದಿಲ್ಲ.

ಕರ್ತನ ಚಿತ್ತ ಏನು? ಆತನ ಮಗನನ್ನು ನಂಬುವದೇ, ಯೇಸುವಿನ ದೀಕ್ಷಾ ಸ್ನಾನದ ಮತ್ತು ಶಿಲುಬೆಯ ಮೇಲೆ ಆತನ ರಕ್ತದ ಮೂಲಕ ಬಿಡುಗಡೆಯ ದಾನವನ್ನು ನಂಬುವದೇ ಕರ್ತನ ಚಿತ್ತವಾಗಿದೆ ಎಂದು ಸತ್ಯವೇದದಲ್ಲಿ ಹೇಳುತ್ತದೆ.

ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟುವ ದಾನವನ್ನು ನಂಬುವವರು ಆತನ ಮಕ್ಕಳಾಗುತ್ತಾರೆ. ಆತನ ಮಕ್ಕಳಾಗುವದಕ್ಕೆ ನಮಗೆ ಮಹಿಮೆ.

ಕರ್ತನು ನಮ್ಮನ್ನು ನೀತಿವಂತರು ಎಂದು ನಮ್ಮನ್ನು ಕರೆಯುವಾಗ, ಪಾಪಿ-ಕ್ರೈಸ್ತರನ್ನು ನೀತಿವಂತರೇಂಬುದು ಆತನ ಅರ್ಥವೋ? ಕರ್ತನು ಎಂದೀಗೂ ಸುಳ್ಳುಹೇಳುವುದಿಲ್ಲ. ಆದದರಿಂದ ಆತನ ಸನ್ನಧಿಯಲ್ಲಿ ನೀನು ಪಾಪಿಯೂ ಅಲ್ಲ ಅಥವಾ ನೀತಿವಂತನೂ ಅಲ್ಲ. ಅವರನ್ನು `ಪಾಪವಿಲ್ಲದವರು ಎಂದು ಗಮನಿಸುವು ದಿಲ್ಲ.’ ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಂಬುವವರನ್ನು ಮಾತ್ರವೇ ಆತನು ನೀತಿವಂತರು ಎಂದು ಕರೆಯುತ್ತಾನೆ.


  • ಕರ್ತನ ಮಕ್ಕಳಾಗುವುದಕ್ಕೆ
  • ನಮಗೆ ಹೇಗೆ ಸಾಧ್ಯ?
  • ನೀರು ಹಾಗೂ ಆತ್ಮನ ಸುವಾರ್ತೆಯನ್ನು
  • ಒಪ್ಪಿಕೊಳ್ಳುವುದರಿಂದಲೇ

ಕರ್ತನು ಎಲ್ಲಾ ಮನುಷ್ಯನ ಪಾಪಗಳನ್ನು ಆತನ ಮಗನ ಮೇಲೆ ಹಾಕಿದ್ದ ರಿಂದ, ಆತನ ಮಗನೂ ಕೂಡ ಶಿಲುಬೆಯ ಮೇಲೆ ತೀರ್ಪುಗೊಂಡನು. ಎಂದಿಗೂ ಕರ್ತನು ಸುಳ್ಳು ಹೇಳುವುದೇ ಇಲ್ಲ “ಪಾಪವು ಕೊಡುವ ಸಂಬಳ ಮರಣ” (ರೋಮಾ 6:23). ಎಂದು ಆತನು ಹೇಳುತ್ತಾನೆ. ಆತನ ಮಗನು ಮರಣಹೊಂದಿದಾಗ ಮೂರು ಘಂಟೆಗಳ ಕಾಲವರೆಗೂ ಕತ್ತಲೆ ಕವಿಯಿತು. 

“ಯೇಸು- ಏಲೀ, ಏಲೀ, ಲಾಮ ಸಬಕ್ತಾನೀ, ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು” (ಮತ್ತಾಯ  27:46)

ಎಲ್ಲಾ ಜನರು ಅವರ ಪಾಪಗಳಿಂದ ಅವರನ್ನು ರಕ್ಷಿಸುವದಕ್ಕೆ ಯೇಸು ಲೋಕದ ಎಲ್ಲಾ ಪಾಪಗಳನ್ನು ಆತನ ದೀಕ್ಷಾಸ್ನಾನದ ಮೂಲಕ ನಿವಾರಣೆಮಾಡಿ ದ್ದಾನೆ. ಆತನ ತಂದೆಯಿಂದ ಅವರು ಬಿಟ್ಟುಬಿಡುವರೇಂದು ಮತ್ತು ಅವರು ಶಿಲುಬೆ ಮೇಲೆ ಮರಣಹೊಂದಬೇಕೆಂದು ತಿಳಿದು, ಆತನು ಮನುಷ್ಯರ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ್ದಾನೆ. ಆದದರಿಂದ ಯೊರ್ಧನ್ ಹೊಳೆಯಲ್ಲಿ ಆತನು ಪಾಪ ಗಳನ್ನು ನಿವಾರಣೆಮಾಡಿದ್ದಗೋಸ್ಕರವಾಗಿ ಆತನ ಸ್ವಂತ ಮಗನನ್ನು ಶಿಕ್ಷಿಸಿದನು ಮತ್ತು ಆತನು ತನ್ನ ಮೂಖವನ್ನು ಆತನಿಂದ ಮೂರು ಘಂಟೆಯ ಕಾಲವರೆಗೂ ತಿರಿಗಿಸಿಕೊಂಡನು. 

“ಯಾರಾರು ಆತನನ್ನು ಅಂಗೀಕರಿಸಿದರೋ, ಅಂದರೆ ಆತನ ಹೆಸರಿನಲ್ಲಿ ನಂಬಿಕೆಯಿಟ್ಟರೋ, ಅವರಿಗೆ ದೇವರ ಮಕ್ಕಳಾಗುವ ಅಧಿಕಾರಕೊಟ್ಟನು” (ಯೋಹಾನ 1:12).

ನೀವು ದೇವರ ಮಕ್ಕಳಾ? ನಾವು ನೀರು ಹಾಗೂ ಆತ್ಮನಲ್ಲಿ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆಯನ್ನು ಒಪ್ಪಿಕೊಂಡಿದ್ದರಿಂದ ನಾವು ಹೊಸದಾಗಿ ಹುಟ್ಟಿದ್ದೀವೆ. ಹೊಸದಾಗಿ ಹುಟ್ಟಿರುವವರು ನೀತಿವಂತರಾಗಿದ್ದಾರೆ. ಈಗ ನಾವೇ ಲ್ಲಾರು ನೀತಿವಂತರಾಗಿದ್ದೇವೆ. 

“ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” (ರೋಮಾ 8:31) ನೀತಿವಂತ ಮನುಷ್ಯನು ಕರ್ತನ ಸನ್ನಧಿಯಲ್ಲಿ ಆತನನ್ನು ನೀತಿ ವಂತನೇಂದು ಕರೆದರೆ ಮತ್ತು ಬಿಡುಗಡೆಯಾಗದಿರುವ ಜನರು, ಆತನನ್ನು ಶಿಕ್ಷಿಸುವು ದಕ್ಕೆ ಉದ್ದೇಶಿಸುತ್ತಾರೆ. ಆದದರಿಂದ ಪೌಲನು ಹೇಳುತ್ತಾನೆ, “ದೇವರು ಆದುಕೊಂಡ ವರ ಮೇಲೆ ಯಾರು ತಪ್ಪು ಹೊರಿಸುವರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಿಯಿಸುವವನಾಗಿದ್ದಾನೆ”(ರೋಮಾ 8:33). ಯೇಸುವಿನ ಮೂಲಕ ದೇವರು ನಮ್ಮ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟು ನಮ್ಮನ್ನು ಪವಿತ್ರದವರು, ನೀತಿವಂತ ರಾದವರು ಮತ್ತು ಆತನ ಮಕ್ಕಳು ಎಂದು ಕರೆಯುತ್ತಾರೆ. ಆತನ ಮಹಿಮೆಯ ಮಕ್ಕಳಾಗುವದಕ್ಕೆ ಆತನು ನಮಗೆ ಅಧಿಕಾರ ಕೊಟ್ಟಿದ್ದಾನೆ. 

ನೀರಿನಿಂದಲೂ ಆತ್ಮನಿಂದಲೂ ಹೊಸದಾಗಿ ಹುಟ್ಟಿರುವವರು ಆತನ ಮಕ್ಕಳಾಗಿದ್ದಾರೆ. ಅವರು ಆತನ ಜೊತೆ ಎಂದಿಗೂ ಜೀವಿಸುತ್ತಾರೆ. ಅವರು ಈಗ ಎಂದಿಗೂ ಈ ಲೋಕದಲ್ಲಿ ಕೇವಲ ಸೃಷ್ಟಿ ಅಲ್ಲ ಆದರೆ ಅವರು ಪರಲೋಕರಾಜ್ಯಕ್ಕೆ ಸೇರುವ ಕರ್ತನ ಮಕ್ಕಳಾಗಿದ್ದಾರೆ.

ಈಗ ಅವರು ಕರ್ತನ ಮಕ್ಕಳಾಗಿದ್ದಾರೆ, ಯಾರಿಗೂ ಅವರನ್ನು ಎದುರಿಸುವು ದಕ್ಕೆ, ಶಿಕ್ಷೆ ಕೊಡುವುದಕ್ಕೆ ಅಥವಾ ಅವರನ್ನು ಕರ್ತನಿಂದ ಬೇರೆ ಮಾಡುವದಕ್ಕೆ ಆಗುವುದಿಲ್ಲ. 

ನಾವು ಯೇಸುವನ್ನು ನಂಬುವದಕ್ಕೆ ನಾವು ನೀರು ಹಾಗೂ ಆತ್ಮನ ಸುವಾರ್ತೆಯನ್ನು ತಿಳಿದುಕೊಳ್ಳಬೇಕು. ಸತ್ಯವೇದವನ್ನು ಕುರಿತು ನಾವು ತಿಳಿದುಕೊಳ್ಳ ಬೇಕು. ಇದನ್ನು ನಾವು ಮಾಡುವದಕ್ಕಾಗಿ ನಾವು ತಿಳಿದುಕೊಳ್ಳುವುದಕ್ಕೂ ಹಾಗೂ ಕರ್ತನ ಚಿತ್ತವನ್ನು ನಂಬುವದಕ್ಕೊ ಅತ್ಯಂತ ಅಗತ್ಯವಾಗಿದೆ. 



ಪಾಪಿಗಳು ನೀರಿನಿಂದಲೂ ಹಾಗೂ ಆತ್ಮನಿಂದಲೂ ಹೊಸದಾಗಿ ಹುಟ್ಟಬೇಕೆನ್ನುವದು ಕರ್ತನ ಚಿತ್ತವಾಗಿದೆ


  • ಪಾಪದ ಮನುಷ್ಯನ ರೂಪದಲ್ಲಿ
  • ಕರ್ತನು ಆತನ ಮಗನನ್ನು ಯಾಕೆ ಕಳುಹಿಸಿದನು?
  • ಎಲ್ಲಾ ಪಾಪಗಳು ಆತನ ಮೇಲೆ
  • ಹೋಗುವದಕ್ಕಾಗಿಯೇ


ನಾವು ಬಿಡುಗಡೆಯಾಗ ಬೇಕೆಂಬದು ಮತ್ತು ನೀರಿನಿಂದಲೂ ಆತ್ಮ ನಿಂದಲೂ ನಾವು ಹೊಸದಾಗಿ ಹುಟ್ಟಬೇಕೆಂಬದು ಕರ್ತನ ಚಿತ್ತವಾಗಿದೆ. “ದೇವರ ಚಿತ್ತ ನೀವು ಶುದ್ಧರಾಗಿರಬೇಕೆಂಬದೇ” (1 ಥೆಸಲೊನೀಕದವರಿಗೆ  4:3).

ಆತನ ಮಗನನ್ನು ಕಳುಹಿಸುವದು ಆತನ ಚಿತ್ತವಾಗಿತ್ತು ಹೀಗೆ ಎಲ್ಲಾ ಪಾಪ ಗಳು ಆತನ ಮೇಲೆ ಹೋಗಿ ನಾವು ರಕ್ಷಣೆಯಾಗುವದು ಆತನ ಚಿತ್ತವಾಗಿತ್ತು. ನೀರಿ ನಿಂದಲೂ ಹಾಗೂ ಆತ್ಮನಿಂದಲೂ ಹೊಸದಾಗಿ ಹುಟ್ಟುವದಕ್ಕೆ ಈ ಆತ್ಮನ ಧರ್ಮ ಶಾಸ್ತ್ರವೇ ನಮಗೆ ಅನುಮತಿಸುತ್ತದೆ. ಇದು ನಮ್ಮನ್ನು ಎಲ್ಲಾ ಪಾಪಗಳಿಂದ ಬಿಡು ಗಡೆ ಮಾಡಿದೆ.

ನಾವು ಬಿಡುಗಡೆಯಾಗಿದ್ದೇವೆ. ಈಗ ನೀವೇಲ್ಲಾರು ಕರ್ತನ ಚಿತ್ತವನ್ನು ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯವಾಗಿದಿಯೋ? ನಮ್ಮನೇಲ್ಲಾ ಬಿಡುಗಡೆ ಮಾಡುವುದಕ್ಕೆ ಆತನ ಚಿತ್ತವಾಗಿದೆ. ಲೋಕದ ಜೊತೆ ನಾವು ರಾಜಿಯಾಗುವದಕ್ಕೆ ಆತನು ಆಶಿಸು ವುದಿಲ್ಲ ಆದರೆ ಇದರ ಬದಲಾಗಿ ನಾವು ಆತನ ವಾಕ್ಯವನ್ನು ನಂಬಬೇಕು ಮತ್ತು ಆತ ನನ್ನು ಮಾತ್ರ ಆರಾಧಿಸುವಬೇಕೆಂದು ಆತನು ಆಶಿಸುತ್ತಾನೆ.

ಹೊಸದಾಗಿ ಹುಟ್ಟಿರುವವರು ಸುವಾರ್ತೆಯನ್ನು ಬೋಧಿಸಿ ದೇವಾಲದಲ್ಲಿ ಜೀವಿಸಬೇಕೆಂದು, ಬೇರೆ ಆತ್ಮಗಳನ್ನು ಕರ್ತನಿಗೆ ಕರತರುವ ಕೆಲಸದಲ್ಲಿ ಅವರನ್ನೇ ಸಮರ್ಪಿಸಿಕೊಳ್ಳುವದೂ ಸಹ ಕರ್ತನ ಚಿತ್ತವಾಗಿದೆ. 

ನಾವು ಬೇಕೆಂದು ಪಾಪಮಾಡುವುದಿಲ್ಲ, ಆದರೆ ನಾವು ಬಲಹೀನದ ಕಾರಣ ದಿಂದಾಗಿ ಪಾಪಮಾಡುತ್ತೇವೆ. ಆದರೆ ಯೇಸು ಆ ಪಾಪಗಳನ್ನು ನಿವಾರಣೆಮಾಡಿ ದ್ದಾರೆ. ಸ್ನಾನಿಕನಾದ ಯೋಹಾನನಿಂದ ಕರ್ತನು ಲೋಕದ ಎಲ್ಲಾ ಪಾಪಗಳನ್ನು ಯೇಸುವಿನ ಮೇಲೆಹಾಕಿದನು. ಈ ಕಾರಣಕ್ಕಾಗಿಯೇ ಆತನು ತನ್ನ ಸ್ವಂತ ಮಗನನ್ನೇ ಕಳುಹಿಸಿದನು ಮತ್ತು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿದನು. ನಾವು ಇದನ್ನು ನಂಬುವುದರಿಂದ ರಕ್ಷಣೆಯನ್ನು ಪಡೆಯುತ್ತೇವೆ. ಇದುವೇ ಕರ್ತನ ಚಿತ್ತ ವಾಗಿದೆ.



ಕರ್ತನು ಕಳುಹಿಸಿದ, ಯೇಸುವನ್ನು ನಾವು ವಿಶ್ವಾಸಿಸುವುದು ಆತನ ಚಿತ್ತವಾಗಿದೆ 


  • ಪಾಪದ ಮನುಷ್ಯನ ರೂಪದಲ್ಲಿ ಕರ್ತನು ಆತನ
  • ಮಗನನ್ನು ಯಾಕೆ ಕಳುಹಿಸಿದನು?
  • ಮನುಷ್ಯರ ಎಲ್ಲಾ ಪಾಪಗಳನ್ನು ನಿವಾರಣೆ
  • ಮಾಡುವದರಗೀಸ್ಕರವೇ

ಕರ್ತನ ಚಿತ್ತದಂತೆ ಮಾಡುವದು ಅಂದರೆ ಕರ್ತನು ಕಳುಹಿಸಿದ, ಯೇಸುವಿ ನಲ್ಲಿ ನಾವು ವಿಶ್ವಾಸವಿಡುವದು ಎಂದು ಸತ್ಯವೇದವು ಹೇಳುತ್ತದೆ. “ಅವರು-ದೇವರಿಗೆ ಮೆಚ್ಚಿಕೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕೆಂದು ಆತನನ್ನು ಕೇಳಿದ್ದಕ್ಕೆ ಯೇಸು-ದೇವರು ಮೆಚ್ಚುವ ಕೆಲಸ ಯಾವುದಂದರೆ ಆತನು ಕಳುಹಿಸಿಕೊಟ್ಟವನನ್ನು ನೀವು ನಂಬುವದೇ ಅಂದನು. ಅವರು ಆತನನ್ನು-ಹಾಗಾದರೆ ನಾವು ನೋಡಿ ನಿನ್ನ ಮಾತನ್ನು ನಂಬುವಂತೆ ಏನು ಸೂಚಕಕಾರ್ಯ ಮಾಡುತ್ತೀ? ನಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರು; ಪರಲೋಕದಿಂದ ರೊಟ್ಟಿಯನ್ನು ಅವರಿಗೆ ತಿನ್ನುವದಕ್ಕೆ ಕೊಟ್ಟನು ಎಂದು ಶಾಸ್ತ್ರದಲ್ಲಿ ಬರೆದದೆ ಯಲ್ಲಾ, ನೀನು ಏನು ಕೆಲಸ ನಡಿಸುತ್ತೀ?” (ಯೋಹಾನ 6:28-31). 

ಇಸ್ರಾಯೇಲ್ಯರಿಗೆ ಪರಲೋಕದಿಂದ ಮನ್ನ ಕೊಟ್ಟಿದರಿಂದ, ಅವರು ಕರ್ತನನ್ನು ನಂಬಿದರು, ಕರ್ತನು ಮೋಶೆಗೆ ಕಾನಾನ್ ದೇಶದ ದಾರಿಯಲ್ಲಿ ಸೂಚನೆ ಕೊಟ್ಟನು ಎಂದು ಯೇಸುವಿಗೆ ಜನರು ಹೇಳಿದರು (ಯೋಹಾನ 6:32-39). “ದೇವರಿಗೆ ಮೆಚ್ಚಿಕೆಯಾದ ಕೆಲಸಗಳನ್ನು ನಾವು ನಡಿಸಬೇಕಾದರೆ ಏನು ಮಾಡಬೇಕು?” 

ಕರ್ತನ ಕಾರ್ಯವನ್ನು ಮಾಡುವುದಕ್ಕೆ ಅವರು ಆತನನ್ನು ನಂಬ ಬೇಕೆಂದು ಯೇಸು ಉತ್ತರಿಸಿದನು. ನಾವು ಕರ್ತನ ಕಾರ್ಯವನ್ನು ಮಾಡಬೇಕೆಂದರೆ ಯೇಸುಕ್ರಿಸ್ತನ ಕಾರ್ಯಗಳನ್ನು ನಂಬಬೇಕು. ನಾವು ವಿಶ್ವಾಸವಿಡುವದು ಮತ್ತು ಸುವಾರ್ತೆಯನ್ನು ಬೋಧಿಸುವದು ಮಾತ್ರವಲ್ಲದೇ ಅದರಲ್ಲಿ ಜೀವಿಸಬೇಕೆಂಬುವುದೇ ಕರ್ತನ ಚಿತ್ತವಾಗಿದೆ.

“ಆದದರಿಂದ ನೀವು ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯ ರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19-20) ಎಂದು ಕರ್ತನು ನಮಗೆ ಆಜ್ಞಾಪಿಸಿ ದನು. 

ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳ ಬೇಕೆಂದು ಯೇಸು ನಮಗೆ ಸ್ವಷ್ಟವಾಗಿ ಹೇಳುತ್ತಾನೆ. ಆತನು ತನ್ನ ತಂದೆಗಾಗಿ ಹಾಗೂ ಆತ್ಮನಿಗಾಗಿ ಮಾಡಿದ ಎಲ್ಲಾವು ಆತನ ದೀಕ್ಷಾಸ್ನಾನದಲ್ಲಿ ಒಳಗೊಂಡಿದೆ. ನಾವು ಇದನ್ನು ಅರ್ಥಮಾಡಿಕೊಂಡಾಗ, ನಾವು ಕರ್ತನನ್ನು ನಂಬುವುದಕ್ಕೆ ಹಾಗೂ ಲೋಕದಲ್ಲಿ ಯೇಸು ಮಾಡಿದ ಎಲ್ಲಾ ಕಾರ್ಯಗಳನು ನೋಡುವುದಕ್ಕೆ ಮತ್ತು ಅದಕ್ಕೆ ಆತ್ಮವು ಹೇಗೆ ಸಾಕ್ಷಿಕೊಟ್ಟಿತ್ತು ಎಂಬುದನ್ನು ನೋಡುವುದಕ್ಕೆ ನಮಗೆ ಸಾಧ್ಯ ವಾಗುತ್ತದೆ.

ನೀರು ಹಾಗೂ ಆತ್ಮನ ಸುವಾರ್ತೆಗೆ ಸಾಕ್ಷಿಹೇಳುವದಕ್ಕಾಗಿ ಕರ್ತನು ಯೇಸುವನ್ನು ಕಳುಹಿಸಿದನು. ಆದದರಿಂದ ನಾವು ಕರ್ತನ ವಾಕ್ಯದಲ್ಲಿ ಮತ್ತು ಆತನ ದಾಸರನ್ನು ನಾವು ನಂಬುವಾಗ ಮಾತ್ರವೇ ರಕ್ಷಣೆ ಪಡೆಯುವುದಕ್ಕೆ ಸಾಧ್ಯ. 



ಕರ್ತನ ಕಾರ್ಯವನ್ನು ಮಾಡುವದಕ್ಕೆ


  • ನಮ್ಮ ಜೀವನದ ಗುರಿ ಏನು?
  • ಲೋಕದ ಪುರ್ತಿ ಸುವಾರ್ತೆಯನ್ನು ಸಾರುವುದರಿಂದ
  • ಕರ್ತನ ಚಿತ್ತವನ್ನು ಮಾಡುವುದಕ್ಕೆ


ನಾವು ಕರ್ತನ ಕಾರ್ಯವನ್ನು ಮಾಡಬೇಕಾದರೆ, ನಾವು ಮೊದಲಿಗೆ ಯೇಸು ವಿನ ದೀಕ್ಷಾಸ್ನಾನ ಹಾಗೂ ಶಿಲುಬೆಯ ಮೇಲೆ ಆತನ ರಕ್ತದ ಸುವಾರ್ತೆಯನ್ನು ನಂಬ ಬೇಕು. ಕರ್ತನು ಕಳುಹಿಸಿದ ಆತನನ್ನು ನಂಬುವುದೇ ಕರ್ತನ ಕಾರ್ಯವಾಗಿದೆ. ನಾವು ಯೇಸುವನ್ನು ವಿಶ್ವಾಸವಿಡಬೇಕಾದರೆ, ಆತನು ನಮ್ಮನ್ನು ನೀರು ಹಾಗೂ ರಕ್ತದಿಂದ ರಕ್ಷಿಸಿದ್ದಾನೆ ಎಂದು ನಾವು ಮೊದಲಿಗೆ ನಂಬಬೇಕು. 

ನಾವು ಸುವಾರ್ತೆಯನ್ನು ಬೋಧಿಸುವಾಗ ಮತ್ತು ನಾವು ಯೇಸುವನ್ನು ನಂಬುವಾಗ ಕರ್ತನ ಚಿತ್ತವು ನಮ್ಮಲ್ಲಿ ನೆರವೇರಿದೆ. ಈ ರೀತಿಯಲ್ಲಿ ನಾವು ಕರ್ತನ ಚಿತ್ತವನ್ನು ಮಾಡುತ್ತೇವೆ. ನೀರು ಹಾಗೂ ಆತ್ಮನಿಂದ ಹೊಸದಾಗಿ ಹುಟ್ಟುವುದು ಎಂಬ ಸುವಾರ್ತೆಯನ್ನು ಯಾರು ನಂಬುತ್ತಾರೊ ಅವರು ಮಾತ್ರವೇ ಪರಲೋಕ ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ಸಾಧ್ಯ ಎಂದು ಆತನು ನಮಗೆ ಹೇಳಿದನು. 

ಕರ್ತನ ನಿಜವಾದ ಚಿತ್ತವನ್ನು ಗ್ರಹಿಸಿಕೊಳ್ಳುವುದರಿಂದ, ನಮ್ಮ ಎಲ್ಲಾ ಪಾಪಗಳು ಯೇಸುವಿನ ದೀಕ್ಷಾಸ್ನಾನದ ಮೂಲಕ ಆತನ ಮೇಲೆ ಹೋಯಿತು ಎಂದು ನಂಬುವುದರಿಂದ, ಆತನ ರಾಜ್ಯವು ವಿಸ್ತರಿಸುವದಕ್ಕಾಗಿ ಜೀವಿಸುವುದರಿಂದ ಮತ್ತು ನಾವು ಸಾಯುವವರೆಗೂ ಸುವಾರ್ತೆಯನ್ನು ಸಾರುವದರಿಂದ ಪರಲೋಕರಾಜ್ಯದಲ್ಲಿ ನಾವೇಲ್ಲಾರು ಸ್ಥಳವನ್ನು ತೆಗೆದುಕೊಳ್ಳೋಣ.

ಜೊತೆಗಾರರಾದ ಕ್ರೈಸ್ತರೇ! ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಂಬುವವರೇ ಕರ್ತನ ಚಿತ್ತವನ್ನು ಮಾಡುವವರಾಗಿದ್ದಾರೆ. ಕರ್ತನು ಕಳುಹಿಸಿ ಕೊಟ್ಟವನಲ್ಲಿ ನಂಬುವುದೇ ಕರ್ತನ ಕೆಲಸವಾಗಿದೆ. ಕರ್ತನು ಕಳುಹಿಸಿಕೊಟ್ಟ ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೇಲೆ ನಮ್ಮ ಎಲ್ಲಾ ಪಾಪಗಳು ಹೋಯಿತು ಎಂದು ನಂಬುವುದೇ ಆತನ ಚಿತ್ತವಾಗಿದೆ.

ಯೇಸು ಯೊರ್ಧನ್ ಹೊಳೆಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಮತ್ತು ಶಿಲುಬೆಯ ಮೇಲೆ ಮರಣಹೊಂದಿದಾಗ ಮನುಷ್ಯರನ್ನು ಪಾಪದಿಂದ ಬಿಡುಗಡೆಮಾಡುವ ಕೆಲಸವು ನೆರವೇರಿತು. ಕರ್ತನು ಕಳುಹಿಸಿಕೊಟ್ಟವನಲ್ಲಿ ನಂಬು ವುದೇ, ಲೋಕದ ಎಲ್ಲಾ ಪಾಪಗಳನ್ನು ನಿವಾರಣೆಮಾಡಿದ ರಕ್ಷಕನನ್ನು ನಂಬುವುದು ಮತ್ತು ಲೋಕದ ಪೂರ್ತಿ ಸುವಾರ್ತೆಯನ್ನು ಸಾರುವುದೇ ಕರ್ತನ ಎರಡನೆಯದ ಕೆಲಸದ ಭಾಗವಾಗಿದೆ.

ಈಗ ಹೊಸದಾಗಿ ಹುಟ್ಟಿರುವ ನಾವು ಲೋಕಾಂತ್ಯದವರೆಗೂ ಸುವಾರ್ತೆ ಯನ್ನು ಸಾರಬೇಕು.


  • ಕರ್ತನ ಚಿತ್ತವನ್ನು ತಿಳಿಯದೆ ಯೇಸುವನ್ನು
  • ನಂಬಿರುವ ಜನರು ಎಲ್ಲಿಗೆ ಹೋಗುವರು?
  • ಅವರು ನರಕಕ್ಕೆ ಹೋಗುತ್ತಾರೆ.


“ಸ್ವಾಮಿ, ಸ್ವಾಮಿ, ನಿನ್ನ ಹೆಸರಿನ ಮೇಲೆ ನಾವು ಬೋಧನೆ ಹೇಳಲಿಲ್ಲವೇ? ನಿನ್ನ ಹೆಸರಿನ ಮೇಲೆ ದೆವ್ವಗಳನ್ನು ಬಿಡಸಲಿಲ್ಲವೇ? ನಿನ್ನ ಹೆಸರಿನ ಮೇಲೆ ಅನೇಕ ಮಹತ್ಕಾರ್ಯಗಳನ್ನು ಮಾಡಲಿಲ್ಲವೇ ಎಂದು ಆ ದಿನದಲ್ಲಿ ಎಷ್ಟೋ ಜನರು ನನಗೆ ಹೇಳುವರು. ಆಗ ನಾನು ಅವರಿಗೆ-ನಾನೆಂದೂ ನಿಮ್ಮ ಗುರುತು ಕಾಣೆನು; ಧರ್ಮ ವನ್ನು ಮಿರಿನಡೆಯುವವರೇ, ನನ್ನಿಂದ ತೊಲಗಿಹೋಗಿರಿ ಎಂದು ಎಲ್ಲರ ಮುಂದೆ ಹೇಳಿಬಿಡುವೆನು.” (ಮತ್ತಾಯ 7:22-23).

ಯಾರು ಕರ್ತನ ಸನ್ನಿಧಿಯಲ್ಲಿ ಪಾಪಿಗಳು ಮತ್ತು ಯಾರು ಧರ್ಮವನ್ನು ಮೀರಿನಡೆಯುವವರು ಎಂದು ಸ್ವಷ್ಟವಾಗಿ ಈ ವಾಕ್ಯವು ಹೇಳುತ್ತದೆ. ಹೊಸದಾಗಿ ಹುಟ್ಟಿರುವವರಲ್ಲಿ “ಸ್ವಾಮಿ, ಸ್ವಾಮಿ,” ಎಂದು ಹೇಳುವವರು ಅನೇಕರಿದ್ದಾರೆ. ಅವರ ಹೃದಯದಲ್ಲಿ ಇನ್ನೂ ಪಾಪವಿರುವದರಿಂದ ಅವರು ನೋವಲ್ಲಿರುತ್ತಾರೆ. ಆದದ ರಿಂದ ಅವರು ಕರ್ತನಿಗೆ “ಸ್ವಾಮಿ, ಸ್ವಾಮಿ,” ಎಂದು ಮೊರೆಯಿಡುತ್ತಾರೆ. 

ಪ್ರಾರ್ಥನೆ ಮಾಡುವಾಗ ಅವರು ಹೀಗೆ ಪ್ರಾಥಿಸಿದರೆ ಅವರು ಶುದ್ಧವಾಗುತ್ತಾ ರೇಂದು ಅವರು ನಂಬುತ್ತಾರೆ, ಆದರೆ ಅವರ ಹೃದಯದಲ್ಲಿ ಪಾಪವಿರುವದರಿಂದ ಇದು ಅಸಾಧ್ಯವಾಗಿದೆ. ಕರ್ತನು ಎನೋ ಬಹಳ ದೂರದಲ್ಲಿರುವ ಹಾಗೆ, ಬೆಟ್ಟದ ಮೇಲೆ ಹೋಗಿ ಅವರು ಪ್ರಾರ್ಥಿಸುತ್ತಾರೆ, ವೇದನೆಯಿಂದ ಪ್ರಾರ್ಥಿಸುತ್ತಾರೆ. ನಮಗೆ ಸಂಪೂರ್ಣವಾದ ನಂಬಿಕೆಯಿಲ್ಲದಿರುವಾಗ, ಪದೇ ಪದೇ “ಸ್ವಾಮಿ, ಸ್ವಾಮಿ” ಎಂದು ನಾವು ಕರೆಯುವುದಕ್ಕೆ ಆಶಿಸುತ್ತೇವೆ.

ಹೊಸದಾಗಿ ಹುಟ್ಟದಿರುವ ಸಭೆಯ ಕೆಲವು ದೇವಾಲಯದಲ್ಲಿ, ಅವರು ಅದೇಷ್ಟು ಉತ್ಸಾಹದಿಂದ ಪ್ರಾರ್ಥಿಸುತ್ತಾರಂದರೆ ವೇದಿಕೆಯೇ ಮುರಿದುಹೋಗುವ ಹಾಗೆ ಪ್ರಾರ್ಥಿಸುತ್ತಾರೆ.

ಆದರೆ ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕರಾಜ್ಯ ದಲ್ಲಿ ಸೇರುವರೆಂದು ನೆನಸಬೇಡಿರಿ ಎನ್ನುವದನ್ನು ನಾವು ಸತ್ಯವೇದದಲ್ಲಿ ನೋಡ ಬಹುದು. ನೀರು ಹಾಗೂ ಆತ್ಮನಲ್ಲಿ ವಿಶ್ವಾಸವಿರುವವರಿಗೆ ಮಾತ್ರವೇ ಕರ್ತನ ಚಿತ್ತವನ್ನು ಮಾಡುವದಕ್ಕೆ ಅವರಿಗೆ ದಾರಿ ತೋರಿಸಿಕೊಡುವದರಲ್ಲಿ ನಂಬಿಕೆಯಿ ರುತ್ತದೆ. 

ಒಬ್ಬನ ಹೃದಯದಲ್ಲಿ ಪಾಪವನ್ನು ಇಟ್ಟುಕೊಂಡು ಆತನ ಹೆಸರನ್ನು ಕರೆಯುವದು ಧರ್ಮವನ್ನು ಮಿರಿನಡೆಯುವದು ಎಂದು ಸತ್ಯವೇದವು ನಮಗೆ ಹೇಳುತ್ತದೆ. ಬೆಟ್ಟದ ಮೇಲೆ ಪ್ರಾರ್ಥನೆಯ ಕೂಟಕ್ಕೆ ನೀವು ಯಾವಾಗಲಾದರೂ ಹೋಗಿದ್ದೀರೋ? ವಯಸ್ಸಾದ ಕ್ರೈಸ್ತ ಮತದ ಧಾರ್ಮಾಧಿಕಾರಿ ಹೆಂಗಸರು ಕೆಲವರು ಸತ್ಯದಲ್ಲಿ ಯೇಸುವನ್ನು ಸಂಧಿಸುವುದೂ ಇಲ್ಲ, ಆತ್ಮವನ್ನು ಅವರ ಹೃದಯದಲ್ಲಿ ಒಪ್ಪಿಕೊಳ್ಳುವುದೂ ಇಲ್ಲ, ಹೊಸದಾಗಿ ಹುಟ್ತದಿರುವದರಿಂದ ಅವರು ಪ್ರಾರ್ಥಿಸು ತ್ತಲೇ ಇರುತ್ತಾರೆ. ಅವರು ನರಕಕ್ಕೆ ಹೋಗುವರು ಎಂದು ಹೆದರಿ ಅವರು ಆತನ ಹೆಸರನ್ನು ಬಹಳ ಅವಸರವಾಗಿ ಕರೆಯುತ್ತಾರೆ.

ಒಬ್ಬನು ಆತನನ್ನೇ ದೇವಾಲಯದಲ್ಲಿ ಸೇವೆಮಾಡುವುದಕ್ಕೆ ಧರ್ಮ ಪ್ರಚಾರಕವಾಗಿ ಸಮರ್ಪಿಸಿಕೊಂಡಿದ್ದರೆ ಅಥವಾ ಪಾದ್ರಿಯನ್ನು ಕೊನೆಗೆ ದೇವರು ಅವರನ್ನು ತಳ್ಳಿಬಿಡುತ್ತಾರೆ. ತಂದೆತಾಯಿ ಅಥವಾ ಗಂಡಾ ಹೆಂಡತಿ ತಳ್ಳಿಬಿಬಿಟ್ಟರೆ ಹೃದಯವು ಚೂರು ಚೂರು ಆಗುವುದಕ್ಕೆ ಇದುವೇ ಸಾಕು, ಆದರೆ ಕರ್ತನು, ರಾಜಾದಿ ರಾಜನು, ನಮ್ಮ ಆತ್ಮಗಳಿಗೆ ತೀರ್ಪುಕೊಡುವವನು ಆತನನ್ನು ತಳ್ಳಿಬಿಟ್ಟರೆ, ಆತನು ಎಲ್ಲಿಗೆ ಹೋಗುವನು? 

ಇದು ಯಾರಿಗೂ ಆಗಬಾರದು ಎಂದು ನಾನು ಪಾರ್ಥಿಸುತ್ತೇನೆ. ದಯ ವಿಟ್ಟು ಕೇಳಿರಿ ಮತ್ತು ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಂಬಿರಿ. ಹೊಸದಾಗಿ ಹುಟ್ಟುವುದಕ್ಕೆ ಮತ್ತು ನೀರು ಹಾಗೂ ಆತ್ಮನಲ್ಲಿ ಜೀವಿಸುವುದಕ್ಕೆ ನಮಗಿರುವ ಚಿತ್ತ ಇದು.

ಕ್ರೈಸ್ತರಾದ ನಾವು ನೀರು ಹಾಗೂ ಆತ್ಮನ ಸುವಾರ್ತೆಯನ್ನು ನಂಬಬೇಕು ಹಾಗೂ ಸತ್ಯವೇದದಲ್ಲಿರುವ ನಿಜಶಕ್ತಿಯನ್ನು ಒಲಿಸಿಕೊಳ್ಳಬೇಕು. ಆಗ ಮಾತ್ರವೇ ನಮಗೆ ಕರ್ತನು ಕೊಡುವ ನ್ಯಾಯದಿಂದ ರಕ್ಷಣೆಯಾಗುವುದಕ್ಕೆ ಸಾಧ್ಯವಾಗುತ್ತದೆ.